ಮದುಮಗನಾಗಿ ಬಂದ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಜೊತೆ ಹಸೆಮಣೆ ಏರಲೇ ಇಲ್ಲ! ಏನಿದು ವಿಷ್ಯ?

Published : Aug 28, 2024, 05:48 PM IST
ಮದುಮಗನಾಗಿ ಬಂದ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಜೊತೆ ಹಸೆಮಣೆ ಏರಲೇ ಇಲ್ಲ! ಏನಿದು ವಿಷ್ಯ?

ಸಾರಾಂಶ

ಮದುಮಗನ ಡ್ರೆಸ್​ ಮಾಡಿ ಮದುವೆಯ ಮೆರವಣಿಗೆಯಲ್ಲಿ ಬಂದ ನಟ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಅವರನ್ನು ಮದುವೆಯಾಗದೇ ಹೋಗಿದ್ದೆಲ್ಲಿ? ಇದೇನಿದು ಟ್ವಿಸ್ಟ್​?   

ನಾಗಚೈತನ್ಯ ಮತ್ತು ಸಮಂತಾ (Samantha) ಹಿಂದೊಮ್ಮೆ ಸಿನಿಮಾದ ಸೂಪರ್​ ಕಪಲ್​ ಎನಿಸಿಕೊಂಡಿದ್ದರು.  ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದವರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು.  ಮದುವೆಯ ಬಳಿಕ ಈ ಜೋಡಿ  ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ (Social Media) ಮೂಲಕವೇ  ವಿಚ್ಛೇದನ ಘೋಷಿಸಿದ್ದರು.   ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. 

ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ಶೋಭಿತಾ ಧೂಲಿಪಾಲ ಅವರ ಹೆಸರು ನಟ ನಾಗ ಚೈತನ್ಯ (Naga Chaitanya) ಜೊತೆಗೆ ಕೇಳಿಬಂದಿತ್ತು.  ಸಮಂತಾ ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ.  ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ನಡುವೆಯೇ  ಕೆಲ ದಿನಗಳ ಹಿಂದೆ ಇವರ ಎಂಗೇಜ್​ಮೆಂಟ್​ ಆಗಿದೆ.  ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದರು. ಕೆಲವು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಆದರೆ  ತಮ್ಮ ಸಂಬಂಧದ ಕುರಿತು ಮಾತನಾಡಿರಲಿಲ್ಲ. ಆದರೆ ಕೊನೆಗೆ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದು ನಿಶ್ಚಿತಾರ್ಥ ಮಾಡಿಕೊಂಡರು.

ಗುಟ್ಟಾಗಿ ನಡೆಯಿತು ಜಾಹ್ನವಿ ಕಪೂರ್​ ಎಂಗೇಜ್​ಮೆಂಟ್​? ಮಾಜಿ ಸಿಎಂ ಮನೆ ಸೊಸೆಯಾಗೋಕೆ ರೆಡಿ!
 
ಆದರೆ ಇದರ ಬೆನ್ನಲ್ಲೇ ಅವರ ಮದುವೆ ಕೂಡ ನಡೆದು ಹೋಯ್ತಾ ಎನ್ನುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಏಕೆಂದರೆ, ಇದು ನಕಲಿ ಅಲ್ಲ ಅಸಲಿ ವಿಡಿಯೋನೇ.  ಈ ವಿಡಿಯೋದಲ್ಲಿ ನಾಗಚೈತನ್ಯ ಮದುಮಗನಂತೆ ಕಂಗೊಳಿಸುತ್ತಿದ್ದು, ಮೆರವಣಿಗೆ ಮಾಡಲಾಗುತ್ತಿದೆ.  ಹೈದರಾಬಾದ್​ನ  ಪ್ರಮುಖ ರಸ್ತೆಗಳಲ್ಲಿ ತೆರೆದ ಜೀಪಿನಲ್ಲಿ ಇವರು ವರನ ವೇಷದಲ್ಲಿ ಬರುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಮದುವೆಯ ರೀತಿಯಲ್ಲಿಯೇ ಜೀಪ್​ ಅನ್ನು ಶೃಂಗಾರ ಮಾಡಲಾಗಿದೆ. ಬಾರಾತ್​ ಬರುವ ರೀತಿಯಲ್ಲಿಯೇ ಭಾಜಾ ಭಜಂತ್ರಿಗಳನ್ನೂ ತರಲಾಗಿದೆ. ಹೇಳದೇ ಕೇಳದೇ ಮದುವೆಯಾಗಿ ಬಿಟ್ಟರು ಎನ್ನುವ ಮಾತು ಕೇಳಿಬರುತ್ತಿದೆ.

