ತಿರುಪತಿಗೇ ನಾಮ ಹಾಕಿರುವ ಆರೋಪ ಹೊತ್ತ ನಟಿ ರೋಜಾ ಇನ್ನೊಂದು ಎಡವಟ್ಟು: ಎಲ್ಲೆಡೆ ಆಕ್ರೋಶ

Published : Jul 17, 2024, 12:19 PM ISTUpdated : Jul 18, 2024, 01:41 PM IST
ತಿರುಪತಿಗೇ ನಾಮ ಹಾಕಿರುವ ಆರೋಪ ಹೊತ್ತ ನಟಿ ರೋಜಾ ಇನ್ನೊಂದು ಎಡವಟ್ಟು: ಎಲ್ಲೆಡೆ ಆಕ್ರೋಶ

ಸಾರಾಂಶ

ಕೆಲ ದಿನಗಳ ಹಿಂದಷ್ಟೇ ಅವ್ಯವಹಾರದ ಆರೋಪದಿಂದ ಸದ್ದು ಮಾಡಿದ್ದ ನಟಿ, ರಾಜಕಾರಣಿ ರೋಜಾ ಈಗ ಇನ್ನೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಏನದು?   

 ರಾಜಕಾರಣಿ ಹಾಗೂ ಬಹುಭಾಷಾ ತಾರೆ ರೋಜಾ ಇದೀಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದು, ಈಕೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅಕ್ರಮ ಎಸಗಿರುವ ಆರೋಪದ ಬಗ್ಗೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು.  ಜಗನ್ಮೋಹನ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವೆ ಆಗಿ, ಈ ಬಾರಿ ಸೋಲನ್ನುಂಡ  ರೋಜಾ, ತಿರುಪತಿಯ ದರ್ಶನ ಟಿಕೆಟ್‌ ವಿಷಯದಲ್ಲಿ ಅಕ್ರಮ ಎಸಗಿದ್ದು, ತನಿಖೆ ನಡೆಸಬೇಕು ಎಂದು ಆಗ್ರಹ ವ್ಯಕ್ತವಾಗುತ್ತಿದೆ.  ಪ್ರತಿ ವಾರ ಸುಮಾರು 100 ಕಾರ್ಯಕರ್ತರೊಂದಿಗೆ ಅವರು ತಿರುಮಲಕ್ಕೆ ಭೇಟಿ ನೀಡುತ್ತಿದ್ದರು. ಗಣ್ಯರಿಗೆ ಇರುವ ‘ಶಿಷ್ಟಾಚಾರ ದರ್ಶನ’ ಮಾಡುತ್ತಿದ್ದರು. ತಾವು ಕರೆತರುತ್ತಿದ್ದ ಬೆಂಬಲಿಗರಿಗೆ ವಿಶೇಷ ಟಿಕೆಟ್‌ ಕೊಡಿಸುತ್ತಿದ್ದರು. ಆದರೆ ಟಿಕೆಟ್‌ಗಾಗಿ ಅವರು ಮೊದಲೇ ಪ್ರತಿ ವಾರ ಸಾವಿರಾರು ರುಪಾಯಿ ಸಂಗ್ರಹಿಸುತ್ತಿದ್ದರು ಎನ್ನುವ ಗಂಭೀರ ಆರೋಪ ಇವರ ಮೇಲಿದೆ. 

ಇಂಥ ಗಂಭೀರ ಆರೋಪ ಹೊತ್ತಿರುವ ರೋಜಾ ಈಗ ಸ್ವಚ್ಛತಾ ಸಿಬ್ಬಂದಿಯೊಬ್ಬರನ್ನು ಅತ್ಯಂತ ಅಸಡ್ಡೆಯಿಂದ ಕಂಡಿರುವ ವಿಡಿಯೋ ವೈರಲ್​ ಆಗಿದೆ. ಮತ ಕೇಳುವಾಗ ಮನೆ ಬಾಗಿಲಿಗೆ ಹೋಗುವ ಇಂಥ ರಾಜಕಾರಣಿಗಳು, ತಮ್ಮ ಸಿನಿಮಾ ನೋಡಿ ಎಂದು ಎಲ್ಲರಿಗೂ ಮನವಿ ಮಾಡುವಾಗ ನಾಚಿಕೆ ಇಲ್ಲದ ಇಂಥವರು, ಸ್ವಚ್ಛತಾ ಸಿಬ್ಬಂದಿಯನ್ನು ಈ ರೀತಿಯಾಗಿ ನಡೆಸಿಕೊಂಡಿರುವುದು ಸರಿಯಲ್ಲ ಎಂದು ಸೋಷಿಯಲ್​ ಮೀಡಿಯಾದಲ್ಲಿ ಈಕೆ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.

