ವಿರಾಟ್-ಅನುಷ್ಕಾ ತಮ್​​ ಫೋನ್​ನಲ್ಲಿ ಪರಸ್ಪರ ಹೆಸ್ರನ್ನು ಹೀಗೆ ಸೇವ್​ ಮಾಡಿಕೊಂಡಿದ್ದಾರಂತೆ!

By Suchethana D  |  First Published May 19, 2024, 4:45 PM IST

ವಿರಾಟ್​  ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಂತಮ್ಮ ಮೊಬೈಲ್​ನಲ್ಲಿ ಪರಸ್ಪರರ ಹೆಸರನ್ನು ಯಾವ ರೀತಿ ಸೇವ್​ ಮಾಡಿಕೊಂಡಿದ್ದಾರೆ ಗೊತ್ತಾ? 
 


ಇಂದು ಆರ್‌ಸಿಬಿ ಗೆಲುವು ದಾಖಲಿಸುತ್ತಿದ್ದಂತೆಯೇ ಆಟಗಾರರು ಹಾಗೂ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.  ವಿರಾಟ್ ಕೊಹ್ಲಿ ಈಗಾಗಲೇ ಹೇಳಿದಂತೆ ಇದು ಆರ್‌ಸಿಬಿಯ ಹೊಸ ಅಧ್ಯಾಯ ಆಗುವ ನಿಟ್ಟಿನಲ್ಲಿ ಬೆಂಗಳೂರು ತಂಡವು ದಿಟ್ಟ ಹೆಜ್ಜೆಯಿಟ್ಟಿದೆ. ಇಂದು  ಪಂದ್ಯ ವೀಕ್ಷಿಸಲು ಬಂದಿದ್ದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕಣ್ಣಿನಲ್ಲಿ ಆನಂದ ಬಾಷ್ಪ ಜಿನುಗಿದೆ. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ ಕಣ್ಣಾಲಿಗಳು ತುಂಬಿ ಬಂದಿತು. ಈ ಭಾವನಾತ್ಮಕ ಕ್ಷಣಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಯಿತು. ಇದರ ನಡುವೆಯೇ ವಿರಾಟ್​ ಮತ್ತು ಅನುಷ್ಕಾ ಅವರ ಕುರಿತಾದ ಇಂಟರೆಸ್ಟಿಂಗ್​ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಪುನಃ ವೈರಲ್​ ಆಗುತ್ತಿದೆ.

ವಿರಾಟ್​ ಕೊಹ್ಲಿ ಅವರು ಅನುಷ್ಕಾ ಹೆಸರನ್ನು ಯಾವ ರೀತಿ ಸೇವ್​ ಮಾಡಿಕೊಂಡಿರುವಿರಿ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಸ್ವಲ್ಪ ಯೋಚಿಸಿ ಡಾರ್ಲಿಂಗ್​ ಎಂದು ಹೇಳಿದರು. ಕೊನೆಗೆ ಇದೇ ಪ್ರಶ್ನೆಯನ್ನು ಅನುಷ್ಕಾ ಅವರಿಗೆ ಕೇಳಿದಾಗ ಅವರು ಜೋರಾಗಿ ನಗುತ್ತಾ ಪತಿ ಪರಮೇಶ್ವರ್​ ಎಂದು ಸೇವ್​ ಆಗಿದೆ ಎಂದಿದ್ದಾರೆ. ಇದನ್ನು ಕೇಳಿ ಭಲೇ ಜೋಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Tap to resize

Latest Videos

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?

ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ ಈಚೆಗೆ ಎರಡನೆಯ ಮಗುವಿನ ಅಪ್ಪ-ಅಮ್ಮ ಆಗಿದೆ ಜೋಡಿ.  2021ರಲ್ಲಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿಗೆ ವಮಿಕಾ ಎಂದು ಹೆಸರಿಡಲಾಗಿದೆ.  ಜನವರಿ 11ರಂದು ಕೊಹ್ಲಿ ದಂಪತಿ ವಮಿಕಾಳ 3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಇದೀಗ ಕಳೆದ ಫೆಬ್ರವರಿ 15 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 5 ದಿನಗಳ ಬಳಿಕ ಕೊಹ್ಲಿ 2ನೇ ಬಾರಿಗೆ ತಂದೆಯಾಗಿರುವ ಸಂತಸ ಹಂಚಿಕೊಂಡಿದ್ದರು. ಇದೇ ವೇಳೆ 2ನೇ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.ವಿರುಷ್ಕಾ ದಂಪತಿ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಟರ್ಕಿ ಮೂಲದ ಪದ ಹುಡುಕಿ ವಿರುಷ್ಕಾ ದಂಪತಿ 2ನೇ ಮಗುವಿಗೆ ಹೆಸರಿಟ್ಟಿದ್ದಾರೆ. ಟರ್ಕಿಯಲ್ಲಿ ಅಕಾಯ್ ಎಂದರೆ ಹೊಳೆಯುತ್ತಿರುವ ಚಂದ್ರ ಎಂದರ್ಥವಾಗಿದೆ. ಮಗ ಹೊಳೆಯುವ ಚಂದ್ರನಂತೆ ಅನ್ನೋ ಅರ್ಥದಲ್ಲಿ ಮುದ್ದಾದ ಹೆಸರನ್ನು ವಿರುಷ್ಕಾ ದಂಪತಿ ತಮ್ಮ ಮಗುವಿಗೆ ಇಟ್ಟಿದ್ದಾರೆ. 

ಆದರೆ ಕೊನೆಯವರೆಗೂ ಅನುಷ್ಕಾ ಗರ್ಭಿಣಿ ಎನ್ನುವ  ವಿಷಯವನ್ನು ದಂಪತಿ ಮುಚ್ಚಿಟ್ಟಿದ್ದರು.  ಕ್ರಿಕೆಟ್​ ಮ್ಯಾಚ್​ ನಡೆಯುತ್ತಿದ್ದ ಸಂದರ್ಭದಲ್ಲಿ ಪತಿಯನ್ನು ಸಪೋರ್ಟ್​ ಮಾಡಲು ಅನುಷ್ಕಾ (Anushka Sharma)  ಅಹಮದಾಬಾದ್​ಗೆ ಹೋಗಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅನುಷ್ಕಾ ಶರ್ಮಾ ಹೊರಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ, ಅನುಷ್ಕಾ ಶರ್ಮಾ ಸಂಪೂರ್ಣ ಭದ್ರತೆಯ ನಡುವೆ ಕಪ್ಪು ಉಡುಪಿನಲ್ಲಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವುದನ್ನು ಕಾಣುತ್ತಿದ್ದರು. ಹೊಟ್ಟೆಯನ್ನು ಅವರು ಮುಚ್ಚಿಕೊಂಡಿದ್ದರು. ಆಗ ಇವರು ಗರ್ಭಿಣಿ ಎಂದು ಅಭಿಮಾನಿಗಳು ಹೇಳಿದ್ದರು. ಆದರೆ ಇದು ನಿಜನೋ, ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಕೊನೆಗೂ ಗರ್ಭಿಣಿ ಎಂದು ಈಚೆಗಷ್ಟೆ ದಂಪತಿ ಅನೌನ್ಸ್​ ಮಾಡಿದ್ದರು. ಅದಾಗಲೇ ಮಗುವಿಗೂ ಜನ್ಮ ನೀಡಿದ್ದಾರೆ ಅನುಷ್ಕಾ. 

ಪ್ರಿಯಾ- ಅಶೋಕ್​ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು? ವಿಡಿಯೋ ಮೂಲಕ ಫುಲ್​ ಡಿಟೇಲ್ಸ್​ ನೀಡಿದ ನಟಿ
 

click me!