Zomatoಯಿಂದ ಬ್ಯಾಸ್ಕೆಟ್‌ ಫ್ರೀ; ಗಿಫ್ಟ್‌ ಅನ್ನೋದು ಮರೆತು ಎದೆ ಮುಚ್ಚಿಕೊಂಡ ಉರ್ಫಿ ಜಾವೇದ್!

Published : Apr 28, 2023, 04:55 PM IST
Zomatoಯಿಂದ ಬ್ಯಾಸ್ಕೆಟ್‌ ಫ್ರೀ; ಗಿಫ್ಟ್‌ ಅನ್ನೋದು ಮರೆತು ಎದೆ ಮುಚ್ಚಿಕೊಂಡ ಉರ್ಫಿ ಜಾವೇದ್!

ಸಾರಾಂಶ

ವೈರಲ್ ಆಯ್ತು ಉರ್ಫಿ ಜಾವೇದ್ ತುಂಟಾಟ. ಮುಂದಿನ ಸಲ ಗಿಫ್ಟ್‌ ಸೆಂಡ್ ಮಾಡುವವರಿಗೆ ಬುದ್ಧಿ ಮಾತು ಹೇಳಿದ ನಟಿ... 

ಬಾಲಿವುಡ್ ಚಿತ್ರರಂಗದಲ್ಲಿ ಗಾಳಿ ಬಿರುಗಾಳಿ ಸುಂಟರಗಾಳಿ ಎಬ್ಬಿಸುತ್ತಿರುವ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್‌ ಇದೀಗ ಮತ್ತೊಮ್ಮೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ವಿಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿ ಮುಂಬೈನ ರಸ್ತೆಗಳಲ್ಲಿ ಓಡಾಡುವ ನಟಿ ಒಂದು ಪಿನ್‌ ಕೂಡ ವೇಸ್ಟ್‌ ಮಾಡದೆ ಬಳಸಿಕೊಳ್ಳುತ್ತಾರೆ. ಹೀಗಿರುವಾಗ ಮನೆಗೆ ಬಂದಿರುವ ಗಿಫ್ಟ್‌ನ ಹಾಗೆ ಬಿಡ್ತಾರಾ? ಇಲ್ಲ ಝೊಮ್ಯಾಟೊ ಕೊಟ್ಟ ಗಿಫ್ಟ್‌ ಕಥೆ ನೋಡಿ... 

'ನಿಮ್ಮ ಝೊಮ್ಯಾಟೊ ಗೋಲ್ಡ್‌ ಡೈನಿಂಗ್‌ ಕಾರ್ನಿವಲ್‌ ನಡೆಯುತ್ತಿದ್ದ ಹೋಟೆಲ್‌ನಲ್ಲಿ ನನಗೊಂದು ಸೀಟ್‌ ಸಿಕ್ಕಿಲ್ಲ. ಬೇಸರವಾಗಿದೆ' ಎಂದು ಉರ್ಫಿ ಝೊಮ್ಯಾಟೊ ಸಂಸ್ಥೆ ಅವರಿಗೆ ಮೆಸೇಜ್ ಮಾಡಿದ್ದರು. ಒಂದೇ ನಿಮಿಷದಲ್ಲಿ ಪ್ರತಿಕ್ರಿಯೆ ನೀಡಿದ ಸಂಸ್ಥೆ 'ದಯವಿಟ್ಟು ನಮ್ಮನ್ನು ಕ್ಷಮಿಸಬೇಕು ಮೇಡಂ. ಹೋಟೆಲ್‌ನಲ್ಲಿ ಬಿಲ್‌ಗಳ ಮೇಲೆ 50% ರಿಯಾತಿ ಕೊಡುತ್ತಿರುವ ಕಾರಣ ಎಲ್ಲರೂ ಮೊಬೈಲ್‌ನಲ್ಲಿ ಸೀಟ್‌ ಬುಕ್‌ ಮಾಡಿಕೊಳ್ಳುತ್ತಿದ್ದಾರೆ. ಜೂನ್ 14ರವರೆಗೂ ಈ ಕಾರ್ನಿವಲ್ ಆಫರ್ ನಡೆಯಲಿದೆ. ಹೀಗಾಗಿ ಇಷ್ಟರಲ್ಲಿ ನೀವು ಮತ್ತೊಮ್ಮೆ ಬುಕ್ ಮಾಡಿಕೊಂಡ ಭೇಟಿ ನೀಡಬಹುದು' ಎಂದಿದ್ದಾರೆ.

