ಕಾಫಿ ವಿತ್ ಕರಣ್ ಸೀಸನ್ 7ರ 11ನೇ ಎಪಿಸೋಡ್‌ನಲ್ಲಿ ಅನಿಲ್ ಕಪೂರ್ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಯಾರಿಂದ ಇನ್‌ಸೆಕ್ಯೂರ್ ಫೀಲ್ ಆಯ್ತು ಎಂದು ಹೇಳೊಕೊಂಡಿದ್ದಾರೆ....
ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹಾರ್ ನಿರೂಪಣೆಯಲ್ಲಿ ಮೂಡಿ ಬರುವ ಕಾಫಿ ವಿತ್ ಕರಣ್ ಟಾಕ್ ಶೋ ಈಗ 7ನೇ ಸೀಸನ್‌ಗೆ ಕಾಲಿಟ್ಟಿದೆ. 11ನೇ ಎಪಿಸೋಡ್‌ಗೆ ಹಿರಿಯ ನಟ, ಎವರ್‌ಗ್ರೀನ್ ಅನಿಲ್ ಕಪೂರ್ ಮತ್ತು ವರುಣ್ ಧವನ್ ಆಗಮಿಸಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಆರಂಭವಾಗಿದ್ದು ಹೇಗೆ? ಏನೆಲ್ಲಾ ಕಷ್ಟಗಳನ್ನು ಎದುರಿಸಿದ್ದರು? ಅಲ್ಲದೆ ಜಾಕಿ ಶ್ರಾಫ್ ಹೇಗೆ ಹೆಸರು ಮಾಡಿದ್ದರು ಎಂದು ಚರ್ಚೆ ಮಾಡಿದ್ದಾರೆ.
'ಕೆಲವು ವರ್ಷಗಳ ಹಿಂದೆ ನೆಪೊಟಿಸಂ ದೊಡ್ಡ ಅಲೆ ಸೃಷ್ಟಿ ಮಾಡಿತ್ತು. ನಿಮ್ಮ ವೃತ್ತಿ ಜೀವನದಲ್ಲಿ ನೆಪೊಟಿಸಂ ಎದುರಿಸಿದ್ದೀರಾ? ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು' ಎಂದು ಕರಣ್ ಜೋಹಾರ್ ಅನಿಲ್‌ಗೆ ಪ್ರಶ್ನೆ ಮಾಡಿದ್ದರು. 'ಈ ವಿಚಾರಗಳನ್ನು ನಾನು ಎಂದೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನಾವು ನಮ್ಮ ಕೆಲಸ ಮಾಡಿಕೊಂಡು ನಡೆಯಬೇಕು, ನಮ್ಮ ಕೆಲಸ ಮಾತು ಶುರು ಮಾಡುತ್ತದೆ. ನಾವು ಆಕ್ಟರ್ ಆಗಿದ್ದೀವಿ ಅಂತ ನಮ್ಮ ಲೆಗೆಸಿನ ನಾವು ಬೇರೆ ಅವರಿಗೆ ಪಾಸ್ ಮಾಡಲು ಆಗುವುದಿಲ್ಲ..ಸಹೋದರನೇ ಆಗಿರಲಿ ಅಥವಾ ಮಗನೇ ಇರಲಿ. ಒಂದು ನಮಗೆ ಕಲೆ ಇರಬೇಕು ಇಲ್ಲದಿದ್ದರೆ ಬೆಲೆ ಇರುವುದಿಲ್ಲ' ಎಂದು ಅನಿಲ್ ನೇರವಾಗಿ ಉತ್ತರ ಕೊಟ್ಟಿದ್ದಾರೆ.
'ನನ್ನ ವೃತ್ತಿ ಜೀವನ ಆರಂಭಿಸಿದ್ದಾಗ ಎಲ್ಲರಿಗೂ ಗೊತ್ತಿರುವ ಹಾಗೆ ಸನ್ನಿ ಡಿಯೋಲ್ ಹವಾ ಜೋರಾಗಿತ್ತು ಮತ್ತು ಸಂಜಯ್ ದತ್ ಜರ್ನಿ ಕೂಡ ಅರಂಭವಾಗಿತ್ತು.' ಎಂದು ಅನಿಲ್ ಹೇಳುತ್ತಿರುವಾಗ ಕರಣ್ ಮಾತನ್ನು ಅರ್ಧಕ್ಕೆ ನಿಲ್ಲಿಸಿ ನೀವು ಜಾಕಿ ಶ್ರಾಫ್ ಹೆಸರು ಮರೆತಿದ್ದೀರಿ ಎಂದು ನೆನಪು ಮಾಡುತ್ತಾರೆ. 'ಜಾಕಿ ಆಗ ಹೊರಗಿನವನು ಆದರೂ Subhash Ghai ಮೂಲಕ ಆರಂಭದಲ್ಲೇ ದೊಡ್ಡ ಬ್ರೇಕ್ ಪಡೆದುಕೊಂಡ. ಹೀಗಾಗಿ ತನ್ನ ಪರಿಶ್ರಮದಿಂದ A ಲಿಸ್ಟ್‌ನಲ್ಲಿರುವ ಕಲಾವಿದನಾಗಿ ಗುರುತಿಸಿಕೊಂಡ. ಆಗ ನಾನು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ಬಾಲಿವುಡ್ ಮಾತ್ರವಲ್ಲದೆ ಸೌತ್ ಸಿನಿಮಾಗಳನ್ನು ಕೂಡ ಮಾಡುತ್ತಿದ್ದೆ. ಆಗ ನನಗೆ ಏನೋ ಒಂದು ರಿತಿ ಭಾವನೆ. ಇಷ್ಟ ಆಗುತ್ತಿರಲಿಲ್ಲ' ಎಂದು ಅನಿಲ್ ಉತ್ತರ ಕೊಟ್ಟಿದ್ದಾರೆ.
