
ನಟಿ ಹಾಗೂ ಮಾಡೆಲ್ ಯೋಗಿತಾ ರಾಥೋಡ್ ಬೆಂಗಳೂರಿನಲ್ಲಿ ನಡೆದ ಘಟನೆಯೊಂದನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಯೋಗಿತಾ ಕ್ಯಾಬ್ ಹತ್ತಿದ್ದಾರೆ. ಆದ್ರೆ ಬರ್ತೇನೆ ಅಂತ ನಿಲ್ಲಿಸಿ ಹೋದ ಕ್ಯಾಬ್ ಚಾಲಕ ಸ್ವಲ್ಪ ಸಮಯ ಬರಲಿಲ್ಲ. ಇದ್ರಿಂದ ಯೋಗಿತಾ ಟೆನ್ಷನ್ ಹೆಚ್ಚಾಗಿದೆ. ಆದ್ರೆ ಕೊನೆಗೂ ಬಂದ ಕ್ಯಾಬ್ ಡ್ರೈವರ್ ನೀಡಿದ ವಸ್ತು ನೋಡಿ ಯೋಗಿತಾ ಖುಷಿ ಆಗಿದ್ದಾರೆ. ಅತ್ಯಂತ ಸಂತೋಷದಿಂದ ಈ ವಿಡಿಯೋ ಮಾಡಿದ್ದಾರೆ.
ಯೋಗಿತಾ ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಆರಂಭದಲ್ಲಿಯೇ ಬೆಂಗಳೂರಿನಲ್ಲಿ ನಡೆದ ನಡೆದ ಘಟನೆಯೊಂದು ನನಗೆ ಖುಷಿ ನೀಡಿದೆ. ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಹೆವಿ ಶೂಟಿಂಗ್ ನಿಂದ ಯೋಗಿತಾ ತುಂಬಾ ಸುಸ್ತಾಗಿದ್ದರು. ಅವರಿಗೆ ಅಳು ಬರುವಷ್ಟಾಗಿತ್ತು. ಈ ಟೈಂನಲ್ಲಿ ಯೋಗಿತಾ ತಮ್ಮ ಸ್ನೇಹಿತೆಗೆ ಕಾಲ್ ಮಾಡಿದ್ದಾರೆ. ಶೂಟಿಂಗ್ ನಿಂದ ತುಂಬಾ ಸುಸ್ತಾಗಿದ್ದೇನೆ, ಹಸಿವಾಗಿದೆ ಎಂದಿದ್ದಾರೆ. ನನ್ನ ಫ್ಲೈಟ್ ಬೆಳಗಿನ ಜಾವ 2 ಗಂಟೆಗಿದೆ. ಬೆಂಗಳೂರಿ ವಿಮಾನ ನಿಲ್ದಾಣ ಸಿಕ್ಕಾಪಟ್ಟೆ ದೂರದಲ್ಲಿದೆ. ಹೇಗೆ ಏರ್ ಪೋರ್ಟ್ ಗೆ ಹೋಗೋದು, ಯಾವಾಗ ತಿಂಡಿ ತಿನ್ನೋದು ಅಂತ ತಮ್ಮ ನೋವನ್ನು ಸ್ನೇಹಿತೆಗೆ ಹೇಳಿದ್ದಾರೆ. ಈ ಟೈಂನಲ್ಲಿ ಯೋಗಿತಾ ಕ್ಯಾಬ್ ನಲ್ಲಿದ್ರು. ಯೋಗಿತಾ, ಮಾತನಾಡಿದ್ದನ್ನೆಲ್ಲ ಕ್ಯಾಬ್ ಡ್ರೈವರ್ ಕೇಳಿಸಿಕೊಂಡಿದ್ದಾರೆ. ಮೇಡಂ, ಎರಡು ನಿಮಿಷ ಇರಿ ಬರ್ತೇನೆ ಅಂತ ಕ್ಯಾಬ್ ನಿಲ್ಲಿಸಿ ಹೋಗಿದ್ದಾರೆ. ಸರಿ ಅಂತ ಯೋಗಿತಾ ಹೇಳಿದ್ದಾರೆ.
ನಟಿ Nayanthara ಹುಟ್ಟುಹಬ್ಬಕ್ಕೆ 10 ಕೋಟಿ ರೂ. Rolls-Royce ಕಾರು ಗಿಫ್ಟ್! ಏನಿದರ ವಿಶೇಷತೆ?
