ಕರೀನಾಗೆ ಕಿತ್ತಾಡಿದ್ದ ಫರ್ದೀನ್​ ಖಾನ್​, ಶಾಹಿದ್​ ಕಪೂರ್​: 20 ವರ್ಷವಾದ್ರೂ ಕರಗದ ಸಿಟ್ಟು!

By Suvarna News  |  First Published Jul 9, 2023, 4:43 PM IST

ಕರೀನಾ ಕಪೂರ್​ ಸಲುವಾಗಿ ಶಾಹಿದ್​ ಕಪೂರ್​ ಮತ್ತು ಫರ್ದಿನ್​ ಖಾನ್​ ಇಬ್ಬರೂ ಜಗಳವಾಡಿಕೊಂಡಿದ್ದು, ಇದುವರೆಗೂ ಇಬ್ಬರೂ ಮಾತನಾಡುತ್ತಿಲ್ಲ. 
 


ನಟಿ ಕರೀನಾ ಕಪೂರ್​, ನಟಿ ಸೈಫ್​ ಅಲಿ ಖಾನ್​ (Saif Ali Khan) ಅವರ ಎರಡನೆಯ ಪತ್ನಿಯಾಗಿ 11 ವರ್ಷಗಳಾಗಿವೆ. ಈಗ ಇಬ್ಬರು ಮಕ್ಕಳನ್ನು ಹೊಂದಿರುವ ನಟಿ ಕರೀನಾ ಸೈಫ್​ ಹಾಗೂ ಮಕ್ಕಾಳಾದ ತೈಮೂರ್ ಅಲಿ ಖಾನ್ ಮತ್ತು  ಜಹಾಂಗೀರ್ ಅಲಿ ಖಾನ್ ಜೊತೆ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಅದೇ ಇನ್ನೊಂದೆಡೆ, ನಟ ಶಾಹಿದ್​ ಕಪೂರ್​,  2015ರಲ್ಲಿ ಮೀರಾ ರಜಪೂತ್ ಅವರನ್ನು ಮದುವೆಯಾಗಿ, ಮಿಶಾ ಕಪೂರ್ ಮತ್ತು  ಜೈನ್ ಕಪೂರ್ ಅವರೊಂದಿಗೆ ಸುಖವಾಗಿದ್ದಾರೆ. ಆದರೂ ಮೊದಲ ಪ್ರೇಮವನ್ನು ಅಷ್ಟು ಸುಲಭದಲ್ಲಿ ಮರೆಯಲಾಗದು ಎನ್ನುವ ಮಾತಿನಂತೆ ಆಗಿದೆ ಶಾಹಿದ್​ ಕಪೂರ್​ ಜೀವನ. ಶಾಹಿದ್​ ಮತ್ತು ಕರೀನಾ ಅವರ  ಪ್ರೇಮಕಥೆ ಬಿ-ಟೌನ್​ನಲ್ಲಿ ಒಂದು ಕಾಲದಲ್ಲಿ ಬಹಳ ಸದ್ದು ಮಾಡಿತ್ತು. ಈ ಲವ್​ ಬರ್ಡ್ಸ್​ ಗುಟ್ಟುಗುಟ್ಟಾಗಿ ನಡೆಸುತ್ತಿದ್ದ ಕಾರ್ಯಗಳು ಓಪನ್​ ಸೀಕ್ರೆಟ್​ ಆಗಿದ್ವು. ಸಿನಿಮಾ ಸೆಟ್​ನಲ್ಲಿ ಕಿಸ್​ ಕೊಟ್ಟು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದದ್ದೂ ಇದೆ. 

ಇದೀಗ ಕರೀನಾ ಮತ್ತು ಶಾಹಿದ್​ ಕಪೂರ್​ (Shahid Kapoor) ಇಬ್ಬರೂ ಬೇರೆ ಬೇರೆಯವರಿಗೆ ಮದುವೆಯಾಗಿ ಸುಖವಾಗಿದ್ದರೂ, ತಮ್ಮ ಮೊದಲ ಪ್ರೀತಿ ಕರೀನಾ ಕಪೂರ್​ ಅವರ ಮೇಲೆ ಶಾಹಿದ್​ಗೆ ಇನ್ನೂ ಒಲವು ಇರುವಂತೆ ಕಾಣುತ್ತಿದೆ. ಇದಕ್ಕೆ ಕಾರಣ, 20 ವರ್ಷಗಳ ಹಿಂದೆ ನಡೆದಿರುವ ಘಟನೆ ಹಾಗೂ 20 ವರ್ಷ ಆದ ಮೇಲೂ ಅದನ್ನು ಶಾಹಿದ್​ ಅವರು ಇನ್ನೂ ಮುಂದುವರೆಸಿಕೊಂಡು ಬಂದಿರುವುದು! ಹೌದು. ಇದು  2004 ರ ಕಥೆ.  ಫಿದಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ಶಾಹಿದ್ ಕಪೂರ್​ ಮತ್ತು ಫರ್ದೀನ್ ಖಾನ್ (Fardin Khan) ನಟಿಸಿದ್ದಾರೆ. ನಾಯಕಿಯಾಗಿದ್ದವರು ಕರೀನಾ ಕಪೂರ್​. ಅದಾಗಲೇ ಶಾಹಿದ್​ ಮತ್ತು ಕರೀನಾ ಡೇಟಿಂಗ್​ ನಡೆಸಲು ಶುರು ಮಾಡಿದ್ದರು. ಇದು ಜಗಜ್ಜಾಹೀರ ಕೂಡ ಆಗಿತ್ತು.

