ಮದುವೆ, ಲಿವ್ ಇನ್ ಸಂಬಂಧದಿಂದ ಸದಾ ವಿವಾದದಲ್ಲಿದ್ದ ನಟ ಕಮಲ ಹಾಸನ್. ಇಷ್ಟೆಲ್ಲಾ ಆದರೂ ಈಗ ಅವರು ಒಂಟಿ ಏಕೆ?
ನಟ ಕಮಲ ಹಾಸನ್ (Kamal Hassan) ಹಲವಾರು ಭಾಷೆಗಳಲ್ಲಿ ಖ್ಯಾತನಾಮರಾದವರು. ಇವರ ನಟನೆಯ ಅನೇಕ ಚಿತ್ರಗಳು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ. ಅವರ ಪುಷ್ಪಕ ವಿಮಾನ ಚಿತ್ರವಂತೂ ಜನರು ಮರೆಯಲು ಸಾಧ್ಯವೇ ಇಲ್ಲ. ಅಮೋಘ ಅಭಿನಯದ ಮೂಲಕ ಮನೆ ಮಾತಾಗಿದ್ದಾರೆ ಕಮಲಹಾಸನ್. ಇವರು ಅತ್ಯುತ್ತಮ ನಟ ಮಾತ್ರವಲ್ಲದೇ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ ಕೂಡ. ಆದರೆ ಇತ್ತೀಚಿನ ದಿನಗಳಲ್ಲಿ ನಟನೆಗಿಂತ ಹೆಚ್ಚಾಗಿ ರಾಜಕೀಯ ವಿಷಯಗಳಿಗೆ ಚರ್ಚೆಯಲ್ಲಿದ್ದಾರೆ. ಇದರ ನಡುವೆಯೇ ಇದೀಗ ಅವರ ವೈಯಕ್ತಿಕ ಜೀವನದ ಬಗ್ಗೆ ಬೆಳಕಿಗೆ ಬಂದಿದೆ. ಚಿತ್ರರಂಗ ಎಂದರೆ ಹಾಗೆನೇ. ಇಲ್ಲಿ ಡೇಟಿಂಗ್, ರೊಮ್ಯಾನ್ಸ್, ಲಿವ್ ಇನ್ ಎಲ್ಲಾ ಕಾಮನ್ ಆಗಿದ್ದರೆ, ಮದುವೆ ವಿಚ್ಛೇದನವೂ ಅಷ್ಟೇ ಕಾಮನ್. 2 3 ಮದುವೆ, ಅಕ್ರಮ ಸಂಬಂಧ ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವರ ವಿಷಯ ಕೇಳಿಯಾಗಿದೆ. ಇದಕ್ಕೆ ನಟ ಕಮಲ ಹಾಸನ್ ಕೂಡ ಹೊರತಾಗಿಲ್ಲ. ಎರಡು ಮಕ್ಕಳ ತಂದೆಯಾದ ನಂತರ, ಮೂರು ಮದುವೆಯಾಗಿ ಸುದ್ದಿಯಾಗಿದ್ದ ಕಮಲ ಹಾಸನ್, ಮದುವೆ, ಮಕ್ಕಳು, ವಿಚ್ಛೇದನ, ಪ್ರೇಮ... ಇವೆಲ್ಲವುಗಳ ನಂತರವೂ ಒಂಟಿಯಾಗಿದ್ದಾರೆ!
ಹೌದು. ನಟ ಕಮಲ ಹಾಸನ್ ಅವರ ವೈಯಕ್ತಿಕ ಜೀವನವೇ ವಿಚಿತ್ರವಾದದ್ದು. ಕಮಲ ಹಾಸನ್ ಅವರು ಬಾಲ ಕಲಾವಿದನಾಗಿ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1975 ರಲ್ಲಿ 'ಅಪೂರ್ವ ರಾಗಗಳು' (Apoorva Ragagalu) ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಅವರ ವೈಯಕ್ತಿಕ ಜೀವನವು ಸದಾ ವಿವಾದದ ಗೂಡಾಗಿಯೇ ಉಳಿದಿದೆ. ಕಮಲ ಹಾಸನ್ ಎರಡು ಬಾರಿ ವಿವಾಹವಾದರು. ಮೊದಲ ಮದುವೆ ಯಶಸ್ವಿಯಾಗಲಿಲ್ಲ, ನಂತರ ಪ್ರೀತಿಸಿ ಮತ್ತೆ ಮದುವೆಯಾದರು. ಈ ಮದುವೆಯ ನಂತರ ಇಬ್ಬರು ಹೆಣ್ಣುಮಕ್ಕಳು ಜನಿಸಿದರು, ಆದರೆ ಈ ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ. ಮದುವೆ, ಲಿವ್ ಇನ್ (Live in) ಮೂಲಕ ಸಕತ್ ಸುದ್ದಿಯಲ್ಲಿ ಇರ್ತಿದ್ದ ನಟ, ಈಗ ಒಂಟಿ. ಅವರ ರೋಚಕ ಜೀವನದ ಕಥೆ ಇಲ್ಲಿದೆ.
