ಆ ಫಿಲಂಗಳಲ್ಲಿ ಕಾಣಿಸೋದೆಲ್ಲ ನಿಜವಾ? ಸ್ಟಾರ್‌ಗಳು ಹೇಳೋದೇನು?

By Bhavani Bhat  |  First Published Jan 4, 2025, 8:20 PM IST

ಅಡಲ್ಟ್‌ ಫಿಲಂ ಇಂಡಸ್ಟ್ರಿ ಎಂಬುದು ಯಾವುದೇ ದೇಶದ ಬಾಲಿವುಡ್‌ ಹಾಲಿವುಡ್‌ಗಳಿಗಿಂತ ಬಹು ದೊಡ್ಡದಾದ, ಬಿಲಿಯನ್‌ ಬಿಲಿಯನ್‌ ವ್ಯಾಪಾರ ನಡೆಸುವ ಉದ್ಯಮ. ಈ ಫಿಲಂಗಳಲ್ಲಿ ಕಾಣುವುದೆಲ್ಲ ನಿಜವೆಂದೇ ನಂಬುವವರಿದ್ದಾರೆ. ಪೋರ್ನ್‌ ಫಿಲಂಗಳ ಸತ್ಯ- ಮಿಥ್ಯ ಇಲ್ಲಿದೆ.  
 


ಇಂಟರ್‌ನೆಟ್‌ನಲ್ಲೋ, ಗೆಳೆಯರ ಜತೆಗೋ ಕದ್ದು ನೋಡುವಾಗ ಬ್ಲೂಫಿಲಂಗಳು ಮಜಾ ಕೊಡಬಹುದು, ಮೈಬಿಸಿ ಮಾಡಬಹುದು. ಆದರೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರೇನೂ ಅದನ್ನು ಎಂಜಾಯ್ ಮಾಡುತ್ತಿರುವುದಿಲ್ಲ. ನೀಲಿಚಿತ್ರಗಳ ಬಗ್ಗೆ ನಾವು ಅಂದುಕೊಂಡಿರುವುದು ಮಿಥ್ಯ, ಇರುವ ಸತ್ಯವೇ ಬೇರೆ. ಇವು ಇಂಡಸ್ಟ್ರಿಯೊಳಗಿನ ಸ್ಟಾರ್‌ಗಳೇ ಬಿಚ್ಚಿಟ್ಟ ಸತ್ಯಗಳು. ಅವುಗಳು ಏನಂತ ನೋಡೋಣ ಬನ್ನಿ. 

1) ಅಷ್ಟೊಂದು ಹೊತ್ತಾ ?

Tap to resize

Latest Videos

ಇಲ್ಲ ಬಿಡಿ, ಯಾರಿಂದಲೂ ಅಷ್ಟೆಲ್ಲ ಹೊತ್ತು ಆ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಬ್ಲೂಫಿಲಂಗಳೇನೋ ಗಂಟೆಗಟ್ಟಲೆ ಇರುತ್ತವೆ. ಆದರೆ ಅವೆಲ್ಲ ಜೋಡಿಸಿದ ತುಣುಕುಗಳು. ಕಾಣಿಸುವುದೆಲ್ಲ ನಿಜವೆಂದು ನಂಬುವ ಗಂಡಸರು, ತಮ್ಮ ಸಾಮರ್ಥ್ಯ ಮೂರೇ ನಿಮಿಷವಾ ಎಂದು ಕೊರಗುವುದೂ ಇದೆ. ಯಾವ ಪುರುಷನೂ ಅಷ್ಟೆಲ್ಲ ಹೊತ್ತು ತನ್ನ ಉದ್ರೇಕವನ್ನು ಕಾಪಾಡಿಕೊಳ್ಳಲಾರ. ಅದರಲ್ಲೂ, ಹತ್ತಾರು ಮಂದಿ ಉಜ್ವಲ ಬೆಳಕಿನಲ್ಲಿ ಶೂಟಿಂಗ್ ಮಾಡುತ್ತಿರುವಾಗ, ಮಹಿಳೆ ಕೂಡ ಈ ಕ್ರಿಯೆಯನ್ನು ಸುಖಿಸುವುದಿಲ್ಲ. ರೈಲ್ವೆ ಕೂಲಿ ನಮ್ಮ ಸಾಮಗ್ರಿ ಹೊರುತ್ತಾನಲ್ಲ, ಹಾಗೆಯೇ ಆ ತಾರೆಯೂ ತನ್ನ ಮೇಲೆ ಒಬ್ಬನೋ ಇಬ್ಬರೋ ಪುರುಷರನ್ನು ಹೊರುತ್ತಾಳಷ್ಟೇ.

