ಅಮೀರ್ ಖಾನ್ ಮಗಳು ಇರಾ ಖಾನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಟರಲ್ಲೊಬ್ಬರು ಅಮೀರ್ ಖಾನ್. ಹೀಗಾಗಿ ಸಹಜವಾಗಿಯೇ ಅಮೀರ್ ಖಾನ್ ಅಳಿಯ ಆಗೋರು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಮೀರ್ ಅಳಿಯ ಆಗೋ ಹುಡುಗ ಹಿಂದೊಮ್ಮೆ ಬೆತ್ತಲೆಯಾಗಿ ದೇಶಾದ್ಯಂತ ಸುದ್ದಿಯಾಗಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?
ಅಮೀರ್ ಖಾನ್ ಪುತ್ರಿ ಇರಾ ಖಾನ್ ಬಹುಕಾಲದ ಗೆಳೆಯ ನೂಪುರ್ ಶಿಖರೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಾಳೆ ಮುಂಬೈನ ನ್ಯಾಯಾಲಯದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳಲಿದ್ದಾರೆ. ವಾರಾಂತ್ಯದಲ್ಲಿ ಉದಯಪುರದಲ್ಲಿ ಕುಟುಂಬಕ್ಕಾಗಿ ಅದ್ಧೂರಿ ಸಮಾರಂಭ ನಡೆಯಲಿದೆ.ಮುಂದಿನ ವಾರ ಮುಂಬೈನಲ್ಲಿ ಆಮಿರ್ ಆತಿಥ್ಯ ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ನವೆಂಬರ್‌ನಲ್ಲಿ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ನವೆಂಬರ್ 6ರಂದು ಇರಾ ಖಾನ್ ಮತ್ತು ನೂಪುರ್ ಶಿಖರೆ ಅವರ ಪೂರ್ವ ವಿವಾಹ ಶಾಸ್ತ್ರಗಳು ಮಹಾರಾಷ್ಟ್ರದ ಸಾಂಪ್ರದಾಯಿಕ ಕೆಲ್ವನ್ ವಿಧಿಯೊಂದಿಗೆ ಪ್ರಾರಂಭವಾಯಿತು.
ಅಮೀರ್ ಖಾನ್ ಅವರ ಅಳಿಯ ನೂಪುರ್ ಶಿಖರೆ ಯಾರು?
ಬಾಲಿವುಡ್‌ನ ಖ್ಯಾತ ನಟರಲ್ಲೊಬ್ಬರು ಅಮೀರ್ ಖಾನ್. ಹೀಗಾಗಿ ಸಹಜವಾಗಿಯೇ ಅಮೀರ್ ಖಾನ್ ಅಳಿಯ ಆಗೋರು ಯಾರು ಎಂಬುದು ಅಭಿಮಾನಿಗಳ ಕುತೂಹಲ. ಇರಾ ಖಾನ್ ಕೈ ಹಿಡಿಯುತ್ತಿರುವ ನೂಪುರ್ ಶಿಖರೆ ಪುಣೆ ಮೂಲದ ಕ್ರೀಡಾಪಟು ಮತ್ತು ಫಿಟ್ನೆಸ್ ತರಬೇತುದಾರ. 1985ರಲ್ಲಿ ರಾಜೇಂದ್ರ ಮತ್ತು ಪ್ರೀತಮ್ ಶಿಖರೆ ದಂಪತಿಗೆ ಜನಿಸಿದ ನೂಪುರ್ ಕಾಲೇಜಿಗಾಗಿ ಮುಂಬೈಗೆ ತೆರಳುವ ಮೊದಲು ತನ್ನ ಸ್ವಂತ ಊರಿನಿಂದ ಶಾಲಾ ಶಿಕ್ಷಣವನ್ನು ಪಡೆದರು. ನಂತರ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಲ್ಲಿ ಪದವಿ ಪಡೆದರು.
ಮೊದಲು ಫಿಟ್‌ನೆಸ್ ಉತ್ಸಾಹಿಯಾಗಿದ್ದ ನೂಪುರ್, ನಂತರ ಕ್ರೀಡಾಪಟು ಮತ್ತು ತರಬೇತುದಾರರಾಗಿ ಕೆರಿಯರ್ ಪ್ರಾರಂಭಿಸಿದರು.2009ರಲ್ಲಿ ಫಿಟ್ನೆಸಿಸಂ ಎಂಬ ಸಮರ ಕಲೆಗಳ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಿದರು, ಅಲ್ಲಿ ಅವರು ಕಾಪೊಯೈರಾವನ್ನು ಕಲಿಸಿದರು. ನೂಪುರ್, ಅಮೀರ್ ಮತ್ತು ನಟಿ ಸುಶ್ಮಿತಾ ಸೇನ್ ಸೇರಿದಂತೆ ಹಲವಾರು ನಟರ ವೈಯಕ್ತಿಕ ತರಬೇತುದಾರರಾಗಿದ್ದರು.
