ಆಕ್ಟಿಂಗ್‌ ಕಲಿಯೋಕೆ ಹೊರಟ ಮೋನಾಲಿಸ, ಸೋಶಿಯಲ್‌ ಮೀಡಿಯಾದಲ್ಲಿ ಬಂದಿದ್ದು ಸುಳ್ಳು

Published : Feb 03, 2025, 01:05 PM ISTUpdated : Feb 03, 2025, 02:00 PM IST
ಆಕ್ಟಿಂಗ್‌ ಕಲಿಯೋಕೆ ಹೊರಟ ಮೋನಾಲಿಸ, ಸೋಶಿಯಲ್‌ ಮೀಡಿಯಾದಲ್ಲಿ ಬಂದಿದ್ದು ಸುಳ್ಳು

ಸಾರಾಂಶ

ಕುಂಭಮೇಳದಲ್ಲಿ ಸುಂದರಿ ಮೋನಾಲಿಸಾ ಈಗ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. 'ದಿ ಡೈರಿ ಆಫ್ ಮಣಿಪುರ' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ನಿರ್ದೇಶಕ ಸನೋಜ್ ಮಿಶ್ರಾ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೋನಾಲಿಸಾ, ನಟನಾ ತರಬೇತಿಗಾಗಿ ಮುಂಬೈಗೆ ತೆರಳುವುದಾಗಿ ತಿಳಿಸಿದ್ದಾರೆ.  ತಮಗೆ ಕಾರು,ಲಕ್ಷಾಂತರ ರೂಪಾಯಿ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. 

ಮಹಾಕುಂಭ ಮೇಳ (Mahakumbh Mela) ದಲ್ಲಿ ಸುಂದರ ಕಣ್ಣಿನ ಮೂಲಕವೇ ರಾತ್ರೋ ರಾತ್ರಿ ಪ್ರಸಿದ್ಧಿಗೆ ಬಂದ ಮೋನಾಲಿಸಾ (Mona Lisa) ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತನಗೆ ಸಿಕ್ಕ ಸಿನಿಮಾ ಆಫರ್, ಮುಂದಿನ ಕೆಲಸ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬರ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಮೋನಾಲಿಸ. ಮೋನಾಲಿಸಾಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ನಿರ್ದೇಶಕ ಸನೋಜ್ ಮಿಶ್ರಾ, ಸುಂದರ ಕಣ್ಣುಗಳ ಹುಡುಗಿಗೆ ಸಿನಿಮಾದಲ್ಲಿ ಆಕ್ಟಿಂಗ್ ಮಾಡಲು ಅವಕಾಶ ನೀಡೋದಾಗಿ ಹೇಳಿದ್ದರು. ದಿ ಡೈರಿ ಆಫ್ ಮಣಿಪುರ (The Diary of Manipur)ದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಮೋನಾಲಿಸಾ ಹಾಗೂ ಸನೋಜ್ ಮಿಶ್ರಾ (Sanoj Mishra) ಜೊತೆಗಿರುವ ಫೋಟೋ ಕೂಡ ವೈರಲ್ ಆಗಿತ್ತು. ಈ ಬಗ್ಗೆ ಮೋನಾಲಿಸಾ ಸ್ಪಷ್ಟನೆ ನೀಡಿದ್ದಾರೆ. 

ವಿಡಿಯೋ ಆರಂಭದಲ್ಲಿ ಮೋನಾಲಿಸಾ,  ನಾನು ಮೊನಾಲಿಸಾ. ನಾನು ರುದ್ರಾಕ್ಷಿ ಮಾಲೆಗಳನ್ನು ಮಾರಲು ಮಹಾ ಕುಂಭ ಮೇಳಕ್ಕೆ ಹೋಗಿದ್ದೆ. ಮಹಾದೇವನ ಆಶೀರ್ವಾದ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ನಾನು ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದೇನೆ. ನಿಮ್ಮೆಲ್ಲರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಕಾರಣದಿಂದಾಗಿ, ನನಗೆ ದಿ ಡೈರಿ ಆಫ್ ಮಣಿಪುರ ಎಂಬ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಈ ಸಿನಿಮಾ ನಿರ್ದೇಶಕರು ಸನೋಜ್ ಮಿಶ್ರಾ. ಅವರು ನನ್ನ ಮನೆಗೆ ಬಂದಿದ್ದರು. ಸಿನಿಮಾಕ್ಕೆ ಸಹಿ ಪಡೆದು ಹೋಗಿದ್ದಾರೆ ಎಂದಿದ್ದಾರೆ.

ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಮೊದಲ ಬಾಲಿವುಡ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು?