2) ಅಸುರಕ್ಷಿತ ರತಿ

ಇವನ್ನು ತಯಾರಿಸುವವರಲ್ಲಿ ಯಾರೂ ನಟರು ಕಾಂಡೋಮ್ ಧರಿಸಬೇಕೆಂದು ಕಡ್ಡಾಯ ಮಾಡುವುದಿಲ್ಲ, ಕಾಂಡೋಮ್ ಚಿತ್ರಗಳಿಗೆ ಅಂಥ ಬೇಡಿಕೆಯೂ ಇಲ್ಲ. ಎಲ್ಲವೂ ಹಸಿಹಸಿಯಾಗಿದ್ದರೇನೇ ಡಿಮ್ಯಾಂಡ್. ಪುರುಷ ಕಾಂಡೋಮ್ ತೊಡಲೇಬೇಕೆಂದು ಹಠ ಮಾಡುವ ನಾರಿಯರಿಗೆ ಮುಂದಿನ ಚಿತ್ರದಲ್ಲಿ ಅವಕಾಶ ಸಿಗುವುದಿಲ್ಲ. ಹೀಗಾಗಿ ಈ ಲೋಕದಲ್ಲಿ ಲೈಂಗಿಕ ರೋಗಗಳು ಧಾರಾಳ.

3) ಕಲಾಪ ವಿಲಾಪ

ಅಷ್ಟೊಂದು ಮಂದಿಯ ಮುಂದೆ ಕಾಮಕಲಾಪ ನಡೆಸಲು ಹೇಗೆ ಸಾಧ್ಯವಾಗುತ್ತದೆ ? ಗಂಡಸರು ತಮ್ಮನ್ನು ಉದ್ರೇಕಿಸಿಕೊಳ್ಳಲು, ಉದ್ರೇಕ ಕಾಪಾಡಿಕೊಳ್ಳಲು ವಯಾಗ್ರ ಗುಳಿಗೆ, ಕೇವರೆಟ್ ಇಂಜೆಕ್ಷನ್ ಮೊರೆ ಹೋಗುತ್ತಾರೆ. ಮಹಿಳೆಯರು ಅಮಲು ಪದಾರ್ಥ ಸೇವಿಸಿ ಸಜ್ಜಾಗುತ್ತಾರೆ.

4) ದೇಹಕ್ಕೆ ದ್ರೋಹ

ಇಲ್ಲಿ ಕೆರಿಯರ್ ಸುಲಭ ಅಂತ ತುಂಬ ಮಂದಿಯ ಅನಿಸಿಕೆ. ಆದರೆ ಇಲ್ಲಿ ನಟಿಸಬಯಸುವವರು ಸುಂದರ, ಆರೋಗ್ಯಕರ ದೇಹ ಹೊಂದಿರಬೇಕು. ಹತ್ತಾರು ಮಂದಿಯ ಮುಂದೆ, ಕ್ಯಾಮೆರಾ ಕೋನಕ್ಕೆ ಹೊಂದುವಂತೆ, ಬೇರೆಬೇರೆ ಭಂಗಿಗಳಲ್ಲಿ, ಅಸಹ್ಯವೆಂದು ಪರಿಗಣಿಸಲಾಗುವ ರೀತಿಯಲ್ಲಿ, ನೋಡಿದವರಿಗೆ ಪ್ರಚೋದಕವೆನ್ನಿಸುವಂತೆ ಆ ಕ್ರಿಯೆ ನಡೆಸುವ ತಾಕತ್ತು, ನಿರ್ಲಿಪ್ತಿ ಹೊಂದಿರಬೇಕು. ಕೃತಕ ಹಾರ್ಮೋನ್, ಇಂಜೆಕ್ಷನ್‌ಗಳ ಪ್ರಭಾವದಿಂದ ದೇಹ ಬೇಗನೆ ಕುಸಿಯುತ್ತದೆ.

