
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಒಂದು ಕಾಲದಲ್ಲಿ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ, ಪ್ರೇಮದ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನುವ ಸುದ್ದಿ ಕೂಡ ಇದೆ. ಇನ್ನೇನು ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೂಡ ಇತ್ತು. ದೀಪಿಕಾ ಪಡುಕೋಣೆ ಕುತ್ತಿಗೆಯ ಮೇಲೆ RK ಎಂದು (ರಣಬೀರ್ ಮತ್ತು ದೀಪಿಕಾ) ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಆದರೆ ಇಬ್ಬರ ಪ್ರೀತಿಯ ಬಂಧ ಕೆಲವೇ ವರ್ಷಕ್ಕೆ ಮುರಿದು ಬಿತ್ತು. ಇಬ್ಬರ ನಡುವೆ ಏನಾಯಿತೋ ದೂರ ದೂರ ಆದರು. ಇಬ್ಬರ ಬ್ರೇಕಪ್ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬ್ರೇಕಪ್ ವಿಚಾರವನ್ನು ದೀಪಿಕಾ ಅನೇಕ ಬಾರಿ ಬಹಿರಂಗ ಪಡಿಸಿದ್ದಾರೆ. ಅನೇಕ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲೂ ಮಾತನಾಡಿದ್ದರು.
2010ರಲ್ಲಿ ಪ್ರಸಾರವಾಗುತ್ತಿದ್ದ ಕಾಫಿ ವಿತ್ ಕರಣ್ ಸೀಸನ್ 3 ನಲ್ಲಿ ದೀಪಿಕಾ ಭಾಗಿಯಾಗಿದ್ದರು. ಆಗ ಒಂದಿಷ್ಟು ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದರು. ಕರಣ್ ಜೋಹರ್ ಶೋ ಅಂದಮೇಲೆ, ಗಾಸಿಪ್, ಮಸಾಲೆ, ಲವ್, ಅಫೇರ್ ವಿಚಾರಗಳು ಇರದೇ ಇರಲು ಸಾಧ್ಯನೇ ಇಲ್ಲ. ಅದರಂತೆ ದೀಪಿಕಾ ಎಪಿಸೋಡ್ ಕೂಡ ಹಾಗೆ ಇತ್ತು. ಕಾರ್ಯಕ್ರದಮಲ್ಲಿ ದೀಪಿಕಾ ಆರ್‌ಕೆ ಟ್ಯಾಟೂ ಬಗ್ಗೆ ಮಾತನಾಡಿದ್ದರು. ಆರ್ ಕೆ ಟ್ಯಾಟೂ ಬಗ್ಗೆ ದೀಪಿಕಾ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಕರಣ್ ಶೋನಲ್ಲಿ ಬಹಿರಂಗ ಪಡಿಸಿದ್ದರು.
ರಣಬೀರ್ ಜೊತೆ ಬ್ರೇಕಪ್ ಬಳಿಕ ದೀಪಿಕಾ ಆರ್‍ಕೆ ಟ್ಯೂಟ್ ತೆಗಿಸಿದರು, ಅದನ್ನೆ ಬೇರೆ ಡಿಸೈನ್ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಈ ಬಗ್ಗೆ ಮಾತನಾಡಿದ ದೀಪಿಕಾ ಟ್ಯಾಟು ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ. 'ಆ ಸಮಯದಲ್ಲಿ ನಾನು ಸರಿಯಾಗಿ ಮಾಡಿದ್ದೇನೆ ಎಂದು ಭಾವಿಸಿದೆ. ಮತ್ತು ನಾನು ಎಂದಿಗೂ ವಿಷಾದಿಸಲಿಲ್ಲ. ಮತ್ತು ಅದನ್ನು ತೆಗೆದುಹಾಕುವ ಬಗ್ಗೆ ನಾನು ಎಂದಿಗೂ ಯೋಚಿಸಲಿಲ್ಲ. ಆದರೆ ಮಾಧ್ಯಮಗಳು ನಿರಂತರವಾಗಿ ಅವಳು ಅದನ್ನು ತೆಗೆದು ಹಾಕಿದ್ದಾಳೆ ಎಂದು ಹೇಳುತ್ತಿದ್ದರು. ಅದನ್ನು ತೆಗೆಯುವ ಯಾವುದೇ ಯೋಜನೆ ಇಲ್ಲ' ಎಂದು ಹೇಳಿದರು. ಪಕ್ಕದಲ್ಲೇ ಇದ್ದ ಸೋನಮ್ ಕಪೂರ್ ಇದನ್ನು 'ಯುದ್ಧದ ಗುರುತುಗಳು' ಎಂದು ಹೇಳಿದರು.