ಆದರೆ ಅಸಲಿಗೆ ವಿಷಯವೇ ಬೇರೆ. ಇದು ಮದುವೆಗೆ ಸಿದ್ಧವಾಗಿರುವ ವಿಡಿಯೋ ಅಲ್ಲ, ಬದಲಿಗೆ ಮದುವೆ ಮಳಿಗೆಯ ಉದ್ಘಾಟನೆಯೊಂದರ ವಿಡಿಯೋ ಎಂಬ ಸ್ಪಷ್ಟನೆ ಬಂದಿದೆ.  ಮದುವೆಗೆ ಬೇಕಾದ ಪಂಚೆ-ಸೀರೆ,  ಆಕರ್ಷಕ ಸೂಟ್‌, ಶರ್ವಾನಿ, ಕುರ್ತಾ ಡಿಸೈನ್‌ಗಳು ಇರುವ ಮಳಿಗೆಯ ರಾಯಭಾರಿಯಾಗಿ ಆಗಮಿಸಿದ್ದಾರೆ ನಾಗಚೈತನ್ಯ. ಅದಕ್ಕಾಗಿಯೇ ಮದುಮಗನಂತೆ ಡ್ರೆಸ್​  ಮಾಡಿಕೊಂಡಿದ್ದಾರೆ.  ನಂತರ ಮಳಿಗೆಯ  ಟೇಪ್ ಕತ್ತರಿಸಿದ್ದಾರೆ. ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿರುವ ನಟ, ಶೀಘ್ರದಲ್ಲಿಯೇ ಹೀಗೆಯೇ ಕಾಣಿಸಿಕೊಳ್ಳುವೆ ಎನ್ನುವ ಮೂಲಕ ಮದುವೆಯ ಸೂಚನೆ ಕೊಟ್ಟಿದ್ದಾರೆ.  ಶೀಘ್ರದಲ್ಲಿಯೇ ನನ್ನ ಮದುವೆ ನಡೆಯಲಿದೆ. ಮದುವೆಯ ದಿನಾಂಕವನ್ನು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋಗೆ ಅಪಸ್ವರ ಕೂಡ ಕೇಳಿಬಂದಿದೆ.  ಸಮಂತಾ ಅವರ ಬೇಸರ ಹತಾಶೆಯನ್ನು ಇನ್ನೂ ಹೆಚ್ಚು ಮಾಡಲು ನಾಗಚೈತನ್ಯ ಹಮ್ಮಿಕೊಂಡಿರುವ ಕಾರ್ಯಕ್ರಮ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. 

ಭೂಮಿಯ ಮೇಲಿಂದ ಪುರುಷ ಸಂತತಿಯೇ ನಾಶ! ಆತಂಕಕಾರಿ ಅಧ್ಯಯನ ವರದಿಯಲ್ಲಿ ಏನಿದೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ತ್ರಿಷಾ ಎಂಗೇಜ್‌ಮೆಂಟ್ ಬ್ರೇಕಪ್ ಮಾಡಿಕೊಂಡ ವ್ಯಕ್ತಿ ಜೊತೆ ಡೇಟಿಂಗ್ ಮಾಡಿದ ನಟಿ.. ಎಲ್ಲರ ಮುಂದೆ ಆಗಿದ್ದೇನು?