5) ಸುಖ ಯಾರಿಗಿದೆ?

ಗಂಡಸಾಗಲೀ, ಹೆಂಗಸಾಗಲೀ, ಕ್ಯಾಮೆರಾದ ಮುಂದೆ ಅನುಭವಿಸುವ ಸುಖದ ಸ್ಥಿತಿ ಇದೆಯಲ್ಲ, ಅದೆಲ್ಲ ಸುಳ್ಳು. ಅದು ನಟನೆ ಅಷ್ಟೇ. ತಾನು ಇಷ್ಟವೇ ಪಡದ, ಹಗಲಲ್ಲಿ ಕಂಡರೆ ಕ್ಯಾಕರಿಸುವ ವ್ಯಕ್ತಿಯ ಜತೆ ಮಲಗಿದರೂ ಆತ/ಆಕೆ ಬ್ರಹ್ಮಾನಂದವನ್ನೇ ನಟಿಸಬೇಕು! 

ನಟಿ ಕಿಯಾರಾ ಅಡ್ವಾಣಿ ಆಸ್ಪತ್ರೆಗೆ ದಾಖಲಾಗಿದ್ದಾರಾ? ಗೇಮ್ ಚೇಂಜರ್ ಪ್ರಚಾರಗಳಿಂದ ದೂರ ಇರೋದ್ಯಾಕೆ?

6) ಏಡ್ಸ್‌ ಎಂಬ ಮಾರಿ 

ಪೋರ್ನ್ ಸ್ಟಾರ್‌ಗಳಿಗೂ ಏಡ್ಸ್ ರೋಗಕ್ಕೂ ನಿಕಟ ಸಂಬಂಧ. ಇಂಡಸ್ಟ್ರಿಗೆ ಇಂದಿಗೂ ಆತಂಕಕಾರಿಯಾಗಿರುವುದು ಏಡ್ಸ್, ಒಮ್ಮೆ ಬಂತು ಎಂಬುದು ಗೊತ್ತಾದರೆ ಆ ತಾರೆಯ ಕೆರಿಯರ್ ಗೋತಾ, ಇಲ್ಲಿ ನಟಿಸುವವರಿಗೆ ಏಡ್ಸ್‌ ಪರಿಶೀಲನೆ ಕಡ್ಡಾಯ. ಪೋರ್ನ್ ಉದ್ಯಮಕ್ಕೆಂದೇ ಹಾಲಿವುಡ್ ರೀತಿ ಹಲವಾರು ಸ್ಟುಡಿಯೋಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಈ ಸ್ಟುಡಿಯೋಗಳಲ್ಲಿ ಪೋರ್ನ್ ಚಿತ್ರೀಕರಣ ನಡೆಯುತ್ತದೆ. ಸ್ಟುಡಿಯೋಗಳ ಸನಿಹದಲ್ಲೇ ಸ್ಟಾರ್‌ಗಳ ಆರೋಗ್ಯ ಪರೀಕ್ಷೆ, ಏಡ್ಸ್‌ ಚೆಕ್‌ ಮಾಡುವ ಸೌಲಭ್ಯಗಳಿರುತ್ತವೆ. ಚಿತ್ರೀಕರಣಕ್ಕೂ ಮುನ್ನ ಪರೀಕ್ಷಿಸಿಕೊಂಡು ಏಡ್ಸ್ ರಹಿತ ಎಂಬ ಪ್ರಮಾಣಪತ್ರ ಪಡೆಯಬೇಕು. 30 ದಿನಗಳಿಗೊಮ್ಮೆ ಸ್ಟಾರ್‌ಗಳು ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಏಡ್ಸ್‌ ಇದ್ದರೆ ಇಂಡಸ್ಟ್ರಿಯಿಂದಲೇ ಗೇಟ್‌ ಪಾಸ್.

ಚಿರಂಜೀವಿ ಎಂದರೆ ಇಷ್ಟವಿದ್ದ ಬಾಲಯ್ಯ ಮಗಳಿಗೆ ಸ್ಟಾರ್ ಡೈರೆಕ್ಟರ್‌ ಸಿನೆಮಾ ಆಫರ್ ಬಂದರೂ ತಿರಸ್ಕರಿಸಿದ್ಯಾಕೆ?
 

click me!