ಪ್ರೇಕ್ಷಕರು 'ಕೇರಳ ಸ್ಟೋರಿ' ನೋಡಲೇ ಬೇಕು, ಆದರೆ...: ಕಮಲ್ ಹಾಸನ್
70 ರ ದಶಕದಲ್ಲಿ, ಕಮಲ ಹಾಸನ್ ಅವರು ನಟಿ ಶ್ರೀವಿದ್ಯಾ (Shreevidya) ಅವರೊಂದಿಗೆ ಸಂಬಂಧದಲ್ಲಿ ಇದ್ದರು. ಇಬ್ಬರೂ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದರು. ಆದರೆ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಶ್ರೀವಿದ್ಯಾ ಅವರು ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಶ್ರೀವಿದ್ಯಾ ಸಿನಿಮಾ ನಿರ್ಮಾಣದ ಸಮಯದಲ್ಲಿ ಕಮಲ್ ಹಾಸನ್ ಅವರನ್ನು ಪ್ರೀತಿಸುತ್ತಿದ್ದರು. ಅವರ ಕುಟುಂಬ ಸದಸ್ಯರು ಸಹ ಅವರೊಂದಿಗೆ ಇದ್ದರು, ಆದರೆ ಇನ್ನೂ ಕೆಲವು ಕಾರಣಗಳಿಂದ ಅವರ ಈ ಸಂಬಂಧ ಯಶಸ್ವಿಯಾಗಲಿಲ್ಲ ಮತ್ತು ಅವರು ಬೇರ್ಪಟ್ಟರು. ವಿದ್ಯಾ ಜೊತೆ ಸಂಬಂಧ ಮುರಿದುಬಿದ್ದ ನಂತರ, 1978 ರಲ್ಲಿ, ಅಂದರೆ 24 ನೇ ವಯಸ್ಸಿನಲ್ಲಿ, ಕಮಲ ಹಾಸನ್ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ವಿವಾಹವಾದರು. ಆರಂಭದಲ್ಲಿ, ಅವರ ಸಂಬಂಧವು ತುಂಬಾ ಚೆನ್ನಾಗಿತ್ತು. ಆದರೆ ಕಮಲ್ ಮತ್ತು ವಾಣಿ ಮದುವೆಯಾದ 10 ವರ್ಷಗಳ ನಂತರ 1988 ರಲ್ಲಿ ವಿಚ್ಛೇದನ ಪಡೆದರು. ಇದಾದ ನಂತರ ಸಿನಿಮಾ ನಟಿ ಸಾರಿಕಾ ಅವರು ಕಮಲ್ ಅವರ ಜೀವನ ಪ್ರವೇಶಿಸಿದರು. ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಕಮಲ್ ಅವರನ್ನು ವಿವಾಹವಾದರು.
ಕಮಲ್ ಹಾಸನ್ 1988 ರಿಂದ ವಾಣಿ (Vani) ಜೊತೆಗಿನ ಮದುವೆ ಮುರಿದುಬಿದ್ದ ನಂತರ ಸಾರಿಕಾ ಜೊತೆ ವಾಸಿಸಲು ಪ್ರಾರಂಭಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಕಮಲ್ ಹಾಸನ್ ಸಾರಿಕಾ ಅವರೊಂದಿಗೆ ಲಿವ್ -ಇನ್‌ನಲ್ಲಿ ವಾಸಿಸುತ್ತಿದ್ದಾಗ, ಆ ಸಮಯದಲ್ಲಿ ಸಾರಿಕಾ ಗರ್ಭಿಣಿಯಾಗಿದ್ದರು. ಶ್ರುತಿ ಹಾಸನ್ ಜನಿಸಿದ್ದು 28 ಜನವರಿ 1986. ಸಾರಿಕಾ ಮತ್ತು ಕಮಲ್ 1988 ರಲ್ಲಿ ವಿವಾಹವಾದರು ಮತ್ತು 1991 ರಲ್ಲಿ ಸಾರಿಕಾ ಅವರ ಎರಡನೇ ಮಗಳು ಅಕ್ಷರಾಗೆ ಜನ್ಮ ನೀಡಿದರು. ಕಮಲ್ ಮತ್ತು ಸಾರಿಕಾ ಸಂಬಂಧ ಹಳಸಿದ್ದು, ಕಮಲತಮ್ಮ ಹೆಂಡತಿಯ ಸ್ನೇಹಿತೆ ಗೌತಮಿಯನ್ನು ಪ್ರೀತಿಸಿದಾಗ. ಗೌತಮಿ ಉದ್ಯಮಿಯೊಂದಿಗೆ ಪ್ರೇಮ ವಿವಾಹವಾಗಿದ್ದರು. ಆದರೆ ಒಂದೇ ವರ್ಷದಲ್ಲಿ ಇಬ್ಬರೂ ಬೇರ್ಪಟ್ಟು ವಿಚ್ಛೇದನ ಪಡೆದಿದ್ದರು. ಗೌತಮಿಯೊಂದಿಗಿನ ಕಮಲ್ ಅವರ ಸಾಮೀಪ್ಯವು ಸಾರಿಕಾ ಅವರಿಗೆ ಹಿಡಿಸಿರಲಿಲ್ಲ. ಮದುವೆಯಾಗಿ 16 ವರ್ಷಗಳ ನಂತರ, ಅಂದರೆ 2004 ರಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ಕೂಡ ವಿಚ್ಛೇದನ ಪಡೆದರು. ವಿಚ್ಛೇದನ ಪಡೆದ ನಂತರ ಕಮಲ್ ಗೌತಮಿಯೊಂದಿಗೆ ಸಂಬಂಧ ಹೊಂದಿದ್ದರು. 13 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ಗೌತಮಿ ಕಮಲ್‌ನಿಂದ ಬೇರ್ಪಡುವ ಬಗ್ಗೆ ಮಾತನಾಡಿದ್ದರು.
ವಾಸ್ತವವಾಗಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. 'ಈಗ ಶ್ರೀ ಹಾಸನ್ ಮತ್ತು ನಾನು ಒಟ್ಟಿಗೆ ಇಲ್ಲ ಎಂದು ಹೇಳಲು ನನಗೆ ಬೇಸರವಾಗಿದೆ. ಸುಮಾರು 13 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ಇದು ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯಂತ ನೋವಿನ ಮತ್ತು ಕಷ್ಟಕರ ನಿರ್ಧಾರಗಳಲ್ಲಿ ಒಂದಾಗಿದೆ ಎನ್ನುವುದು ತಿಳಿದಿದೆ. ಬದ್ಧತೆಯ ಸಂಬಂಧದಲ್ಲಿರುವವರು ತಮ್ಮ ಹಾದಿಗಳು ವಿಭಿನ್ನವೆಂದು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಮತ್ತು ತಮ್ಮ ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಅಥವಾ ಅವರ ಒಂಟಿತನದ ವಾಸ್ತವವನ್ನು ಒಪ್ಪಿಕೊಂಡು ಮುನ್ನಡೆಯುವುದು ಅವರ ಮುಂದಿರುವ ಏಕೈಕ ಆಯ್ಕೆಯಾಗಿದೆ. ಈ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಬಹಳ ಸಮಯ ಹಿಡಿಯಿತು, ಕಳೆದ ಕೆಲವು ವರ್ಷಗಳಲ್ಲಿ ನಾನು ಈ ದುಃಖದ ಸತ್ಯವನ್ನು ಒಪ್ಪಿಕೊಂಡಿದ್ದೇನೆ ಮತ್ತು ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದಿದ್ದರು.
The Kerala Story: ಟೈಟಲ್ ಕೆಳಗೆ ನೈಜ ಕಥೆ ಅಂತಿದ್ರೆ ಆಗಲ್ಲ, ಸತ್ಯ ಇರಬೇಕು; ಕಮಲ್ ಹಾಸನ್ ಕಿಡಿ
ಕಮಲ್ ಹಾಸನ್ ಕೂಡ ತಮ್ಮ ವ್ಯವಹಾರಗಳ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರ ಹೆಸರು ಅವರಿಗಿಂತ 22 ವರ್ಷ ಚಿಕ್ಕವರಾಗಿದ್ದ ನಟಿ ಸಿಮ್ರನ್ ಬಗ್ಗಾ ಅವರ ಜೊತೆಯೂ ಕೇಳಿಬಂದಿತ್ತು. ಅದೇ ಸಮಯದಲ್ಲಿ, ನಂತರ ಸಿಮ್ರನ್ ಅವರು ತಮ್ಮ ಸ್ನೇಹಿತನನ್ನು ಮದುವೆಯಾದರು. ಹೀಗೆ ಹಲವು ಮದುವೆ ಮತ್ತು ಹಲವು ಲಿವ್ ಇನ್ ಪ್ರೀತಿಯ ನಂತರವೂ ಕಮಲ್ ಹಾಸನ್ ಒಂಟಿಯಾಗಿದ್ದಾರೆ.