
ಚೆನ್ನೈ (ಏ.30): ತಮಿಳಿನ ಖ್ಯಾತ ನಿರ್ದೇಶಕ ಕೆ.ವಿ. ಆನಂದ್ (54) ಹೃದಯಾಘಾತದಿಂದ ಇಂದು ಮುಂಜಾನೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕರೆನಿಸಿಕೊಂಡಿದ್ದ ಕುಮಾರ್ ವೆಂಕಟೇಶ್ ಆನಂದ್ ಸಿನಿಮಾಟೋಗ್ರಾಫರ್, ನಿರ್ದೇಶಕ ಮತ್ತು ಫೊಟೊ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.
1966ರಲ್ಲಿ ಚೆನ್ನೈನಲ್ಲಿ ಜನಿಸಿದ ಆನಂದ್ ಅವರು ಪ್ರಮುಖವಾಗಿ ತಮಿಳು ಚಲನಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡರು. ಆನಂದ್ 1990ರ ಆರಂಭದಲ್ಲಿ ಬಾಲಿವುಡ್ ಸೇರಿದಂತೆ ಅನೇಕ ಕಡೆ 15 ಚಿತ್ರಗಳಲ್ಲಿ ಕೆಲಸ ಮಾಡಿದರು.
ಪ್ರಮುಖವಾಗಿ ಖ್ಯಾತ ಸಿನಿಮಾಟೋಗ್ರಾಫರ್ ಪಿಸಿ ಶ್ರೀರಾಮ್ ಅವರ ಸಹಾಯಕರಾಗಿ ಗೋಪುರ ವಸಲಿಲೆ, ಮೀರಾ, ದೇವರ್ ಮಗನ್, ಅಮರನ್, ತಿರುಡಾ ತಿರುಡಾ ಸೇರಿದಂತೆ ಅನೇಕ ಚಿತ್ರಗಳಿಗೆ ಕೆಲಸ ಮಾಡಿದರು.
ಕನ್ನಡ ಚಿತ್ರರಂದ ಖ್ಯಾತ ನಿರ್ಮಾಪಕ ಎಂ.ಚಂದ್ರಶೇಖರ್ ಕೊರೋನಾಗೆ ಬಲಿ ...
ದಶಕಗಳಿಗೂ ಹೆಚ್ಚು ಕಾಲ ಸಿನಿಮಾಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ ಇವರು ಚಂದ್ರಲೇಖ, ಮುದಲ್ವನ್, ಜೋಶ್, ನಾಯಕ್, ಬಾಯ್ಸ್, ಶಿವಾಜಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು.
ನಿರ್ದೇಶಕರಾಗಿ ಕನಾ ಕಂದೇನ್, ಅಯನ್ ಸೇರಿದಂತೆ ಅನೇಕ ಚಿತ್ರ ನಿರ್ದೇಶನ ಮಾಡಿದರು.
ಅವರ ಚಲನಚಿತ್ರ ಕ್ಷೇತ್ರದ ಸಾಧನೆ ಗುರುತಿಸಿ ರಾಷ್ಟ್ರೀಯ ಪ್ರಶಸ್ತಿ, ಫಿಲ್ಮ್‌ಫೇಸ್ ಅವಾರ್ಡ್, ಬೆಸ್ಟ್ ಡೈರೆಕ್ಟರ್ ಅವಾರ್ಡ್‌ಗಳನ್ನು ನೀಡಲಾಗಿತ್ತು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.