2014ರಲ್ಲಿ ತೈವಾನ್ 70.3 ಹಾಫ್ ಐರನ್‌ಮ್ಯಾನ್ ಟ್ರೈಯಥ್ಲಾನ್‌ನಲ್ಲಿ ಭಾಗವಹಿಸಿದ್ದರು. 2016 ಐರನ್‌ಮ್ಯಾನ್ ಟ್ರಯಥ್ಲಾನ್ ಅನ್ನು ಸಹ ಮುಗಿಸಿದರು. ನಂತರದ ವರ್ಷ ನೆಟ್‌ಫ್ಲಿಕ್ಸ್ ಶೋ ಅಲ್ಟಿಮೇಟ್ ಬೀಸ್ಟ್‌ಮಾಸ್ಟರ್‌ನಲ್ಲಿ ಭಾಗವಹಿಸಿದ್ದರು. 2018ರಲ್ಲಿ ಡಿಸ್ನಿ ಇಂಡಿಯಾ ಟಿವಿ ಶೋ ಅಲ್ಲಾದೀನ್ - ಎಕ್ಸ್‌ಪೀರಿಯೆನ್ಸ್ ದಿ ಮ್ಯಾಜಿಕ್‌ಗೆ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದರು.
Aamir Khan ಪುತ್ರಿ ಬಾಯ್‌ಫ್ರೆಂಡ್ ಜೊತೆ ಹಾಟ್ ಮತ್ತು ಬೋಲ್ಡ್ ಫೋಟೋಗಳು
ನೂಪುರ್ ಶಿಖರೆ ಬೋಲ್ಡ್ ನ್ಯೂಡ್ ಫೋಟೋಶೂಟ್
ನೂಪುರ್ ಮೊದಲ ಬಾರಿಗೆ 2019ರಲ್ಲಿ ಬೋಲ್ಡ್ ಫೋಟೋಶೂಟ್‌ನಿಂದ ಹೆಚ್ಚು ಸುದ್ದಿಯಾದರು. ನೂಪುರ್ ಶಿಖರೆ, ನಗ್ನ ಫೋಟೋಶೂಟ್ ಮಾಡಿಕೊಂಡಿದ್ದು ಎಲ್ಲೆಡೆ ವಿವಾದಕ್ಕೆ ಕಾರಣವಾಗಿತ್ತು. ಫೋಟೋಸ್ ಹೊರಾಂಗಣ ಪ್ರದೇಶದಲ್ಲಿ ನಗ್ನವಾಗಿ, ಓಡುವುದು, ಜಿಗಿಯುವುದು ಮತ್ತು ಸ್ನಾಯುಗಳನ್ನು ಬಗ್ಗಿಸುವುದನ್ನು ಒಳಗೊಂಡಿತ್ತು. ಈ ಫೋಟೋಗಳಲ್ಲಿ ನೂಪುರ್ ಸಾಂತಾ ಕ್ಲಾಸ್ ಟೋಪಿಯನ್ನು ಹೊರತುಪಡಿಸಿ ಮತ್ತೆ ಏನನ್ನೂ ಧರಿಸಿರಲ್ಲಿಲ್ಲ. 2019ರಲ್ಲಿ ಮತ್ತೊಂದು ಸ್ಟೀಮಿ ಶೂಟ್ ವಿವಾದವನ್ನು ಸೃಷ್ಟಿಸಿತು. ಕೆಲವೊಬ್ಬರು ಈ ಬೋಲ್ಡ್ ಫೋಟೋಶೂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನೂಪುರ್ ಶಿಖರೆ-ಇರಾ ಖಾನ್ -ರೋಮ್ಯಾಂಟಿಕ್ ಕಥೆ
ನೂಪುರ್ ಮತ್ತು ಇರಾ ಅವರು 2021ರಲ್ಲಿ ಮೊದಲ ಬಾರಿಗೆ ಒಟ್ಟಿಗೆ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡಿದಾಗ ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿದರು. ನೂಪುರ್ ಅದೇ ವರ್ಷ ಐರನ್‌ಮ್ಯಾನ್ ಓಟದ ಅಂತಿಮ ಸಾಲಿನಲ್ಲಿ ಇರಾಗೆ ಪ್ರಪೋಸ್ ಮಾಡಿದರು. ಜೋಡಿ ಕಳೆದ ವರ್ಷ ಅದ್ಧೂರಿ ನಿಶ್ಚಿತಾರ್ಥವನ್ನು ಮಾಡಿಕೊಂಡರು. ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.