ಆಕ್ಟಿಂಗ್ ತರಬೇತಿ ಪಡೆಯಲಿರುವ ಮೋನಾಲಿಸ : ಮಾತು ಮುಂದುವರೆಸಿದ ಮೋನಾಲಿಸಾ, ನಾನು ಸಿನಿಮಾದಲ್ಲಿ ನಟಿಸುವ ಮುನ್ನ ಆಕ್ಟಿಂಗ್ ಕಲಿಯಬೇಕಾಗಿದೆ. ನನ್ನ ಮುಂದಿನ ಕೆಲಸ ಆಕ್ಟಿಂಗ್ ಕಲಿಯೋದು. ಅದಕ್ಕೆ ನಾನು ಹೋಗ್ತಿದ್ದೇನೆ ಎಂದಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಹೀಗೆ ಮುಂದುವರಿಯಲಿ, ನನಗೆ ತುಂಬಾ ಸಂತೋಷವಾಗಿದೆ ಎಂದು ಮೋನಾಲಿಸಾ ಜನತೆಗೆ ಧನ್ಯವಾದ ಹೇಳಿದ್ದಾರೆ. ಮಾಹಿತಿ ಪ್ರಕಾರ ಮೋನಾಲಿಸಾ, ಮುಂಬೈನಲ್ಲಿ ನಟನಾ ತರಬೇತಿ ಪಡೆಯಲಿದ್ದಾರೆ. 

ಮೋನಾಲಿಸ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ : ಇದೇ ವಿಡಿಯೋದಲ್ಲಿ ಮೋನಾಲಿಸಾ ತಮ್ಮ ಬಗ್ಗೆ ಹಬ್ಬಿರುವ ಸುಳ್ಳು ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ, ನನಗೆ ಲಕ್ಷ ರೂಪಾಯಿ ಸಿಕ್ಕಿದೆ, ನನಗೆ ಕಾರು ಕೊಟ್ಟಿದ್ದಾರೆ ಎಂಬೆಲ್ಲ ಸುದ್ದಿ ಹರಡಿದೆ. ಇದೆಲ್ಲ ಸುಳ್ಳು ಎಂದು ಮೋನಾಲಿಸ ಹೇಳಿದ್ದಾರೆ. ಸನೋಜ್ ಮಿಶ್ರಾ ಮನೆಗೆ ಬಂದಿದ್ದು ಸತ್ಯ. ಅವರು ಮುಂಬೈನಿಂದ ನಮ್ಮ ಮನೆಗೆ ಬಂದಿದ್ದರು. ಸಿನಿಮಾದಲ್ಲಿ ನಟಿಸಲು ನನ್ನನ್ನು ಕೇಳಿಕೊಂಡ್ರು. ಇದ್ರಿಂದ ನಾನು ಖುಷಿಯಾಗಿದ್ದೇನೆ ಎಂದು ಮೋನಾಲಿಸ ಹೇಳಿದ್ದಾರೆ.

ವೈರಲ್‌ ಬ್ಯೂಟಿ ಮೊನಾಲಿಸಾ ಸ್ಟಾರ್‌ ಡೈರೆಕ್ಟರ್‌ ಸಿನಿಮಾದಲ್ಲಿ

ಮೋನಾಲಿಸಾ ಕುಂಭ ಮೇಳ ಶುರುವಾದ ಕೆಲವೇ ದಿನಗಳಲ್ಲಿ ಪ್ರಸಿದ್ಧಿಗೆ ಬಂದ ಹುಡುಗಿ. ಮೋನಾಲಿಸ ಸುಂದರ ಕಣ್ಣು ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಜನರು ಮರುಳಾಗಿದ್ದಾರೆ. ಆದ್ರೆ ಅವರ ಪ್ರಸಿದ್ಧಿ ಒಂದ್ಕಡೆ ಮಾಲೆ ವ್ಯಾಪಾರಕ್ಕೆ ಅಡ್ಡಿಯಾಯ್ತು. ಇಡೀ ದಿನ ಒಂದಾದ್ಮೇಲೆ ಒಂದು ಕ್ಯಾಮರಾ, ಸೆಲ್ಫಿಗಾಗಿ ಜನ ಹಿಂದೆ ಬಿದ್ದ ಕಾರಣ,  15 ದಿನಗಳಲ್ಲಿ ಮಹಾಕುಂಭ ಮೇಳ ಬಿಟ್ಟು, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ತಮ್ಮ ಮನೆಗೆ ವಾಪಸ್ ಆದ್ರು ಮೋನಾಲಿಸ.  ಆದ್ರೆ ಅವರ ಪ್ರಸಿದ್ಧಿ ಸಿನಿಮಾದಲ್ಲಿ ನಟಿಸುವ ಅವಕಾಶ ತಂದುಕೊಟ್ಟಿದೆ. ಅಷ್ಟೇ ಅಲ್ಲ ಈಗ ಮೋನಾಲಿಸ ಏನ್ ಮಾಡಿದ್ರೂ ಸುದ್ದಿಯಾಗ್ತಿದ್ದಾರೆ. ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಮೋನಾಲಿಸ ವ್ಲಾಗ್ ಶುರು ಮಾಡಿದ್ದಾರೆ. ಅಡುಗೆ ಮಾಡುವ, ಪಾತ್ರೆ ತೊಳೆಯುವ ಅವರ ವಿಡಿಯೋಕ್ಕೆ ಲಕ್ಷಾಂತರ ವ್ಯೂವ್ಸ್ ಬರ್ತಿದೆ. ನೀವು ನ್ಯಾಚ್ಯುರಲ್ ಆಗಿರಿ, ಮೇಕಪ್  ಬೇಡ ಎಂದು ಬಳಕೆದಾರರು ಸಲಹೆ ನೀಡ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!