
ಮುಂಬೈ (ಮೇ 22) ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಗಂಡು ಮಗುವಿನ ತಾಯಿಯಾಗಿದ್ದಾರೆ. ಗಾಯಕಿ ಸೋಶಿಯಲ್ ಮೀಡಿಯಾ ಮೂಲಕ ಸಂಭ್ರಮವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಶಿಲಾದಿತ್ಯ ಹಾಗೂ ಶ್ರೇಯಾ ಘೋಷಾಲ್ ದಂಪತಿಗೆ ಶನಿವಾರ ಮಧ್ಯಾಹ್ನ ಗಂಡು ಮಗು ಜನಿಸಿದ್ದು ಇದನ್ನು ಗಾಯಕಿ ಶ್ರೇಯಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನವಜಾತ ಶಿಶುಗಳು ಮಾಡುವ ವಿಲಕ್ಷಣ ಕೆಲಸಗಳಿವು
ಭಗವಂತ ನನಗೆ ಇಂದು ಗಂಡು ಮಗುವನ್ನು ಆಶೀರ್ವದಿಸಿದ್ದಾನೆ. ಹಿಂದೆಂದೂ ಇಂತಹ ಭಾವನೆಯನ್ನು ಅನುಭವಿಸಿರಲಿಲ್ಲ. ನನ್ನ ಪತಿ ಶೀಲಾದಿತ್ಯ ಹಾಗೂ ಕುಟುಂಬಸ್ಥರು ಸಂತೋಷಗೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ.
2015ರ ಫೆಬ್ರವರಿಯಲ್ಲಿ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ದಾಂಪತ್ಯ ಆರಂಭಿಸಿದ್ದರು. ಗಾಯಕಿ ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಅವರ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು ದಾಂಪತ್ಯಕ್ಕೆ ಕಾಲಿಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.