Tap to resize

Latest Videos

ನೈಟ್​ ಕ್ಲಬ್​ನಲ್ಲಿ ಶಾಹಿದ್​ ಕಪೂರ್​- ಕರೀನಾ : ಎಂಎಂಎಸ್ ಲೀಕ್ ಆಗಿದ್ದಕ್ಕೆ ನಟ ಹೇಳಿದ್ದಿಷ್ಟು!

ಇದರ ಹೊರತಾಗಿಯೂ ರಿಯಲ್​ ಲೈಫೇ ಬೇರೆ, ರೀಲ್​ ಲೈಫೇ ಬೇರೆ. ಸಿನಿಮಾದ ದೃಶ್ಯಕ್ಕೆ ಬರುವಾಗ ಅಲ್ಲಿ ಯಾರು ಯಾರ ಜೊತೆಗೆ ಬೇಕಾದರೂ ರೊಮ್ಯಾನ್ಸ್​ (Romance) ಮಾಡಬೇಕು, ಹಸಿಬಿಸಿ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳಬೇಕಲ್ಲ? ಅದೇ ರೀತಿ ಕರೀನಾ ಕಪೂರ್​ ಫರ್ದೀನ್​ ಖಾನ್​ ಜೊತೆಗೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ತಾನು ಪ್ರೀತಿಸುತ್ತಿದ್ದ ಹುಡುಗಿ ಕರೀನಾ ಬೇರೊಬ್ಬನ ಜೊತೆ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದನ್ನು ಶಾಹಿದ್​ ಕಪೂರ್​ ಸಹಿಸಲಿಲ್ಲ. ಆದರೆ ಅವರಿಗೆ ಕೋಪ ಬಂದದ್ದು ಕರೀನಾ ಮೇಲಲ್ಲ. ಬದಲಿಗೆ ಫರ್ದೀನ್​ ಖಾನ್ ಮೇಲೆ. ತನ್ನ ಹುಡುಗಿಯಿಂದ ಫರ್ದಿನ್​ ಅವರು ಚುಂಬಿಸುತ್ತಿರುವುದನ್ನು ಶಾಹಿದ್​ ಸಹಿಸಲಿಲ್ಲ.

 ಇದು ಸೆಟ್‌ಗಳಲ್ಲಿ ಕಪೂರ್ ಮತ್ತು ಖಾನ್ ನಡುವಿನ ಭಾರೀ ಜಗಳಕ್ಕೆ ಕಾರಣವಾಗಿತ್ತು. ಅಲ್ಲಿದ್ದವರೆಲ್ಲಾ ಸಾಕಷ್ಟು ಮನವೊಲಿಕೆ ಮಾಡಿದ ನಂತರವೇ ಇಬ್ಬರ ಜಗಳ ಸಹಜ ಸ್ಥಿತಿಗೆ ಬಂದಿದ್ದಂತೆ. ಆಗ ಸ್ಥಿತಿ ಸಹಜವಾಗಿರಬಹುದು. ಆದರೆ ಘಟನೆ ನಡೆದು 20 ವರ್ಷಗಳಾದರೂ ಶಾಹಿದ್​ ಕಪೂರ್​ ಇದುವರೆಗೆ ಫರ್ದಿನ್​ ಖಾನ್​ ಅವರ ಜೊತೆ ಮಾತನಾಡುತ್ತಿಲ್ಲ. ಇದಕ್ಕೂ ಮುನ್ನ  ಕರೀನಾ ಮತ್ತು ಶಾಹಿದ್​ ಅವರು  ಮುಂಬೈನ ನೈಟ್‌ಕ್ಲಬ್‌ನಲ್ಲಿ ಸುದೀರ್ಘ ಕಿಸ್ಸಿಂಗ್​ನಲ್ಲಿ ತೊಡಗಿದ್ದ ಫೋಟೋ ಒಂದನ್ನು ಯಾರೋ ಕ್ಲಿಕ್​ (click) ಮಾಡಿ ಮರುದಿನ ಪತ್ರಿಕೆಗೆ ಕೊಟ್ಟುಬಿಟ್ಟಿದ್ದರು. ಇದರಿಂದ ಇವರಿಬ್ಬರ ಪ್ರೇಮ್​  ಕಹಾನಿ ಜಗಜ್ಜಾಹೀರವಾಗಿತ್ತು. ಇದಾದ ಬಳಿಕ, ಫರ್ದಿನ್​ ಖಾನ್​ ಅವರ ಘಟನೆ ನಡೆದು, ತಮ್ಮ ಪ್ರೀತಿಯ ಕುರಿತು ಇನ್ನಷ್ಟು ಸಾಬೀತು ಮಾಡಿದ್ದರು ಶಾಹಿದ್​.  

ತಲೆ ಮೇಲೆ ಐದು ಮೊಟ್ಟೆ ಒಡ್ಕೊಂಡ ರಾಖಿ ಸಾವಂತ್​: ಅಷ್ಟಕ್ಕೂ ಫಕ್ಕಡ್​ ಬಾಬಾ ಹೇಳಿದ ಗುಟ್ಟೇನು?
 

click me!