ಬಾಲಿವುಡ್ ನಟ ಹೃತಿಕ್ ರೋಶನ್ ದುಃಖ-ದುಮ್ಮಾನಗಳ ಬಗ್ಗೆ ಈಗ ಯಾಕೆ ಮಾತನಾಡಿದ್ದಾರೆ?

By Shriram Bhat  |  First Published Mar 11, 2024, 8:03 PM IST

ಯಾರು ಅದೆಷ್ಟೇ ಶ್ರೀಮಂತರಾದರೂ ಅವರಿಗೆ ಅವರದೇ ಆದಂತಹ ಕೊರತೆಗಳು ಕಾಡುತ್ತವೆ, ಕೌಟುಂಬಿಕ ಸಮಸ್ಯೆಗಳು ಇರುತ್ತವೆ. ಲಕ್ಷುರಿ ಲೈಫ್‌ ನೋವನ್ನು ಅಥವಾ ಕಷ್ಟವನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ ಕೆಲವೊಮ್ಮೆ ನೋವನ್ನು ಜಾಸ್ತಿ ಮಾಡುತ್ತವೆ.


ಬಾಲಿವುಡ್ ನಟ ಹೃತಿಕ್ ರೋಶನ್ ದುಃಖ-ದುಮ್ಮಾನಗಳ ಬಗ್ಗೆ ಮಾತನಾಡಿದ್ದಾರೆ. ನೂರು ಮಹಡಿಗಳ ಕಟ್ಟಡ ಅಥವಾ ದೊಡ್ಡ ಮನೆಯಲ್ಲಿ ವಾಸಿಸುವುದು ನಿಮ್ಮನ್ನು ನೋವಿನಿಂದ ಅಥವಾ ಕಷ್ಟಗಳಿಂದ ಪಾರು ಮಾಡುವುದಿಲ್ಲ. ಜೀವನದ ಯಾವುದೋ ಹಂತದಲ್ಲಿ ಎಲ್ಲರೂ ನೋವು ಅಥವಾ ಕಷ್ಟಗಳನ್ನು ಅನುಭವಿಸುತ್ತಾರೆ. ಆದರೆ, ಕಷ್ಟದ ಅಥವಾ ನೋವಿನ ಮೂಲ ಬೇರೆಬೇರೆ ಅಷ್ಟೇ. ಆದರೆ, ಯಾರಾದರೂ ಒಮ್ಮೆ ಕಷ್ಟದ ಕಟ್ಟಕಡೆಯ ಆಳವನ್ನು ಅನುಭವಿಸಿದ್ದರೆ ಅವರಿಗೆ ಬೇರೆಯವರ ದುಃಖ-ದುಮ್ಮಾನಗಳು ಕೂಡ ಅರ್ಥವಾಗುತ್ತವೆ. 

 

Tap to resize

Latest Videos

ಮನುಷ್ಯರ ದುಃಖಗಳು, ಕಷ್ಟಗಳು ಒಂದೇ ಮೂಲದಿಂದ ಬರುವುದಿಲ್ಲ. ಬೇರೆ ಬೇರೆ ಮನುಷ್ಯರು ಬೇರೆ ಬೇರೆ ಕಷ್ಟಗಳಿಂದ ನರಳುತ್ತಾರೆ. ಆದರೆ, ತಳಮಟ್ಟದಿಂದ ನೋಡಿದರೆ ಎಲ್ಲ ಮನುಷ್ಯರ ಕಷ್ಟಗಳೂ ಒಂದೇ ಆಗಿರುತ್ತವೆ. ಒಬ್ಬ ವ್ಯಕ್ತಿ ಜೀವನದಲ್ಲಿ ತುಂಬಾ ಕಷ್ಟಗಳನ್ನು ನೋಡಿದ್ದರೆ, ಅವರಿಗೆ ಬೇರೆಯವರ ಕಷ್ಟಗಳು ಅರ್ಥವಾಗುವುದು ಮಾತ್ರವಲ್ಲ, ಅಂಥ ಕಷ್ಟಗಳನ್ನು ಪರಿಹರಿಸುವ ಮಾರ್ಗಗಳೂ ಸಹ ಗೊತ್ತಿರುತ್ತವೆ. ಕಷ್ಟಗಳು ಭಿನ್ನವಾಗಿರುವುದರಿಂದ ಪರಿಹಾರದ ಮಾರ್ಗಗಳೂ ಕೂಡ ವಿಭಿನ್ನವಾಗಿರುತ್ತವೆ.

