
ಇಂದೋರ್[ನ.14]: ಆಸ್ಪ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ತಾವು ಖಿನ್ನತೆ ಎದುರಿಸುತ್ತಿರುವುದನ್ನು ಒಪ್ಪಿದ್ದು ನಿಜಕ್ಕೂ ಅದ್ಭುತ. 2014ರ ಇಂಗ್ಲೆಂಡ್ ಸರಣಿ ವೇಳೆ ನಾನೂ ಖಿನ್ನತೆಯನ್ನು ಎದುರಿಸಿದ್ದೇನೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ತಿಳಿಸಿದರು.
ಇಂದೋರ್ ಟೆಸ್ಟ್: ದಾಖಲೆ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ!
‘ಪ್ರತಿಯೊಬ್ಬ ಆಟಗಾರ ಸಹ ಮಾತನಾಡುವ ಅಗತ್ಯವಿದೆ. ಗ್ಲೆನ್ ಮಾಡಿರುವುದು ಅಸಾಮಾನ್ಯ ಕೆಲಸ, ಎಲ್ಲಾ ಕ್ರಿಕೆಟಿಗರಿಗೂ ಮ್ಯಾಕ್ಸ್‌ವೆಲ್ ಮಾದರಿ ಆಗಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಲಯ ಕಳೆದುಕೊಂಡಿದ್ದ ಕಾರಣ ಖಿನ್ನತೆಗೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ. ಎಲ್ಲವು ಮುಗಿದು ಹೋಯಿತು ಎಂದೆನಿಸಿತ್ತು’ ಎಂದು ಕೊಹ್ಲಿ ಹೇಳಿದರು.
ಭಾರತೀಯ ಬೌಲರ್‌ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!
ವಿರಾಟ್ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ತೋರಿದ್ದರು. ಆಡಿದ 10 ಇನಿಂಗ್ಸ್’ಗಳಲ್ಲಿ ಕೇವಲ 134 ರನ್’ಗಳನ್ನಷ್ಟೇ ಬಾರಿಸಿದ್ದರು. ಆಗ ನಾನ್ಯಾರ ಬಳಿ ಮಾತನಾಡಬೇಕು. ಹೇಗೆ ಮಾತನಾಡಬೇಕು ಎನ್ನುವುದೇ ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದ್ದರು.
ಕ್ರಿಕೆಟ್‌ನಿಂದ ದೂರ ಸರಿದ ಆಸಿಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್
ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.