ಬಾಲ ನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅನಿಖಾ ಸುಂದರನ್ ಈಗ ನಾಯಕಿಯಾಗಿ ನಟಿಸಿರುವ ಓ ಮೈ ಡಾರ್ಲಿಂಗ್ನಲ್ಲಿ ಇರುವ ಲಿಪ್ಲಾಪ್ ದೃಶ್ಯದ ಬಗ್ಗೆ ಏನು ಹೇಳಿದ್ದಾರೆ?
2007ರಲ್ಲಿ ‘ಚೊಟ್ಟಾ ಮುಂಬೈ’ ಎಂಬ ಮಲಯಾಳಂ (Malayalam) ಸಿನಿಮಾದ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿರೋ ನಟಿ ಅನಿಖಾ ಸುರೇಂದ್ರನ್. ಇದಾಗಲೇ ಕಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದಾರೆ ಈ ನಟಿ. ತಮಿಳಿನ ‘ಅರೀಂಧಾಲ್’, ’ವಿಶ್ವಾಸಂ’ ಸಿನಿಮಾದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ನಟಿಗೆ ಈಗ ಕೇವಲ 19 ವರ್ಷ ವಯಸ್ಸು. ಅಂದರೆ ಈಕೆ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಮೂರು ವರ್ಷದ ಪುಟಾಣಿಯಾಗಿದ್ದಾಗ. ಬಾಲ ನಟಿಯಾಗಿ ಗುರುತಿಸಿಕೊಂಡ ಅನಿಖಾ ಈಗ ಯೌವನಾವಸ್ಥೆಗೆ ಬಂದಿದ್ದಾರೆ. ಈಕೆಯ ಕುರಿತು ಭಾರಿ ಸುದ್ದಿಯಾಗಿದ್ದು, ಕಳೆದ ವರ್ಷ ಈಕೆಯ ಅಭಿಮಾನಿಯೊಬ್ಬಳು ಬ್ರಾ (Bra) ಕುರಿತು ಮಾತನಾಡಿದ್ದ ಸಂದರ್ಭದಲ್ಲಿ. ಸಾಮಾಜಿಕ ಜಾಲತಾಣದಲ್ಲಿ ನಟಿ ಲೈವ್ಗೆ ಬಂದ ಸಂದರ್ಭದಲ್ಲಿ, ಅನೇಕರು ಈಕೆಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಸಮಯದಲ್ಲಿ ಅಭಿಮಾನಿಯೊಬ್ಬಾಕೆ ಕೇಳಿದ ತರ್ಲೆ ಪ್ರಶ್ನೆಗೆ ಯಾವುದೇ ಅಳುಕೂ ಇಲ್ಲದೇ ಉತ್ತರಿಸಿದ್ದ ಅನಿಖಾ ಭಾರಿ ಸುದ್ದಿಯಾಗಿದ್ದರು.
ಆ ಪ್ರಶ್ನೆ ಏನೆಂದರೆ ‘ನನಗೆ ಬ್ರಾ ಬಗ್ಗೆ ಸಲಹೆ ಅಗತ್ಯವಿದೆ. ನೀವು ಯಾವುದನ್ನು ಬಳಸುತ್ತೀರಿ? ಧನ್ಯವಾದಗಳು’ ಎಂದು ಪ್ರಶ್ನೆ ಮಾಡಿದ್ದಳು. ಇಂಥ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಬೇರೆ ನಟಿಯರು ಆಕ್ರೋಶ (Angry) ವ್ಯಕ್ತಪಡಿಸಿದ್ದು ಇದೆ, ಇಲ್ಲವೇ ಪ್ರಶ್ನೆ ಕೇಳಿದವರು ಮುಂದೆ ಯಾರಿಗೂ ಅಂಥ ಪ್ರಶ್ನೆ ಕೇಳಬಾರದು, ಹಾಗೆ ಕಪಾಳಕ್ಕೆ ಕೊಟ್ಟಂತೆ ಉತ್ತರಿಸಿದ್ದೂ ಇದೆ. ಆದರೆ ಅನಿಖಾ ಇದಕ್ಕೆ ತದ್ವಿರುದ್ಧವಾಗಿ ಸಮಾಧಾನ ಚಿತ್ತವಾಗಿ ಸ್ವಲ್ಪವೂ ಅಳುಕು ಇಲ್ಲದೇ ಉತ್ತರಿಸಿದ್ದರು. ‘ಸರಿಯಾದ ರೀತಿಯ ಹತ್ತಿಯ ಬ್ರಾ ಧರಿಸಲು ನಾನು ಸಲಹೆ ನೀಡುತ್ತೇನೆ. ಇನ್ನು ನನ್ನ ಬ್ರಾ ಕುರಿತು ಹೇಳುವುದಾದರೆ ನಾನು ಯಾವಾಗಲೂ ಆನ್ಲೈನ್ ಮೂಲಕ ಬ್ರಾ ಖರೀದಿ ಮಾಡುತ್ತೇನೆ. ಇದು ನಿಮಗೆ ವಿಚಿತ್ರವಾಗಿ ಕಂಡರೂ ಸತ್ಯ’ ಎಂದಿದ್ದರು.
ಮದುಮಗಳ ಲುಕ್ನಲ್ಲಿ ಮಿಂಚಿಂಗ್! ಮೂರನೆ ಮದ್ವೆಯಾಗ್ತಿದ್ದಾರಾ Rakhi Sawant?
