
ಬಾಲಿವುಡ್ ಹೀ – ಮ್ಯಾನ್ ಧರ್ಮೇಂದ್ರ (Dharmendra) ನಿಧನಕ್ಕೆ ಇಡೀ ಚಿತ್ರರಂಗ ಸಂತಾಪ ಸೂಚಿಸ್ತಿದೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ೮೯ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಬ್ಬರು ಪತ್ನಿಯರು, ಆರು ಮಕ್ಕಳನ್ನು ಅಗಲಿರುವ ಧರ್ಮೇಂದ್ರ 400 ರಿಂದ 450 ಕೋಟಿ ರೂಪಾಯಿ ಒಡೆಯರು. 1960ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಧರ್ಮೇಂದ್ರ ಮತ್ತೆ ಹಿಂತಿರುಗಿ ನೋಡಲಿಲ್ಲ. ಸುಮಾರು 65 ವರ್ಷಗಳ ಕಾಲ ಬಾಲಿವುಡ್ನಲ್ಲಿ ಆಳ್ವಿಕೆ ನಡೆಸಿದ ಧರ್ಮೇಂದ್ರ ಬಾಲಿವುಡ್ ದಾದಾ ಎಂದೇ ಪ್ರಸಿದ್ಧಿ ಪಡೆದವರು.
ಧರ್ಮೇಂದ್ರ ತಮ್ಮ ಇಳಿ ವಯಸ್ಸಿನಲ್ಲಿಯೂ ಸಿನಿಮಾ ಬಿಟ್ಟಿರಲಿಲ್ಲ. ಧರ್ಮೇಂದ್ರ ಅವರ ಕೊನೆಯ ಸಿನಿಮಾ ಇಕ್ಕೀಸ್. ಈ ಚಿತ್ರ ಇನ್ನೂ ತೆರೆಗೆ ಬಂದಿಲ್ಲ. ಮ್ಯಾಡಾಕ್ ಫಿಲ್ಮ್ಸ್ "ಇಕ್ಕಿಸ್" ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಿದೆ. ಧರ್ಮೇಂದ್ರ ಅವರ ಧ್ವನಿಯಲ್ಲಿ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಧರ್ಮೇಂದ್ರ ಸಿನಿಮಾ ಮಾತ್ರ ನಂಬಿ ಕುಳಿತವರಲ್ಲ. ಬ್ರಾಂಡ್ ಜಾಹೀರಾತು ಮತ್ತು ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ಗಳಿಸ್ತಿದ್ದಾರೆ. ಧರ್ಮೇಂದ್ರ ಫುಡ್ ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿದ್ದರು. ಅವರು ಪ್ರಸಿದ್ಧ ರೆಸ್ಟೋರೆಂಟ್ ಸರಪಳಿ ಗರಂ-ಧರಂ ಅನ್ನು ಹೊಂದಿದ್ದರು. ಗರಂ-ಧರಂ ಅನೇಕ ನಗರಗಳಲ್ಲಿ ಅನೇಕ ರೆಸ್ಟೋರೆಂಟ್ಗಳನ್ನು ಹೊಂದಿದೆ. ಧರ್ಮೇಂದ್ರ ಮುಂಬೈನಲ್ಲಿ ಐಷಾರಾಮಿ ಬಂಗಲೆ ಮತ್ತು ಖಂಡಾಲಾ ಮತ್ತು ಲೋನಾವಾಲದಲ್ಲಿ ಫಾರ್ಮ್ಹೌಸ್ ಹೊಂದಿದ್ದಾರೆ. ಧರ್ಮೇಂದ್ರ ಫಾರ್ಮ್ಹೌಸ್ನಲ್ಲಿ ವಾಸವಾಗಿದ್ರು.
ಅಂಡರ್ ವರ್ಲ್ಡ್‌ಗೂ ಕ್ಯಾರೇ ಅನ್ನುತ್ತಿರಲಿಲ್ಲ ಧರ್ಮೇಂದ್ರ: ಡ್ರೀಮ್ ಗರ್ಲ್ ಜತೆ 2ನೇ ವಿವಾಹ ಆಗಿದ್ದೇಕೆ?
