ಎರಡು ವಿಡಿಯೋಗಳು ವೈರಲ್ ಆಗುತ್ತಿವೆ. ಒಂದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯದ್ದು. ಇನ್ನೊಂದು ನಟಿ ದೀಪಿಕಾ ಪಡುಕೋಣೆಯದ್ದು. ಎರಡರ ನಡುವೆ ಸೂಕ್ಷ್ಮ ಸಂಬಂಧ ಇದೆಯಾ?
ಇತ್ತೀಚೆಗೆ ನೀವು ಗಮನಿಸಿದ್ದರೆ ಎರಡು ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನೋಡಿರಬಹುದು. ಒಂದು, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯುವ ಜೋಡಿಗಳಿಗೆ ರಿಲೇಷನ್‌ಶಿಪ್ ಟಿಪ್ಸ್ ನೀಡುತ್ತಿರೋದು. ಇನ್ನೊಂದು, ನಟಿ ದೀಪಿಕಾ ಪಡುಕೋಣೆ ತನ್ನ ಹಳೆಯ ರೊಮ್ಯಾಂಟಿಕ್ ರಿಲೇಷನ್‌ಶಿಪ್‌ಗಳ ಬಗ್ಗೆ ಪತಿ ರಣವೀರ್ ಸಿಂಗ್ ಮುಂದೆಯೇ, ಕಾಫಿ ವಿತ್ ಕರಣ್ ಪ್ರೋಗ್ರಾಮ್‌ನಲ್ಲಿ ಮಾತನಾಡಿರೋದು. ಇಬ್ಬರ ಮಾತನ್ನೂ ಸರಿಯಾಗಿ ಗಮನಿಸಿದರೆ ಅವರಿಬ್ಬರ ನಡುವೆಯೂ ರಿಲೇಶನ್ಶಿಪ್ ಇದ್ದುದನ್ನು ಗಮನಿಸಬಹುದು ಎಂದು ಕೆಲವು ಬಾಲಿವುಡ್ ಪಂಡಿತರು ವ್ಯಾಖ್ಯಾನಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ಕರಣ್ ಜೋಹರ್ ಅವರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯನ್ನು ಕೂರಿಸಿಕೊಂಡಿದ್ದರು. ಕುತೂಹಲದ ಘಟ್ಟದಲ್ಲಿ ಪತಿ ರಣವೀರ್ ಎದುರೇ ದೀಪಿಕಾ ತಮ್ಮ ಹಾಗೂ ಪರಪುರುಷರ ಡೇಟಿಂಗ್ ಕುರಿತು ಮಾತನಾಡಿದರು. ಅದು ರಣವೀರ್ ಕೋಪಕ್ಕೆ ಕಾರಣವಾಯಿತು. 'ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್ಮೆಂಟ್ ಇರಲಿಲ್ಲ,’ ಎಂದರು.
ಇಷ್ಟೇ ಅಲ್ಲದೇ, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ. ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದ್ದೆ ಎಂದರು. ಇದನ್ನು ಕೇಳಿ ರಣವೀರ್ ಕಿಡಿಕಿಡಿಯಾದರು. ಪತ್ನಿಗೆ ಬುದ್ಧಿ ಕಲಿಸಲು ಪ್ರಶ್ನೆಯೊಂದಕ್ಕೆ ನಾನು ಮೂರು ಜನರನ್ನು ಭೇಟಿಯಾಗಿ ಬರುತ್ತಿದ್ದೆ ಎಂದರು. ಆಗ ದೀಪಿಕಾ ಯಾರು ಅವರು ಎಂದು ಅಚ್ಚರಿಯಿಂದ ಕೇಳಿದಾಗ, ರಣವೀರ್, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದ್ದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ? ನನ್ನನ್ನೇ ಪ್ರಶ್ನೆ ಮಾಡ್ತಿಯಾ ಎಂದರು. ನೀನು ಹೇಳಿದ್ದು ನೆನಪೇ ಇಲ್ಲ ಎಂದರು ಡಿಪ್ಪಿ. ಆಗ ರಣವೀರ್ ನನಗೆ ಚೆನ್ನಾಗಿ ನೆನಪಿದೆ ಎಂದು ಕಿಡಿಕಿಡಿಯಾದರು.
