
ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಮತ್ತು ಸ್ಕ್ರಿನ್ ರೈಟರ್ ಶ್ರೀನಿವಾಸನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಬುಧವಾರ ಕೇರಳದ ಖಾಸಗಿ ಆಸ್ಪತ್ರೆಗೆ ದಾಖಲಾದ ನಟ ವೆಂಟೆಲೇಟರ್ ಸಹಾಯ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಶ್ರೀನಿವಾಸ್ ಆವರಿಗೆ ಹಾರ್ಟ್ ಬ್ಲಾಕ್ ಆಗಿದ್ದು ಬೈಪಾಸ್ ಆಪರೇಷನ್ ಮಾಡಲಾಗಿತ್ತು.
ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಮಿಡಿ ಮತ್ತು ಕ್ಯಾರೆಕ್ಟರ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀನಿವಾಸನ್ ಮಾರ್ಚ್ 30ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು. ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆ ಗಂಭೀರ ಸಮಸ್ಯೆ ಇಲ್ಲವೆಂದು ಹೇಳುತ್ತಲೇ ಕುಟುಂಬಸ್ಥರು ಬೈಪಾಸ್ ಆಪರೇಷನ್ ಮಾಡಿಸಿದ್ದರು. ಆ ನಂತರ ಬಂದ ಮಾಹಿತಿ ಪ್ರಕಾರ ಶ್ರೀನಿವಾಸನ್ ಅವರಿಗೆ ಹೃದಯಲ್ಲಿ ಮೂರು ಬ್ಲಾಕ್ ಆಗಿತ್ತಂತೆ. ಆಪರೇಷನ್ ನಡೆದ ನಂತರ ಶ್ರೀನಿವಾಸನ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಆಕ್ಸಿಜನ್ ಪ್ರಮಾಣ ಕಡಿಮೆ ಆಗುತ್ತಿದ್ದ ಕಾರಣ ವೆಂಟಿಲೇಟರ್ ಹಾಕಿದ್ದಾರಂತೆ.
ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಶ್ರೀನಿವಾಸನ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಆರೋಗ್ಯ ಸುಧಾರಿಸಿಕೊಳ್ಳುತ್ತಿದೆ ಎನ್ನಲಾಗಿದೆ.
ಶ್ರೀನಿವಾಸನ್ ಮೂಲತಃ ಕೇರಳದವರು, ಹುಟ್ಟಿದ್ದು ಬೆಳೆದದ್ದು ಎಪ್ರಿಲ್ 6,1956ರಲ್ಲಿ. ಚಿತ್ರರಂಗದಲ್ಲಿ ನಟ, ಸ್ಕ್ರೀನ್‌ರೈಟರ್, ನಿರ್ದೇಶಕ, ಡಬ್ಬಿಂಗ್ ಆರ್ಟಿಸ್ಟ್ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 225 ಸಿನಿಮಾಗಳಲ್ಲಿ ನಟಿಸಿದ್ದಾರೆ. ಓಡರುತಮ್ಮವ ಆಲರಿಯಂ, ಗಾಂಧಿನಗರ 2ನೇ ಸ್ಟ್ರೀಟ್, ವರವೇಲ್ಪು, ಸಂದೇಶಂ, ಒರು ಮರವತೂರ್ ಕಣವು, ಮಿಧುನಂ ಮತ್ತು ನಾನ್ ಪ್ರಕಾಶನ ಮುಂತಾದ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. ಸಾಮಾಜಿಕ ಸಮಸ್ಯೆ ಬಗ್ಗೆ ಮಾಡಿರುವ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.