ಅಯ್ಯಯ್ಯೋ ಕಾಲ್ತಪ್ಪಿದ ಹೈಹೀಲ್ಡ್‌ ಬ್ಯಾಲೆನ್ಸ್‌ : ಆಸ್ಕರ್ ಸಮಾರಂಭದ ರತ್ನಗಂಬಳಿ ಮೇಲೆಯೇ ಮಗುಚಿ ಬಿದ್ದ ನಟಿ

Published : Mar 11, 2024, 05:04 PM ISTUpdated : Mar 11, 2024, 05:12 PM IST
ಅಯ್ಯಯ್ಯೋ ಕಾಲ್ತಪ್ಪಿದ ಹೈಹೀಲ್ಡ್‌ ಬ್ಯಾಲೆನ್ಸ್‌ :  ಆಸ್ಕರ್ ಸಮಾರಂಭದ ರತ್ನಗಂಬಳಿ ಮೇಲೆಯೇ ಮಗುಚಿ ಬಿದ್ದ ನಟಿ

ಸಾರಾಂಶ

96ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ ನಟಿಯೊಬ್ಬರು ರೆಡ್ ಕಾರ್ಪೆಟ್ ಮೇಲೆ ಬ್ಯಾಲೆನ್ಸ್ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ.

ಲಾಸ್ ಏಂಜಲೀಸ್‌: ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ ನಟಿಯೊಬ್ಬರು ರೆಡ್ ಕಾರ್ಪೆಟ್( ನಡೆದಾಡುವ ಜಾಗದಲ್ಲಿ ಹಾಕುವ ರತ್ನಗಂಬಳಿ ಅಥವಾ ಕೆಂಪು ಕಾರ್ಪೆಟ್‌) ಮೇಲೆ ಬ್ಯಾಲೆನ್ಸ್ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ. ಅಮೆರಿಕಾದ ಕ್ಯಾಲಿಫೋನಿರ್ಯಾದ ಲಾಸ್‌ ಏಂಜಲೀಸ್‌ನಲ್ಲಿ 96ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಈ ಸಮಾರಂಭಕ್ಕೆ ಆಗಮಿಸಿದ ಇಂಟರ್‌ನೆಟ್ ಸೆನ್ಸೇಷನ್ ಆಗಿರುವ ಲೀಜಾ ಕೋಶಿ ಆಯತಪ್ಪಿ ರೆಡ್‌ ಕಾರ್ಪೆಟ್ ಮೇಲೆಯೇ ಬಿದ್ದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ತುಂಬಿದ ಗಣ್ಯರ ಮುಂದೆಯೇ ನಟಿ ಕೆಳಗೆ ಬಿದ್ದರೂ ಮುಜುಗರಕ್ಕೊಳಗಾಗದೇ ಅಷ್ಟೇ ಜಾಗರೂಕವಾಗಿ ವಿಶ್ವಾಸದಿಂದ ಮೇಲೆ ಎದ್ದು ನಿಂತಿದ್ದು, ನಟಿಯ  ವರ್ತನೆಗೆ ಪ್ರಶಂಸೆ ವ್ಯಕ್ತವಾಗಿದೆ.

ಆದರೆ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ನಡೆಯುವ ಇಂತಹ ಅನಿರೀಕ್ಷಿತ ಅವಘಡಗಳ ನಡುವೆಯೂ ಗಮನ ಸೆಳೆಯುವಲ್ಲಿ ನಟಿ ಲಿಜಾ ಕೋಶಿ ಯಶಸ್ವಿಯಾಗುವ ಮೂಲಕ ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಇತರ ನಟಿಯರಿಗೆ ಮಾದರಿಯಾದರು. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ ನಟಿ ಕೆಂಪು ಬಣ್ಣದ ಶೋಲ್ಡರ್ ಲೆಸ್‌ ಮಾರ್ಚೆಸಾ ಗವನ್ ಧರಿಸಿ ಬಂದಿದ್ದರು. ಜೊತೆಗೆ ಅದೇ ಬಣ್ಣದ ಹೈ ಹೀಲ್‌ ಧರಿಸಿ  ರೆಡ್ ಕಾರ್ಪೆಟ್ ಮೇಲೆ ಬರುತ್ತಿದ್ದಂತೆ ಆಯ ತಪ್ಪಿದ್ದಾರೆ.  ಅಚಾನಕ್ ಆಗಿ ನಡೆದ ಈ ಘಟನೆಯಿಂದ ಅಲ್ಲೇ ಇದ್ದ ಕೆಲವರು ಆಕೆಯ ಸಹಾಯಕ್ಕಾಗಿ ಓಡಿ ಬಂದರು. 

