
ಟಾಲಿವುಡ್ ಬಿಗ್ ಬಜೆಟ್ ಸಿನಿಮಾ 'ಕಣ್ಣಪ್ಪ'ದಲ್ಲಿ ನಟ ಪ್ರಭಾಸ್ ನಟಿಸುತ್ತಿದ್ದಾರೆ ಎಂಬ ಸುದ್ದಿಯೇ ಬಹಳಷ್ಟು ಜನರಿಗೆ ಮಿಂಚಿನ ಸಂಚಾರ ಉಂಟು ಮಾಡಿತ್ತು. ಇದೀಗ, ಕಣ್ಣಪ್ಪ ಚಿತ್ರದಲ್ಲಿನ ನಟ ಪ್ರಭಾಸ್ ಲುಕ್ ಬಹಿರಂಗವಾಗಿದೆ. ಅದು ಶಿವನ ರೌದ್ರಾವತಾರ, ಅಂದ್ರೆ 'ರುದ್ರ'ನ ರೂಪ! ಹೌದು, ನಟ ಪ್ರಭಾಸ್ ಕಣ್ಣಪ್ಪ ಚಿತ್ರದಲ್ಲಿ ಶಿವನ ಮತ್ತೊಂದು ರೂಪವಾಗಿರವ ರುದ್ರನ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಗೆಟಪ್ ಕೊನೆಗೂ ರಿವೀಲ್ ಆಗಿ ಅವರ ಅಭಿಮಾನಿಗಳಿಗೆ ಖುಷಿ ಜೊತೆಗೆ ರೋಮಾಂಚನ ಕೊಟ್ಟಿದೆ.
ವಿಷ್ಣು ಮಂಚು ಹೀರೋ ಆಗಿ ನಟಿಸುತ್ತಿರುವ 'ಕಣ್ಣಪ್ಪ' ಚಿತ್ರತಂಡದಿಂದ ಒಂದೊಂದೇ ಪಾತ್ರಗಳ ಲುಕ್ ಬಹಿರಂಗವಾಗತೊಡಗಿದೆ. ಈ ಮೊದಲು ಅಕ್ಷಯ್ ಕುಮಾರ್ ಲುಕ್ ಬಿಡುಗಡೆಯಾಗಿದ್ದು, ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರ ಲುಕ್ ಅದ್ಭುತವಾಗಿದೆ. ಮಂಚು ಫ್ಯಾಮಿಲಿ ಪ್ರತಿಷ್ಠೆಯಾಗಿ ನಿರ್ಮಿಸುತ್ತಿರುವ ಚಿತ್ರ 'ಕಣ್ಣಪ್ಪ'. ಭಕ್ತ ಕಣ್ಣಪ್ಪನ ಕಥೆಯಾಧಾರಿತ ಈ ಚಿತ್ರದಲ್ಲಿ ವಿಷ್ಣು ಮಂಚು ಟೈಟಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ದೊಡ್ಡ ಭಾರೀ ತಾರಾಬಳಗವನ್ನು ಹೊಂದಿದೆ.
2ನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಬರ್ತಿದೆ 'ಫೌಜಿ' ಸಿನಿಮಾ: ಪ್ರಭಾಸ್‌ಗೆ ಜೋಡಿಯಾಗ್ತಾರಾ ಸಾಯಿ ಪಲ್ಲವಿ
ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್, ಕಾಜಲ್, ಬ್ರಹ್ಮಾನಂದಂ ಮುಂತಾದವರು ನಟಿಸುತ್ತಿದ್ದಾರೆ. ಸುಮಾರು ಇನ್ನೂರು ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ನಟ ಮೋಹನ್ ಬಾಬು ಈ ಚಿತ್ರ ನಿರ್ಮಿಸುತ್ತಿದ್ದು, ಅವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರದಿಂದ ಒಂದೊಂದೇ ಪಾತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಮಂಚು ವಿಷ್ಣು, ಮೋಹನ್ ಲಾಲ್, ಕಾಜಲ್, ಶರತ್ ಕುಮಾರ್ ಮುಂತಾದವರ ಪಾತ್ರಗಳನ್ನು ಪರಿಚಯಿಸಲಾಗಿದೆ. ಸ್ವಲ್ಪ ಮೊದಲು ಬಾಲಿವುಡ್ ನಟ ಅಕ್ಷಯ್ ಕುಮಾರ್ 'ಶಿವ' ಪಾತ್ರವನ್ನು ಪರಿಚಯಿಸಲಾಗಿದೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ 'ರುದ್ರ' ಲುಕ್ ರಿವೀಲ್ ಆಗಿದೆ.
ಶಂಕರ್ ನಾಗ್ ಗುಟ್ಟು ಬಯಲು ಮಾಡಿದ 'ಸಿಬಿಐ ಶಂಕರ್' ನಟಿ ಸುಮನ್ ರಂಗನಾಥ್!
ಈ 'ಕಣ್ಣಪ್ಪ' ಸಿನಿಮಾವನ್ನು ಏಪ್ರಿಲ್-2025 ನಲ್ಲಿ ಥಿಯೇಟರ್‌ನಲ್ಲಿ ವೀಕ್ಷಿಸಬಹುದು ಎನ್ನಲಾಗಿದೆ. ಇದರಲ್ಲಿ ಪ್ರಭಾಸ್ ಪಾತ್ರ ಏನು ಎಂಬ ಕುತೂಹಲ ಇತ್ತು. ಇದರಲ್ಲಿ ಡಾರ್ಲಿಂಗ್ ನಂದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರ ಪಾತ್ರಕ್ಕೆ ಸಂಬಂಧಿಸಿದ ಆಸಕ್ತಿದಾಯಕ ವಿಷಯವೊಂದು ಹೊರಬಿದ್ದಿದೆ. ಇದರಲ್ಲಿ ಪ್ರಭಾಸ್ ಅತಿಥಿ ಪಾತ್ರ ಎಂದು ಹೇಳಿಲಾಗಿದ್ದರೂ, ಸುಮಾರು 30 ರಿಂದ 40 ನಿಮಿಷಗಳ ಕಾಲ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಪಾತ್ರವು ಬಹಳ ಮುಖ್ಯವಾಗಿರುತ್ತದೆ ಎಂದು ಸಹ ತಿಳಿದುಬಂದಿದೆ. ಕಣ್ಣಪ್ಪ ಚಿತ್ರದಲ್ಲಿ ನಟ ಪ್ರಭಾಸ್ ಪಾತ್ರ ಪ್ರಮುಖ ಅಂಶ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಪ್ರಭಾಸ್ ಲುಕ್ ಅನ್ನು ಬಿಡುಗಡೆ ಮಾಡಿರಲಿಲ್ಲ, ಇದೀಗ ಜಗಜ್ಜಾಹೀರಾಗಿದೆ. ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್‌ಗಳಿಂದ ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಏಪ್ರಿಲ್‌ನಲ್ಲಿ ತೆರೆಯಲ್ಲಿ ಪ್ರಭಾಸ್ ಸೇರಿದಂತೆ ಎಲ್ಲರನ್ನೂ ನೋಡಿ ಆನಂದಿಸಬಹುದು!
29 ವರ್ಷಗಳ ಬಳಿಕ ನಟ ಶಿವಣ್ಣ ಯಾಣಕ್ಕೆ ಭೇಟಿ: 'ನಮ್ಮೂರ ಮಂದಾರ ಹೂವೇ' ಪಾರ್ಟ್ 2 ಬರುತ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.