Happy Birthday: ಮದುವೆಯಾಗದ್ದಕ್ಕೆ ಅಪ್ಪ ಜಿತೇಂದ್ರರನ್ನೇ ದೂಷಿಸಿದ ಏಕ್ತಾ ಕಪೂರ್!

By Suvarna News  |  First Published Jun 7, 2023, 2:25 PM IST

ಖ್ಯಾತ ಕಿರುತೆರೆ ನಿರ್ಮಾಪಕಿ ಏಕ್ತಾ ಕಪೂರ್​ ಅವರ 48ನೇ ಜನ್ಮದಿನ ಇವತ್ತು. ಮದುವೆಯಾಗದೇ ಮಗುವಿನ ತಾಯಿಯಾಗಿರುವ ಕುರಿತು ನಟಿ ಹೇಳಿದ ವಿಷಯ ಬೆಳಕಿಗೆ ಬಂದಿದೆ. 
 


ಬಾಲಿವುಡ್‌ನಲ್ಲಿ (Bollywood) ಅದರಲ್ಲಿಯೂ ಹಿಂದಿ ಟಿವಿ ವಿಭಾಗದಲ್ಲಿ ಏಕ್ತಾ ಕಪೂರ್ ಅವರದ್ದು ಬಹುದೊಡ್ಡ ಹೆಸರು. ಧಾರಾವಾಹಿಗೆ ವೈಭವ, ಭಿನ್ನ ಕತೆ, ದೊಡ್ಡ ನಟರನ್ನು ತಂದವರು ಏಕ್ತಾ ಕಪೂರ್. ಕಸೌಟಿ ಜಿಂದಗಿ ಕೀ,  ಕಹಾನಿ ಘರ್ ಘರ್ ಕಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ, ಬಡೇ ಅಚೇ ಲಗ್ತೇ ಹೈ, ಕಸಮ್ ಸೇ, ಪವಿತ್ರ ರಿಶ್ತಾ, ಕುಂಕುಮ್ ಭಾಗ್ಯ, ನಾಗಿನ್ ಮುಂತಾದ ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ. ಇವರ ಒಂದು ವಿಶೇಷತೆ ಎಂದರೆ,  ಇವರ ಹಲವಾರು ಧಾರಾವಾಹಿಗಳು ಕ ಅಕ್ಷರದಿಂದ ಪ್ರಾರಂಭವಾಗುವಂಥದ್ದು.  ಏಕ್ತಾ ಕಪೂರ್ ಈವರೆಗೆ 134 ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. 38 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 28 ವೆಬ್ ಸರಣಿಗಳನ್ನು (Web Series) ನಿರ್ಮಾಣ ಮಾಡಿದ್ದಾರೆ. ಪ್ರಖ್ಯಾತ ಬಾಲಾಜಿ ಟೆಲಿಫಿಲಮ್ಸ್‌ ಏಕ್ತಾ ಕಪೂರ್ ಒಡೆತನದ್ದೇ. 1975ರ ಜೂನ್​ 7ರಂದು ಹುಟ್ಟಿರುವ ಏಕ್ತಾ ಕಪೂರ್ ಅವರಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ. ಇದಾಗಲೇ ಗಂಡು ಮಗುವಿನ ತಾಯಿಯಾಗಿದ್ದಾರೆ ಏಕ್ತಾ. ಆದರೆ ಕುತೂಹಲದ ವಿಷಯ ಏನೆಂದರೆ ಅವರಿಗೆ ಇನ್ನೂ ಮದುವೆಯಾಗಲಿಲ್ಲ!

ಹೌದು.  ಏಕ್ತಾ ಕಪೂರ್​ (Ektha Kapoor) ಅವರಿಗೆ ಇನ್ನೂ ಮದುವೆಯಾಗಲಿಲ್ಲ. ಇವರ ಮದುವೆ ಚಿತ್ರ ನಿರ್ಮಾಪಕ ಕರಣ್ ಜೋಹರ್ ಜೊತೆ ಎಂದು ಒಮ್ಮೆ ಬಹಳ ಸುದ್ದಿ ಹರಡಿತ್ತು.  ಇಬ್ಬರೂ ಅನೇಕ ವರ್ಷಗಳಿಂದ ಒಟ್ಟಿಗೇ ಇದ್ದಾರೆ  ಮತ್ತು ಬಾಲ್ಯದಿಂದಲೂ ಪರಸ್ಪರ ಸಂಪರ್ಕದಲ್ಲಿದ್ದವರು. ಕೆಲವು ವರ್ಷಗಳ ಹಿಂದೆ, ಏಕ್ತಾ ಮತ್ತು ಕರಣ್ ಪರಸ್ಪರ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು.  ಆದರೆ ಅವರಿಬ್ಬರು ಯಾವುದನ್ನೂ ಖಚಿತಪಡಿಸಿರಲಿಲ್ಲ.  2006-07 ರಲ್ಲಿ ನಡೆದ, ಸಂದರ್ಶನವೊಂದರಲ್ಲಿ  ಕರಣ್ ಅವರು ಬೇರೆ ಯಾರನ್ನೂ ಹುಡುಕದಿದ್ದರೆ ಏಕ್ತಾ ಅವರನ್ನು ಮದುವೆಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಇದುವರೆಗೆ ಕರಣ್​ ಅವರಿಗೂ ಮದುವೆಯಾಗಲಿಲ್ಲ. ಏಕ್ತಾ ಕಪೂರ್​ ಕೂಡ ಅವಿವಾಹಿತೆ.