ಮದುವೆಗಾಗಿ ಧರ್ಮವನ್ನೇ ಬಿಟ್ರು, ಆದ್ರೆ ಡಿವೋರ್ಸ್ ಆಯ್ತು; ಸ್ಟಾರ್ ನಟಿ ಬದುಕು ದುರಂತದಲ್ಲಿ ಕೊನೆಯಾಯ್ತು!

ನಟ ಹೃತಿಕ್ ರೋಶನ್ ಪ್ರಕಾರ ಕಷ್ಟಗಳನ್ನು, ನೋವುಗಳನ್ನು ಅನುಭವಿಸದ ಮನುಷ್ಯರು ತುಂಬಾ ಕಡಿಮೆ ಎನ್ನಬಹುದು. ಯಾರು ಅದೆಷ್ಟೇ ಶ್ರೀಮಂತರಾದರೂ 
ಅವರಿಗೆ ಅವರದೇ ಆದಂತಹ ಕೊರತೆಗಳು ಕಾಡುತ್ತವೆ, ಕೌಟುಂಬಿಕ ಸಮಸ್ಯೆಗಳು ಇರುತ್ತವೆ. ಲಕ್ಷುರಿ ಲೈಫ್‌ ನೋವನ್ನು ಅಥವಾ ಕಷ್ಟವನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ ಕೆಲವೊಮ್ಮೆ ನೋವನ್ನು ಜಾಸ್ತಿ ಮಾಡುತ್ತವೆ. ಹೀಗಾಗಿ, ನನ್ನ ಪ್ರಕಾರ ಆಡಂಬರದ ಜೀವನ ಮಾಡುವ ಬದಲು ಶಾಂತಿಯಿಂದ, ನೆಮ್ಮದಿಯಿಂದ ಬದುಕಲು ಪ್ರಯತ್ನಿಸುವುದೇ ಮೇಲು' ಅಂದಿದ್ದಾರೆ ನಟ ಹೃತಿಕ್ ರೋಶನ್. 

ಸಿಎಂ ಸಿದ್ದರಾಮಯ್ಯ ಗ್ಯಾರಂಟಿಗೆ ಹಾಡಿನ ಭಾಗ್ಯ, 'ಭಾಗ್ಯರಾಜ ನಮ್ಮ ಮುಖ್ಯಮಂತ್ರಿ' ಆಲ್ಬಂ ಬಿಡುಗಡೆ

ಅಂದಹಾಗೆ, ನಟ ಹೃತಿಕ್ ರೋಶನ್ ಅವರು 'ಕಹೋನಾ ಪ್ಯಾರ್ ಹೈ' ಚಿತ್ರದ ಮೂಲಕ ಬಾಲಿವುಡ್ ಸಿನಿಮಾ ಜಗತ್ತಿಗೆ ಬಂದರು. ಹೃತಿಕ್ ಅಪ್ಪ ರಾಕೇಶ್ ರೋಶನ್ ಅವರು ಹಿಂದಿ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕರು. ತಂದೆ ರಾಕೇಶ್ ರೋಶನ್ ನಿರ್ಮಾಣದ ಚಿತ್ರದ ಮೂಲಕವೇ ಬಂದರೂ ನಟ ಹೃತಿಕ್ ರೋಶನ್, ಆ ಬಳಿಕ ಸಾಕಷ್ಟು ಬೇರೆ ನಿರ್ಮಾಪಕರ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಜಗತ್ತಿನ ಸುಂದರ ಪುರುಷರ ಪಟ್ಟಿಯಲ್ಲಿ ನಟ ಹೃತಿಕ್ ರೋಶನ್ ಹೆಸರು ಸಹ ಇದೆ. ಒಟ್ಟಿನಲ್ಲಿ, ನಟ ಹೃತಿಕ್ ರೋಶನ್ ಸಿನಿಮಾ ನಟನೆ ಜತೆಗೆ 'ಲೈಫ್ ಲೆಸನ್' ಕೂಡ ಕೊಟ್ಟಿದ್ದಾರೆ. 

ಸದ್ಯದಲ್ಲೇ ತೆರೆಗೆ ಸತೀಶ್-ರಚಿತಾ ನಟನೆಯ ಮ್ಯಾಟ್ನಿ; ಮತ್ತೆ ಕಮಾಲ್ ಮಾಡಲಿದ್ಯಾ ಅಯೋಗ್ಯ ಜೋಡಿ?

click me!