Drugs Case: ನಿರ್ಮಾಪಕ ಇಂತಿಯಾಸ್ ಮನೆ, ಕಚೇರಿಗೆ NCB ದಾಳಿ

By Suvarna NewsFirst Published Oct 9, 2021, 11:56 AM IST
Highlights
  • ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿ ಮತ್ತೊಂದು ದಾಳಿ
  • ನಿರ್ಮಾಪಕ ಇಂತಿಯಾಸ್ ಮನೆ, ಕಚೇರಿಗೆ ಎನ್‌ಸಿಬಿ ಮುತ್ತಿಗೆ

ಮುಂಬೈ ಐಷರಾಮಿ ಹಡಗಿನ ಮೇಲೆ ನಡೆಸ ಎನ್‌ಸಿಬಿ ದಾಳಿಯ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಾಲಿವುಡ್ ನಟ ಆರ್ಯನ್ ಖಾನ್‌ನನ್ನು ಬಂಧಿಸಲಾಗಿರುವ ಮುಂಬೈ-ಗೋವಾ ಕ್ರೂಸ್‌ ಶಿಪ್‌ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಎನ್‌ಸಿಬಿ ಅಧಿಕಾರಿಗಳು ಬಾಲಿವುಡ್ ನಿರ್ಮಾಪಕ ಇಂತಿಯಾಸ್ ಖತ್ರಿಯ ಮುಂಬೈನ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ್ದಾರೆ.

ಎನ್‌ಸಿಬಿ ವಿಭಾಗೀಯ ಅಧಿಕಾರಿ ಸಮೀರ್ ವಾಖಂಡೆ ಹೆಚ್ಚಿನ ಮಾಹಿತಿಯನ್ನು ಶೇರ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಖತ್ರಿ ಮನೆ ಮೇಲೆ ನಡೆದ ದಾಳಿಯ ಕುರಿತು ಇತರ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ.

ತಮ್ಮ ಅಬ್ರಾಂ ಅಂದ್ರೆ ಭಾರೀ ಪ್ರೀತಿ ಆರ್ಯನ್‌ಗೆ: ಖಾನ್ ಸಹೋದರರಿವರು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಖತ್ರಿ ಅವರ ಹೆಸರು ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಮತ್ತು ರಿಯಾ ಚಕ್ರವರ್ತಿ ಅವರಿಗೆ ಖತ್ರಿ ಡ್ರಗ್ಸ್ ಪೂರೈಸಿದ್ದಾರೆ ಎಂದು ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಶೃತಿ ಮೋದಿಯ ವಕೀಲ ಅಶೋಕ್ ಸರೋಗಿ ಹೇಳಿದ್ದರು. ಇದು ಎಲ್ಲೆಡೆ ಭಾರೀ ಸುದ್ದಿಯಾಗಿತ್ತು. ಡ್ರಗ್ಸ್ ಕೇಸ್ ಸಂಬಂಧಿಸಿ ಈ ಅಪ್ಡೇಟ್ ಚರ್ಚೆಯಾಗಿತ್ತು.

ಆರ್ಯನ್ ಖಾನ್ ಡ್ರಗ್ಸ್ ಕೇಸ್: ಶಾರೂಖ್ ನಟಿಸಿದ ಜಾಹೀರಾತು ಹಿಂಪಡೆದ ಬೈಜೂಸ್

ಶುಕ್ರವಾರ ಮುಂಬೈನ ಸ್ಥಳೀಯ ನ್ಯಾಯಾಲಯವು ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಮುಂಬೈ ಕರಾವಳಿ ಕಳೆದ ಶನಿವಾರ, ಅಕ್ಟೋಬರ್ 2ರಂದು ಎನ್‌ಸಿಬಿ ದಾಳಿ ನಡೆಸಿತ್ತು.

ಇದರ ಮಧ್ಯೆ ಎನ್‌ಸಿಬಿಯ ವಿಭಾಗೀಯ ಅಧಿಕಾರಿ ವಾಂಖೆಡೆ ಶುಕ್ರವಾರ ಏಜೆನ್ಸಿ ಮತ್ತು ಪ್ರಾಸಿಕ್ಯೂಷನ್ ಕ್ರೂಸ್ ಹಡಗು ದಾಳಿ ಪ್ರಕರಣವನ್ನು ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳುತ್ತದೆ ಎಂದಿದ್ದರು. ನಮ್ಮ ಪ್ರಕರಣವು ಪ್ರಬಲವಾಗಿದೆ. ಸೆಷನ್ಸ್ ನ್ಯಾಯಾಲಯದಲ್ಲಿ ಇದನ್ನು ಮಂಡಿಸಲಾಗುವುದು ಎಂದು ವಾಂಖೆಡೆ ಹೇಳಿದ್ದರು.

"

ವಾಂಖೇಡೆ ನೇತೃತ್ವದ ಎನ್‌ಸಿಬಿ ತಂಡವು ಅಕ್ಟೋಬರ್ 2 ರ ತಡವಾಗಿ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಗೆ ದಾಳಿ ಮಾಡಿದೆ. ನೈಜೀರಿಯನ್ ಪ್ರಜೆ ಸೇರಿದಂತೆ 18 ಜನರನ್ನು ಎನ್‌ಸಿಬಿ ಬಂಧಿಸಿದೆ. ಗೋವಾಕ್ಕೆ ಹೋಗುವ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು.

ಈಗ ನಿರ್ಮಾಪಕನ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಲಿ ಇನ್ನಷ್ಟು ಹೆಚ್ಚಿನ ಮಾಹಿತಿ ಹೊರಗೆ ಬರುವ ಸಾಧ್ಯತೆ ಇದೆ. ಈಗಾಲೇ ಬಾಲಿವುಡ್ ಕಿಂಗ್ ಖಾನ್ ಮಗ ಅರೆಸ್ಟ್ ಆಗಿರುವುದು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣದ ತನಿಖೆ ಮುಂದುವರಿದಂತೆ ಮತ್ತಷ್ಟು ಹೆಸರುಗಳು ಹೊರಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

click me!