ಇತ್ತೀಚಿಗೆ ಇವರ ಓ ಮೈ ಡಾರ್ಲಿಂಗ್ (Oh my Darling) ಬಿಡುಗಡೆಗೊಂಡಿದೆ. ಈ ಚಿತ್ರವನ್ನು ಆಲ್ಫ್ರೆಡ್ ಡಿ ಸ್ಯಾಮ್ಯುಯೆಲ್ ನಿರ್ದೇಶಿಸಿದ್ದಾರೆ. ನಟರಾದ ಮುಖೇಶ್, ಲೀನಾ, ವಿಜಯರಾಘವನ್, ಜಾನಿ ಆಂಟೋನಿ, ಮಂಜು ಪಿಳ್ಳೈ, ಶ್ರೀಕಾಂತ್ ಮುರಳಿ ಮತ್ತು ನಂದು ಈ ಚಿತ್ರದಲ್ಲಿ ಕೆಲವು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ 24ರಂದು ರಿಲೀಸ್ ಆಗಿದೆ. ಸಿನಿಮಾದಲ್ಲಿ ಅನಿಖಾ ಲಿಪ್ ಲಾಕ್ (Lip Lock) ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಿಗೆ ಲಿಪ್ಲಾಕ್ ದೃಶ್ಯವೇನೂ ಹೊಸತಲ್ಲ. ಆದರೆ ಚಿಕ್ಕ ವಯಸ್ಸಿನ ಅನಿಖಾ ಇಷ್ಟು ಸುದೀರ್ಘ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಕೆಲವರ ಹುಬ್ಬೇರಿಸಿದೆ. ಈ ಬಗ್ಗೆ ಈಕೆಗೆ ಹಲವಾರು ರೀತಿಯ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಲಿಪ್ಲಾಕ್ ಕುರಿತು ಹಲವು ಅಭಿಮಾನಿಗಳು ಹಲವಾರು ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ.
ಅನಿಕಾ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು 20 ಲಕ್ಷಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ. ಇಲ್ಲಿಯೂ ಈಕೆಗೆ ಪದೇ ಪದೇ ಲಿಪ್ಲಾಕ್ ಕುರಿತು ಕೇಳುವ ಪ್ರಶ್ನೆ ಕೇಳಲಾಗುತ್ತಿದೆ. ಇದರಿಂದ ನಟಿ ಸ್ವಲ್ಪ ಅಸಮಾಧಾನಗೊಂಡಿದ್ದಾರೆ. ‘ನಾನು ಸಿನಿಮಾ (Cinema) ಕಥೆ ಕೇಳುವಾಗ ನಿರ್ದೇಶಕರು ಲಿಪ್ಲಾಕ್ ಸೀನ್ ಬಗ್ಗೆಯೂ ಹೇಳಿದ್ದರು. ಆಗ ನಾನು ಓಕೆ ಎಂದೆ. ನನಗೆ ಅದೇನು ಹೊಸತು ಎನಿಸಲಿಲ್ಲ. ದೃಶ್ಯಕ್ಕೆ ತಕ್ಕಂತೆ ನಟಿಸುವುದು ನಟರ ಕರ್ತವ್ಯ ಎಂದುಕೊಂಡೆ. ಶೂಟಿಂಗ್ ವೇಳೆ ಕಿಸ್ ಮಾಡುವಾಗ ನನಗೆ ಮುಜುಗರ ಆಗಲಿಲ್ಲ. ಕಿಸ್ಸಿಂಗ್ ದೃಶ್ಯದಲ್ಲಿ ನಟಿಸೋದು ದೊಡ್ಡ ವಿಚಾರ ಅಲ್ಲ, ಆದರೆ ಆ ದೃಶ್ಯಕ್ಕೆ ಜನರು ಇಷ್ಟರಮಟ್ಟಿಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ನನಗೆ ಗೊತ್ತಿರಲಿಲ್ಲ. ಜನರು ಅದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ, ಇದು ನನಗೆ ಮುಜುಗರ ಆಗುತ್ತಿದೆ ಎಂದು ಅನಿಕಾ ಹೇಳಿದ್ದಾರೆ.
ರೇಪ್ ಕೇಸ್ನಲ್ಲಿ ಸಿಲುಕಿದ ನಟ ನವಾಜುದ್ದೀನ್ ಸಿದ್ದಿಕಿ: ಪತ್ನಿ ಆಲಿಯಾ ದೂರು
ಅಂದಹಾಗೆ ನಟಿ, ಅನಿಕಾ ಸುರೇಂದ್ರನ್ ಕೇರಳ ಮೂಲದವರಾಗಿದ್ದು 2004ರಲ್ಲಿ ಜನಿಸಿದರು. ಇವರ ನಟನೆಗೆ ಕೇರಳ ರಾಜ್ಯ ಉತ್ತಮ ಬಾಲ ನಟಿ ಪ್ರಶಸ್ತಿಯನ್ನು ನೀಡಿದೆ. ಏಷ್ಯಾನ್ ಫಿಲಂ ಅವಾರ್ಡ್ (Asian Film Award) ಕೂಡ ಲಭಿಸಿದೆ. ಸದ್ಯ ಈ ನಟಿ ತಮಿಳಿನ ‘ಬುಟ್ಟಾ ಬೊಮ್ಮ’ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ನಾಗಾರ್ಜುನ ಅವರ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲೆಯಾಳಂ ‘ಕಪ್ಪೆ ಲಾ‘ ಚಿತ್ರದ ರಿಮೇಕ್ ಆಗಿದೆ.