ಸ್ಟಾರ್ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮತ್ತೆ ಗರ್ಜಿಸುತ್ತಿರುವ ಕಂಗನಾ ರಣಾವತ್. ರಣಬೀರ್ ಕಪೂರ್ ಆಥವಾ ಆಲಿಯಾ...ಯಾರು ನೆಕ್ಸಟ್ ಟಾರ್ಗೇಟ್?
ಬಾಲಿವುಡ್ ಬೋಲ್ಡ್ ನಟಿ ಕಂಗನಾ ರಣಾವತ್ ಇದೀಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಕಲೆಕ್ಷನ್ ಬಗ್ಗೆ ಟೀಕೆ ಮಾಡಿದ್ದಾರೆ. ವೆಬ್‌ಸೈಟ್‌ವೊಂದು ಕಲೆಕ್ಷನ್ ಬಗ್ಗೆ ಪ್ರಕಟಿಸಿರುವ ಮಾಹಿತಿಯನ್ನು ಪೋಸ್ಟ್ ಮಾಡಿ ಮೂವಿ ಮಾಫಿಯಾ ಎಂದು ಕರೆದಿದ್ದಾರೆ. ಕಂಗನಾ ಮಾತುಗಳನ್ನು ಸಿನಿ ರಸಿಕರು ನಂಬುತ್ತಾರೆ ಏಕೆಂದರೆ ಎಲ್ಲಿ ನೋಡಿದ್ದರೂ ಬ್ರಹ್ಮಾಸ್ತ್ರ ಫ್ಲಾಪ್ ಫ್ಲಾಪ್ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಕಂಗನಾ ರಣಾವತ್ ಯಾರ ತಂಟೆಗೂ ಹೋಗುವುದಿಲ್ಲ ಏನೇ ಇದ್ದರೂ ನೇರವಾಗಿ ಮಾತನಾಡುತ್ತಾರೆ. ಈ ಬೋಲ್ಡ್‌ನೆಸ್‌ಗೆ ಅನೇಕರು ಫಿದಾ ಆಗಿದ್ದಾರೆ. ಕಂಗನಾ ನೀಡುವ ಒಂದೊಂದು ಹೇಳಿಕೆನೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತದೆ. ಈಗ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾಡಿರುವ ಕಾಮೆಂಟ್ ಮುಂಬರುವ ದಿನಗಳಲ್ಲಿ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಆಂಧ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಡಾಟ್ ಕಾಮ್ ಪ್ರಕಟ ಮಾಡಿರುವ ಮಾಹಿತಿ ಪ್ರಕಾರ 'ಬ್ರಹ್ಮಾಸ್ತ್ರ ಸಿನಿಮಾ ಮಾಡಲು ಒಟ್ಟು 650 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಆದರೆ ಇದುವರೆಗೂ ಮಾಡಿರುವುದು ಕೇವಲ 144 ಕೋಟಿ ರೂಪಾಯಿ ಕಲೆಕ್ಷನ್ ಅಷ್ಟೆ. ಇದಕ್ಕೆ ಕಂಗನಾ ರಿಯಾಕ್ಟ್ ಮಾಡಿದ್ದಾರೆ. 'ಬಾಲಿವುಡ್ ಚಿತ್ರರಂಗ ಕಂಡಿರುವ ಬಿಗ್ ಹಿಟ್ ಸಿನಿಮಾ ಬ್ರಹ್ಮಾಸ್ತ್ರ ಎನ್ನಲಾಗುತ್ತಿದೆ. ಅದು 650 ಕೋಟಿಯಲ್ಲಿ ಮಾಡಿರುವುದು 144 ಕೋಟಿ ಕಲೆಕ್ಷನ್. ಇಷ್ಟು ಕಲೆಕ್ಷನ್ ಮಾಡಿರುವುದು ಸುಳ್ಳು ಎನ್ನಲಾಗಿದೆ. ಇದು ಪಕ್ಕಾ ಮೂವಿ ಮಾಫಿಯಾ. ಚಿತ್ರತಂಡದವರೇ ನಿರ್ಧಾರ ಮಾಡುತ್ತದೆ ಯಾರ ಸಿನಿಮಾ ಹಿಟ್ ಆಗಬೇಕು ಯಾರದ್ದು ಫ್ಲಾಪ್ ಆಗಬೇಕು ಎಂದು. ಜನರು ನಿರ್ಧರಿಸುತ್ತಾರೆ ಯಾರಿಗೆ ಹೈಫ್ ನೀಡಬೇಕು ಯಾರನ್ನು ಬಾಯ್ಕಾಟ್ ಮಾಡಬೇಕು. ಇಲ್ಲಿ ಎಲ್ಲವೂ ಎಕ್ಸಪೋಸ್ ಆಗುತ್ತಿದೆ' ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಒಂದೊಂದು ವೆಬ್ ಸೈಟ್‌ನಲ್ಲಿ ಒಂದೊಂದು ರೀತಿಯಲ್ಲಿ ಸಿನಿಮಾ ಕಲೆಕ್ಷನ್‌ನ ಪ್ರಕಟ ಮಾಡಲಾಗಿದೆ. 246 ಕೋಟಿ ಕಲೆಕ್ಷನ್ ಬಗ್ಗೆ ಯಾವುದೂ ಮಾಹಿತಿನೂ ಇಲ್ಲ. ಇತ್ತೀಚಿಗೆ ಬಿಡುಗಡೆಯಾದ ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ ಮುಟ್ಟುವುದರಲ್ಲಿ ವಿಫಲವಾಗಿತ್ತು ಆದರೆ ಬ್ರಹ್ಮಾಸ್ತ್ರ ಒಂದು ಮಟ್ಟದಲ್ಲಿ ನಿರೀಕ್ಷೆ ಮುಟ್ಟಿದೆ.
