IPL ಇತಿಹಾಸದಲ್ಲೇ ಹೊಸ ಪ್ರಯೋಗ: ಇನ್ಮುಂದೆ ಪವರ್ ಪ್ಲೇಯರ್ ಆಟ..?

By Kannadaprabha News  |  First Published Nov 5, 2019, 9:41 AM IST

IPL ಕ್ರಿಕೆಟ್ ಇತಿಹಾಸದಲ್ಲೇ ಕ್ರಾಂತಿಕಾರಕ ಹೆಜ್ಜೆಯಿಡಲು ಬಿಸಿಸಿಐ ಮುಂದಾಗುವ ಸಾಧ್ಯತೆಯಿದೆ. ಹೀಗಾದರೆ 11 ಆಟಗಾರರ ಬದಲಿಗೆ 15 ಆಟಗಾರರು ಕ್ರಿಕೆಟ್ ಆಡುವ ಸಾಧ್ಯತೆಯಿದೆ. ಅರೇ ಇದೇನಿದು ಹೊಸ ವಿಚಾರ ಅಂತೀರಾ... ಇಲ್ಲಿದೆ ನೋಡಿ ಪವರ್ ಪ್ಲೇಯರ್ ಬಗೆಗಿನ ಕಂಪ್ಲೀಟ್ ಮಾಹಿತಿ...


ನವ​ದೆ​ಹ​ಲಿ(ನ.05): ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿ​ಎಲ್‌) ಆರಂಭಿ​ಸುವ ಮೂಲಕ ಟಿ20 ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿ​ಸಿದ ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿ​ಸಿ​ಸಿಐ), ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಲು ನಿರ್ಧ​ರಿ​ಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನ ಮುಂದಿನ ವರ್ಷದ ಆವೃ​ತ್ತಿ​ಯಲ್ಲಿ ‘ಪ​ವರ್‌ ಪ್ಲೇಯರ್‌’ ಎನ್ನುವ ಹೊಸ ಪರಿ​ಕಲ್ಪನೆಯನ್ನು ಪರಿ​ಚ​ಯಿ​ಸಲು ಪ್ರಸ್ತಾ​ಪಿ​ಸ​ಲಾ​ಗಿದೆ. ಈ ನಿಯಮ ಕಾರ್ಯ​ರೂ​ಪಕ್ಕೆ ಬಂದರೆ, ತಂಡಗಳಿಗೆ ಪಂದ್ಯದ ಯಾವುದೇ ಹಂತ​ದಲ್ಲಿ ವಿಕೆಟ್‌ ಪತನಗೊಂಡಾಗ ಇಲ್ಲವೇ ಓವರ್‌ ಮುಕ್ತಾ​ಯ​ಗೊಂಡಾಗ ಬದಲಿ ಆಟ​ಗಾ​ರನನ್ನು ಕಣ​ಕ್ಕಿ​ಳಿ​ಸಲು ಅವ​ಕಾಶ ಸಿಗ​ಲಿದೆ. ಪಂದ್ಯ​ವೊಂದ​ರಲ್ಲಿ ಪವರ್‌ ಪ್ಲೇಯರ್‌ ಬಳಕೆ ಎಷ್ಟು ಬಾರಿ ಮಾಡ​ಬ​ಹುದು ಎನ್ನುವ ಬಗ್ಗೆ ಬಿಸಿ​ಸಿಐ ಸ್ಪಷ್ಟನೆ ನೀಡಿಲ್ಲ.

RCB ಸೇರಿಕೊಳ್ತಾರಾ ಬುಮ್ರಾ? ಅಭಿಮಾನಿ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ಉತ್ತರ!

