
ಸಮಂತಾ ರುತ್ ಪ್ರಭು ಇತ್ತೀಚೆಗೆ ಸಿನಿಮಾಕ್ಕಿಂತ ಪರ್ಸನಲ್ ವಿಚಾರಕ್ಕೇ ಹೆಚ್ಚೆಚ್ಚು ಸುದ್ದಿಯಲ್ಲಿ ಇರುವವರು. ಅಕ್ಕಿನೇನಿ ಕುಟುಂಬದ ನಾಗ ಚೈತನ್ಯ ಜೊತೆಗೆ ಪ್ರೀತಿಸಿ ಮದುವೆಯಾದ ಮೇಲೆ, 'ವಾಟ್ಟ್ ಬ್ಯೂಟಿಫುಲ್ ಕಪಲ್!' ಅಂತ ಎಲ್ಲರೂ ಉದ್ಗರಿಸಿದವರೇ. ಆದರೆ ಏನೂ ಕಾರಣ ಹೇಳದೇ ಈ ಜೋಡಿ ಬಹಳ ಬೇಗ ನಾಲ್ಕೇ ವರ್ಷದಲ್ಲಿ ದಾಂಪತ್ಯ ಜೀವನದಿಂದ ಹೊರಬಂತು. ಇವರ ವಿಚ್ಛೇದನಕ್ಕೆ ಅದು ಕಾರಣ, ಇದು ಕಾರಣ ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು, ಜಗಳಗಳು ಆದರೂ ನಿಜವಾದ ಕಾರಣ ಏನು ಅಂತ ಇಲ್ಲೀವರೆಗೆ ಗೊತ್ತಾಗಲಿಲ್ಲ. ನೆಟ್ಟಿಗರ ಚುಚ್ಚು ಮಾತುಗಳಿಗೆ ರೊಚ್ಚಿಗೆದ್ದ ಸಮಂತಾ ಅವರ ವಿರುದ್ಧ ಕೋರ್ಟಿಗೆ ಹೋದದ್ದೂ ಆಯ್ತು. ಒಂದು ಹಂತದ ನಂತರ ಇದೆಲ್ಲ ಕಡಿಮೆ ಆಯ್ತು. ಇದೆಲ್ಲ ಆಗಿ ವರ್ಷವಾದರೂ ಜನ ಈ ಜೋಡಿಯನ್ನು ಮರೆತಿಲ್ಲ. ಪರ್ಸನಲ್ ಲೈಫ್ ಬಗ್ಗೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಆದರೆ ಈಗ ಸಮಂತಾ ಅವರೇ ತಮ್ಮ ಪರ್ಸನಲ್ ಬದುಕಿನ ನೋವಿನ ಬಗ್ಗೆ ಸದ್ಗುರು ಅವರಿಗೆ ನೇರ ಪ್ರಶ್ನೆ ಕೇಳಿದ್ದಾರೆ. ನನಗೆ ಬದುಕಲ್ಲಿ ಯಾಕೆ ಈ ರೀತಿ ಅನ್ಯಾಯ ಆಗ್ತಿದೆ, ಇದು ನನ್ನ ಪೂರ್ವ ಜನ್ಮದ ಪಾಪದ ಫಲವಾ ಅನ್ನುವ ಪ್ರಶ್ನೆ ಕೇಳಿದ್ದಾರೆ.
ಸಮಂತಾ ಕೇಳಿರುವ ಈ ಪ್ರಶ್ನೆ ಒಂದು ವಲಯದಲ್ಲಿ ವೈರಲ್ ಆಗಿದೆ. ಸಮಂತಾ ನಗು ನಗುತ್ತಲೇ ಈ ಪ್ರಶ್ನೆ ಕೇಳಿದರೂ ಇದನ್ನು ಕೇಳುವಾಗ ಅವರ ಮನಸ್ಸಿನೊಳಗೆ ಒತ್ತಿಟ್ಟಿರುವ ನೋವು (Pain), ವಿಷಾದ ಈ ಪ್ರಶ್ನೆಯೊಂದಿಗೇ ಹೊರಗೆ ಬಂದಿದೆ. ಇದು ಅವರ ಅಭಿಮಾನಿಗಳನ್ನು ಅಲ್ಲಾಡಿಸಿಬಿಟ್ಟಿದೆ.
ಮೊದಲ ಬಾರಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವ Katrika Kaif - Vicky Kaushal!
