ವಾರಕ್ಕೊಮ್ಮೆ ಮನೆ ಕೆಲಸದವರ ಜೊತೆ ಮೀಟಿಂಗ್, ಖರ್ಚು ವೆಚ್ಚ ಲೆಕ್ಕ ಮಾಡ್ತಾಳೆ ಕತ್ರಿನಾ ಕೈಫ್: ವಿಕ್ಕಿ ಕೌಶಾಲ್

By Vaishnavi Chandrashekar  |  First Published Jun 7, 2023, 10:58 AM IST

ವಾರದಲ್ಲಿ ಒಂದು ದಿನ ಬಜೆಟ್ ಮೀಟಿಂಗ್ ನಡೆಸುವ ಕತ್ರಿನಾ ಕೈಫ್‌. ಪತ್ನಿ ಮಾಡುವ ಉಳಿತಾಯವನ್ನು ನೋಡಿ ಎಂಜಾಯ್ ಮಾಡುತ್ತಾರಂತೆ ವಿಕ್ಕಿ....


ಬಾಲಿವುಡ್ ಸೆಲೆಬ್ರಿಟಿ ಕಪಲ್, ರೊಮ್ಯಾಂಟಿಕ್ ಕಪಲ್ ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್‌ ಮನೆಯಲ್ಲಿ ವಾರಕ್ಕೆ ಒಂದು ದಿನ ಬಜೆಟ್‌ ಚರ್ಚೆ ಮಾಡು ಮನೆ ಮಂದಿ ಹಾಗೂ ಕೆಲಸದವರ ಜೊತೆ ಮೀಟಿಂಗ್ ಮಾಡುತ್ತಾರಂತೆ. ಮೊದಲ ಸಲ ಈ ರೀತಿ ಮನೆ ಬಜೆಟ್‌ ಮೀಟಿಂಗ್‌ನಲ್ಲಿ ಭಾಗಿಯಾಗುತ್ತಿರುವ ವಿಕ್ಕಿ ಇದನ್ನು ನೋಡಿ ಸಖತ್ ಎಂಜಾತ್ ಮಾಡುತ್ತಾರಂತೆ ನಾನೋಬ್ಬ ವೀಕ್ಷಕನಾಗಿ ಬಿಡುವೆ ಕತ್ರಿನಾ ಖರ್ಚು ಎಷ್ಟಾಗುತ್ತಿದೆ ನೋಡಿಕೊಂಡು ಗ್ರೇಟ್ ಎನ್ನುತ್ತಾಳೆ. 

ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್‌ ಸ್ನೇಹಿತರಾಗಿ ಪ್ರೀತಿಯಲ್ಲಿ ಬಿದ್ದು ಸೈಲೆಂಟ್ ಆಗಿ ಡೇಟಿಂಗ್ ಶುರು ಮಾಡಿದರು. ಇದು ಟೈಮ್ ಪಾಸ್ ಲವ್ ಅಲ್ಲ ಗುರು.....ಕೆಲವು ವರ್ಷಗಳ ಕಾಲ ಪ್ರೀತಿಸಿ ಕುಟುಂಬಗಳನ್ನು ಒಪ್ಪಿಸಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಾಜಸ್ಥಾನದಲ್ಲಿರುವ ಸವಾಯಿ ಮಾಧೋಪುರ್‌ದಲ್ಲಿ ಡಿಸೆಂಬರ್ 2021ರಲ್ಲಿ ಮದುವೆಯಾದರು. ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು. ಈ ಮೂಲಕ ಬಿ-ಟೌನ್‌ನ ಮೋಸ್ಟ್‌ ಪಾಪ್ಯೂಲರ್ ಕಪರ್‌ ಆಗಿಬಿಟ್ಟರು. 

Tap to resize

Latest Videos

ಮೊದಲ ಭೇಟಿಯಲ್ಲೇ ಕತ್ರಿನಾ ಕೈಫ್‌ಗೆ ಪ್ರಪೋಸ್‌ ಮಾಡಿದ ವಿಕ್ಕಿ ಕೌಶಲ್‌!