45 ನಿಮಿಷಗಳಲ್ಲಿ ವಿಕ್ಕಿ ಕೌಶಲ್ ನನ್ನ ಹೃದಯ ಗೆದ್ದರು ಎಂದ ಕತ್ರಿನಾ ಕೈಫ್
'ಯಾಕೆ ಜಾಕಿ ಶ್ರಾಫ್ ನಮ್ಮವರಲ್ಲ ಅನಿಸಿದ್ದು? ಹೊರಗಿನವರು ಆಗಿ Subhash Ghai ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದಕ್ಕಾ? ನಿಮಗೆ ಸ್ವಲ್ಪ ಆದರೂ ಬೇಸರ ಅಯ್ತು ಅಲ್ವಾ?' ಎಂದು ಕರಣ್ ಮತ್ತೊಮ್ಮೆ ಪ್ರಶ್ನೆ ಹಾಕುತ್ತಾರೆ. 'ನನಗೆ ಈಗಲ್ಲೂ ಬೇಸರ ಇದೆ ಹಾಗೆ ಅನಿಸುತ್ತದೆ.ನಾನು ಯಶ್ ಚೋಪ್ರಾ ಸಿನಿಮಾ ಸಹಿ ಮಾಡಿದ ನಂತರ ಕೊಂಚ ನೆಮ್ಮದಿಯಾಗಿದ್ದು ಹೌದು i am fine ಅನಿಸಿದ್ದು ಆಗಲೇ.' ಎಂದು ಅನಿಲ್ ಹೇಳುತ್ತಾರೆ. 'ಜಾಕಿ ಶ್ರಾಫ್ ಯಶಸ್ಸು ನಿಮ್ಮನ್ನು ಕೊಂಚ ಇನ್‌ಸೆಕ್ಯೂರ್ ಮಾಡಿದ್ದು ಸುಳ್ಳಲ್ಲ' ಎಂದು ಕರಣ್ ಕೇಳಿದಾಗ 'ಹೌದು ನನಗೆ ಇನ್‌ಸೆಕ್ಯೂರ್ ಫೀಲ್ ಆಯ್ತು. ಆಗ ಅತ ದೊಡ್ಡ ದೊಡ್ಡ ಯಶಸ್ಸು ಕಂಡ' ಎಂದಿದ್ದಾರೆ ಅನಿಲ್.
'ಆ ದಿನಗಳು ನನಗೆ ಚೆನ್ನಾಗಿ ನೆನಪಿದೆ. ಜಾಕಿ ತುಂಬಾನೇ ಸ್ವೀಟ್ ಹುಡುಗ. ನಾವೆಲ್ಲರೂ ಒಟ್ಟಿಗೆ ಚಿತ್ರೀಕರಣ ಮಾಡುತ್ತಿದ್ದೆವು ಆಗ ಅಭಿಮಾನಿಗಳು ನನ್ನ ಆಟೋಗ್ರಾಫ್ ಪಡೆಯುವಾಗ ಜಾಕಿಗೆ ಚೆನ್ನಾಗಿ ಗೊತ್ತಿತ್ತು ನಾನು ಸಹಿ ಮಾಡಿರುವ ಪುಸ್ತಕ ಅವನ ಕೈ ಕೂಡ ಸೇರುತ್ತದೆ ಎಂದು. ಆಗ ವಿಚಿತ್ರವಾಗಿ ವರ್ತಿಸುತ್ತಿದ್ದನು ಆತನ ಆಕ್ಷನ್‌ಗಳು ಬೇಸರ ಮಾಡುತ್ತಿತ್ತು' ಎಂದು ಜಾಕಿ ವರ್ತಿಸುತ್ತಿದ್ದ ತೀರಿಯನ್ನು ಅನಿಲ್ ವೇದಿಕೆ ಮೇಲೆ ತೋರಿಸಿದ್ದಾರೆ.
ಅನಿಲ್ ಕಪೂರ್ ಯೌವನದ ಗುಟ್ಟು ಸೆಕ್ಸ್ ಅಂತೆ!
ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವುದು Andar Bahaar, ಯುಧ್, ಕರ್ಮಾ, ಕಾಲಾ ಬಜಾರ್, ಕಬಿ ನಹಿ ಕಬಿ, ರಾಮ್ ಲಕ್ಷಣ್ ಮತ್ತು ಪರಿಂದ, ಲವ್ ಸ್ಟೋರಿ ಮತ್ತು ತ್ರಿಮೂರ್ತಿ.