'ಒಂದು ಹಂತದಲ್ಲಿ ಬದುಕು ಯಾಕೆ ಅಸಹನೀಯ ಅನಿಸಲು ಶುರುವಾಗುತ್ತದೆ, ಬದುಕಲ್ಲಿ ನಮಗ್ಯಾಕೆ ಅನ್ಯಾಯ, ನೋವುಗಳು ಆಗುತ್ತವೆ, ಈಗಾಗಲೇ ಇರುವ ನಂಬಿಕೆ, ನಮ್ಮ ಇವತ್ತಿನ ಬದುಕಿನ ನೋವಿಗೆ ನಾವು ಪೂರ್ವಜನ್ಮದಲ್ಲಿ ಮಾಡಿರುವ ಕರ್ಮಗಳೇ ಕಾರಣ ಅನ್ನೋದಾದರೆ, ಈಗ ನಾವು ನೋವು ಅನುಭವಿಸಿದ್ದೇವಲ್ವಾ, ಆ ಪಾಪ ಎಲ್ಲ ಮುಗಿದು ಹೋಯ್ತಾ? ಎಲ್ಲಾ ಕ್ಲಿಯರ್ ಆಯ್ತಾ?' ಅನ್ನುವ ಪ್ರಶ್ನೆಯನ್ನು ಸಮಂತಾ ಸದ್ಗುರು ಜಗ್ಗಿ ವಾಸುದೇವ ಅವರ ಬಳಿ ಕೇಳಿದ್ದಾರೆ. ಸಮಂತಾ ಅವರ ಕಾಲೆಳೆಯುತ್ತಲೇ ಅವರ ಮಾತಿಗೆ ಸದ್ಗುರು ಸಮಾಧಾನ ನೀಡುವಂಥಾ ಉತ್ತರ ನೀಡಿದ್ದಾರೆ. ಜಗತ್ತನ್ನು ನಾವು ಹೇಗೆ ನೋಡ್ತೇವೆ ಅನ್ನೋದು ಇಲ್ಲಿ ಮುಖ್ಯವಾಗುತ್ತದೆ. ಇಲ್ಲಿ ನಮ್ಮ ನೋಡುವ ದೃಷ್ಟಿ ಮುಖ್ಯವಾಗುತ್ತದೆಯೇ ಹೊರತು, ಉರಿವ ಸೂರ್ಯ (Sun), ಬೀಸುವ ಗಾಳಿ (Air) ಎಲ್ಲರಿಗೂ ಒಂದೇ ಆಗಿರುತ್ತದೆ. ನಮ್ಮ ದೃಷ್ಟಿಕೋನಗಳಿಂದ (Vision) ನಮಗೆ ಖುಷಿಯಾ, ನೋವಾ ಅನ್ನೋದು ನಿರ್ಧರಿತವಾಗುತ್ತದೆ. ಜಗತ್ತನ್ನು ಭಾವನೆ, ಯೋಚನೆ ಬೆರೆಸದೇ ನೋಡಿದರೆ ಅದು ಸುಂದರವಾಗಿಯೇ ಕಾಣುತ್ತದೆ. ಆಗ ನಮ್ಮ ಬದುಕೂ (Life) ಸುಂದರವಾಗುತ್ತದೆ ಎಂಬಂಥಾ ಅಧ್ಯಾತ್ಮ (Spirituality), ತಾತ್ವಿಕತೆಯ ಮಾತನ್ನು ಸದ್ಗುರು ಹೇಳಿದ್ದಾರೆ.
Kangana Ranaut ಬ್ರಹ್ಮಾಸ್ತ್ರ ಸಿನಿಮಾ 144 ಕೋಟಿ ಕಲೆಕ್ಷನ್ ಮಾಡಿಲ್ಲ, ಇದು ಮೂವಿ ಮಾಫಿಯಾ
ಇದರ ಜೊತೆಗೆ ಸಮಂತಾ, ನಮ್ಮನ್ನು ಆಳುವ ಇಗೋ (Ego) ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಇದೀಗ ಅಧ್ಯಾತ್ಮ ಜಗತ್ತು (Spiritual World) ಬ್ಯುಸಿನೆಸ್ (Business) ಆಗಿರುವಾಗ ಅಧ್ಯಾತ್ಮ ತಿಳಿದವನು ಗ್ರೇಟ್ ಅನ್ನೋ ಭಾವನೆ ಇದೆ. ಈ ಸ್ಪಿರಿಚ್ಯುವಲ್ ಇಗೋ ಬಗ್ಗೆ ಜಾಣ್ಮೆಯ ಪ್ರಶ್ನೆ ಮಾಡಿದ್ದಾರೆ. ಇದರ ಬಗ್ಗೆ ಸದ್ಗುರು ವಿವರವಾದ ಉತ್ತರ ನೀಡಿದ್ದಾರೆ. ಆದರೂ ಸಮಂತಾ ಕೇಳಿರುವ ಈ ಪ್ರಶ್ನೆ ನೋಡಿ, ಅವರಿನ್ನೂ ಹಳೆಯ ನೋವಿನಿಂದ ಹೊರಬಂದಿಲ್ವಾ, ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನೋವು ಇನ್ನೂ ಅವರನ್ನು ಕಾಡುತ್ತಾ ಇದೆಯಾ ಅಂತ ಜನ ಮಾತಾಡಿಕೊಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.