ದೀಪಿಕಾ ಪಡುಕೋಣೆ ಡೇಟಿಂಗ್ ಮಾಡುತ್ತಿದ್ದ ಆ ವ್ಯಕ್ತಿಗಳು ಯಾರು? ಹಲವರ ಹೆಸರುಗಳಿವೆ. ಅದರಲ್ಲಿ ಧೋನಿಯದೂ ಒಂದು. ದೀಪಿಕಾ ಪಡುಕೋಣೆ 'ಕ್ಯಾಪ್ಟನ್ ಕೂಲ್' ಜತೆ ಡೇಟಿಂಗ್ ಮಾಡಿದ್ದು ತುಂಬ ಹಿಂದೆ. 2007ರಲ್ಲಿ ಅವರ ಸಂಬಂಧದ ವದಂತಿಗಳು ಉತ್ತುಂಗಕ್ಕೇರಿದ್ದವು. ಧೋನಿ ಅವರು ದೀಪಿಕಾ ಮೇಲೆ ಅಪಾರವಾದ ಕ್ರಶ್ ಹೊಂದಿರುವುದನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಅವರು ದೀಪಿಕಾ ಅಭಿನಯದ 'ಓಂ ಶಾಂತಿ ಓಂ' ಚಿತ್ರದ ವಿಶೇಷ ಪ್ರದರ್ಶನಕ್ಕೆ ವಿನಂತಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯವನ್ನು ವೀಕ್ಷಿಸಲು ಅವರನ್ನು ಪರ್ಸನಲ್ಲಾಗಿ ಆಹ್ವಾನಿಸಿದ್ದರು. ದೀಪಿಕಾ ಧೋನಿಯ ಆಹ್ವಾನವನ್ನು ಸ್ವೀಕರಿಸಿ ಹೋಗಿದ್ದು ಇದೆ. ಸ್ಟೇಡಿಯಂ ಸ್ಟ್ಯಾಂಡ್‌ಗಳಿಂದ ಧೋನಿ ಮತ್ತು ಟೀಮ್ ಇಂಡಿಯಾವನ್ನು ಹುರಿದುಂಬಿಸುತ್ತಿದ್ದರು. ಧೋನಿಯ ಟೀಂ T20 ವಿಶ್ವಕಪ್ ಗೆದ್ದ ನಂತರ ಮತ್ತು ದೀಪಿಕಾ ಅಭಿನಯದ 'ಓಂ ಶಾಂತಿ ಓಂ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೆಗಾಹಿಟ್ ಆದ ನಂತರ ಈ ಜೋಡಿಯ ಸಂಬಂಧವು ಗುಲ್ಲಾಯಿತು.
ಧೋನಿ ತಮ್ಮ ಪತ್ರಕರ್ತ ಸ್ನೇಹಿತರ ಜೊತೆ ದೀಪಿಕಾ ಬಗ್ಗೆ ಮಾತನಾಡಿದ್ದರು. ದೀಪಿಕಾ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದ್ದರಂತೆ. ಫರಾ ಖಾನ್ ಕೂಡ ಒಮ್ಮೆ ಧೋನಿಗೆ ಹಾಸ್ಯಮಯವಾಗಿ 'ದೀಪಿಕಾ ಅವರು ಕ್ರಿಕೆಟ್ ಅಭಿಮಾನಿಯೇ ಎಂದು ನೀವು ಯಾಕೆ ಕೇಳಬಾರದು?' ಎಂದಿದ್ದರು. ಮುಂದೆ ದೀಪಿಕಾ ಹಾಗೂ ಯುವರಾಜ್ ಸಿಂಗ್ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆಗ ಧೋನಿ- ದೀಪಿಕಾ ನಡುವಿನ ಆಕರ್ಷಣೆ ಮುರಿದು ಬಿತ್ತು. ಹಾಗಿದ್ದರೆ ದೀಪಿಕಾಳ ಬಾಳಿನಲ್ಲಿ ಬಂದ ಹಲವರಲ್ಲಿ ಒಬ್ಬರು ಧೋನಿ, ಇನ್ನೊಬ್ಬರು ಯುವಿ ಎಂಬುದರಲ್ಲಿ ಸಂಶಯವಿಲ್ಲ.
'ನೀವು ಇಂಡಿಯಾ ಕ್ಯಾಪ್ಟನ್ ಆಗಿರ್ಬಹುದು, ಹೆಂಡ್ತಿ ಮುಂದೆ ಅದ್ಯಾವುದು ಲೆಕ್ಕಕ್ಕಿಲ್ಲ..' ಅವಿವಾಹಿತರಿಗೆ ಧೋನಿ ಬಂಪರ್ ಟಿಪ್ಸ್!
