
ತಮಿಳು ಚಿತ್ರರಂಗದ ಜನಪ್ರಿಯ ನಟ ರಘು ಬಾಲಯ್ಯ ನವೆಂಬರ್ 2ರಂದು ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ. ಜ್ಯೂನಿಯರ್ ಬಾಲಯ್ಯ ಎಂದೇ ಜನಪ್ರಿಯತೆ ಪಡೆದಿದ್ದ ನಟ ಚೆನ್ನೈನ ವಲಸರವಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. 70 ವರ್ಷ ಬಾಲಯ್ಯ ಹಿರಿಯ ನಟ ಟಿಎಸ್ ಬಾಲಯ್ಯ ಅವರ ಪುತ್ರ.
ರಘು ಬಾಲಯ್ಯ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಂಜೆ ಅಂತಿ ವಿಧಿ ವಿಧಾನಗಳು ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ತಾರೆಯರು ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಸೀರಿಯಲ್ ಒಂದೇ ಅನ್ನ ಹಾಕಿಲ್ಲ; ವಿನಯ್ ಗೌಡ ದುರಹಂಕಾರಕ್ಕೆ ಬ್ರೇಕ್ ಹಾಕುವಂತೆ ನೆಟ್ಟಿಗರಿಂದ ಒತ್ತಾಯ!
1975ರಲ್ಲಿ ಮೇಲ್ನಾಟ್ಟು ಮರುಮಗಳು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ರಘು ಬಾಲಯ್ಯ ಎಂಟ್ರಿ ಕೊಟ್ಟರು. ಕರಗಟ್ಟಕಾರನ್, ಸುಂದರ ಕಾಂಡಂ, ವಿಜೇತ ಮತ್ತು ಸಾತ್ತೈ ಸಿನಿಮಾಗಳಲ್ಲಿ ರಘು ಮಾಡಿರುವ ಪಾತ್ರ ಜನರ ಗಮನ ಸೆಳೆದಿದೆ. ಸಿನಿಮಾ ಮಾತ್ರವಲ್ಲದೆ 'ಚಿತಿ', 'ವಾಝ್ಕೈ' ಮತ್ತು 'ಚಿನ್ನ ಪಾಪ ಪೆರಿಯ ಪಾಪಾ' ಸೀರಿಯಲ್‌ಗಳಲ್ಲಿ ಬಾಲಯ್ಯ ನಟಿಸಿದ್ದಾರೆ.
ಅಜಿತ್ ನಟನೆಯ ನೇರಕೊಂಡ ಸಿನಿಮಾದಲ್ಲಿ ಜೂನಿಯರ್ ಬಾಲಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಯೆನ್ನಂಗ ಸರ್ ಉಂಗಾ ಸತ್ತ್ ಬಾಲಯ್ಯ ನಟಿಸಿರುವ ಕೊನೆಯ ಸಿನಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.