
ಧರ್ಮೇಂದ್ರ-ಶಾರುಖ್ ಸಂಬಂಧ
ಧರ್ಮೇಂದ್ರ (Dharmendra) ನಿಧನದ ನಂತರ ಬಾಲಿವುಡ್ ಆಘಾತದಲ್ಲಿದೆ. 89ನೇ ವಯಸ್ಸಿನಲ್ಲಿ ಮುಂಬೈನ ತಮ್ಮ ಮನೆಯಲ್ಲಿ ನಿಧನರಾದರು. ಶಾರುಖ್ ಖಾನ್ X ನಲ್ಲಿ ಅವರನ್ನು ತಂದೆಯ ಸಮಾನ ಎಂದು ಬಣ್ಣಿಸಿ ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಧರ್ಮೇಂದ್ರ ತಮ್ಮ ಸಿನಿಮಾಗಳು ಮತ್ತು ಕುಟುಂಬದ ಮೂಲಕ ಯಾವಾಗಲೂ ಜೀವಂತವಾಗಿರುತ್ತಾರೆ ಎಂದು ಹೇಳಿದ್ದಾರೆ.
ಧರ್ಮೇಂದ್ರ ಅವರ ಅಗಲಿಕೆ ಬಾಲಿವುಡ್‌ನಲ್ಲಿ ತುಂಬಲಾರದ ನಷ್ಟದ ಜಾಗವನ್ನು ಸೃಷ್ಟಿಸಿದೆ. ಇದೇ ಕಾರಣಕ್ಕೆ ಅವರ ನಿಧನದಿಂದ ಚಿತ್ರರಂಗದ ಪ್ರತಿಯೊಬ್ಬರೂ ಬೇಸರಗೊಂಡಿದ್ದಾರೆ. ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು X ನಲ್ಲಿ ಧರ್ಮೇಂದ್ರ ಅವರನ್ನು ನೆನಪಿಸಿಕೊಂಡು, ತಮ್ಮ ಭಾವುಕ ಪೋಸ್ಟ್‌ನಲ್ಲಿ ಅವರನ್ನು ತಂದೆಗೆ ಸಮಾನ ಎಂದು ಹೇಳಿದ್ದಾರೆ. 89 ವರ್ಷದ ಧಮೇಂದ್ರ ಅವರು ಸೋಮವಾರ (ನವೆಂಬರ್ 24) ಮುಂಬೈನ ತಮ್ಮ ಮನೆಯಲ್ಲಿ ನಿಧನರಾದರು, ಅಲ್ಲಿ ಅವರು 12 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಸೋಮವಾರ ಮಧ್ಯಾಹ್ನ ಮುಂಬೈನ ವಿಲೆ ಪಾರ್ಲೆಯಲ್ಲಿರುವ ಪವನ್ ಹನ್ಸ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು. ಇದರಲ್ಲಿ ಶಾರುಖ್ ಖಾನ್ ಕೂಡ ಭಾಗವಹಿಸಿದ್ದರು. ಎಲ್ಲಾ ಸೆಲೆಬ್ರಿಟಿಟಿಗಳು ಅಲ್ಲಿಂದ ಹಿಂತಿರುಗಿದ ನಂತರವೂ, ಕೊನೆಯವರೆಗೂ ಧಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಜೊತೆಯಲ್ಲೇ ಇದ್ದರು. ರಾತ್ರಿ ಮನೆಗೆ ತಲುಪಿದಾಗ, ಅವರು ಧಮೇಂದ್ರ ಅವರ ಹೆಸರಿನಲ್ಲಿ ಭಾವುಕ ಪೋಸ್ಟ್ ಬರೆದಿದ್ದು, ಅದು ಈಗ ಚರ್ಚೆಯಲ್ಲಿದೆ.
ಶಾರುಖ್ ಖಾನ್ ಅವರು ತಮ್ಮ X ನಲ್ಲಿ ಧಮೇಂದ್ರ ಅವರನ್ನು ನೆನಪಿಸಿಕೊಂಡು ತಮ್ಮ ಭಾವುಕ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, "ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಧಮೇಂದ್ರಜೀ. ನೀವು ನನಗೆ ತಂದೆಗಿಂತ ಯಾವುದರಲ್ಲೂ ಕಡಿಮೆ ಇರಲಿಲ್ಲ. ನೀವು ನನಗೆ ನೀಡಿದ ಆಶೀರ್ವಾದ ಮತ್ತು ಪ್ರೀತಿಗೆ ಧನ್ಯವಾದಗಳು. ಇದು ಕೇವಲ ನಿಮ್ಮ ಕುಟುಂಬಕ್ಕೆ ಮಾತ್ರವಲ್ಲ, ಸಿನಿಮಾ ಹಾಗೂ ಪ್ರಪಂಚದಾದ್ಯಂತ ಸಿನಿಮಾ ಪ್ರೇಮಿಗಳಿಗೆ ತುಂಬಲಾರದ ನಷ್ಟ. ನೀವು ಇಲ್ಲದಿರಬಹುದು ಆದರೆ ನಿಮ್ಮ ಆತ್ಮವು ಯಾವಾಗಲೂ ನಿಮ್ಮ ಸಿನಿಮಾಗಳು ಹಾಗೂ ಸುಂದರ ಕುಟುಂಬದ ಮೂಲಕ ಜೀವಂತವಾಗಿರುತ್ತದೆ. ಲವ್ ಯು ಆಲ್ವೇಸ್."ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಶಾರುಖ್ ಖಾನ್ ಸ್ಟ್ರಗಲ್ ಮಾಡುತ್ತಿದ್ದಾಗ, ಹೇಮಾ ಮಾಲಿನಿ ಅವರನ್ನು 'ಫೌಜಿ' ಟಿವಿ ಸೀರಿಯಲ್‌ನಲ್ಲಿ ನೋಡಿ ಭೇಟಿಯಾಗಲು ಕರೆದರು. ಅವರು ತಮ್ಮ ಸಿನಿಮಾಗಾಗಿ ಶಾರುಖ್ ಅವರ ಆಡಿಶನ್ ತೆಗೆದುಕೊಂಡರು. ಆದರೆ ಅದರಿಂದ ಹೇಮಾ ಮಾಲಿನಿಯವರನ್ನು ಕನ್ವಿನ್ಸ್ ಮಾಡಲು ಸಾಧ್ಯವಾಗಲಿಲ್ಲ. ಹೇಮಾ ಅವರು ಶಾರುಖ್ ಖಾನ್ ಅವರ ಒರಟು ಕೂದಲು ಹಾಗೂ ಸ್ಲಿಮ್ ಇರುವ ಕಾರಣಭಕ್ಕೆ ರಿಜೆಕ್ಟ್ ಮಾಡಿದ್ದರು.
ನಂತರ ಧರ್ಮೇಂದ್ರ ಅವರು ಶಾರುಖ್ ಖಾನ್ ಅವರನ್ನು ನೋಡಿದಾಗ, ಅವರಿಂದ ಆಕರ್ಷಿತರಾದರು. ಅವರು ಹೇಮಾ ಬಳಿ, "ಈ ಹುಡುಗನನ್ನು ಖಂಡಿತ ತೆಗೆದುಕೊಳ್ಳಿ" ಎಂದರು. ಹೀಗೆ ಇಂದಿನ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಅಂದು ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಇದೀಗ ನಮ್ಮನ್ನಗಲಿರುವ ನಟ ಧಮೇಂದ್ರರ ಮೂಲಕ ಎಂಬುದು ಗಮನಿಸಿಬೇಕಾದ ಸಂಗತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.