Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

Published : Jan 25, 2023, 05:40 PM IST
Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

ಸಾರಾಂಶ

ಅತ್ಯಂತ ಕಡಿಮೆ ಬಟ್ಟೆ ತೊಟ್ಟು ಟ್ರೋಲ್​ ಆಗ್ತಿರೋ ನಟಿ ಉರ್ಫಿ ಜಾವೇದ್​ಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ತಿಲ್ವಂತೆ. ಇದಕ್ಕೆ  ಕಾರಣ ಏನು?  

ಮುಂಬೈ: ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯಂತೆ ಕಾಣುವ ಈ ನಟಿ ಈಗ ಫಜೀತಿಯಲ್ಲಿ ಸಿಲುಕಿದ್ದಾರೆ!

ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ನಟಿ ಈಗ ಗೋಳೋ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ಈಕೆಗೆ ಯಾರೂ ಮನೆ ಕೊಡಲು ಮುಂದೆ ಬರುತ್ತಿಲ್ಲವಂತೆ! ಮುಂಬೈಯಂತಹ ದೊಡ್ಡ ನಗರದಲ್ಲಿಯೂ ಅವರಿಗೆ ಬಾಡಿಗೆಗೆ ಮನೆ ನೀಡಲು ಯಾವುದೇ ಮಾಲೀಕರು ಸಿದ್ಧರಿಲ್ಲ. ಈ ನೋವನ್ನು ಉರ್ಫಿ ಜಾವೇದ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಬಾಡಿಗೆಗೆ ಮನೆ ಸಿಗದ ಕಾರಣ ಉರ್ಫಿಗೆ ವಾಸಿಸಲು ಕಷ್ಟವಾಗುತ್ತಿದೆಯಂತೆ. ಇದನ್ನು ಜಾಲತಾಣದಲ್ಲಿ ತಿಳಿಸಿದ್ದಾರೆ ಉರ್ಫಿ.

Shah Rukh Khan: ಟಾಪ್​ 20 ಸಿನಿಮಾ ಲಿಸ್ಟ್​ ರಿಲೀಸ್​: ಶಾರುಖ್​ ಖಾನ್​ಗೆ ಬಿಗ್​ ಶಾಕ್​!

ಅಷ್ಟಕ್ಕೂ ಉರ್ಫಿ ಜಾವೇದ್ ಹೇಳಿರೋದು ಏನು ಎಂದರೆ, 'ನನಗೆ ಯಾರೂ ಬಾಡಿಗೆ ಮನೆ (rented house) ಕೊಡಲು ಮುಂದೆ ಬರ್ತಿಲ್ಲ.  ನಾನು ಮುಸ್ಲಿಂ (muslim) ಎಂಬ ಕಾರಣಕ್ಕೆ ಹಿಂದೂ ಮಾಲೀಕರು ನನಗೆ ಮನೆ ನೀಡುತ್ತಿಲ್ಲ, ಮುಸ್ಲಿಂ ಮನೆಗೆ ಹೋದರೆ ನಾನು  ಬಟ್ಟೆ ತೊಡುವ ರೀತಿ ಸರಿಯಿಲ್ಲ ಎಂದು ಅವರೂ ಮನೆ ಕೊಡ್ತಿಲ್ಲ. ಇನ್ನು ಕೆಲವರು ನನಗೆ  ಬರುತ್ತಿರುವ ರಾಜಕೀಯ ಬೆದರಿಕೆಗಳಿಗೆ ಹೆದರಿ ಮನೆ ಕೊಡಲು ಹೆದರುತ್ತಿದ್ದಾರೆ. ಮುಂಬೈನಲ್ಲಿ ನನಗೆ ಎಲ್ಲಿಯೂ ಮನೆ ಸಿಗ್ತಿಲ್ಲ. ಏನು ಮಾಡಲಿ ನಾನು  ನಿರಾಶ್ರಿತರಾಳಿಬಿಟ್ಟಿದ್ದೇನೆ ಎಂದು ಟ್ವಿಟರ್​ನಲ್ಲಿ ದುಃಖ ತೋಡಿಕೊಂಡಿದ್ದಾರೆ ಉರ್ಫಿ. ಇದಕ್ಕೆ ನೆಟ್ಟಿಗರು ಬಿಡುತ್ತಾರೆಯೆ? ದಿನವೂ ಉರ್ಫಿಯ ಕಾಲೆಳೆಯುತ್ತಿರುವ ನೆಟ್ಟಿಗರು ಥಹರೇವಾರಿ ಕಮೆಂಟ್​  ಮಾಡಿ ಮತ್ತಷ್ಟು ಉರ್ಫಿಯ ಕಾಲೆಳೆದಿದ್ದಾರೆ.