'ಭೂಲ್ ಭುಲೈಯಾ 2' ಹಿಂದಿಕ್ಕಿದ ಬಹ್ಮಾಸ್ತ್ರ:
ಸೋಮವಾರದ ಪರೀಕ್ಷೆಯಲ್ಲಿ ಉತ್ತೀರ್ಣರಾದ 2022 ರ ಟಾಪ್ 5 ಚಲನಚಿತ್ರಗಳಲ್ಲಿ ಬಹ್ಮಾಸ್ತ್ರ ಯಶಸ್ವಿಯಾಗಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಭಾಗ ಒಂದು: ಶಿವ' ಚಿತ್ರಕ್ಕೆ ಯಾವುದೇ ನಿಲುಗಡೆ ಇಲ್ಲ ಎಂದು ತೋರುತ್ತಿದೆ. ಟಿಕೆಟ್ ವಿಂಡೋದಲ್ಲಿ ಯಶಸ್ವಿ ಮೊದಲ ವಾರಾಂತ್ಯದ ನಂತರ, ಚಿತ್ರವು ತನ್ನ ಭಯಾನಕ 'ಸೋಮವಾರ ಪರೀಕ್ಷೆ'ಯಲ್ಲಿಯೂ ಪಾಸಾದಂತೆ ಕಾಣಿಸುತ್ತಿದೆ. ಸೆಪ್ಟೆಂಬರ್ 9 ರಂದು ಬಿಡುಗಡೆಯಾದ ‘ಬ್ರಹ್ಮಾಸ್ತ್ರ’ ಮೂರು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಬಹಿಷ್ಕಾರದ ಕರೆಗಳ ಹೊರತಾಗಿಯೂ, ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆಅಷ್ಟಕ್ಕೂ ಈ ಮಂಡೆ ಟೆಸ್ಟ್ ಎಂದರೇನು? ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದಾಗ, ಮೊದಲ ದಿನ ಮತ್ತು ಮೊದಲ ವಾರಾಂತ್ಯದಲ್ಲಿ ಪ್ರದರ್ಶನ ನೀಡುವುದು ಮಾತ್ರವಲ್ಲ, ಮೊದಲ ಸೋಮವಾರವೂ ಸಹ ಮುಖ್ಯವಾಗಿದೆ.
Brahmastra: ರಣಬೀರ್ ಕಪೂರ್ ತಾಯಿ ಪಾತ್ರದಲ್ಲಿ ನಟನ ಎಕ್ಸ್‌ಗರ್ಲ್‌ಫ್ರೆಂಡ್?
Rajamouliಗೆ ರಣಬೀರ್ ಕಪೂರ್ ಕೊಟ್ಟ ಹಣ ಎಷ್ಟು?
ಬ್ರಹ್ಮಾಸ್ತ್ರ ಚಿತ್ರಕ್ಕೆ 410 ಕೋಟಿ ಬಂಡವಾಳ ಹಾಕಲಾಗಿದೆ. ಈ ಚಿತ್ರ ತಾರೆಯರ ಮೇಲ್ಲೂ ಅಷ್ಟೇ ಇನ್ವೆಸ್ಟ್ ಮಾಡಿದ್ದಾರೆ. ಒಂದು ತಿಂಗಳ ಕಾಲ ಸಿನಿಮಾ ಪ್ರಚಾರ ಮಾಡಲು ಎಸ್‌ಎಸ್ ರಾಜಮೌಳಿ 10 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆಂಧ್ರ ಪ್ರದೇಶ (Andra Pradesh) ಮತ್ತು ತೆಲಂಗಾಣವನ್ನು ಪ್ರತಿನಿಧಿಸಿದ ರಾಜಮೌಳಿ ರಾಮೂಜೀ ಫಿಲ್ಮ್ ಸಿಟಿ ಹೈದರಾಬಾದ್‌ನಲ್ಲಿ ಪ್ರಚಾರ ಇಟ್ಟುಕೊಂಡಿದ್ದರು ಆದರೆ ಪ್ಲ್ಯಾನ್ ಕ್ಯಾನ್ಸಲ್ ಆದ ಕಾರಣ ತಕ್ಷಣವೇ ಮತ್ತೊಂದು ಪ್ರೆಸ್‌ಮೀಟ್ ಪ್ಲ್ಯಾನ್ ಮಾಡಿ ಜ್ಯೂ. ಎನ್‌ಟಿಆರ್‌ನ ಕೂಡ ಆಹ್ವಾನ ಮಾಡಿದ್ದರು.