ಪದ್ಮಾವತ್ ಸಿನಿಮಾಗೆ 3 ವರ್ಷ: ಭಾವುಕರಾದ ರಣವೀರ್-ದೀಪಿಕಾ

Published : Jan 26, 2021, 09:52 AM ISTUpdated : Jan 26, 2021, 10:04 AM IST
ಪದ್ಮಾವತ್ ಸಿನಿಮಾಗೆ 3 ವರ್ಷ: ಭಾವುಕರಾದ ರಣವೀರ್-ದೀಪಿಕಾ

ಸಾರಾಂಶ

ಪದ್ಮಾವತ್ ಸಿನಿಮಾ ಬಾಲಿವುಡ್‌ನ ಟಾಪ್ ಸಿನಿಮಾಗಳಲ್ಲಿ ಒಂದು. ಸಂಜಯ್ ಲೀಲಾ ಬನ್ಸಾಲಿ ಎಲ್ಲಾ ಸಿನಿಮಾಗಳಲ್ಲಿ ಮಾಡುವ ಮ್ಯಾಜಿಕ್ ಈ ಸಿನಿಮಾದಲ್ಲಿಯೂ ಮೂಡಿಬಂತು. ರಣವೀರ್ ಸಿಂಗ್- ದೀಪಿಕಾ ಪಡುಕೋಣೆಯ ಕಾಂಬೋ ಸೂಪರ್ ಹಿಟ್ ಆಯ್ತು. ಸಿನಿಮಾಗೆ ಸಂಬಂಧಿಸಿ ಅನ್‌ಸೀನ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ ಡೈರೆಕ್ಟರ್

ಸಿನಿಮಾದ ಬಿಟಿಎಸ್(ಬಿಹೈಂಡ್‌ ದ ಸೀನ್) ಯಾವಾಗಲೂ ಪ್ರೇಕ್ಷಕರಿಗೆ ಹೆಚ್ಚು ಆಪ್ತವಾಗುತ್ತದೆ. ತೆರೆಯ ಮೇಲಿನ ಪಾತ್ರಗಳ ನೈಜ್ಯತೆ ನೋಡಲು ಜನ ಇಷ್ಟಪಡುತ್ತಾರೆ. ಪದ್ಮಾವತ್‌ನಂತಹ ಹಿಟ್ ಸಿನಿಮಾದ ಭಾವುಕ ಬಿಟಿಎಸ್ ಶೇರ್ ಮಾಡಿದ್ದಾರೆ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ.

ಪದ್ಮಾವತ್ ಸಿನಿಮಾಗೆ 3 ವರ್ಷವಾಯ್ತು. ಸಿನಿಮಾ ಚಿತ್ರೀಕರಣ ಮುಗಿದಾಗ ಭಾವುಕವಾದ ಚಿತ್ರತಂಡ ಪ್ರತಿಕ್ರಿಯಿಸಿದ್ದು ಹೇಗೆ..? ಸಿನಿಮಾದ ಕಾಸ್ಟ್ಯೂಮ್ಸ್‌ನಲ್ಲಿಯೇ ಪಾತ್ರದಿಂದ ಹೊರಬಂದು ಭಾವುಕವಾದ ಕ್ಷಣ ಈ ವಿಡಿಯೋದಲ್ಲಿ ದಾಖಲಾಗಿದೆ.

ವಿವಾಹಿತನ ಮೇಲೆ ಸಿಕ್ಕಾಪಟ್ಟೆ ಲವ್: ಬಾಡಿ ತುಂಬಾ ಅಭಿನವ್ ಹೆಸರು ಬರೆದ ರಾಖಿ

ಕಷ್ಟಗಳ ಜ್ವಾಲೆಗಳು ಮಾತ್ರ ನಿಜವಾದ ವಜ್ರವನ್ನು ಬಿಚ್ಚಿಡಬಲ್ಲವು, ಉದಾಹರಣೆಗೆ ಪದ್ಮಾವತ್ ತಯಾರಿಯ ಕಥೆ. ದೊಡ್ಡ ಸೆಟ್, ಭಾರೀ ಪರ್ಫಾರ್ಮೆನ್ಸ್ ಬೇಕಾಗಿದ್ದ ಸಿನಿಮಾದ ಜರ್ನಿಗೆ ಮೂರು ವರ್ಷ ಎಂದು ಕ್ಯಾಪ್ಶನ್ ಕೊಡಲಾಗಿದೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾವನ್ನು ಬನ್ಸಾಲಿ ಪ್ರೊಡಕ್ಷನ್, ವಿಯಾಕಾಂ 18 ಮೋಷನ್ ಪಿಕ್ಚರ್ಸ್ ನಿರ್ಮಿಸಿತ್ತು. ಶಾಹೀದ್ ಕಪೂರ್, ಅದಿತಿ ರಾವ್ ಹೈದರಿ, ಜಿಮ್ ಸರ್ಭ್, ರಾಝಾ ಮುರಾದ್, ಅನುಪ್ರಿಯಾ ಗೋಯೆಂಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆ್ಯಂಕರ್ ಸುಮಾ-ರಾಜೀವ್ ವಿಚ್ಛೇದನ: ತಂದೆ-ತಾಯಿ ಡಿವೋರ್ಸ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಮಗ ರೋಶನ್
Record Breaking Collection.. ಬಾಲಯ್ಯರ 'ಅಖಂಡ 2' ಚಿತ್ರದ ಮೊದಲ ದಿನದ ಗಳಿಕೆ ಇಷ್ಟೊಂದು ಕೋಟಿನಾ?