
ವಿಶ್ವಾಸಂ ಚಿತ್ರದ ಮೂಲಕ ಕಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಂದರಿ ಅನಿಕಾ ಸುರೇಂದ್ರನ್ ಖಾಸಗಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಚಾರದ ಬಗ್ಗೆ ಅನಿಕಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿ ಘಟನೆ ಬಗ್ಗೆ ವಿವರಿಸಿದ್ದಾರೆ.
'ಎನ್ನೈ ಅರಿಂದಾಲ್'ನಲ್ಲಿ ತಲಾ ಅಜಿತ್‌ಗೆ ಪುತ್ರಿಯಾಗಿದ್ದ ಅನಿಕಾ ಸುರೇಂದ್ರನ್ ನಿಜಕ್ಕೂ ಯಾರು?
ಸಾಮಾನ್ಯವಾಗಿ ಅನಿಕಾ ಯಾವುದೇ ಫೋಟೋ ಶೂಟ್‌ನಲ್ಲಿ ಭಾಗಿಯಾದರೂ, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅದೇ ಔಟ್‌ಫಿಟ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಕೂಡ ಶೇರ್ ಮಾಡುತ್ತಾರೆ. ಆದರೆ ಎಲ್ಲೆಡೆ ವೈರಲ್ ಆಗುತ್ತಿರುವ ಬ್ಲಾಕ್ ಹಾಟ್, ಟಾಪ್‌ಲೆಸ್ ವಿಡಿಯೋ ನನ್ನದಲ್ಲ ಎಂದು ಅನಿಕಾ ಸ್ಪಷ್ಟನೆ ನೀಡಿದ್ದಾರೆ.
'ವಿಡಿಯೋದಲ್ಲಿ ಕಪ್ಪು ಟ್ರ್ಯಾನ್ಸಪರೆಂಟ್ ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿರುವುದು ನಾನಾಲ್ಲ. ಅದು ಎಡಿಟ್ ಮಾಡಿರುವ ವಿಡಿಯೋ. ಈ ವಿಡಿಯೋ ನೋಡಿ ನನಗೆ ತುಂಬಾ ಬೇಸರವಾಗಿದೆ. ತುಂಬಾ ತುಂಬಾ ನೋವಾಗಿದೆ. ನಾನು ಹಾಗೆಲ್ಲಾ ಮಾಡುವುದಿಲ್ಲ. ಈ ರೀತಿ ಯಾವುದೇ ಹುಡುಗಿಗೂ ಆಗಬಾರದು ಎಂಬ ಕಾರಣಕ್ಕೆ ನಾನು ಗಂಭೀರವಾಗಿ ಚಿಂತಿಸಿ, ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೀನಿ,'ಎಂದು ಅನಿಕಾ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅನಿಕಾ ಈ ವಿಚಾರ ಹಂಚಿಕೊಳ್ಳುತ್ತಿದ್ದಂತೆ ಕೆಲವೊಂದು ಟ್ರೋಲ್ ಪೇಜ್‌ಗಳಿಂದ ವಿಡಿಯೋ ಡಿಲೀಟ್ ಮಾಡಲಾಗಿದೆ. ಆದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು, ಯಾವ ಮನಸ್ಸಿನಿಂದ ಇಂಥದ್ದೊಂದು ಕೃತ್ಯಕ್ಕೆ ಕೈ ಹಾಕಿದ್ದಾರೆಂಬುವುದನ್ನು ಗೊತ್ತು ಮಾಡಲೇ ಕೊಳ್ಳಬೇಕೆಂದು, ಅನಿಕಾ ಹೇಳಿದ್ದಾರೆ. ಆ ವ್ಯಕ್ತಿಯನ್ನು ಪ್ರಶ್ನೆ ಮಾಡಲೇ ಬೇಕು ಎಂದಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.