ಸೈಕ್ಲೋನ್ ತೌಕ್ಟೆಯಿಂದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ಗೆ ಖಿನ್ನತೆ

By Suvarna NewsFirst Published May 23, 2021, 11:32 AM IST
Highlights
  • ಸೈಕ್ಲೋನ್ ತೌಕ್ಟೆಯಿಂದ ಖಿನ್ನತೆ ಅನುಭವಿಸ್ತಿದ್ದಾರೆ ಬಾಲಿವುಡ್ ನಿರ್ಮಾಪಕ
  • ಶ್ರೀದೇವಿ ಪತಿ ಬೋನಿ ಕಪೂರ್ ನೆಮ್ಮದಿ ಕೆಡಿಸಿದ ಸೈಕ್ಲೋನ್

ತೌಕ್ಟೇ ಚಂಡಮಾರುತವು ಭಾರೀ ಗಾಳಿ ಮತ್ತು ಮಳೆಯಿಂದ ದೇಶದ ಪಶ್ಚಿಮ ಕರಾವಳಿಯನ್ನು ಧ್ವಂಸಗೊಳಿಸಿದೆ. ಅಜಯ್ ದೇವ್‌ಗನ್ ಅಭಿನಯದ ಮೈದಾನ್ ಸಿನಿಮಾ ಸೆಟ್ ಅನ್ನು ಮುಂಬೈನಲ್ಲಿ ನಿರ್ಮಿಸಿದ ನಿರ್ಮಾಪಕ ಬೋನಿ ಕಪೂರ್, ಕಳೆದ ವರ್ಷ ರಾಷ್ಟ್ರೀಯ ಲಾಕ್‌ಡೌನ್ ನಂತರ ಚಿತ್ರದ ಚಿತ್ರೀಕರಣ ನಡೆಯಬೇಕಾಗಿದ್ದ ಸೆಟ್ ಕೆಡವಬೇಕಾಗಿ ಬಂದಿತ್ತು. ಈಗ ಮತ್ತೊಮ್ಮೆ ಚಂಡಮಾರುತವು ಸೆಟ್‌ಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ. ಪರಿಣಾಮ ಬೋನಿ ಮೂರನೇ ಬಾರಿಗೆ ಸೆಟ್ ನಿರ್ಮಿಸಬೇಕಾದ ಅನಿವಾರ್ಯತೆ ಬಂದಿದೆ.

ಈಗ ಚಂಡಮಾರುತದಿಂದಾಗಿ ನಾನು ಮೂರನೆಯ ಬಾರಿಗೆ ಸೆಟ್ ನಿರ್ಮಿಸಬೇಕಾಗಿದೆ ಎಂದು ಹೇಳಿದ್ದಾರೆ ಬೋನಿ ಕಪೂರ್. ನಾನು ಅದನ್ನು ನೆನಪಿಸಲು ಬಯಸುವುದಿಲ್ಲ. ನಾನು ಒತ್ತಡ ಅಥವಾ ನಷ್ಟದ ಬಗ್ಗೆ ಯೋಚಿಸಿದರೆ ಅಳಲು ಪ್ರಾರಂಭಿಸುತ್ತೇನೆ. ಬಜೆಟ್ ಓವರ್‌ಶೂಟಿಂಗ್ ಮತ್ತು ಖರ್ಚುಗಳ ಬಗ್ಗೆ ನಾನು ಯೋಚಿಸಿದರೆ, ನಾನು ಖಿನ್ನತೆಗೆ ಒಳಗಾಗಬಹುದು ಎಂದಿದ್ದಾರೆ ಬೋನಿ ಕಪೂರ್.

ತನ್ನ ಅಮ್ಮನ ಬಿಟ್ಟು ನಟಿ ಶ್ರೀದೇವಿಯನ್ನು ಮದುವೆಯಾದ ತಂದೆ: ನಟ ಅರ್ಜುನ್ ಹೇಳಿದ್ದಿಷ್ಟು..!

