ಪ್ರಣಾಳಿಕೆ ಜಾರಿ ಮಾಡದ ಸರ್ಕಾರ ರದ್ದು ಮಾಡಬೇಕು : ಉಪೇಂದ್ರ

By Kannadaprabha News  |  First Published Jun 3, 2021, 8:48 AM IST
  • ಪ್ರಣಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕು
  • ಅನುಷ್ಠಾನಗೊಳಿಸದಿದ್ದರೆ ಅಂಥ ಪಕ್ಷದ ಸರ್ಕಾರವನ್ನು ರದ್ದುಗೊಳಿಸುವ ಕಾನೂನು ಅಗತ್ಯವಿದೆ
  •  ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿಕೆ

 ಬೆಂಗಳೂರು (ಜೂ.03):  ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸದಿದ್ದರೆ ಅಂಥ ಪಕ್ಷದ ಸರ್ಕಾರವನ್ನು ರದ್ದುಗೊಳಿಸುವ ಕಾನೂನು ಅಗತ್ಯವಿದೆ ಎಂದು ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಘಟಕ ಆಯೋಜಿಸಿದ್ದ ‘ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಯುವಕರ ಪಾತ್ರ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಬರುವವರು ಬಂಡವಾಳ ಹೂಡಿ, ಲಾಭ ಮಾಡುವ ಉದ್ದೇಶದಿಂದ ಬರಬಾರದು.

Tap to resize

Latest Videos

ನಾನು ಸಿಎಂ ಆಗ್ತೀನಿ, ನನ್ನ ಗೆಲ್ಲಿಸುತ್ತೀರಾ: ನಟ ಉಪೇಂದ್ರ .

ರಾಜಕೀಯ ವ್ಯವಸ್ಥೆಯಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ದೊರೆಯಬೇಕು. ರಾಜಕೀಯ ಪ್ರಜಾಕೀಯ ಆಗಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ. ರಾಜಕೀಯದ ಬಗ್ಗೆ ಯುವಕರು ಗಮನ ಹರಿಸಬೇಕು. ಭ್ರಷ್ಟಾಚಾರ ನಡೆಸುವವರ ವಿರುದ್ಧ ಹಾಗೂ ಕ್ರಿಮಿನಲ್‌ ಹಿನ್ನೆಲೆ ಇರುವ ವ್ಯಕ್ತಿಗಳು ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಉಳಿಯಲಿದೆ ಎಂದರು.

ಕನ್ನಡ ಚಿತ್ರರಂಗದ 3 ಸಾವಿರ ಹಿರಿಯ ಕಲಾವಿದರ ಕುಟುಂಬಕ್ಕೆ ಉಪ್ಪಿ ಸಹಾಯ! ...

ಬೆಂ.ವಿವಿ ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌ ಮಾತನಾಡಿ, ಮುಂದುವರೆದ ರಾಷ್ಟ್ರಗಳಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಯುವಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹಿರಿಯರ ಸಲಹೆಯಲ್ಲಿ ಯುವ ನಾಯಕರು ರಾಜಕೀಯದಲ್ಲಿ ನಡೆಯುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಎನ್‌ಎಸ್‌ಎಸ್‌ ಅಧಿಕಾರಿ ಪ್ರತಾಪ್‌ ಲಿಂಗಯ್ಯ, ಸಂಯೋಜನಾಧಿಕಾರಿ ಡಾ.ಎನ್‌.ಸತೀಶ್‌ ಗೌಡ ಇತರರು ಇದ್ದರು.

click me!