ಭೂತಾನ್ ಪ್ರವಾಸದಲ್ಲಿರುವ ದೀಪಿಕಾ ತಂಗಿರುವ ಹೋಟೆಲ್ ಹೇಗಿದೆ? ದಿನದ ಖರ್ಚು ಕೇಳಿದ್ರೆ ಅಚ್ಚರಿ ಪಡ್ತೀರಾ!
ರಣಬೀರ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡ ಬಳಿಕ ದೀಪಿಕಾ ರಣ್ವೀರ್ ಸಿಂಗ್ ಜೊತೆ ಪ್ರೀತಿಯಲ್ಲಿ ಬಿದ್ದರು. ಇಬ್ಬರು ಅನೇಕ ವರ್ಷಗಳು ಪ್ರೀತಿಸಿ ಇದೀಗ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ರಣ್ವೀರ್ ಸಿಂಗ್ ಜೊತೆ ಪ್ರೀತಿಯಲ್ಲಿದ್ದಾಗ ದೀಪಿಕಾ ಟ್ಯಾಟೂ ತೆಗೆಸಿದರು ಎನ್ನಲಾಗಿತ್ತು. ಅನೇಕ ಬಾರಿ ಟ್ಯಾಟೂ ಮರೆಮಾಚಿಕೊಂಡಿದ್ದರು. ಹಾಗಾಗಿ ಟ್ಯಾಟು ಇಲ್ಲ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿತ್ತು. ದೀಪಿಕಾ ಕುತ್ತಿಗೆಯಲ್ಲಿರುವ ಟ್ಯಾಟೂ ಇಂದಿಗೂ ಹಾಗೆ ಇದೆ. ಅಷ್ಟೆಯಲ್ಲ ಮದುವೆ ಬಳಿಕವೂ ದೀಪಿಕಾ ರಣಬೀರ್ ಕಪೂರ್ ಜೊತೆ ಚೆನ್ನಾಗಿಯೇ ಇದ್ದಾರೆ. ಈಗಲೂ ಸ್ನೇಹಿತರರಾಗಿದ್ದಾರೆ.
Deepika Padukone: ಹಾಲಿವುಡ್ಡಲ್ಲೂ ಮಿಂಚುತ್ತಿರೋ ನಟಿ ಕಲಿತದ್ದೆಷ್ಟು ಗೊತ್ತಾ? ಹೌಹಾರಿದ ಫ್ಯಾನ್ಸ್!
ರಣಬೀರ್ ಕಪೂರ್ ಸದ್ಯ ಆಲಿಯಾ ಭಟ್ ಅವರನ್ನು ಮದುವೆಯಾಗಿ ಸಂತೋಷ ಜೀವನ ನಡೆಸುತ್ತಿದ್ದಾರೆ. ಈ ಜೋಡಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಇದುವರೆಗೂ ರಣಬೀರ್ ಮತ್ತು ಆಲಿಯಾ ದಂಪತಿ ಮಕ್ಕಳ ಪೋಟೋ ರಿವೀಲ್ ಮಾಡಿಲ್ಲ. ಸದ್ಯ ಎಲ್ಲರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.