ಅದು ಸರಿ, ವೈರಲ್ ವಿಡಿಯೋದಲ್ಲಿ ದೋನಿ ಹೇಳಿರುವುದೇನು? ಕಾಮೆಡಿಯನ್ ತನ್ಮಯ್ ಭಟ್ ಮತ್ತು ಫೈನಾನ್ಸ್ ಇನ್‌ಫ್ಲುಯೆನ್ಸರ್ ಶರನ್ ಹೆಗ್ಡೆ ಅವರೊಂದಿಗೆ ರಿಗಿ ಆಪ್ ಆಯೋಜಿಸಿದ್ದ ಪ್ರಭಾವ್ 2023 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಎಸ್ ಧೋನಿ, ತಮ್ಮ ಎದುರಿಗಿದ್ದ ಕೆಲವು ಅವಿವಾಹಿತ ಪುರುಷರಿಗೆ ಹಾಗೂ ಪ್ರೇಕ್ಷಕರಿಗೆ ಕೆಲವು ಬಂಪರ್ ಟಿಪ್ಸ್‌ಗಳನ್ನು ನೀಡಿದರು, 'ಒಂದು ಹುಡುಗಿಯೊಂದಿಗೆ ನೀವು ಜೀವಮಾನ ಪೂರ್ತಿ ಖುಷಿಯಾಗಿರಬಹುದು ನಿಮಗೆ ಅನಿಸಿದರೆ, ಖಂಡಿತವಾಗಿ ಮದುವೆಯಾಗಿ,' ಎಂದರು ಧೋನಿ.
'ನನಗೆ ಅನಿಸೋದೇನೆಂದರೆ, ಪುರುಷರ ಜೀವನದಲ್ಲಿ ಮಸಾಲಾ ಏನಾದರೂ ಬರೋದಿದ್ದರೆ ಅದು ಹೆಂಡತಿ ಬಳಿಕ ಮಾತ್ರ. ಆಕೆ ಬಂದ ಬಳಿಕವೇ ನಮ್ಮ ಜೀವನ ಸಾಗುತ್ತದೆ. ನೀವು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿರಬಹುದು ಅಥವಾ ಮಾಜಿ ಕ್ಯಾಪ್ಟನ್ ಆಗಿರಬಹುದು. ಅವರ ಮುಂದೆ ಇದ್ಯಾವುದು ಲೆಕ್ಕಕ್ಕೆ ಬರೋದಿಲ್ಲ,' ಎಂದು ಎಂಎಸ್ ಧೋನಿ ತಮ್ಮ ಜೀವನದಲ್ಲೂ ಕೆಲ ವಿಚಾರದಲ್ಲಿ ಹೆಂಡತಿಯೇ ಬಾಸ್ ಎಂದು ತಿಳಿಸಿದ್ದಾರೆ.
'ನಿಮ್ಮ ಮನೆಯಲ್ಲಿ ನಿಮಗೆ ಒಂದು ಸ್ಥಾನ ಅಂತಾ ಇರುತ್ತದೆ. ಆದರೆ, ಅದೂ ಕೂಡ ನಿಮ್ಮ ಆಯ್ಕೆ ಆಗಿರೋದಿಲ್ಲ. ಸಾಮಾನ್ಯವಾಗಿ ಪತ್ನಿ ತನಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಿರುತ್ತಾರೆ. ಆದರೆ, ಅದು ಗಂಡನದೇ ನಿರ್ಧಾರ ಎನ್ನುವಂತೆ ಬಿಂಬಿಸಿರುತ್ತಾರೆ,' ಎನ್ನುವುದನ್ನು ತಮಾಷೆಯಾಗಿ ಒಪ್ಪಿಕೊಂಡರು. 'ಜೀವನ ಅನ್ನೋದು ಅಸ್ತವ್ಯಸ್ತವಾಗಿರುತ್ತದೆ. ಆದರೆ, ನಿಮ್ಮ ಮನೆಯಲ್ಲಿ ಒಬ್ಬರು ಟ್ರೇನರ್ ಇರುತ್ತಾರೆ. ಜೀವನದಲ್ಲಿ ಇಂಥ ಅಸ್ತವ್ಯಸ್ಥಗಳನ್ನು ಹೇಗೆ ನಿಯಂತ್ರಣ ಮಾಡಬೇಕು ಎನ್ನುವ ನಿಟ್ಟಿನಲ್ಲಿಯೇ ಮನೆಯಲ್ಲಿಯೇ ಅಂತಾ ವಾತಾವರಣ ಕ್ರಿಯೇಟ್ ಮಾಡಿ ತರಬೇತಿ ನೀಡುತ್ತಾರೆ,' ಎಂದು ಹಾಸ್ಯ ಚಟಾಕಿ ಹಾರಿಸಿದರು ಧೋನಿ.
ರಣವೀರ್ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್ ಬಗ್ಗೆ ಹೀಗ್ ಹೇಳೋದಾ? ಕಿಡಿಕಿಡಿಯಾದ ಪತಿರಾಯ!