ಸೂಪರ್ ಮಾರ್ಕೆಟ್‌ಗೆ ಹೋಗಿ ರಶ್ಮಿಕಾ ಮಂದಣ್ಣ ಕದ್ದಿದ್ದು ಏನನ್ನು?

By Roopa Hegde  |  First Published Dec 9, 2024, 5:07 PM IST

ನಟಿ ರಶ್ಮಿಕಾ ಮಂದಣ್ಣ ಕಾಲೇಜು ಜೀವನವನ್ನು ಸಾಕಷ್ಟು ಎಂಜಾಯ್ ಮಾಡಿದ್ದಾರೆ. ಅವರು ತಮ್ಮ ಸ್ನೇಹಿತೆ ಜೊತೆ ಸೂಪರ್ ಮಾರ್ಕೆಟ್ನಲ್ಲಿ ವಸ್ತುವೊಂದನ್ನು ಕದ್ದಿದ್ದರು. ಅದು ಯಾವುದು ಅಂತ ರಶ್ಮಿಕಾ ಹೇಳಿದ್ದಾರೆ.
 


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna), ಒಂದಾದ್ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡೋದ್ರಲ್ಲಿ ಬ್ಯುಸಿಯಿದ್ದಾರೆ. ಪುಷ್ಪ 2 (Pushpa 2) ನಂತ್ರ ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ಅಭಿನಯದ ಗರ್ಲ್ ಫ್ರೆಂಡ್ ಟೀಸರ್, ಸೋಶಿಯಲ್ ಮೀಡಿಯಾದಲ್ಲಿ ಧಮಾಲ್ ಮಾಡ್ತಿದೆ. ಇವರಿಬ್ಬರ ಜೋಡಿಯನ್ನು ಫ್ಯಾನ್ಸ್ ಒಪ್ಕೊಂಡಿದ್ದಾರೆ. ಸಿನಿಮಾ ಒಂದ್ಕಡೆಯಾದ್ರೆ ರಶ್ಮಿಕಾ ಪರ್ಸನಲ್ ಲೈಫ್ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗ್ಲೂ ಆಸಕ್ತರಾಗಿರ್ತಾರೆ. ರಶ್ಮಿಕಾ ಏನು ತಿನ್ನುತ್ತಾರೆ ಅನ್ನೋದ್ರಿಂದ ಹಿಡಿದು, ಅವರ ಫ್ರೆಂಡ್ಸ್, ಫ್ಯಾಮಿಲಿ, ಕಾಲೇಜ್ ಲೈಫ್ ಸೇರಿದಂತೆ ಪ್ರತಿಯೊಂದನ್ನು ತಿಳಿದುಕೊಳ್ಳುವ ಆಸಕ್ತಿ ಫ್ಯಾನ್ಸ್ ಗಿದೆ. ಹಾಗಾಗಿಯೇ ರಶ್ಮಿಕಾ ಅವರ ಹಳೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ, ತಮ್ಮ ಜೀವನದಲ್ಲಿ ನಡೆದ ಕ್ರೇಜಿ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ರಶ್ಮಿಕಾ ಮಂದಣ್ಣ ಆಪ್ತ ಸ್ನೇಹಿತೆ ಹಾಗೂ ತೆಲುಗು ಬಿಗ್ ಬಾಸ್ 8ರ ಫೈನಲಿಸ್ಟ್  ನಟಿ, ಪ್ರೇರಣಾ (Telugu Bigg Boss 8 finalist actress, Prerana) ವೇದಿಕೆ ಮೇಲಿದ್ದಾರೆ. ಅಕುಲ್ ಬಾಲಾಜಿ ಮುಂದೆ ರಶ್ಮಿಕಾ ಆಸಕ್ತಿಕರ ವಿಷ್ಯಗಳನ್ನು ಹೇಳ್ತಿದ್ದಾರೆ. 

Tap to resize

Latest Videos

ರಶ್ಮಿಕಾ ಮಂದಣ್ಣ ಮಾಡಿದ ಕ್ರೇಜಿಯಸ್ಟ್ ಕೆಲಸ ಏನು? : ಕಾರ್ಯಕ್ರಮದಲ್ಲಿ ಪ್ರೇರಣಾ, ರಶ್ಮಿಕಾಗೆ, ಲೈಫ್ನಲ್ಲಿ ಮಾಡಿದ ಕ್ರೇಜಿಯಸ್ಟ್ ಕೆಲಸ ಏನು ಎನ್ನುತ್ತಾರೆ. ಅದಕ್ಕೆ ಉತ್ತರಿಸುವ ರಶ್ಮಿಕಾ, ರಾತ್ರಿ ಒಂದು ಗಂಟೆಗೆ ಸೀರೆಯುಟ್ಟು, ಬೈಕ್ ತುಂಬಾ ಸೂಟ್ಗೇಸ್ ಇಟ್ಕೊಂಡು ಊರು ಸುತ್ತಿದ್ವಿ. ಆದ್ರೆ ಎಲ್ಲಿಗೆ ಹೋಗ್ತಿದ್ದೇವೆ ಎಂಬ ಕ್ಲಾರಿಟಿ ಇರಲಿಲ್ಲ. ದಾರಿ ಗೊತ್ತಿರಲಿಲ್ಲ ಎಂದಿದ್ದಾರೆ. 