Tap to resize

Latest Videos

undefined

ಬುಧ​ವಾರ ಮುಂಬೈನಲ್ಲಿರು​ವ ಬಿಸಿ​ಸಿಐ ಕೇಂದ್ರ ಕಚೇ​ರಿ​ಯಲ್ಲಿ ನಡೆ​ಯ​ಲಿ​ರುವ ಐಪಿ​ಎಲ್‌ ಆಡ​ಳಿತ ಸಮಿತಿ ಸಭೆಯಲ್ಲಿ ಈ ಪರಿ​ಕ​ಲ್ಪನೆಯನ್ನು ಕಾರ್ಯ​ರೂ​ಪಕ್ಕೆ ತರುವ ಬಗ್ಗೆ ನಿರ್ಧಾರ ಕೈಗೊ​ಳ್ಳ​ಲಾ​ಗ​ಲಿದೆ ಎನ್ನ​ಲಾ​ಗಿದೆ. ಬಿಸಿ​ಸಿಐ ಮೂಲ​ಗಳ ಪ್ರಕಾರ, ‘ಪವರ್‌ ಪ್ಲೇಯರ್‌’ ನಿಯ​ಮ​ವನ್ನು ಅಳ​ವ​ಡಿಕೆ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆ​ದಿದ್ದು, ಅಧ್ಯಕ್ಷ ಸೌರವ್‌ ಗಂಗೂ​ಲಿ​ಯಿಂದ ಒಪ್ಪಿಗೆ ಬೇಕಿದೆಯಷ್ಟೆ. ಅಧ್ಯಕ್ಷರಾದ ಒಂದೇ ವಾರದಲ್ಲಿ ಹಗ​ಲು-ರಾತ್ರಿ ಟೆಸ್ಟ್‌ ಆಯೋ​ಜನೆಗೆ ವ್ಯವಸ್ಥೆ ಮಾಡಿದ ಗಂಗೂಲಿ, ಟಿ20 ಕ್ರಿಕೆಟ್‌ ಅನ್ನು ಮತ್ತಷ್ಟು ರೋಚಕಗೊಳಿ​ಸಲು ಸಿದ್ಧ​ಪ​ಡಿ​ಸಿ​ರುವ ಈ ಯೋಜನೆಯನ್ನು ತಿರ​ಸ್ಕ​ರಿ​ಸು​ವು​ದಿಲ್ಲ ಎಂದು ಬಿಸಿ​ಸಿಐ ಅಧಿ​ಕಾ​ರಿಯೊಬ್ಬರು ಭರ​ವಸೆ ವ್ಯಕ್ತ​ಪ​ಡಿ​ಸಿ​ದ್ದಾರೆ.

"

ಏನಿದು ಪವರ್‌ ಪ್ಲೇಯರ್‌?

ಸದ್ಯ ಪಂದ್ಯಕ್ಕೂ ಮುನ್ನ ಎರಡೂ ತಂಡ​ಗಳು ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕ​ಟಿ​ಸ​ಲಿದೆ. ಆದರೆ ಪವರ್‌ ಪ್ಲೇಯರ್‌ ಪರಿ​ಕ​ಲ್ಪನೆ ಪರಿಚಯಗೊಂಡರೆ 11 ಆಟ​ಗಾ​ರರ ಬದಲು 15 ಆಟ​ಗಾ​ರರನ್ನು ಹೆಸ​ರಿ​ಸ​ಬೇ​ಕಿದೆ. ಪಂದ್ಯದ ಯಾವುದೇ ಸಮ​ಯ​ದಲ್ಲಿ ವಿಕೆಟ್‌ ಪತನಗೊಂಡಾಗ ಇಲ್ಲವೇ ಓವರ್‌ ಮುಕ್ತಾ​ಯ​ಗೊಂಡಾಗ ಬದಲಿ ಆಟ​ಗಾರನನ್ನು ಕಣ​ಕ್ಕಿ​ಳಿ​ಸ​ಬ​ಹುದು.