Tap to resize

Latest Videos

ಇಂಚಿಂಚು ದೇಹ ತೋರಿಸಿ ನಟಿ ಪೂಜಾ ವಿಡಿಯೋಶೂಟ್​: ಎರಡು ಕಣ್ಣು ಸಾಲ್ದು ಅಂತಿದ್ದಾರೆ ಫ್ಯಾನ್ಸ್​!

ಆದರೆ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಏಕ್ತಾ ಕಪೂರ್​ ಏಕೆ ಮದುವೆಯಾಗಿಲ್ಲ ಎನ್ನುವ ಹಳೆಯ ವಿಷಯವೊಂದು ಮತ್ತೆ ಮುನ್ನೆಲೆಗೆ ಬಂದಿದೆ.  ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಏಕ್ತಾ ಕಪೂರ್, ತಮ್ಮ ತಾಯ್ತನದ ಬಗ್ಗೆ ಮಾತನಾಡಿದ್ದರು.  ಮದುವೆ ಆಗದೆ ತಾಯಿ ಆಗಲು ನಿಶ್ಚಯಿಸಿದ್ದೇಕೆ ಎಂಬುದರ ಬಗ್ಗೆ ಅವರು ತಿಳಿಸಿದ್ದರು.  ಬಾಲಾಜಿ ಟೆಲಿಫಿಲ್ಮ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಏಕ್ತಾ ಕಪೂರ್​,  ಈ ವಯಸ್ಸಿನಲ್ಲಿಯೂ ಅವರು ಮದುವೆಯಾಗದೆ ಇರುವುದು  ಅವರ ತಂದೆ, ಪ್ರಸಿದ್ಧ ನಟ ಜೀತೇಂದ್ರ (Jitendra)  ಅವರಿಗಾಗಿ ಎನ್ನುವ ಕುತೂಹಲದ ಅಂಶ ಇದೀಗ ಬೆಳಕಿಗೆ ಬಂದಿದೆ.
 
ಏಕ್ತಾ ಕಪೂರ್ ಕೇವಲ 17ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು (Career) ಪ್ರಾರಂಭಿಸಿದರು.  ಧಾರಾವಾಹಿಗಳಿಂದ ಅವರು ಮನೆಮಾತಾದವರು. ಕೇವಲ 19 ನೇ ವಯಸ್ಸಿನಲ್ಲಿ ಹಮ್ ಪಾಂಚ್ (Hum Panch) ಎಂಬ ಧಾರಾವಾಹಿಯನ್ನು ನಿರ್ಮಿಸಿದ್ದಾರೆ. ಈ ಪ್ರದರ್ಶನವು ಎಷ್ಟು ದೊಡ್ಡ ಹಿಟ್ ಆಗಿತ್ತು ಎಂದರೆ ಇದರ ನಂತರ ಏಕ್ತಾ ನಿರ್ಮಾಣ ಜಗತ್ತಿನಲ್ಲಿ ಮುಂದೆ ಬಂದರು. ಆದರೆ ನಾನು ಮದುವೆಯಾಗದೇ ಇರುವುದಕ್ಕೆ ನನ್ನ ತಂದೆಯೇ ಕಾರಣ ಎಂದು ಏಕ್ತಾ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು  ವಿವರಣೆ ನೀಡಿರುವ ಅವರು,  'ನನಗೆ 17 ವರ್ಷ ಮತ್ತು ಆ ಸಮಯದಲ್ಲಿ ನನ್ನ ತಂದೆ ಮದುವೆಯಾಗು ಸೆಟಲ್‌ ಆಗು ಅಥವಾ ಕೆಲಸ ಮಾಡಿ ನಿಮ್ಮ ವೃತ್ತಿಜೀವನವನ್ನು ಮಾಡು' ಎಂದು ಹೇಳಿದ್ದರು. ಪಾಕೆಟ್ ಮನಿ ಬಿಟ್ಟು ನನಗೆ ಒಂದು ರೂಪಾಯಿ ಕೊಡುವುದಿಲ್ಲ ಎಂದಿದ್ದರು. ಅದಕ್ಕಾಗಿಯೇ ನನಗೆ ಹಣ ಬೇಕಾದರೆ ಅದನ್ನು ನಾನೇ ಸಂಪಾದಿಸಬೇಕು ಎಂದು ನಾನು ನಿರ್ಧರಿಸಿದೆ. ನಂತರ ನಾನು ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಆ ಸಮಯದಲ್ಲಿ ನಾನು ಇದ್ದ ಪರಿಸ್ಥಿತಿಯಿಂದ ನನಗೆ ತುಂಬಾ ಸಂತೋಷವಾಯಿತು ಮತ್ತು ಎಲ್ಲವೂ ಚೆನ್ನಾಗಿ ಆಗುತ್ತಿತ್ತು, ಆದ್ದರಿಂದ 22 ವರ್ಷ ವಯಸ್ಸಿನಲ್ಲಿ ನಾನು ಮದುವೆಯ ಬಗ್ಗೆ ಯೋಚಿಸುತ್ತೇನೆ ಎಂದು ಕೊಂಡಿದ್ದೆ. ಆಗ ಮದುವೆಯಾಗುವ ಮನಸ್ಸು ಬರಲಿಲ್ಲ. ಅಪ್ಪನ ಮಾತು ಕಿವಿಯಲ್ಲಿ ಗುನುಗುತ್ತಲೇ ಇತ್ತು. ದುಡಿಯುವ ಹಂಬಲ ಹೆಚ್ಚಾಗಿತ್ತು ಎಂದಿದ್ದಾರೆ.

