ಒಂದು ಗಂಡು ಮಗು ಬೇಕು ಕಣೋ ನಮ್ಮ ಲೆಗೆಸಿ ಮುಂದುವರೆಸಲು; ರಾಮ್ ಚರಣ್‌ಗೆ ಡಿಮ್ಯಾಂಡ್ ಮಾಡಿದ ಚಿರಂಜೀವಿ

Published : Feb 12, 2025, 12:37 PM ISTUpdated : Feb 12, 2025, 12:38 PM IST
ಒಂದು ಗಂಡು ಮಗು ಬೇಕು ಕಣೋ ನಮ್ಮ ಲೆಗೆಸಿ ಮುಂದುವರೆಸಲು; ರಾಮ್ ಚರಣ್‌ಗೆ ಡಿಮ್ಯಾಂಡ್ ಮಾಡಿದ ಚಿರಂಜೀವಿ

ಸಾರಾಂಶ

ರಾಮ್ ಚರಣ್-ಉಪಾಸನಾ ದಂಪತಿಗೆ ಕ್ಲಿಂಕಾರ ಎಂಬ ಮಗಳು ಜನಿಸಿ ಎರಡು ವರ್ಷಗಳಾಗಿವೆ. ಚಿರಂಜೀವಿ "ಲೆಗಸಿ" ಮುಂದುವರಿಕೆಗೆ ಗಂಡು ಮಗುವಿನ ಆಶಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಟೀಕೆಗೊಳಗಾಗಿದ್ದು, ಹೆಣ್ಣು ಮಕ್ಕಳನ್ನು ಕಡೆಗಣಿಸಿದಂತಿದೆ ಎಂಬ ಆರೋಪ ಕೇಳಿಬಂದಿದೆ. ಉಪಾಸನಾ ಮಕ್ಕಳ ಯೋಜನೆ ಬಗ್ಗೆ ಮಾತನಾಡಿದ್ದು, ಆರ್ಥಿಕವಾಗಿ ಸ್ಥಿರತೆ ಇದ್ದಾಗ ಮಾತ್ರ ಮಕ್ಕಳು ಪಡೆಯುವುದು ಉತ್ತಮ ಎಂದಿದ್ದಾರೆ.

ತೆಲುಗು ಚಿತ್ರರಂಗದ ಸಿಂಪಲ್ ಸ್ಟಾರ್ ರಾಮ್ ಚರಣ್ ಮತ್ತು ಉದ್ಯಮಿ ಪತ್ನಿ ಉಪಾಸನಾ ಎರಡು ವರ್ಷಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದಾರೆ. ಮೊಮ್ಮಗಳು ಬಂದ ಮೇಲೆ ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಸಿಕ್ಕಾಪಟ್ಟೆ ಒಳ್ಳೆಯದಾಗುತ್ತಿದೆ. ಹೀಗಾಗಿ ಕ್ಲಿಂಕಾರ ಅದೃಷ್ಟದ ದೇವತೆ ಎಂದು ಪರಿಗಣಿಸುತ್ತಿದ್ದಾರೆ. ಎರಡು ವರ್ಷ ಕಳೆದರೂ ಕ್ಲಿಂಕಾರ ಮುಖವನ್ನು ರಿವೀಲ್ ಮಾಡಿಲ್ಲ ಏಕೆಂದರೆ ಆಕೆ ಸಾಮಾನ್ಯರಂತೆ ಬೆಳೆಯಬೇಕು ಅನ್ನೋದು ಮೆಗಾ ಫ್ಯಾಮಿಲಿಯ ಆಸೆ. ಆದರೆ ಚಿರಂಜೀವಿ ಈಗ ಹೊಸ ಡಿಮ್ಯಾಂಡ್ ಮುಂದಿಟ್ಟಿದ್ದಾರೆ.

ಹೌದು! ಕೆಲವು ದಿನಗಳ ಹಿಂದೆ ಬ್ರಹ್ಮಾನಂದಂ' ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಭಾಗಿಯಾಗಿದ್ದರು. ಈ ವೇಳೆ ರಾಮ್‌ ಚರಣ್‌ಗೆ ಎರಡನೇ ಮಗು ಬೇಕು ಅದೂ ಗಂಡು ಮಗು ಆಗಬೇಕು ಎಂದು ಹೇಳಿದ್ದೀಇ. ಆ ಮೂಲಕ ನಮ್ಮ ಲೆಗಸಿ ಮುಂದುವರೆಯಬೇಕು ಎಂದು ಹೇಳಿದ್ದರು. ಮದುವೆಯಾಗಿ 10 ವರ್ಷಗಳು ಕಳೆದ ಮೇಲೆ ರಾಮ್ ಚರಣ್ ಮತ್ತು ಉಪಾಸನಾ ಮಗು ಮಾಡಿಕೊಂಡಿರುವುದು. ಹೀಗಾಗಿ ಎರಡನೇ ಮಗು ಡಿಮ್ಯಾಂಡ್ ಮಾಡಿರುವುದಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ಹೆಣ್ಣು ಮಕ್ಕಳು ಮನೆಯಲ್ಲಿ ಇರಬೇಕು ಅಂತಾರೆ ಆದರೆ ನೀವು ನಿಮ್ಮ ಆಸ್ತೆ ಬಗ್ಗೆ ಯೋಚನೆ ಮಾಡಿಕೊಂಡು ಗಂಡು ಮಗು ಬೇಕು ಎನ್ನುತ್ತಿದ್ದೀರಿ ಎಂದು ಟೀಕೆ ವ್ಯಕ್ತವಾಗುತ್ತಿದೆ.  