ವೈಷ್ಣವ್ ಗೆ ಜ್ಞಾನೋದಯವಾಯ್ತಾ? ಅಮ್ಮನ ಮೇಲೆ ಕೂಗಾಡ್ತಿರೋದು ಕನಸಾ, ನನಸಾ?

ಸೂಪರ್ ಮಾರ್ಕೆಟ್ನಲ್ಲಿ ರಶ್ಮಿಕಾ ಮಂದಣ್ಣ ಈ ವಸ್ತು ಕದ್ರು! : ಕಾರ್ಯಕ್ರಮದಲ್ಲಿ ಪ್ರೇರಣಾ, ಸೂಪರ್ ಮಾರ್ಕೆಟ್ನಲ್ಲಿ ಚಾಕೋಲೇಟ್ ಕದ್ದಿದ್ದು ನೆನಪಿದ್ಯಾ ಅಂತಾರೆ. ಅದಕ್ಕೆ ಉತ್ತರಿಸುವ ರಶ್ಮಿಕಾ ಮಂದಣ್ಣ, ಚಾಕೋಲೇಟ್ ಅಲ್ಲ, ಆರೆಂಜ್ ಎನ್ನುತ್ತಾರೆ. ಮತ್ತೆ ಅದನ್ನು ವಾಪಸ್ ಕೊಟ್ಟು, ಸೆಕ್ಯೂರಿಟಿ ಇರ್ಲಿಲ್ಲ, ಅದು ಇದು ಅಂಥೆಲ್ಲ ಹೇಳಿ ಬಂದಿದ್ವಿ ಎಂದು ರಶ್ಮಿಕಾ ಕಾರ್ಯಕ್ರಮದಲ್ಲಿ ತಮ್ಮ ಗುಟ್ಟನ್ನು ಬಯಲು ಮಾಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಹಾಗೂ ಪ್ರೇರಣಾ ರೂಮ್ ಮೇಟ್. ಈ ಹಿಂದೆಯೇ ಪ್ರೇರಣಾ ಈ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಇಬ್ಬರು ಒಳ್ಳೆ ಸ್ನೇಹಿತರೂ ಹೌದು. ಆದ್ರೆ ರಶ್ಮಿಕಾ ಸ್ಟಾರ್ ನಟಿಯಾಗಿರುವ ಕಾರಣ ಅವರ ಜೊತೆ ಹೆಚ್ಚು ಒಟನಾಟ ಇಟ್ಕೊಂಡಿಲ್ಲವಂತೆ ಪ್ರೇರಣಾ. ಹೈದ್ರಾಬಾದ್ನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದ ಪ್ರೇರಣಾ ಈಗ ಬಿಗ್ ಬಾಸ್ 8ರಲ್ಲಿ ಮಿಂಚುತ್ತಿದ್ದಾರೆ. ಬಿಗ್ ಬಾಸ್ ನಾಲ್ಕನೇ ಫೈನಲಿಸ್ಟ್ ಆಗಿ ಪ್ರೇರಣಾ ಹೆಸರು ಕನ್ಫರ್ಮ್ ಆಗಿದೆ. ಮುಂದಿನ ವಾರ ಬಿಗ್ ಬಾಸ್ ವಿನ್ನರ್ ಯಾರು ಎಂಬುದು ಹೊರ ಬೀಳಲಿದೆ. ಈಗಾಗಲೇ ಫೈನಲ್ ವೀಕ್ ವೋಟಿಂಗ್ ಶುರುವಾಗಿದ್ದು, ಪ್ರೇರಣಾಅಭಿಮಾನಿಗಳು ವೋಟಿಂಗ್ ಶುರು ಮಾಡಿದ್ದಾರೆ. 

ತೆಲುಗು ಬಿಗ್ ಬಾಸ್ ಫೈನಲ್ಸ್‌ಗೆ 5 ಮಂದಿ ಎಂಟ್ರಿ, ಇಬ್ಬರು ಕನ್ನಡಿಗರು!

ಇತ್ತ ರಶ್ಮಿಕಾ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಪುಷ್ಪಾ 2, ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿರುವಾಗ್ಲೇ, ರಶ್ಮಿಕಾ ತಮ್ಮ ಇನ್ನೊಂದು ಸಿನಿಮಾ ಪ್ರಚಾರ ಶುರು ಮಾಡಿದ್ದಾರೆ. ಗರ್ಲ್ ಫ್ರೆಂಡ್ ಟೀಸರ್ ಬಿಡುಗಡೆಯಾಗಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಹಂಚಿಕೊಂಡಿದ್ದಾರೆ. ಸಿಕಂದರ್, ಆನಿಮಲ್ 2 ಸೇರಿದಂತೆ ಇನ್ನೂ ಅನೇಕ ಸಿನಿಮಾ ರಶ್ಮಿಕಾ ಕೈನಲ್ಲಿದೆ. ಈವರೆಗೆ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ, ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದು, ಫ್ಯಾನ್ಸ್ ಗಮನ ಸೆಳೆಯೋದ್ರಲ್ಲಿ ಮುಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by NITTU.09 (@nittu.world)

click me!