ನಟ ಅಮಿತಾಭ್ ಬಚ್ಚನ್ ಕೈಕೊಟ್ಟ ಮೇಲೆ, ಪತಿ ತೀರಿಕೊಂಡ ಮೇಲೆ ಇನ್ನೊಂದು ಮದುವೆಯ ಬಗ್ಗೆ ಓಪನ್ ಆಗಿ ಮಾತನಾಡಿದ್ದರು ರೇಖಾ. ಆಗ ಅವರು ಹೇಳಿದ್ದೇನು?
ಬಾಲಿವುಡ್‌ನ ನಿತ್ಯಹರಿದ್ವರ್ಣ ಸುಂದರಿ, ರೇಖಾ ಅವರು ಇಂದು ಅರ್ಥಾತ್ ಅಕ್ಟೋಬರ್ 10ರಂದು ತಮ್ಮ 69 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amithabh Bhacchan) ಮತ್ತು ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಕೃಷ್ಣ ಸುಂದರಿ ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ. ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಜೋಡಿಯ ಪ್ರೇಮಕಥೆ ಯಾರೂ ಮರೆಯಲು ಸಾಧ್ಯವಿಲ್ಲ. 70 ರ ದಶಕದಲ್ಲಿ, ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಸಂಬಂಧವು ಬಹಳ ಚರ್ಚಿತ ವಿಷಯವಾಗಿತ್ತು. ಇದು ಕೇವಲ ಗಾಸಿಪ್ ಆಗಿರಲಿಲ್ಲ, ಬದಲಿಗೆ ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು.
ಬೆಳ್ಳಿ ಪರದೆಯ ಮೇಲೆ ಈ ಜೋಡಿಯ ಕೆಮೆಸ್ಟ್ರಿಯನ್ನು ಹಾಡಿ ಕೊಂಡಾಡಿದ್ದ ಅಭಿಮಾನಿಗಳು, ನಿಜ ಜೀವನದಲ್ಲಿಯೂ ಇವರಿಬ್ಬರು ಜೋಡಿಯಾಗಲಿ ಎಂದೇ ಹಾರೈಸಿದ್ದರು. ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಜೋಡಿ ಕೊನೆಗೆ ಹಾವು ಮುಂಗುಸಿಯಾಗಿತ್ತು. ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್ ಬಚ್ಚನ್ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದ ಸುದ್ದಿ ಇಂದಿಗೂ ಚರ್ಚಿತ ವಿಷಯವೇ.
68 ವಯಸ್ಸಾದ್ರೂ ಬತ್ತದ ರೇಖಾ ಬ್ಯೂಟಿ: ಗಂಡ- ಅತ್ತೆ ಕಾಟ ಇಲ್ದಿದ್ರೆ ಹೀಗೆ ಕಾಣೋದು ಅಂದ್ರು ಫ್ಯಾನ್ಸ್!
ದರೆ ಕೊನೆಗೂ ಅಮಿತಾಭ್ ರೇಖಾ ಅವರಿಗೆ ಸಿಗಲೇ ಇಲ್ಲ. ಇದೇ ನೋವಿನಲ್ಲಿದ್ದ ನಟಿ, ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು 1990ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ರೇಖಾಳ (Rekha) ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಕತ್ ಸದ್ದು ಮಾಡಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು.