ಉರ್ಫಿ ರೀತಿ ಮೈ ತೋರಿಸಿಕೊಂಡು ಓಡಾಡೋಕೆ ಧೈರ್ಯ ಇಲ್ಲ: ಟಾಂಗ್ ಕೊಟ್ಟ ಕರೀನಾ ಕಪೂರ್

ಉರ್ಫಿ ಜಾವೇದ್‌ಗೆ ಬೇಸರ ಮಾಡಬಾರದು ಎಂದು 'ಕ್ಷಮೆ ಕೇಳುವುದರ ಜೊತೆಗೆ ನಾವು ನಿಮಗೊಂದು ಗಿಫ್ಟ್‌ ಬ್ಯಾಸ್ಕೆಟ್‌ ಕಳುಹಿಸಿ ಕೊಡುತ್ತೀವಿ ಎಂದು ಬ್ಯಾಸ್ಕೆಟ್‌ ತುಂಬಾ ತಿನಿಸು ತುಂಬಿರುವ ಫೋಟೋಗಳನ್ನು ಕಳುಹಿಸಿದ್ದಾರೆ. ಅಲ್ಲಿಗೆ ಸುಮ್ಮನಾಗದ ಉರ್ಫಿ 'ಬಟ್ಟೆ ಕಳುಹಿಸಿಕೊಟ್ಟಿದಕ್ಕೆ ಧನ್ಯವಾದಗಳು' ಎಂದಿದ್ದಾರೆ. ಒಮ್ಮೆ ಝೊಮ್ಯಾಟೊ ಸಂಸ್ಥೆ ಗಾಬರಿ ಆಗಿ ಡ್ರೆಸ್‌? ಇಲ್ಲ ಇಲ್ಲ ಅದು ಗಿಫ್ಟ್‌ ಬ್ಯಾಸ್ಕೆಟ್‌ ಎಂದಿದ್ದಾರೆ. ಆದರೂ ಉರ್ಫಿ ಪ್ರತಿಕ್ರಿಯೆ ಕೊಡದ ಕಾರಣ ಮೇಡಂ ಅದು ಗಿಫ್ಟ್‌ ಬ್ಯಾಸ್ಕೆಟ್‌ ಎಂದು ಮತ್ತೊಮ್ಮೆ ಕಳುಹಿಸಿದ್ದಾರೆ. ಅದರೆ ಅಷ್ಟರಲ್ಲಿ ಉರ್ಫಿ ತಮ್ಮ ಕ್ರಿಯೇಟಿವಿಟಿ ಬಳಸಿದ್ದಾರೆ. 

ಹೌದು! ತಿನಿಸು ಕೊಟ್ಟಿರುವ ಬ್ಯಾಸ್ಕೆಟ್‌ನಿಂದ ತಮ್ಮ ಎದೆ ಮುಚ್ಚಿಕೊಂಡಿದ್ದಾರೆ. ಕೈ ಎರಡೂ ಮೇಳೆ ಎತ್ತಿ ಕಣ್ಣು ಹೊಡೆಯುತ್ತಿರುವ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಝೊಮ್ಯಾಟೊ ಲೇಬಲ್‌ನ ಸೊಂಟ ಸುತ್ತಾ ಸ್ಕರ್ಟ್‌ ರೀತಿ ಸುತ್ತಿಕೊಂಡಿದ್ದಾರೆ. ಯಾರದ್ದೋ ಬ್ಯಾಸ್ಕೆಟ್‌ನಿಂದ ಮತ್ಯಾರೋ ಮಾಡಿಕೊಂಡಿರುವ ಬಟ್ಟೆ ಇದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಪೋಸ್ಟ್‌ಗೆ ಕನ್ನಡ ನಟಿ ಸಂಯುಕ್ತಾ ಹೆಗ್ಡೆ 'ಸೂಪರ್ ಕ್ರಿಯೇಟಿವಿಟಿ' ಎಂದು ಕಾಮೆಂಟ್ ಮಾಡಿದ್ದಾರೆ.

ಉರ್ಫಿ ಮೈ ತುಂಬಾ ಕಿವಿ ಹಣ್ಣು; ದುಬಾರಿ ಹಣ್ಣಿನ ರುಚಿ ನೋಡೋ ಭಾಗ್ಯ ನಮಗಿಲ್ಲ ಎಂದು ಕಾಲೆಳೆದ ನೆಟ್ಟಿಗರು

ಹೋಟೆಲ್‌ ಎಂಟ್ರಿ ಇಲ್ಲ: 

ತನ್ನ ಬೋಲ್ಡ್ ಮತ್ತು ವಿಚಿತ್ರ ಡ್ರೆಸ್‌ನಿಂದ ಸುದ್ದಿಯಲ್ಲಿರುವ ಉರ್ಫಿ, ಇತ್ತೀಚೆಗೆ  ಮುಂಬೈನ ರೆಸ್ಟೋರೆಂಟ್‌ಗೆ ಎಂಟ್ರಿ ಸಿಗಲಿಲ್ಲವಂತೆ! ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ನಟಿಯ ಪೋಸ್ಟ್ ನೋಡಿದ ನಂತರ, ಅವರ ಫ್ಯಾಷನ್ ಸೆನ್ಸ್‌ನಿಂದ ಮಾತ್ರ ಅವರಿಗೆ ಈ ರೆಸ್ಟೋರೆಂಟ್‌ಗೆ ಎಂಟ್ರಿ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದು ನಿಜವಾಗಿಯೂ 21 ನೇ ಶತಮಾನದ (21st Century) ಮುಂಬೈಯೇ? ಇಂದು ನನಗೆ ರೆಸ್ಟೋರೆಂಟ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ನನ್ನ ಫ್ಯಾಷನ್ ಆಯ್ಕೆಯನ್ನು ನೀವು ಒಪ್ಪದಿದ್ದರೂ ಪರವಾಗಿಲ್ಲ. ಆದರೆ ಈ ಕಾರಣದಿಂದಾಗಿ ನೀವು ನನ್ನನ್ನು ನಿರ್ಣಯಿಸಬೇಕು. ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಮತ್ತು ಅದು ಸರಿ ಎಂದು ನಿಮಗನಿಸಿದರೆ ಅದನ್ನು ಒಪ್ಪಿಕೊಳ್ಳಿ. ಯಾವುದೇ ಕ್ಷಮೆ ಕೋರಬೇಡಿ' ಎಂದು ಅಸಮಾಧಾನ ವ್ಯಕ್ತಪಡಿಸಿದ ಉರ್ಫಿ ಇದರೊಂದಿಗೆ ಜೊಮಾಟೊ ಮುಂಬೈಗೆ ಟ್ಯಾಗ್ ಮಾಡಿದ್ದಾರೆ ಮತ್ತು ಈ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?