ನಾನು ಪುರುಷ ಎನ್ನೋದನ್ನೂ ನೋಡದೆ ಆತ ಮಂಚಕ್ಕೆ ಕರೆದ... ಆಮೇಲೆ... ಕಹಿ ಅನುಭವ ಬಿಚ್ಚಿಟ್ಟ ಅನಿಮಲ್​ ನಟ!

ಅಷ್ಟಕ್ಕೂ, ನಟಿ,  ತಮಿಳುನಾಡಿನ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇವರ ಜೊತೆ ಪತಿ ಮತ್ತು ನಿರ್ದೇಶಕ ಆರ್‌.ಕೆ.ಸೆ ಲ್ವಮಣಿ  ಕೂಡ ಇದ್ದರು. ಸಿನಿಮಾ ತಾರೆಯರು ಎಂದರೆ, ಅವರನ್ನು ಖುದ್ದು ದೇವರು ಎಂದು ನೋಡುವ ದೊಡ್ಡ ಬಳಗವೇ ಇದೆ. ಅವರ ದರ್ಶನ ಭಾಗ್ಯ ಪಡೆಯುವುದೇ ತಮ್ಮ ಜೀವನದ ಗುರಿ ಎಂದುಕೊಳ್ಳುವ ಅಸಂಖ್ಯ ಅಭಿಮಾನಿಗಳು ಇದ್ದಾರೆ. ಚಿತ್ರ ತಾರೆಯರ ಜೊತೆ ತಮ್ಮದೊಂದು ಫೋಟೋ ಇದ್ದರೆ, ತಮ್ಮ ಜೀವನ ಸಾರ್ಥಕವಾಯ್ತು, ಏಳೇಳು ಜನ್ಮಗಳ ಪುಣ್ಯ ತಮಗೆ ಲಭಿಸಿತು ಎಂದುಕೊಳ್ಳುವ ಅಭಿಮಾನಿಗಳೂ ಇದ್ದಾರೆ. ಅದೇ ರೀತಿ ನಟಿ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಸೆಲ್ಫಿಗಾಗಿ ದೇವಸ್ಥಾನದ ಸಿಬ್ಬಂದಿ  ಸೇರಿದಂತೆ ಹಲವರು ಮುಗಿ ಬಿದ್ದಿದ್ದರು. ರೋಜಾ ಕೂಡ ಬಹುತೇಕ ಎಲ್ಲರಿಗೂ ಸೆಲ್ಫಿಗೆ ಪೋಸ್​ ಕೊಟ್ಟರು.

ಇದೇ ವೇಳೆ, ಅಲ್ಲಿಯ ಮಹಿಳಾ ಸ್ವಚ್ಛತಾ ಸಿಬ್ಬಂದಿಯೊಬ್ಬರು ನಟಿಯ ಜೊತೆ ಸೆಲ್ಫಿಗಾಗಿ ಹತ್ತಿರ ಬಂದರು. ಅವರನ್ನು ನೋಡುತ್ತಿದ್ದಂತೆಯೇ ರೋಜಾ ಮುಖ ತಿರುಚಿದ್ದಾರೆ. ನಂತರ ಕೂಡಲೇ ಅತ್ತ ಕಡೆ ಹೋಗುವಂತೆ ಕೈಸನ್ನೆ ಮಾಡಿದ್ದಾರೆ. ನಂತರ ಮಹಿಳೆ ದೂರದಿಂದಲೇ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಿದೆ. ಇದು ಅಸಹ್ಯದ ಪರಮಾವಧಿ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ. ಮತಕ್ಕಾಗಿ ನಾಚಿಕೆ ಬಿಟ್ಟು ಎಲ್ಲರ ಕೈಮುಗಿದು, ಕಾಲಿಗೆ ಬೇಕಾದರೂ ಬೀಳುವ ಇಂಥ ರಾಜಕಾರಣಿಗಳ ವರ್ತನೆ ಅಹಸ್ಯದ ಪರಮಾವಧಿ ಎಂದು ರೋಜಾರನ್ನು ನೆಟ್ಟಿಗರು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. 

ಲಿಪ್​ಲಾಕ್​ಗೆ ಒಲ್ಲೆ ಎನ್ನುತ್ತಲೇ ಸಿನಿಮಾ ರಿಜೆಕ್ಟ್​ ಮಾಡ್ತಿದ್ದ ನಟಿಗೆ ಇದೇನಾಗೋಯ್ತು? ಅಯ್ಯೋ ಕೀರ್ತಿ ಹೀಗೆಕಾದೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?