ಆಘಾತಕಾರಿ ವಿಷಯವೆಂದರೆ ಮುಖೇಶ್ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದರು. ವ್ಯಾಪಾರದಲ್ಲಿ ನಷ್ಟ ಮತ್ತು ಅವರ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ಆ ಸಮಯದಲ್ಲಿ ಅವರು ಒತ್ತಡದಲ್ಲಿದ್ದರು ಎಂದು ಹೇಳಲಾಗುತ್ತದೆ. ನಂತರ ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದವು. ಅಲ್ಲಿಂದ ಇಲ್ಲಿಯವರೆಗೂ ರೇಖಾ ಒಂಟಿಯಾಗಿಯೇ ಬದುಕುತ್ತಿದ್ದಾರೆ. ಆದರೆ ಪತಿಯ ಸಾವಿನ ಬಳಿಕ ಅವರು ಮತ್ತೊಬ್ಬ ಪುರುಷನಿಗಾಗಿ ಕಾಯುತ್ತಿದ್ದರು. ಹೌದು. ಈ ಬಗ್ಗೆ ಖುದ್ದು ಅವರು 2006ರಲ್ಲಿ ಸಂದರ್ಶನ ನೀಡಿದ್ದರು. 'ಮಿಸ್ಟರ್ ರೈಟ್' ಸಿಕ್ಕರೆ ಖಂಡಿತವಾಗಿಯೂ ತಾವು ಮದುವೆಯಾಗುವುದಾಗಿ ಅವರು ಹೇಳಿದ್ದರು. ಮದುವೆಯ ಬಗ್ಗೆ ನಾನು ನಿರಾಕರಿಸುವುದಿಲ್ಲ. ನನ್ನ ಅಭಿಮಾನಿಗಳ ಜೊತೆಗೇನೆ ನನ್ನನ್ನು ಒಪ್ಪಿಕೊಳ್ಳುವ ಯಾರಾದರೂ ಸಿಕ್ಕರೆ, ನಾನು ನನ್ನ ಮನಸ್ಸನ್ನು ಬದಲಾಯಿಸಬಹುದು ಎಂದು ಮತ್ತೊಂದು ಮದುವೆಯ ಬಗ್ಗೆ ಮಾತನಾಡಿದ್ದರು. ಒಂದು ವೇಳೆ ನಾನು ಬಯಸಿದ ವ್ಯಕ್ತಿ ಸಿಕ್ಕರೆ ಆತನಿಗಾಗಿ ಏನೇನು ಮಾಡಲು ತಾವು ಸಿದ್ಧ ಎಂದಿದ್ದ ರೇಖಾ, "ನಾನು ಒಬ್ಬ ವ್ಯಕ್ತಿಯನ್ನು ಹೊಂದಿದ್ದರೆ, ನಾನು ನನ್ನ ಗಮನವನ್ನು ಸಂಪೂರ್ಣ ಆತನ ಮೇಲೆ ಕೇಂದ್ರೀಕರಿಸುತ್ತೇನೆ. ನಾನು ಅವನ ಬಟ್ಟೆಯಿಂದ ಹಿಡಿದು ಎಲ್ಲಾ ಜವಾಬ್ದಾರಿಗಳನ್ನೂ ನೋಡಿಕೊಳ್ಳುತ್ತೇನೆ. ಆತನ ಮೆನು ಕೂಡ ರೆಡಿ ಮಾಡಿ ಅವನಿಗೆ ಏನು ಬೇಕೋ ಅದನ್ನು ನಾನೇ ಖುದ್ದು ಮಾಡಿ ಬಡಿಸುತ್ತೇನೆ ಎಂದಿದ್ದರು.
KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್-ಬಿ
ಇದೇ ವೇಳೆ ಮಕ್ಕಳ ಬಗ್ಗೆಯೂ ಮಾತನಾಡಿದ್ದ ಅವರು, ಎಂದಿಗೂ ನಾನು ಮಕ್ಕಳನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ನಾನು ಉತ್ತಮ ಸಂಗಾತಿಯಾಗುವೆ, ಆದರೆ ಮಕ್ಕಳನ್ನು ಹೊಂದುವುದು ನನ್ನ ಆದ್ಯತೆ ಎಂದರೆ ಅದು ತಪ್ಪಾಗುತ್ತದೆ. ಏಕೆಂದರೆ ನನಗೆ ಮಗುವಾದರೆ ನಾನು ಬೇರೆ ಯಾವುದರ ಮೇಲಾದರೂ ಕೇಂದ್ರೀಕರಿಸಿದರೆ ಮಗುವನ್ನು ನೋಡಕೊಳ್ಳಲು ಆಗುವುದಿಲ್ಲ ಎಂದಿದ್ದರು. ಕೊನೆಗೂ ರೇಖಾಗೆ ಮಿಸ್ಟರ್ ರೈಟ್ ಕೂಡ ಸಿಗಲಿಲ್ಲ, ಮಗುವೂ ಆಗದೇ ಒಂಟಿಯಾಗಿ ಬಾಳುತ್ತಿದ್ದಾರೆ.