ಅಷ್ಟರಲ್ಲಾಗಲೇ ಎದ್ದು ನಿಂತು ಸವರಿಸಿಕೊಂಡು ರಪ್ಪನೇ ಮೇಲೆದ್ದ ಅವರು ಬಳಿಕ ಫೋಟೋಗ್ರಾಪರ್‌ಗಳಿಗೆ ಫೋಸ್ ನೀಡಿದರು. ಲಿಜಾ ಕೋಶಿ ಅವರು ಧರಿಸಿದ ಈ ಹೈ ಹೀಲ್ 8 ಇಂಚುಗಳಷ್ಟು ಎತ್ತರವಿತ್ತು.  ಅಚಾನಕ್ ಆಗಿ ಸಂಭವಿಸಿದ ಈ ಮುಜುಗರಕಾರಿ ಘಟನೆಯಿಂದ ನರ್ವಸ್ ಆಗುವ ಬದಲು ನಟಿ ರಪ್ಪನೇ ಎದ್ದು ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ಅಲ್ಲದೇ  ಅಲ್ಲೊಂದು ಹೊಂಡವಿತ್ತು ಅದು ಹೇಗೆ ಎಲ್ಲರೂ ಅದನ್ನು ಗಮನಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಕಿತ್ತೋದ ದುಬಾರಿ ಬಟ್ಟೆಯಲ್ಲೇ ಉತ್ತಮ ನಟಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ ಇಮಾ ಸ್ಟೋನ್

ಈ ಬಾರಿಯ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭವೂ ಹಲವು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಯ್ತು, ಅತ್ಯುತ್ತಮ ಪ್ರಶಸ್ತಿ ಸ್ವೀಕರಿಸಿದ ನಟಿ ಇಮ್ಮಾ ಸ್ಟೋನ್‌ ಅವರು ಧರಿಸಿದ್ದ ದುಬಾರಿ ಲಾಂಗ್ ಗವನ್, ಪ್ರಶಸ್ತಿ ಸ್ವೀಕರಿಸಲು ಸ್ಟೇಜ್‌ಗೆ ಹೋಗುವ ವೇಳೆ ಹಿಂಭಾಗದಲ್ಲಿ ಜಿಪ್ ತೆರೆದುಕೊಂಡು ಮುಜುಗರಕ್ಕೀಡಾಗುವಂತೆ ಮಾಡಿತ್ತು. ತನ್ನ ಬಟ್ಟೆ ಈ ರೀತಿ ಆಗಿದೆ ಎಂದು ಹೇಳುತ್ತಲೇ ನಟಿ ಸಹಜವೆಂಬಂತೆ ಪ್ರಶಸ್ತಿ ಸ್ವೀಕರಿಸಿದರು.

ಅದಕ್ಕೂ ಮೊದಲು ರೆಸ್ಲರ್‌ ಜಾನ್ ಸೀನ್ ಸಂಪೂರ್ಣ ಬೆತ್ತಲಾಗಿ ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿ  ಸ್ವೀಕರಿಸಲು ಆಗಮಿಸಿದರು. ಇದಾದ ನಂತರ ಈಗ ನಟಿ ಲೀಜಾ ಕೋಶಿ ಸ್ಟೇಜ್‌ ಮೇಲೆಯೇ ಮುಗ್ಗಿರಿಸಿ ಬಿದ್ದರು. ಹಾಲಿವುಡ್ ಸೇರಿದಂತೆ ದೇಶ ವಿದೇಶಗಳ ಹಲವು ಭಾಷೆಗಳ ಚಿತ್ರರಂಗದ ಗಣ್ಯರು, ಕಲಾವಿದರು, ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. 

ಆಸ್ಕರ್‌ ಅವಾರ್ಡ್‌: ಬೆಸ್ಟ್ ಕಾಸ್ಟ್ಯೂಮ್ ಪ್ರಶಸ್ತಿ ನೀಡಲು ಬೆತ್ತಲಾಗಿ ಬಂದ ರೆಸ್ಲಿಂಗ್ ಸ್ಟಾರ್ ಜಾನ್ ಸೀನಾ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?