ಕತ್ರಿನಾ ಮನೆಯಲ್ಲಿ ನಡೆಸುವ ಬಜೆಟ್ ಪ್ಲಾನಿಂಗ್‌ ಬಗ್ಗೆ ವಿಕ್ಕಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 'ನನ್ನ ಜೀವನದ ಮೋಸ್ಟ್‌ ಖುಷಿ ಕೊಡುವ ಅನುಭವ ಏನೆಂದರೆ ಮನೆಯಲ್ಲಿ ಕತ್ರಿನಾ ಕೈಫ್ ಬಜೆಟ್ ಮೀಟಿಂಗ್ ನಡೆಸುತ್ತಾರೆ. ವಾರಕ್ಕೆ ಒಂದು ದಿನ ಮನೆ ಮಂದಿ ಹಾಗೂ ಮನೆ ಕೆಲಸದವರ ಜೊತೆ ಮೀಟಿಂಗ್ ಮಾಡಿ ಎಷ್ಟು ಖರ್ಚು ಆಗಿದೆ ಎಷ್ಟು ಉಳಿದಿದೆ ಮುಂದಿನ ವಾರಕ್ಕೆ ಎಷ್ಟು ಬೇಕು ಅನ್ನೋ ಲೆಕ್ಕ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಈ ರೀತಿ ಚರ್ಚೆಗಳು ನಡೆದಾಗ ನಾನು ಎಂಜಾಯ್ ಮಾಡುವೆ. ವೀಕ್ಷಕರ ರೀತಿ ಕೈಯಲ್ಲಿ ಪಾಪ್‌ ಕಾರ್ನ್‌ ಹಿಡಿದುಕೊಂಡು ಎಂಜಾಯ್ ಮಾಡುವೆ' ಎಂದು ವಿಕ್ಕಿ ನ್ಯೂಸ್ ತಕ್ ಸಂದರ್ಶನದಲ್ಲಿ ಹೇಳಿದ್ದಾರೆ. 

Katrina-Vicky Kaushal: ಡಿವೋರ್ಸ್​ಗೆ ರೆಡಿಯಾಯ್ತಾ ಕತ್ರಿನಾ-ವಿಕ್ಕಿ ಕ್ಯೂಟ್​ ಜೋಡಿ?

ವಿಕ್ಕಿ ಕೌಶಾಲ್ ಸದ್ಯ ತಮ್ಮ ಜರಾ ಹಟಕೆ ಜರಾ ಬಚ್ಕೇ ಸಿನಿಮಾ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಕ್ಕಿ ಜೊತೆ ಸಾರಾ ಅಲಿ ಖಾನ್ ಅಭಿನಯಿಸಿದ್ದಾರೆ. ಸಿನಿಮಾ ಪ್ರಚಾರ ನಡೆಸುತ್ತಲೇ ಅಕ್ಕ ಪಕ್ಕ ಇರುವ ಸುಪ್ರಸಿದ್ಧ ಜಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ದಿನೇಶ್ ವಿಜಾನ್ ಮಾಡ್‌ಡಾಕ್‌ ಸಿನಿಮಾ ಮತ್ತು ಜಿಯೋ ಸ್ಟುಡಿಯೋ ನಿರ್ಮಾಣ ಮಾಡಿರುವ ಈ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮುಟ್ಟುತ್ತಿದೆ. ಕೆಲವು ದಿನಗಳ ಹಿಂದೆ ಸಿನಿಮಾ 4.14 ಕೋಟಿ ಕೆಲಕ್ಷನ್ ಮಾಡಿತ್ತು. ಸದ್ಯದ ಮಾಹಿತಿ ಪ್ರಕಾರ 26.73 ಕೋಟಿ ಕಲೆಕ್ಷನ್ ಮಾಡಿದೆ. 

click me!