ಅಭಿಮಾನಿಗಳ ತಲೆತಿಂತಿರೋ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ವಿರುಷ್ಕಾ ಕೊಟ್ಟರು ಈ ಗುಡ್​ ನ್ಯೂಸ್​

Published : Feb 04, 2024, 12:36 PM IST
ಅಭಿಮಾನಿಗಳ ತಲೆತಿಂತಿರೋ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ವಿರುಷ್ಕಾ ಕೊಟ್ಟರು ಈ ಗುಡ್​ ನ್ಯೂಸ್​

ಸಾರಾಂಶ

ಅನುಷ್ಕಾ ಮತ್ತು ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ತಮ್ಮ 2ನೇ ಮಗುವಿನ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.   

ಸೆಲೆಬ್ರಿಟಿಗಳ ಮೇಲೆ ಸದಾ ಪಾಪರಾಜಿಗಳ ಕಣ್ಣು ನೆಟ್ಟಿರುತ್ತದೆ. ಅದರಲ್ಲಿಯೂ ಮದುವೆ, ಮಕ್ಕಳ ವಿಷಯದಲ್ಲಂತೂ ಇನ್ನಿಲ್ಲದ ಇಂಟರೆಸ್ಟ್​. ಅದೇ ರೀತಿ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ವಿಷಯ ಏನೆಂದರೆ, ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್​ ವಿರಾಟ್​ ಕೊಹ್ಲಿ (Virat Kohli) ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂಬುದು.  ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಈ ವಿಚಾರವನ್ನು ಇದುವರೆಗೆ ದಂಪತಿ ಬಿಟ್ಟುಕೊಟ್ಟಿರಲಿಲ್ಲ. 

ಕೆಲ ದಿನಗಳ ಹಿಂದೆ  ಕ್ರಿಕೆಟ್​ ಮ್ಯಾಚ್​ ನಡೆಯುತ್ತಿದ್ದ ಸಂದರ್ಭದಲ್ಲಿ ಪತಿಯನ್ನು ಸಪೋರ್ಟ್​ ಮಾಡಲು ಅನುಷ್ಕಾ (Anushka Sharma)  ಅಹಮದಾಬಾದ್​ಗೆ ಹೋಗಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅನುಷ್ಕಾ ಶರ್ಮಾ ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ, ಅನುಷ್ಕಾ ಶರ್ಮಾ ಸಂಪೂರ್ಣ ಭದ್ರತೆಯ ನಡುವೆ ಕಪ್ಪು ಉಡುಪಿನಲ್ಲಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವುದನ್ನು ಕಾಣುತ್ತಿದ್ದರು. ಹೊಟ್ಟೆಯನ್ನು ಅವರು ಮುಚ್ಚಿಕೊಂಡಿದ್ದರು. ಆಗ ಇವರು ಗರ್ಭಿಣಿ ಎಂದು ಅಭಿಮಾನಿಗಳು ಹೇಳಿದ್ದರು.

ಡ್ರಾಮಾ ಕ್ವೀನ್​ನನ್ನೇ ಮೀರಿಸಿದ ಪೂನಂ ಪಾಂಡೆ: ನಿನಗಾಗಿ ತ್ಯಾಗ ಮಾಡಿದೆ ಎನ್ನುತ್ತಲೇ ರಾಖಿ ಹೀಗೆ ಆಕ್ರೋಶ!
 
ಕೊನೆಗೂ ದಂಪತಿ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಎರಡನೆಯ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ‘ಜೀರೋ’ ಸಿನಿಮಾ ತೆರೆಕಂಡ ಬಳಿಕ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈಗಾಗಲೇ ಒಪ್ಪಿಕೊಂಡ ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ಎರಡನೇ ಮಗು ಪಡೆಯುವ ಉದ್ದೇಶದಿಂದಲೇ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ ಎಂಬುದು ಹಲವರ ಊಹೆ ಇದೀಗ ನಿಜವಾಗಿದೆ. ಅದಾದ ಬಳಿಕ ಸ್ಟೇಡಿಯಂಗೆ ಬಿಳಿಯ ಮಿನಿ ಡ್ರೆಸ್​ನಲ್ಲಿ ನಟಿ ಕಾಣಿಸಿಕೊಂಡಿದ್ದು, ಅವರ ಬೇಬಿ ಬಂಪ್​ ಕಾಣಿಸುವಂತಿತ್ತು. ಆದರೂ ದಂಪತಿ ಗುಟ್ಟು ರಿವೀಲ್​ ಮಾಡಿರಲಿಲ್ಲ. 

ಇದಾದ ಬಳಿಕ ಅನುಷ್ಕಾ ಹೊರಗಡೆ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ, ಈಕೆ ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ಇರುವುದು ನಿಜ ಎಂದೇ ಹೇಳಲಾಗಿತ್ತು.  ಆದರೆ ಇದೀಗ ಈ ಜೋಡಿಯ ಫೋಟೋ ಒಂದು ವೈರಲ್​ ಆಗಿದ್ದು, ಇದು ಅನುಷ್ಕಾ ಗರ್ಭಿಣಿ ಹೌದೋ, ಅಲ್ಲವೋ ಎಂಬ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿದೆ. ಇದರಲ್ಲಿ ಇಬ್ಬರೂ  ಖುಷಿ ಖುಷಿಯಾಗಿ ಪೋಸ್​ ನೀಡಿದ್ದಾರೆ. ಇದರಲ್ಲಿಯೂ ಅನುಷ್ಕಾ ಶರ್ಮಾ ಬೇಬಿ ಬಂಪ್​ ನೋಡಬಹುದು. ಆಕೆ ಹೊಟ್ಟೆಯ ಮೇಲೆ ಕೈಯಿಟ್ಟಿದ್ದಾರೆ. ಇಷ್ಟು ನೋಡುತ್ತಿದ್ದಂತೆಯೇ ನಟಿ ಗರ್ಭಿಣಿ ಸುದ್ದಿ ನಿಜ ಎಂದು ಹೇಳಲಾಗಿತ್ತು. ಇದೀಗ ಅದು ನಿಜವಾಗಿದೆ. ದಂಪತಿ ಖುದ್ದು ಇದನ್ನು ರಿವೀಲ್​  ಮಾಡಿದ್ದಾರೆ. 

ನಾನು ಸತ್ತಿಲ್ಲ, ಹ್ಯಾಂಗ್​ ಓವರ್​ ಕುರಿತು ಅರಿವು ಮೂಡಿಸ್ತಿದ್ದೇನೆ.. ಪೂನಂಗೆ ತಿರುಗೇಟು ಕೊಟ್ಟ ಉರ್ಫಿ ಹೇಳಿದ್ದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅವಕಾಶ ಕಳೆದುಕೊಳ್ಳುವ ಭಯ ನನ್ನನ್ನು ಕಾಡಿತ್ತು: ಸೋಲಿನ ಭೀತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ
Rajinikanth Birthday.. ಅಬ್ಬಬ್ಬಾ ಸರಳತೆಯ ಶಿಖರ ರಜನಿಕಾಂತ್ ಇಷ್ಟೊಂದು ಕೋಟಿ ಆಸ್ತಿಗೆ ಒಡೆಯನಾ?