ಸಕತ್​ ಫೇಮಸ್​ ಆಗಲಿ ಎನ್ನುವ ಕಾರಣಕ್ಕೆ ಇಂಥ ಮಾರ್ಗ ಹಿಡಿದರೆ ಹೀಗೆಯೇ ಆಗುವುದು ಎಂದು ಹಲವರು ಕಿಡಿ ಕಾರಿದ್ದರೆ, ಇನ್ನು ಕೆಲವರು ಉರ್ಫಿಯ ಬಗ್ಗೆ ಸಾಫ್ಟ್​ ಕಾರ್ನರ್​ (soft corner) ತೋರಿದ್ದಾರೆ. ಹೀಗೆ  ಮನೆ ಬಾಡಿಗೆ ನೀಡದೇ ಇರುವುದು ಮನುಷ್ಯತ್ವ ಅಲ್ಲ ಎಂದಿದ್ದಾರೆ. ಇನ್ನು ಕೆಲವರು, ಇಂಥ ಬಟ್ಟೆ ತೊಡುವ ಮೊದಲು ಭವಿಷ್ಯದ ಬಗ್ಗೆಯೂ ಯೋಚನೆ ಮಾಡಬೇಕು ಎಂದು ಬುದ್ಧಿಮಾತನ್ನು ಹೇಳಿದ್ದಾರೆ.

ರಿಷಬ್​ ಪಂತ್​ರನ್ನು ಕಾಡುತ್ತಿರೋ ನಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿಯಲ್ಲಿ!

ಉರ್ಫಿಯ ಬಟ್ಟೆಯ ಬಗ್ಗೆ ಚರ್ಚೆಯಾಗುತ್ತಿರುವುದು ಹೊಸ ವಿಷಯವೇನಲ್ಲ.  ಬಿಜೆಪಿ ಸದಸ್ಯೆ ಚಿತ್ರಾ ವಾಘ್ (Chitra Wagh) ನಟಿ ಉರ್ಫಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.  ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಉರ್ಫಿಯ ವಿಡಿಯೋವನ್ನು ಶೇರ್ ಮಾಡಿ 'ಮುಂಬೈ ಬೀದಿಗಳಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪ ಮಾಡಿದ್ದರು. ಇದಕ್ಕೆ ಸಿಡಿದೆದ್ದಿದ್ದ ಉರ್ಫಿ, ಅಶ್ಲೀಲತೆ ಎಂದರೆ ಏನು ಎಂಬ ಬಗ್ಗೆ ಚಿತ್ರಾ ಅವರಿಗೆ ಪಾಠ ಮಾಡಿ ಸುದ್ದಿಯಾಗಿದ್ದರು. ನಾನು ಏನನ್ನು ಮುಚ್ಚಿಕೊಳ್ಳಬೇಕೋ, ಅದನ್ನು ಮುಚ್ಚಿಕೊಳ್ಳುತ್ತೇನೆ. ಆದ್ದರಿಂದ ಅದು ಅಶ್ಲೀಲತೆ ಅಲ್ಲ ಎಂದು ಸಮಜಾಯಿಷಿ ನೀಡಿದ್ದರು. ಸಾಲದು ಎಂಬುದಕ್ಕೆ ಉರ್ಫಿ ದುಬೈನಲ್ಲಿಯೂ (Dubai) ಇಂಥದ್ದೇ  ಬಟ್ಟೆ ತೊಟ್ಟು  ಅರೆಸ್ಟ್​ (areest) ಕೂಡ ಆಗಿದ್ದರು. ಆಗಿದ್ದರೂ ತಾವು ನಡೆದದ್ದೇ ದಾರಿ ಎನ್ನುವ ಉರ್ಫಿ ಯಾರಿಗೂ ಕ್ಯಾರೇ ಅನ್ನದೇ ಮುನ್ನುಗ್ಗುತ್ತಿದ್ದು, ಈಗ ಬಾಡಿಗೆಗೆ ಮನೆ ಸಿಗದೇ ಪರದಾಡುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್