ನಟ ಧರ್ಮೇಂದ್ರ ಇಬ್ಬರು ಪತ್ನಿಯರನ್ನುಹೊಂದಿದ್ದರು. ಅವರ ಮೊದಲ ಮದುವೆ ಪ್ರಕಾಶ್ ಕೌರ್ ಜೊತೆ ನಡೆದಿತ್ತು. ಪ್ರಕಾಶ್ ಕೌರ್ ನಾಲ್ಕು ಮಕ್ಕಳ ತಾಯಿ. ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜಿತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್. ಪ್ರಕಾಶ್ ಕೌರ್ ನಂತ್ರ ಹೇಮಾ ಮಾಲಿನಿ ಎರಡನೇ ಬಾರಿ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್.
ಅಂಡರ್ ವರ್ಲ್ಡ್‌ಗೂ ಕ್ಯಾರೇ ಅನ್ನುತ್ತಿರಲಿಲ್ಲ ಧರ್ಮೇಂದ್ರ: ಡ್ರೀಮ್ ಗರ್ಲ್ ಜತೆ 2ನೇ ವಿವಾಹ ಆಗಿದ್ದೇಕೆ?
ಧರ್ಮೇಂದ್ರ ಆಸ್ತಿ ಯಾರ ಪಾಲು? :
ಧರ್ಮೇಂದ್ರ ಅವರ ಆಸ್ತಿ ವಿಭಜನೆಯಾದರೆ ಯಾರಿಗೆ ಎಷ್ಟು ಪಾಲು ಎನ್ನುವ ಪ್ರಶ್ನೆ ಮೂಡುತ್ತದೆ. 2023 ರ ರೇವಣಸಿದ್ದಪ್ಪ ವರ್ಸಸ್ ಮಲ್ಲಿಕಾರ್ಜುನ ತೀರ್ಪಿನ ನಂತರ, ಹಿಂದೂ ವಿವಾಹ ಕಾಯ್ದೆ (HMA) ಅಡಿಯಲ್ಲಿ ವ್ಯಕ್ತಿಯ ಎರಡನೇ ಮದುವೆಯನ್ನು ಅನೂರ್ಜಿತವೆಂದು ಪರಿಗಣಿಸಿದರೆ, ಆ ಮದುವೆಯಿಂದ ಜನಿಸಿದ ಮಕ್ಕಳನ್ನು ಕಾನೂನಿನ ದೃಷ್ಟಿಯಲ್ಲಿ ಇನ್ನೂ ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ ಎಂದು ದೆಹಲಿ ಹೈಕೋರ್ಟ್ ವಕೀಲ ಕಮಲೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಸೆಕ್ಷನ್ 16(1) ರ ಅಡಿಯಲ್ಲಿಈ ಮಕ್ಕಳಿಗೆ ತಮ್ಮ ಪೋಷಕರ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಇರುತ್ತದೆ. ಆದ್ರೆ ಪೋಷಕರ ಆಸ್ತಿ ಹಕ್ಕು ಮಾತ್ರ ಇರುತ್ತದೆ, ಪೂರ್ವಜರ ಆಸ್ತಿ ಹಕ್ಕಿರುವುದಿಲ್ಲ. ಧರ್ಮೇಂದ್ರ ನಿಧನದ ನಂತ್ರ ಧರ್ಮೇಂದ್ರ ಅವರ ಆಸ್ತಿಯನ್ನು ಎಲ್ಲ ಮಕ್ಕಳೂ ಪಡೆಯುತ್ತಾರೆ. ಧರ್ಮೇಂದ್ರ ಆಸ್ತಿಯನ್ನು ಎಲ್ಲಾ ಕಾನೂನುಬದ್ಧ ಉತ್ತರಾಧಿಕಾರಿಗಳಲ್ಲಿ ಸಮಾನವಾಗಿ ಹಂಚಲಾಗುತ್ತದೆ. ಧರ್ಮೇಂದ್ರನ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜಿತಾ ಡಿಯೋಲ್ ಮತ್ತು ಬಾಬಿ ಡಿಯೋಲ್ ಮತ್ತು ಅವರ ಎರಡನೇ ಮದುವೆಯಿಂದ ಬಂದ ಅವರ ಹೆಣ್ಣುಮಕ್ಕಳಾದ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ - ಧರ್ಮೇಂದ್ರನ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ. ಆದ್ರೆ ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ ಅವರ ಮದುವೆಯನ್ನು ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಮಾನ್ಯವೆಂದು ಪರಿಗಣಿಸದ ಕಾರಣ ಅವರಿಗೆ ಧರ್ಮೇಂದ್ರ ಅವರ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.