ಸ್ವಲ್ಪ ಸಮಯದ ನಂತ್ರ ಕ್ಯಾಬ್ ಡ್ರೈವರ್ ವಾಪಸ್ ಬಂದಿದ್ದಾರೆ. ಅವ್ರ ಕೈನಲ್ಲಿ ಸ್ಯಾಂಡ್ವಿಚ್ ಇತ್ತು. ಯೋಗಿತಾಗಾಗಿ ಕ್ಯಾಬ್ ಡ್ರೈವರ್ ಸ್ಯಾಂಡ್ ವಿಚ್ ಖರೀದಿ ಮಾಡಿ ತಂದಿದ್ದಾರೆ. ಇದನ್ನೂ ಯೋಗಿತಾ ವಿಡಿಯೋ ಮಾಡ್ಕೊಂಡಿದ್ದಾರೆ. ಸ್ಯಾಂಡ್ ವಿಚ್ ಪಡೆದ ಯೋಗಿತಾ, ಥ್ಯಾಂಕ್ಯೂ ಭಯ್ಯಾ ಅಂತಾರೆ. ಅದಕ್ಕೆ ಉತ್ತರವಾಗಿ, ತುಂಬಾ ಸಲ ಹಸಿವಾಗಿದೆ ಅಂತಿದ್ರಿ. ಇದು ನನಗೆ ಇಷ್ಟವಾಗ್ಲಿಲ್ಲ. ನನ್ನ ಸಹೋದರಿ ಹಸಿವಿನಲ್ಲಿದ್ರೆ ನನಗೆ ನೋವಾಗುತ್ತೆ. ನೀವು ವೆಚ್ ಹೇಳಿದ್ರಿಂದ ನಾನು ಹುಡುಕಿ ತಂದಿದ್ದೇನೆ ಅಂತ ಕ್ಯಾಬ್ ಡ್ರೈವರ್ ಹೇಳಿದ್ದಾರೆ.
ಕ್ಯಾಬ್ ಡ್ರೈವರ್ ಮಾತು ಕೇಳಿ ಯೋಗಿತಾ ಭಾವುಕರಾಗಿದ್ದಾರೆ. ನಾನು ಸದಾ ನಿಮ್ಮನ್ನು ನೆನಪಿನಲ್ಲಿಟ್ಟುಕೊಳ್ತೇನೆ ಎಂದಿದ್ದಾರೆ. ಪೂಕಿ ಭಯ್ಯಾ ನನ್ನ ದಿನವನ್ನು ಅದ್ಭುತಗೊಳಿಸಿದರು. @uber_india ಅದ್ಭುತ ಚಾಲಕರಿಗೆ ಧನ್ಯವಾದಗಳು ಅಂತ ಯೋಗಿತಾ ಶೀರ್ಷಿಕೆ ಹಾಕಿದ್ದಾರೆ. ಯೋಗಿತಾ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಭರವಸೆ ಕಳೆದುಕೊಳ್ಳುವ ಪ್ರತಿ ಬಾರಿಯೂ, ಇಂಥವರು ನಮ್ಮ ಭರವಸೆಯನ್ನು ಹೆಚ್ಚಿಸುತ್ತಾರೆ, ಮತ್ತೆ ಒಳ್ಳೆಯದರಲ್ಲಿ ನಂಬಿಕೆ ಇಡುವಂತೆ ಮಾಡುತ್ತಾರೆ ಅಂತ ಕಮೆಂಟ್ ಮಾಡಿದ್ದಾರೆ. ಅನೇಕ ಬಾರಿ ನಮ್ಮವರಲ್ಲದವರೆ ನಮಗೆ ಸಹಾಯ ಮಾಡ್ತಾರೆ ಎನ್ನುವ ಕಮೆಂಟ್ ಕೂಡ ಬಂದಿದೆ.
ಬಾಲಿವುಡ್‌ನ ದಂತಕಥೆಯಾದ ಧಮೇಂದ್ರ-ಹೇಮಾ ಮಾಲಿನಿ ಲವ್ ಸ್ಟೋರಿ; A ಟು Z ಸೀಕ್ರೆಟ್ ಇಲ್ಲಿದೆ ನೋಡಿ!
ಯೋಗಿತಾ ರಾಥೋಡ್ ನಟಿ ಹಾಗೂ ಮಾಡೆಲ್. ಸಿನಿಮಾಗಿಮಥ ಜಾಹೀರಾತಿನಲ್ಲಿ ಯೋಗಿತಾ ಹೆಚ್ಚಾಗಿ ಕಾಣಿಸಿಕೊಳ್ತಾರೆ. ರಾಜಸ್ಥಾನದ ನಟಿ, 40 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯಾಸಲೀನ್ (Vaseline), ಪಾಂಡ್ಸ್ (Pond’s), ಕಲ್ಯಾಣ್ ಜ್ಯುವೆಲ್ಲರ್ಸ್ (Kalyan Jewellers) ಮತ್ತು ಎವರ್ಯೂತ್ನಂತಹ ಜಾಗತಿಕ ಬ್ರ್ಯಾಂಡ್ಗಳೊಂದಿಗೆ ಕೆಲಸ ಮಾಡಿದ್ದಾರೆ. ಶಾರುಖ್ ಖಾನ್, ಕೃತಿ ಸನೋನ್, ಸಿದ್ಧಾಂತ್ ಚತುರ್ವೇದಿ ಮತ್ತು ಸಾರಾ ಅಲಿ ಖಾನ್ರಂತಹ ಬಾಲಿವುಡ್ ಐಕಾನ್ಗಳೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.