RCB ತಂಡಕ್ಕೆ ಸೂಪರ್ ಪವರ್ ಎಂಟ್ರಿ: ಈ ಸಲ ಕಪ್ ನಮ್ದೇ

ಉದಾ​ಹ​ರ​ಣೆಗೆ ಕೊನೆ 6 ಎಸೆತಗಳಲ್ಲಿ ತಂಡ​ವೊಂದಕ್ಕೆ ಗೆಲ್ಲಲು 20 ರನ್‌ಗಳ ಅವ​ಶ್ಯ​ಕತೆ ಇರ​ಲಿದೆ. ಆರಂಭಿಕ ಹನ್ನೊಂದರಲ್ಲಿ ಆ್ಯಂಡ್ರೆ ರಸೆಲ್‌ ಸ್ಥಾನ ಪಡೆ​ದಿ​ರು​ವು​ದಿಲ್ಲ. ಆದರೆ ಕೊನೆ ಓವರ್‌ ಎದು​ರಿ​ಸಲು ರಸೆಲ್‌ ಕ್ರೀಸ್‌ಗಿಳಿದು, ತಮ್ಮ ತಂಡ​ವನ್ನು ಗೆಲ್ಲಿ​ಸ​ಬ​ಹುದು. ಅದೇ ರೀತಿ ಕೊನೆ ಓವ​ರಲ್ಲಿ 6 ರನ್‌ಗಳನ್ನು ರಕ್ಷಿ​ಸಿಕೊಳ್ಳ​ಬೇ​ಕಿ​ರು​ತ್ತದೆ. ಜಸ್‌ಪ್ರೀತ್‌ ಬುಮ್ರಾ ಡಕೌಟ್‌ನಲ್ಲಿ ಕೂತಿ​ರು​ತ್ತಾರೆ. ಆಗ ನಾಯಕ ಬುಮ್ರಾರನ್ನು ಕೊನೆ ಓವರ್‌ ಬೌಲ್‌ ಮಾಡಲು ಕರೆ​ಸಿ​ಕೊ​ಳ್ಳ​ಬ​ಹುದು. ಪವರ್‌ ಪ್ಲೇಯರ್‌ ಪರಿ​ಕ​ಲ್ಪನೆ ಪಂದ್ಯದ ಲೆಕ್ಕಾ​ಚಾರವನ್ನು ಬದ​ಲಿ​ಸಲಿದೆ.

ಉಪ​ಯೋಗವೇನು?

ಟಿ20 ಕ್ರಿಕೆಟ್‌ನಲ್ಲಿ ತಂಡ​ಗಳು ರೂಪಿ​ಸಿ​ಕೊಂಡು ಬಂದ ರಣ​ತಂತ್ರಗಳನ್ನು ಪಂದ್ಯದ ಪರಿ​ಸ್ಥಿ​ತಿಗೆ ಬದ​ಲಿ​ಸಲು ಹೆಚ್ಚಿಗೆ ಸಮಯ ಸಿಗು​ವು​ದಿಲ್ಲ. ಎದು​ರಾಳಿ ತಂಡ ಮೇಲುಗೈ ಸಾಧಿ​ಸಿ​ದಾಗ ಪುಟಿ​ದೇ​ಳಲು ಅವ​ಕಾಶ ಕಡಿಮೆ. ಆದರೆ ಪವರ್‌ ಪ್ಲೇಯರ್‌ ನಿಯಮ ಅಳ​ವ​ಡಿಕೆಯಾದರೆ ಒಬ್ಬ ಆಟ​ಗಾರ ನಿರ್ಣಾ​ಯಕ ಹಂತ​ದಲ್ಲಿ ಕಣ​ಕ್ಕಿ​ಳಿದು ಪಂದ್ಯದ ಗತಿ ಬದ​ಲಿ​ಸ​ಬ​ಹುದು. ತಂಡ​ಗಳ ನಡುವೆ ಗೆಲುವಿಗಾಗಿ ಪೈಪೋಟಿ ಹೆಚ್ಚಾ​ಗ​ಲಿದೆ. ಯಾವುದೇ ಹಂತ​ದಲ್ಲಿ ಬೇಕಿ​ದ್ದರೂ ಲೆಕ್ಕಾ​ಚಾರ ಬದ​ಲಾ​ಗ​ಬ​ಹುದು. ನಾಯಕರ ಆಲೋ​ಚನಾ ಶಕ್ತಿಗೆ ಹೊಸ ಹೊಸ ಸವಾಲು ಎದು​ರಾ​ಗ​ಲಿದೆ. ನೋಡು​ಗ​ರಿಗೂ ವಿಭಿನ್ನ ಅನು​ಭ​ವ ಸಿಗ​ಲಿದೆ.