ಸಂಸದೆಯೇ ದಿ ಕೇರಳ ಸ್ಟೋರಿ ತೋರಿಸಿದ್ರೂ ಬಾರದ ಬುದ್ಧಿ! ಮುಸ್ಲಿಂ ಜೊತೆ ಪರಾರಿಯಾದವಳ ಪಾಡಿದು
 
 'ನಾನು ನಿರ್ಮಿಸಿದ ಹಲವು ಧಾರಾವಾಹಿಗಳ ಮೂಲಕ ಮಹಿಳೆಯರಲ್ಲಿ ಮದುವೆಯೇ ಅಂತಿಮ. ಮದುವೆ ಆಗದೇ ಇದ್ದರೆ ಭವಿಷ್ಯ ಇಲ್ಲ ಎಂಬಂತಹ ಭಾವನೆ ಹುಟ್ಟುವಂತೆ ಮಾಡಿಬಿಟ್ಟಿದ್ದೇನೆ. ಹಾಗಾಗಿ ನಾನು ಮದುವೆ ಆಗಬಾರದೆಂದು ವಿಧಿ ನಿರ್ಧರಿಸಿದಂತಿದೆ. ನಾನು ಬಾಡಿಗೆ ತಾಯಿಯ (Surrogacy) ಬಗ್ಗೆ ಆಗ ಯೋಚಿಸಿದ್ದೆ. ಮದುವೆಯ ಬಗ್ಗೆ ಆಸೆ ಬಿಟ್ಟಿದ್ದೆ. ನಾನು ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಆಲೋಚನೆ ಮಾಡಿದಾಗ ಮೊದಲಿಗೆ ಕುಟುಂಬದ ಬಳಿ ಹೇಳಿರಲಿಲ್ಲ. ನಾನು ಅದನ್ನು ಹೇಳುವಷ್ಟರಲ್ಲಿ ತನ್ನ ಸಹೋದರ ತುಷಾರ್ ಕಪೂರ್ (Tushar Kapoor), ಬಾಡಿಗೆ ತಾಯಿ ಮೂಲಕ ತಂದೆಯಾಗಿದ್ದ. ಹಾಗಾಗಿ ನನ್ನ ನಿರ್ಧಾರಕ್ಕೆ ಕುಟುಂಬದವರು ಅಡ್ಡಿ ಪಡಿಸಲಿಲ್ಲ ಎಂದಿದ್ದಾರೆ ಏಕ್ತಾ ಕಪೂರ್​. ಏಕ್ತಾ ಕಪೂರ್ ಸಹೋದರ ತುಷಾರ್ ಕಪೂರ್ ಸಹ ಬಾಡಿಗೆ ತಾಯಿಯ ಮೂಲಕ ತಂದೆಯಾಗಿದ್ದಾರೆ. ತುಷಾರ್ ಕಪೂರ್ ಗೆ ಒಂದು ಹೆಣ್ಣು ಮಗು ಇದೆ. ಏಕ್ತಾ ಕಪೂರ್ ಗೆ ಒಂದು ಗಂಡು ಮಗು ಇದೆ.
 

click me!