ನಾನು ಸತ್ತಿಲ್ಲ, ಹ್ಯಾಂಗ್​ ಓವರ್​ ಕುರಿತು ಅರಿವು ಮೂಡಿಸ್ತಿದ್ದೇನೆ.. ಪೂನಂಗೆ ತಿರುಗೇಟು ಕೊಟ್ಟ ಉರ್ಫಿ ಹೇಳಿದ್ದೇನು?

By Suvarna News  |  First Published Feb 3, 2024, 8:35 PM IST

ಸತ್ತಿರುವುದಾಗಿ ಸುಳ್ಳು ಸುದ್ದಿ ಹರಿಬಿಟ್ಟ ನಟಿ ಪೂನಂ ಪಾಂಡೆ ವಿರುದ್ಧ ಗರಂ ಆಗಿರೋ ಉರ್ಫಿ ಜಾವೇದ್​ ಹ್ಯಾಂಗ್​ ಓವರ್​ ಕುರಿತು ಪಾಠ ಮಾಡಿದ್ದಾರೆ.
 


ಫೆಬ್ರುವರಿ 2ರಂದು ಬಾಲಿವುಡ್​ ಮಾದಕ ನಟಿ ಪೂನಂ ಪಾಂಡೆಗಾಗಿ ಎಲ್ಲರ ಕಣ್ಣೀರು, ಇಂದು ಅವರಿಗೆ ಛೀಮಾರಿ.. ಸತ್ತರೆಂದು ಅತ್ತವರು, ಬದುಕಿದುದಕ್ಕಾಗಿ ಶಾಪ ಹಾಕುವಂಥ ಸ್ಥಿತಿ ತಂದುಕೊಂಡಿದ್ದಾರೆ ಪೂನಂ ಪಾಂಡೆ.  ಸದ್ಯ ಈಗ ಎಲ್ಲೆಲ್ಲೂ ಬಾಲಿವುಡ್​ ನಟಿ ಪೂನಂ ಪಾಂಡೆಯ ವಿಷಯವೇ ಓಡಾಡುತ್ತಿದೆ. ನಿನ್ನೆ ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದ ಸುದ್ದಿ ಬಂತು.  ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ 32 ವರ್ಷದ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತು.  ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು.  ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು.  ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.

ನಟ-ನಟಿ ಸೇರಿದಂತೆ ಸೆಲೆಬ್ರಿಟಿಗಳ ಸಾವಿನ ಸುದ್ದಿ ಕೆಲವು ವೇಳೆ ಬರುವುದು ಉಂಟು. ಆದರೆ ಅಂಥ ಕೃತ್ಯವನ್ನು ಯಾರೋ ಕಿಡಿಗೇಡಿಗಳು ಹರಿಯಬಿಡುತ್ತಾರೆ.  ಆದರೆ ಇಲ್ಲಿ ಹಾಗಲ್ಲ. ಖುದ್ದು ಪೂನಂ ಪಾಂಡೆಯೇ ಅಂಥ ಕೃತ್ಯ ಮಾಡಿದ್ದಾರೆ. ತಮ್ಮ ಸಾವಿನ ಸುದ್ದಿಯನ್ನು ತಮ್ಮ ಕುಟುಂಬಸ್ಥರಿಂದ ಹರಿಬಿಟ್ಟಿದ್ದಾರೆ. ಈಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಹಲವರು ಕಂಬನಿ ಮಿಡಿದಿದ್ದರು. ಆದರೆ ಇದೀಗ ಸಾವು ಗರ್ಭಕಂಠ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸಲು ಹೀಗೆ ಮಾಡಿರುವುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ. ಇದರಿಂದ ನಟಿಗೆ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

Tap to resize

Latest Videos

ಡ್ರಾಮಾ ಕ್ವೀನ್​ನನ್ನೇ ಮೀರಿಸಿದ ಪೂನಂ ಪಾಂಡೆ: ನಿನಗಾಗಿ ತ್ಯಾಗ ಮಾಡಿದೆ ಎನ್ನುತ್ತಲೇ ರಾಖಿ ಹೀಗೆ ಆಕ್ರೋಶ!

ಇದಾಗಲೇ ಬಾಲಿವುಡ್​​ ಸೆಲೆಬ್ರಿಟಿಗಳು ಸೇರಿದಂತೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳು ಪೂನಂ ಪಾಂಡೆ ವಿರುದ್ಧ ಗರಂ ಆಗಿದ್ದಾರೆ. ಪ್ರಚಾರಕ್ಕಾಗಿ ಬೇರೆಯವರ ಭಾವನೆಗಳ ಜೊತೆ ಆಡಬಾರದು ಎಂದಿದ್ದಾರೆ. ಇದೀಗ ನಟಿ  ಉರ್ಫಿ ಜಾವೇದ್​ ಕೂಡ ತಿರುಗೇಟು ನೀಡಿದ್ದಾರೆ. ಹಾಸಿಗೆ ಮೇಲೆ ಮಲಗಿರುವ ಫೋಟೋ ಶೇರ್​ ಮಾಡಿರುವ ನಟಿ, ಪೂನಂ ಪಾಂಡೆಗೆ ಟಾಂಗ್​ ಕೊಟ್ಟಿದ್ದಾರೆ. ನಾನು ಸತ್ತಿಲ್ಲ. ಹ್ಯಾಂಗೋವರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ನೀವು ಕುಡಿಯುವಾಗ ಬದುಕಿದ್ದಂತೆ ಅನಿಸುತ್ತದೆ. ಮರುದಿನ ಸತ್ತಂತೆ ಅನಿಸುತ್ತದೆ. ಆದರೆ ನೀವು ನಿಜವಾಗಿ ಸತ್ತಿರುವುದಿಲ್ಲ. ಸಾಯುವುದೆಂದರೆ ಸಾಯುವುದಲ್ಲ ಎಂದಿದ್ದಾರೆ ಉರ್ಫಿ ಜಾವೇದ್. 

ಈ ವಿಷಯ ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋದರೆ, ಯಾರಾದರೂ ಈಕೆಯ ಸುಳ್ಳನ್ನು ಗಂಭೀರವಾಗಿ ತೆಗೆದುಕೊಂಡರೆ ಕೇಸ್​ ಕೂಡ ದಾಖಲಿಸಬಹುದಾಗಿದೆ. ಚಿತ್ರನಿರ್ಮಾಪಕ ಅಶೋಕ್​ ಪಂಡಿತ್​ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್​ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಷ್ಟಕ್ಕೂ ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ.  

ಪೂನಂ ಪಾಂಡೆ ವಿರುದ್ಧ ದಾಖಲಾಗತ್ತಾ ಕೇಸ್​? ಪ್ರಚಾರಕ್ಕಾಗಿ ಸತ್ತೆನೆಂದ ನಟಿಗೆ ಹೀಗಿದೆ ಶಿಕ್ಷೆ...

 
 
 
 
 
 
 
 
 
 
 
 
 
 
 

A post shared by Uorfi (@urf7i)

click me!