ಇದ್ದಕ್ಕಿದ್ದಂತೆ 'ಸೀತಾರಾಮ' ಧಾರಾವಾಹಿಯಿಂದ ಹೊರ ನಡೆಯಲು ಕಾರಣ ಬಿಚ್ಚಿಟ್ಟ ಡಾಕ್ಟರ್ ಶ್ಯಾಮ್!

'ನಾನು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಇರುವಾಗ ಒಂದು ಲೇಡಿಸ್ ಹಾಸ್ಟೆಲ್‌ ವಾರ್ಡನ್‌ ಭಾಸವಾಗುತ್ತದೆ. ಸುತ್ತಾ ಹೆಣ್ಣುಮಕ್ಕಳೇ ಇದ್ದಾರೆ. ಚರಣ್‌ಗೆ ಈ ಬಾರಿ ಒಂದು ಗಂಡು ಮಗು ಬೇಕು ಕಣೋ, ನಮ್ಮೆ ಲೆಗೆಸಿ ಮುಂದುವರೆಯಬೇಕು ಎಂದು ಕೋರಿಕೆ ಇಟ್ಟಿದ್ದೀನಿ. ಕ್ಲಿಂಕಾರ ಅಂದ್ರೆ ಬಹಳ ಮುದ್ದು ಆದರೆ ರಾಮ್‌ ಚರಣ್‌ಗೆ ಮತ್ತೊಂದು ಹೆಣ್ಣು ಆಗಿಬಿಟ್ಟರೆ ಅನ್ನೋ ಭಯ ಶುರುವಾಗಿದೆ' ಎಂದು ಚಿರಂಜೀವಿ ಹೇಳಿದ್ದಾರೆ. ಈ ಹೇಳಿಕೆ ನಂತರ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಅನ್ನೋ ಸುಳಿವು ನೀಡಿದ್ದಾರಾ? ಲೆಗೆಸಿ ಪದದ ಅರ್ಥ ಆಸ್ತಿ ಎನ್ನಬಹುದು ಎಂದು ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. 

ಗಯ್ಯಾಳಿ ಹೆಂಗಸಾಗಿ ಕಾಣಿಸೋ ಅನುಪಲ್ಲವಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು ಹೀಗೆ!

ಎಗ್ ಪ್ರೀಜ್:

ಮದುವೆಯಾಗಿ ಮಕ್ಕಳಾದ ನಂತರ ಹೆಣ್ಣು ಮಕ್ಕಳು ಕೆಲಸ ತೊರೆಯುವುದು ಹೆಚ್ಚಾಗಿದೆ. ಮಹಿಳೆಯರು ತಮ್ಮ ಬದುಕಿನಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾರೆ.  ಎರಡನ್ನೂ ಸಮವಾಗಿ ನಿಭಾಯಿಸುವುದು ನನಗೆ ಸುಲಭವಲ್ಲ, ಆದರೂ ನಾನು ಈ ಎರಡನ್ನೂ ಸಮವಾಗಿ ನಿಭಾಯಿಸಲು ಬಹಳ ಪ್ರಯತ್ನ ಪಡುತ್ತಿದ್ದು, ಮುಂದೆ ಅದರಲ್ಲಿ ಯಶಸ್ವಿಯಾಗುವೆ ಎಂದು ನನಗೆ ತಿಳಿದಿದೆ. ಮಹಿಳೆಯರಿಗೆ ಕೆಲಸ ಮಾಡಲು ಆರಾಮದಾಯಕ ವಾತಾವರಣ ಕಲ್ಪಿಸುವುದಕ್ಕಾಗಿ  ಈ ಯುವ ಉದ್ಯಮಿ ಉಪಾಸನಾ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.  ಅಲ್ಲದೇ ತಾಯ್ತನವ ಉದ್ಯೋಗವ ಎಂಬ ಆಯ್ಕೆ ಎದುರಾದರೆ ಹೇಗೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಮಹಿಳೆ ಮಕ್ಕಳ ಬದಲು ಕೆರಿಯರ್ ಮುಖ್ಯ ಎಂದು ಬಯಸುತ್ತಾರೋ ಅವರು ಪಾಕೆಟ್ ಮನಿಯಿಂದ ಬದುಕಬೇಕಾದಂತಹ ಅನಿವಾರ್ಯತೆ ಇರುವುದಿಲ್ಲ, ಹೀಗಾಗಿ ಅಂತವರು ತಮ್ಮ ಎಗ್ ಪ್ರಿಜ್ ಮಾಡುವುದು ಒಳಿತು ಎಂದು ಹೇಳಿದ್ದಾರೆ 

ನಾನೂ ನನ್ನ ಅಂಡಾಣುಗಳನ್ನು ರಕ್ಷಣೆ ಮಾಡಿದ್ದೆ ಅಲ್ಲದೇ ರಾಮ್ ಹಾಗೂ ನಾನು ನಮಗೆ ಬೇಕೆನಿಸಿದಾಗ ಮಕ್ಕಳನ್ನು ಪಡೆಯಲು ನಿರ್ಧರಿಸಿದೆವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ ಎಂದು ಉಪಾಸನಾ ಹೇಳಿದ್ದಾರೆ.  ನೀವು ಮಕ್ಕಳನ್ನು ಮಾಡಿಕೊಳ್ಳಲು ಸಿದ್ಧರಾಗಿದ್ದಾಗ, ಅದಕ್ಕೆ ಬೇಕಾದಷ್ಟು ಶ್ರೀಮಂತಿಕೆಯೂ ಇದ್ದಾಗ ಮಕ್ಕಳ ಮಾಡಿಕೊಂಡರೆ ಅದು ಮಹಿಳೆ ಹಾಗೂ ದೇಶದ ಪ್ರಗತಿಗೂ ಸಹಾಯ ಮಾಡುತ್ತದೆ ಎಂದು ಉಪಾಸನಾ ಹೇಳಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?