ಇಂದು ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಮದ್ವೆ ನಡೆಯುತ್ತಿದ್ದು, ಈ ಹೋಟೆಲ್ ಆಂಟಿ ಹೀಗೆ ಮಾಡೋದಾ? ವಿಡಿಯೋ ನೋಡಿ ಕಾಲೆಳೀತೀರೋ ನೆಟ್ಟಿಗರು.
ಇಂದು ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್ ಮತ್ತು ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಮದುವೆ ಕಾರ್ಯಕ್ರಮದ ಪೂರ್ವ ಶಾಸ್ತ್ರಗಳು ಜೋರಾಗಿ ನಡೆದಿತ್ತು. ಇಂದು ಮದುವೆ ನಡೆಯುತ್ತಿದೆ. 2020ರ ಇದೇ ದಿನದಂದು ಅಂದರೆ ಜನವರಿ 3ರಂದು ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್ ಮಾಡಿದ ಬಳಿಕ ಇದೀಗ ಮದುವೆಯಾಗುತ್ತಿದೆ ಈ ಜೋಡಿ. ಇರಾ ಖಾನ್ ಸ್ಟಾರ್ ಕಿಡ್ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇಂದು ನಡೆಯುತ್ತಿರುವ ಮದುವೆಯೇ ಕುಟುಂಬಸ್ಥರು ಮತ್ತು ಕೆಲವೇ ಗಣ್ಯರು ಹಾಜರಾಗಿದ್ದಾರೆ ಎನ್ನಲಾಗಿದೆ.
ಮದುವೆಯ ಎಲ್ಲಾ ಸಂಪ್ರದಾಯಗಳು ಮಹಾರಾಷ್ಟ್ರದ ಶೈಲಿಯಲ್ಲಿ ನಡೆದು, ಮದುವೆಯ ದಿನವೂ ಇರಾ ಸೀರೆಯನ್ನೇ ಧರಿಸಿದ್ದಾರೆ. ಆದರೆ ಕಲ್ಯಾಣ ಮಂಟಪಕ್ಕೆ ಬರುವ ಮುನ್ನ ಅವರು ಮಿನಿ ಸ್ಕರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಕಾರಿನಿಂದ ಇಳಿದು ಮಿನಿ ಸ್ಕರ್ಟ್ ತೊಟ್ಟು ಮದುವೆ ಮಂಟಪದ ಎದುರು ನಿಂತುಕೊಂಡಿದ್ದರು. ಅಲ್ಲಿ ಚಿಕ್ಕಮಕ್ಕಳಂತೆ ತಲೆಗೆ ಕ್ಯಾಟ್ ಕ್ಯಾಪ್ ಕೂಡ ತೊಟ್ಟುಕೊಂಡಿದ್ದರು. ಇವರ ಫೋಟೋಶೂಟ್ ನಡೆಯುತ್ತಿದ್ದರೆ, ಅತ್ತ ಕಡೆಯಿಂದ ಹೋಟೆಲ್ ಪರಿಚಾರಿಕೆ ಒಬ್ಬರು ಇರಾ ಖಾನ್ ಫೋಟೋಶೂಟ್ ಮಾಡುತ್ತಿರುವುದನ್ನೇ ನೋಡುತ್ತಾ ಬಂದು ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಇರಾ ಖಾನ್ ಸ್ವಲ್ಪ ಸಮಯ ಗಲಿಬಿಲಿಗೊಂಡರು. ಇದರ ವಿಡಿಯೋ ವೈರಲ್ ಆಗಿದೆ. ಕೆಲವರು ಬೇಕಂತಲೇ ಆಂಟಿ ಇರಾಗೆ ಡಿಕ್ಕಿ ಹೊಡೆದರು ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಆಕೆ ಫೋಟೋಶೂಟ್ ಮಾಡುವುದನ್ನು ನೋಡುತ್ತಾ ಬಂದು ಅರಿವಿಲ್ಲದೇ ಡಿಕ್ಕಿ ಹೊಡೆದಿರುವುದಾಗಿ ಮತ್ತೆ ಕೆಲವರು ಹೇಳುತ್ತಿದ್ದಾರೆ.
ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ, ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡ ಕರಣ್ ಜೋಹರ್
ಆದರೆ ಮದುವೆಯ ದಿನ ಚಿಕ್ಕಮಕ್ಕಳಂತೆ ಚಿಕ್ಕ ಡ್ರೆಸ್ ತೊಟ್ಟು ಸಾಲದು ಎಂಬುದಕ್ಕೆ ಕ್ಯಾಟ್ ಕ್ಯಾಪ್ ಹಾಕಿಕೊಂಡು ಬಂದರೆ ಪಾಪ ಆ ಆಂಟಿಗೇನು ಇವಳೇ ಮದುಮಗಳು ಎಂದು ಗೊತ್ತಾಗುವುದಾದರೂ ಹೇಗೆ ಎಂದು ಹಲವರು ಕಾಲೆಳೆಯುತ್ತಿದ್ದಾರೆ. ಮದುಮಗಳಂತೆ ಕಾಣಿಸೋದು ಬಿಟ್ಟು ಇಷ್ಟು ಕೆಟ್ಟದಾಗಿ ಡ್ರೆಸ್ ಮಾಡಿಕೊಂಡಿದ್ದಿ ಎಂದು ಹಲವರು ನಟಿಗೆ ಹೇಳುತ್ತಿದ್ದಾರೆ. ಅಂದಹಾಗೆ, ಇರಾ ಖಾನ್ ನಟ ಆಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ. ಅಂದಹಾಗೆ ಆಮೀರ್ ಖಾನ್ ಅವರು ಎರಡನೆಯ ಪತ್ನಿಯೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಇದೀಗ ಮಗಳ ಮದುವೆಗೆ ಮೊದಲ ಪತ್ನಿ ಕಿರಣ್ ಕೂಡ ಹಾಜರಾಗಿದ್ದಾರೆ.
ಇನ್ನು ಇರಾ ಭಾವಿ ಪತಿ ನೂಪುರ್ ಶಿಖರೆ ಕುರಿತು ಹೇಳುವುದಾದರೆ, ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ರು. ಶಿಕ್ರೆ ಫಿಟ್ನೆಸ್ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದಾರೆ.
10 ನಿಮಿಷ ಹಾರ್ಟ್ಬೀಟ್ ನಿಂತಿತ್ತು: ಶವವಾಗಿದ್ದವ ಮತ್ತೆ ಬದುಕಿದ್ದೇ ಪವಾಡ! ಭಯಾನಕ ಅನುಭವ ಹೇಳಿದ ನಟ ಶ್ರೇಯಸ್