ಸವಾಲು​ಗ​ಳೇ​ನು?

ಪವರ್‌ ಪ್ಲೇಯರ್‌ ನಿಯಮ ಅಳ​ವ​ಡಿಕೆಗೆ ಐಪಿ​ಎಲ್‌ ಫ್ರಾಂಚೈ​ಸಿ​ಗ​ಳಿಂದ ವಿರೋಧ ವ್ಯಕ್ತವಾ​ಗುವ ಸಾಧ್ಯತೆ ಇದೆ. ಸದ್ಯ ತಂಡ​ಗಳು ಪಂದ್ಯ​ವೊಂದ​ರಲ್ಲಿ ಕೇವಲ ನಾಲ್ವರು ವಿದೇಶಿ ಆಟ​ಗಾ​ರರನ್ನು ಆಡಿ​ಸ​ಬ​ಹುದು. ಕೆಲ ತಂಡ​ಗ​ಳಲ್ಲಿ ನಾಲ್ಕಕ್ಕಿಂತ ಹೆಚ್ಚು ಬಲಿಷ್ಠ ವಿದೇಶಿ ಆಟ​ಗಾರರಿರು​ತ್ತಾರೆ. ಹೀಗಾಗಿ ಪವರ್‌ ಪ್ಲೇಯರ್‌ ಜಾರಿಗೆ ಬಂದರೆ ಕೆಲ ತಂಡ​ಗ​ಳಿಗೆ ಹೆಚ್ಚಿನ ಅನು​ಕೂ​ಲ​ವಾ​ಗ​ಲಿದೆ. ಬುಕ್ಕಿ​ಗಳು ಹಾಗೂ ಮ್ಯಾಚ್‌ ಫಿಕ್ಸರ್‌ಗಳು ಮತ್ತಷ್ಟು ಚುರು​ಕಾಗಿ ಕೆಲಸ ಮಾಡುತ್ತಾರೆ. ಪವರ್‌ ಪ್ಲೇಯರ್‌ ಯಾರೆಂಬ ಹೆಸರಲ್ಲೂ ಬೆಟ್ಟಿಂಗ್‌ ನಡೆ​ಸ​ಬ​ಹುದು. ಸದ್ಯ ಟಿ20 ಲೀಗ್‌ಗಳಲ್ಲಿ ಭ್ರಷ್ಟಾ​ಚಾರ ಹೆಚ್ಚು​ತ್ತಿದ್ದು, ಹೊಸ ನಿಯಮ ಭ್ರಷ್ಟಾ​ಚಾರ ನಿಗ್ರಹ ಪಡೆಗೆ ದೊಡ್ಡ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ.

ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಪ್ರಯೋ​ಗ?

ನ.8ರಿಂದ ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿ ಆರಂಭ​ಗೊ​ಳ್ಳ​ಲಿದೆ. ಈ ಟೂರ್ನಿ​ಯಲ್ಲಿ ಪವರ್‌ ಪ್ಲೇಯರ್‌ ಪರಿ​ಕ​ಲ್ಪನೆಯನ್ನು ಪ್ರಯೋ​ಗಿ​ಸಲು ಬಿಸಿ​ಸಿಐ ಅಧಿ​ಕಾ​ರಿ​ಗಳು ಆಸಕ್ತಿ ತೋರಿದ್ದಾರೆ. ಈ ಪ್ರಯೋಗ ಸಫ​ಲ​ವಾ​ದರೆ ಐಪಿ​ಎಲ್‌ನಲ್ಲೂ ಅಳ​ವ​ಡಿ​ಸ​ಲಾ​ಗು​ತ್ತದೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿ​ರು​ವು​ದಾಗಿ ವರ​ದಿ​ಯಾ​ಗಿದೆ.

ನವೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

click me!