ಸತ್ಯ ಯಾವಾಗ್ಲೂ ಗೆಲ್ಲುತ್ತೆ: ಜಿಯಾ ಖಾನ್ ಪ್ರಕರಣದ ತೀರ್ಪಿನ ಬಳಿಕ ಸೂರಜ್ ಪಾಂಚೋಲಿ ಪೋಸ್ಟ್ ವೈರಲ್

By Shruthi KrishnaFirst Published Apr 28, 2023, 4:48 PM IST
Highlights

ಸತ್ಯ ಯಾವಾಗ್ಲೂ ಗೆಲ್ಲುತ್ತೆ ಎಂದು ಜಿಯಾ ಖಾನ್ ಪ್ರಕರಣದ ತೀರ್ಪಿನ ಬಳಿಕ ಸೂರಜ್ ಪಾಂಚೋಲಿ ಮಾಡಿರುವ ಪೋಸ್ಟ್ ವೈರಲ್  ಆಗಿದೆ.  

ಬಾಲಿವುಡ್ ಖ್ಯಾತ ನಟಿ ಜಿಯಾ ಖಾನ್ ಸಾವಿನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಾಯ್‌ಫ್ರೆಂಡ್ ಅಂತನೆ ಗುರುತಿಸಿಕೊಂಡಿದ್ದ ಸೂರಜ್ ಪಾಂಚೋಲಿ ನಿರ್ದೋಷಿ  ಎಂದು ಮುಂಬೈನ ಸಿಬಿಐ ವಿಶೇಷ ಕೋರ್ಟ್ ಇಂದು (ಏಪ್ರಿಲ್ 28) ತೀರ್ಪು ನೀಡಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಈ ತೀರ್ಪು ಬಂದಿದ್ದು ಸೂರಜ್ ಪಾಂಚೋಲಿ ಈ ಪ್ರಕರಣದಿಂದ ಖುಲಾಸೆಯಾಗಿದ್ದಾರೆ. ಗುರುವಾರ (ಏಪ್ರಿಲ್​ 20) ಜಿಯಾ ಖಾನ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಏಪ್ರಿಲ್ 28ಕ್ಕೆ ತೀರ್ಪು ಕಾಯ್ದಿರಿಸಿತ್ತು. ಸೂರಜ್ ಭವಿಷ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಇದೀಗ ಬಿಗ್ ರಿಲೀಫ್ ಸಿಕ್ಕಿದೆ. 

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೂರಜ್ ಪಾಂಚೋಲಿ ಅವರನ್ನು ದೋಷಿ ಎಂದು ಪರಿಗಣಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ, ಹಾಗಾಗಿ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯದ ನ್ಯಾಯಾಧೀಶ ಎ ಎಸ್ ಸೈಯ್ಯದ್ ಹೇಳಿದ್ದಾರೆ. ನಿರ್ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಸೂರಜ್ ಪಾಂಚೋಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ವೈರಲ್ ಆಗಿದೆ. 

Latest Videos

'ಸತ್ಯ ಯಾವಾಗಲೂ ಗೆಲ್ಲುತ್ತೆ' ಎಂದು ಸೂರಜ್ ಪಾಂಚೋಲಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಜೊತೆಗೆ ನಮಸ್ಕಾರ ಮಾಡುವ ಇಮೋಜಿ ಹಾಗೂ ಹಾರ್ಟ್ ಇಮೋಜಿ ಇರಿಸಿದ್ದಾರೆ. ದೇವರು ದೊಡ್ಡವನು ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿರ್ದೋಷಿ ಎಂದು ತೀರ್ಪು ಪ್ರಕಟವಾದ ಬಳಿಕ ಕೋರ್ಟಿನಿಂದ ಹೊರಬಂದ ಸೂರಜ್ ಪಾಂಚೋಲಿ ಮತ್ತು ಅವರ ತಾಯಿ ಜರೀನಾ ಅವರನ್ನು ಮಾಧ್ಯಮದವರು ಮುತ್ತುವರೆದರು. ಆದರೆ ಯಾವುದೇ ಪ್ರತಿಕ್ರಿಯೆ ನೀಡದೆ ಸೂರಜ್ ಮತ್ತು ತಾಯಿ ಅಲ್ಲಿಂದ ಹೊರಟರು. 

Jiyah Khan Death Case: ಸೂರಜ್ ಪಾಂಚೋಲಿ ನಿರ್ದೋಷಿ; ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

2013ರ ಜೂನ್​ 3ರಂದು ನಟಿ ಜಿಯಾ ಖಾನ್​ ಜುಹೂ ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು.  ಆದರೆ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಸುದೀರ್ಘ ತನಿಖೆ ನಡೆದಿದೆ. ಜಿಯಾ ಖಾನ್, ಬಾಲಿವುಡ್ ಹಿರಿಯ ನಟ ಆದಿತ್ಯ ಚೋಪ್ರಾ ಮತ್ತು ಜರೀನಾ ವಹಾಬ್ ಪುತ್ರ ಸೂರಜ್ ಪಂಚೋಲಿ ಜೊತೆ ಸಂಬಂಧದಲ್ಲಿದ್ದರು ಎನ್ನಲಾಗಿತ್ತು. ಜಿಯಾ ಖಾನ್ ಸಾವಿನ ಬಳಿಕ ಸೂರಜ್ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿತ್ತು. 

ದಿಶಾ, ಸುಶಾಂತ್‌ ಸಾವಿನ ಮಧ್ಯೆ ತನ್ನನ್ನು ಎಳೆದಿದ್ದಕ್ಕೆ ಬಾಲಿವುಡ್ ಯಂಗ್ ನಟ ಗರಂ..!

ಪ್ರಕರಣದ ಅಧಿಕಾರ ವ್ಯಾಪ್ತಿ ತನಗೆ ಇಲ್ಲ ಎಂದು ಸೆಷನ್ಸ್ ಕೋರ್ಟ್ ಹೇಳಿದ ನಂತರ 2021 ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪ್ರಕರಣವನ್ನು ಮರು ನಿಯೋಜಿಸಲಾಯಿಗಿತ್ತು. ಇದೀಗ ಸೂರಜ್ ಪಾಂಚೋಲಿ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. 

click me!