Waheeda Rehman: ಎವರ್‌ಗ್ರೀನ್ ನಟಿ ವಹೀದಾ ರೆಹಮಾನ್ ಬರ್ತ್‌ಡೇ: ದೇವಾನಂದ್ ಜತೆ ಹೇಗಿತ್ತು ಅನುಬಂಧ?

By Contributor Asianet  |  First Published Feb 3, 2022, 8:21 PM IST

ಹಿಂದಿ ಚಿತ್ರರಂಗದ (Bollywoo) ಎವರ್‌ಗ್ರೀನ್‌ ನಟಿ ವಹೀದಾ ರೆಹಮಾನ್ ಈಗ ಬೆಂಗಳೂರಿನಲ್ಲೇ ನೆಲೆಸಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ?  ತಮ್ಮ 84ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ನಟಿಯ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿ ತಿಳಿಯೋಣ ಬನ್ನಿ.
 


50-60ರ ದಶಕದಲ್ಲಿ ಬಾಲಿವುಡ್‌ (Bollywood) ತೆರೆಯನ್ನು ಆಳಿದ ಹಿಂದಿ ನಟಿಯರಲ್ಲಿ ವಹೀದಾ ರೆಹಮಾನ್ (Waheeda Rehaman) ಒಬ್ಬರು. ರೇಖಾ (Rekha), ಜಯಾ, ನರ್ಗಿಸ್, ಜೀನತ್ ಅಮಾನ್, ಹೇಮಾಮಾಲಿನಿ (Hemamalini) ಮುಂತಾದ ನಟಿಯರ ಪೈಪೋಟಿ ಎದುರಿಸಿ ಈಕೆ ಮಿಂಚಿದರು. ಇವರ ಸೌದರ್ಯ ಈಗಲೂ ಹಾಗೇ ಮುಕ್ಕಾಗದೇ ಉಳಿದಿದೆ ಎಂದರೆ ನೀವು ನಂಬಬೇಕು. ಇವರ ಮನೆ ಬೆಂಗಳೂರಿನಲ್ಲೇ ಇದೆ. ಬೆಂಗಳೂರಿನ ಕದಿರೇನಹಳ್ಳಿಯಲ್ಲಿ ಇರುವ ಈ ಅಂತಾರಾಷ್ಟ್ರೀಯ ಖ್ಯಾತಿಯ ನಟಿ ಆಗಾಗ ಮುಂಬಯಿಯ ಫಿಲಂಫೇರ್ (Filmfare) ಕಾರ್ಯಕ್ರಮ ಹೊರತುಪಡಿಸಿ ಬೇರೆಡೆ ಕಾಣಿಸಿಕೊಳ್ಳುವುದು ಕಡಿಮೆ.

ವಹೀದಾ ರೆಹಮಾನ್‌ಗೆ ಈಗ 84 ವರ್ಷ. 3 ಫೆಬ್ರವರಿ 1938ರಂದು ತಮಿಳುನಾಡಿನಲ್ಲಿ ಜನಿಸಿದ ವಹೀದಾ, ನಟಿಯಾಗಲು ಬಯಸಿರಲಿಲ್ಲ. ಡಾಕ್ಟರ್ ಆಗುವ ಮೂಲಕ ಜನರ ಸೇವೆ ಮಾಡಬೇಕೆಂಬುದು ಅವರ ಆಸೆಯಾಗಿತ್ತು. ಆದರೆ ಹಿಂದಿ ಚಿತ್ರರಂಗದ ‘ಪ್ಯಾಸ’ (Pyasa), ‘ಗೈಡ್’ (Guide) ಚಿತ್ರಗಳಲ್ಲಿ ಈಕೆ ನಟಿಸಿ ರಸಿಕರು ಎಂದೆಂದೂ ಮರೆಯದ ನಟಿಯಾದರು. ಭರತನಾಟ್ಯ ನೃತ್ಯದಲ್ಲಿ ಪಾರಂಗತರಾದ ವಹೀದಾ ಅವರು ಎಲ್ಲಾ ರೀತಿಯ ಪಾತ್ರಗಳಿಗೆ ಹೊಂದಿಕೊಳ್ಳುವಂತಹ ನಟಿ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ, 1972ರ ಪದ್ಮಶ್ರೀ, 2011ರ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದರು. 

Tap to resize

Latest Videos

Hrithik Roshan ಜೊತೆ ಸುತ್ತಾಡ್ತಿರೋ ಈ ನಿಗೂಢ ಹುಡುಗಿ ಯಾರು?
ಹಿಂದಿ ಚಿತ್ರರಂಗದ ಸುವರ್ಣ ಯುಗವನ್ನು ನೆನಪಿಸುವ ವಹೀದಾ ರೆಹಮಾನ್ ಅವರು ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರ ‘ಪ್ಯಾಸಾ’ ಮತ್ತು ‘ಗೈಡ್’ ಚಿತ್ರಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ. ಪ್ರಚಂಡ ನಟನಾ ಪ್ರತಿಭೆ ಹೊಂದಿರುವ ವಹೀದಾ ಅವರ ಜೀವನದಲ್ಲಿ ‘ಪ್ಯಾಸಾ’ ತಿರುವು ತಂದ ಸಿನಿಮಾ ಎಂದರೆ ತಪ್ಪಾಗಲಾರದು. ಈ ಚಿತ್ರದಿಂದ ವಹೀದಾ ಮತ್ತು ನಟ, ನಿರ್ದೇಶಕ ಗುರುದತ್ (Gurudath) ಅವರ ಪ್ರಣಯ ಪ್ರಸಂಗ ಪ್ರಾರಂಭವಾಯಿತು. ಆ ಯುಗದಲ್ಲಿ ಅವರ ಜೋಡಿ ಅದ್ಭುತ ಹಿಟ್ ಆಗಿತ್ತು. ಅವರ ಆಫ್-ಸ್ಕ್ರೀನ್ ಕೆಮಿಸ್ಟ್ರಿ 'ಕಾಗಜ್ ಕೆ ಫೂಲ್' ಮತ್ತು 'ಚೌಧವಿಂ ಕಾ ಚಾಂದ್', 'ಸಾಹಿಬ್ ಬೀಬಿ ಔರ್ ಗುಲಾಮ್'ನಂತಹ ಚಲನಚಿತ್ರಗಳಲ್ಲಿ ಕಂಡುಬರುತ್ತದೆ. ಆದಾಗ್ಯೂ, ನಂತರ ಇಬ್ಬರೂ ಬೇರ್ಪಟ್ಟರು ಮತ್ತು ಗುರುದತ್ ಆತ್ಮಹತ್ಯೆ ಮಾಡಿಕೊಂಡರು. 

ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ ಜಾಕಿ ಶ್ರಾಫ್ ಆಯೇಷಾ ಲವ್‌ ಸ್ಟೋರಿ

ನಂತರ ಅವರ ಹೆಸರು ದೇವಾನಂದ್ (Dev Anand) ಜೊತೆ ತಳುಕು ಹಾಕಿಕೊಂಡಿತು. ವಹೀದಾ ರೆಹಮಾನ್ ಅವರ ಚಲನಚಿತ್ರ ವೃತ್ತಿಜೀವನದ ಯಶಸ್ಸಿನಲ್ಲಿ 'ಗೈಡ್' ಫಿಲಂ ಕೂಡ ದೊಡ್ಡ ಕೊಡುಗೆಯನ್ನು ಹೊಂದಿದೆ. ವಹೀದಾ ಮತ್ತು ದೇವ್ ಆನಂದ್ ಜೋಡಿ ತೆರೆಯ ಮೇಲೆ ಅದ್ಭುತಗಳನ್ನು ಮಾಡಿದೆ. ಈ ಚಿತ್ರಕ್ಕಾಗಿ ವಹೀದಾ ಫಿಲಂಫೇರ್ ಪ್ರಶಸ್ತಿಯನ್ನು ಪಡೆದರು. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ವಹೀದಾ ಅವರು ಹೇಳಿದ್ದು ಹೀಗೆ- ''ಚಿತ್ರೀಕರಣದ ಸಮಯದಲ್ಲಿ ನಾನು ಸೆಟ್‌ಗೆ ಬಂದಾಗ, ದೇವ್ ಅವರನ್ನು ಶುಭೋದಯ ಮಿಸ್ಟರ್ ಎಂದು ಕರೆಯುತ್ತಿದ್ದೆ. ಅವರು ನಾನು ದೇವ್ ಅಲ್ಲ, ನನ್ನನ್ನು 'ಗಾಡ್' ಎಂದು ಕರೆಯಿರಿ ಎನ್ನುತ್ತಿದ್ದರು. ವಯಸ್ಸು ಮತ್ತು ಅನುಭವ ಎರಡರಲ್ಲೂ ನೀವು ನನಗಿಂತ ದೊಡ್ಡವರು, ಆದ್ದರಿಂದ ನಾನು ನಿಮ್ಮೊಂದಿಗೆ ಈ ರೀತಿ ಮಾತನಾಡಲಾರೆ ಎನ್ನುತ್ತಿದ್ದೆ. ಆಗ ಅವರು, ನೀನು ನನ್ನ ಚಿತ್ರದ ನಾಯಕ ನಟಿ. ನನ್ನನ್ನು ಸರ್ ಅಥವಾ ಶ್ರೀ ಆನಂದ್ ಎಂದು ಕರೆದರೆ, ನಂತರ ನಾನು ನಿಮ್ಮೊಂದಿಗೆ ರೊಮ್ಯಾನ್ಸ್ ಮಾಡಲು ಕಷ್ಟವಾಗುತ್ತದೆ ಎನ್ನುತ್ತಿದ್ದರು.''

‘ಗೈಡ್’ ತನ್ನ ನೆಚ್ಚಿನ ಚಿತ್ರ ಎಂದು ಬಣ್ಣಿಸಿದ ವಹೀದಾ ರೆಹಮಾನ್, ಆ ಚಿತ್ರಕ್ಕಾಗಿ ನನಗೆ ಮೊದಲ ಬಾರಿಗೆ ಪ್ರಶಸ್ತಿ ಸಿಕ್ಕಿತು. ಈ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಯಾರೂ ಸಹಾನುಭೂತಿ ತೋರಿಸುವುದಿಲ್ಲ. ಹೀಗಾಗಿ ನನಗೆ ಈ ಪ್ರಶಸ್ತಿ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆ ಸಮಯದಲ್ಲಿ ಅಂತಹ ಪಾತ್ರಗಳು ನನಗೆ ಇಷ್ಟವಾಗಿದ್ದವು. ಆದ್ದರಿಂದ ನನಗೆ ಪ್ರಶಸ್ತಿ ಬಂದಾಗ ಆಶ್ಚರ್ಯವಾಯಿತು ಎನ್ನುತ್ತಾರೆ. 

ವಹೀದಾ ರೆಹಮಾನ್ ಕಳೆದ ಕೆಲವು ವರ್ಷಗಳವರೆಗೂ ನಟನೆಯಲ್ಲಿ ಸಕ್ರಿಯರಾಗಿದ್ದರು. 'ಲಮ್ಹೆ', 'ರಂಗ್ ದೇ ಬಸಂತಿ', 'ದೆಹಲಿ 6' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

click me!