ನಾನು ಪಾಸಿಟಿವ್ ಆಗಿ ಉಳಿಯುವುದು ಮತ್ತು ಸಕಾರಾತ್ಮಕವಾಗಿ ಯೋಚಿಸುವುದು ಅಗತ್ಯ. ಅದೃಷ್ಟವಶಾತ್, ದೇವರಿಗೆ ಧನ್ಯವಾದಗಳು, ಯಾವುದೇ ಅಪಘಾತ ಸಂಭವಿಸಿಲ್ಲ ಮತ್ತು ಯಾರೂ ಗಾಯಗೊಂಡಿಲ್ಲ. ಅದೃಷ್ಟವಶಾತ್ ಸೆಟ್ನಲ್ಲಿದ್ದ ಎಲ್ಲ 40-50 ಜನರು ಹುಷಾರಾಗಿದ್ದರು. ಯಾರಿಗಾದರೂ ಏನಾದರೂ ಸಂಭವಿಸಿದ್ದರೆ ಅದು ಕೆಟ್ಟದಾಗಿರುತ್ತಿತ್ತು ಎಂದಿದ್ದಾರೆ.

ಅವರು ಈ ವರ್ಷ ಸೆಟ್ ನಿರ್ಮಿಸಿದಾಗ, ಅವರು ಸಿನಿಮಾಗಾಗಿ 50% ಚಿತ್ರೀಕರಿಸಲು ಸಾಧ್ಯವಾಯಿತು. ನಂತರ ಲಾಕ್ ಡೌನ್ ಘೋಷಿಸಲಾಯಿತು. ಈಗ ಅವರು 20 ದಿನಗಳವರೆಗೆ ಶೂಟ್ ಮಾಡಬೇಕಾಗಿದೆ ಮತ್ತು ಚಿತ್ರೀಕರಿಸಲು ನಿರ್ದಿಷ್ಟ ಸೆಟ್‌ಗಳ ಅಗತ್ಯವಿದೆ.

"ಕಳೆದ ವರ್ಷ ನಾವು ಸೆಟ್ ಕಳಚಿದಾಗ ವಸ್ತುಗಳನ್ನು ಮರುಬಳಕೆ ಮಾಡಬಹುದಾಗಿತ್ತು. ಆದರೆ ಚಂಡಮಾರುತದಲ್ಲಿ ವಿನಾಶದ ನಂತರ, ಯಾವುದನ್ನೂ ರಕ್ಷಿಸಲಾಗುವುದಿಲ್ಲ. ನಾನು ಎಂಟು ಮೇಕಪ್ ಕೊಠಡಿಗಳು, 26 ಸ್ನಾನಗೃಹಗಳು, ವಿಭಿನ್ನ ಸೆಟ್‌ಗಳನ್ನು ಹೊಂದಿದ್ದೆ. ಆದರೆ ಅದರಲ್ಲಿ ಹೆಚ್ಚಿನವು ಕಳೆದುಹೋಗಿವೆ ಎಂದಿದ್ದಾರೆ ಬೋನಿ.

ಚಿತ್ರಮಂದಿರಗಳು ಮುಚ್ಚುವುದರಿಂದ ಹಲವಾರು ಸಿನಿಮಾ ಬಿಡುಗಡೆಯಾಗದೆ ನಿರ್ಮಾಪಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ ಕಪೂರ್. ನಾನು ಇದೀಗ ಉದ್ಯಮದಲ್ಲಿ ಹೆಚ್ಚು ಪ್ರಭಾವಿತ ವ್ಯಕ್ತಿಯಾಗಿರಬಹುದು. ಆದರೆ ಮೂರನೆಯ ಬಾರಿಗೆ ಒಂದು ಸೆಟ್ ಅನ್ನು ಹಾಕಬೇಕಾಗಿದೆ. ನನ್ನ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ. ಅವರು ಥಿಯೇಟರ್ ತೆರೆಯಲು ನಾನು ಕಾಯುತ್ತಿದ್ದೇನೆ ಎಂದಿದ್ದಾರೆ ಹಿರಿಯ ನಿರ್ಮಾಪಕ.

click me!