ವಿರಾಟ್-ಅನುಷ್ಕಾ ವಿದೇಶದಲ್ಲಿ ನೆಲೆಸಲು ನಿರ್ಧರಿಸಿದ್ದೇಕೆ? ಬಯಲಾಯ್ತು ಇಬ್ಬರ ರಹಸ್ಯ

Published : Apr 27, 2025, 04:30 PM ISTUpdated : Apr 27, 2025, 05:14 PM IST
ವಿರಾಟ್-ಅನುಷ್ಕಾ ವಿದೇಶದಲ್ಲಿ ನೆಲೆಸಲು ನಿರ್ಧರಿಸಿದ್ದೇಕೆ?  ಬಯಲಾಯ್ತು ಇಬ್ಬರ ರಹಸ್ಯ

ಸಾರಾಂಶ

Virat Kohli And Anushka Sharma why Shift London: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ವಿದೇಶದಲ್ಲಿ ನೆಲೆಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೇನೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಜಗತ್ತಿನ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದೇಶ ತೊರೆಯುತ್ತಿರುವ ವಿಷಯ ಮತ್ತೊಮ್ಮೆ ಮುನ್ನಲೆ ಬಂದಿದೆ. ಭಾರತೀಯರಾದ ಈ ಜೋಡಿ ವಿದೇಶದಲ್ಲಿ ಸೆಟೆಲ್ ಆಗುವ ನಿರ್ಧಾರ ತೆಗೆದುಕೊಂಡಿದ್ಯಾಕೆ ಎಂಬುದರ ರಹಸ್ಯ ಇಲ್ಲಿದೆ. ಆದ್ರೆ ಈವರೆಗೆ ಈ ಜೋಡಿ ವಿದೇಶದಲ್ಲಿ ಸೆಟೆಲ್ ಆಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೂ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಜೋಡಿ ವಿದೇಶಕ್ಕೆ ಹೋಗುವ ನಿರ್ಧಾರ ತೆಗೆದುಕೊಂಡಿದ್ಯಾಕೆ ಎಂಬುದರ ಮಾಹಿತಿಯನ್ನು ಬಾಲಿವುಡ್‌ನ ಖ್ಯಾತ ನಟಿಯ ಪತಿ ಹೇಳಿದ್ದಾರೆ.

ಬಾಲಿವುಡ್ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಪತಿ ಡಾ.ಶ್ರೀರಾಮ್ ನೇನೆ ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಾನು ಕಳೆದ ವರ್ಷ  ಅನುಷ್ಕಾ ಶರ್ಮಾ ಅವರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ಅನುಷ್ಕಾ ಶರ್ಮಾ ಪತಿ ಮತ್ತು ಮಕ್ಕಳೊಂದಿಗೆ ಲಂಡನ್‌ಗ್ ತೆರಳುವ ಕುರಿತು ಪ್ಲಾನ್ ಮಾಡುತ್ತಿದ್ದರು. ಜನಪ್ರಿಯತೆಯೇ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ದೊಡ್ಡ ಸಮಸ್ಯೆಯಾಗಿದೆ. ತಮ್ಮ ಯಶಸ್ಸನ್ನು ಸಂಪೂರ್ಣವಾಗಿ ಆನಂದಿಸಲು  ವಿರುಷ್ಕಾ ಜೋಡಿಗೆ ಆಗುತ್ತಿಲ್ಲ. ಅನುಷ್ಕಾ ಮತ್ತು ವಿರಾಟ್ ಸಾಮನ್ಯ ಜನರಂತೆ ಸರಳವಾಗಿ ಜೀವನ ನಡೆಸಲು ಇಷ್ಟಪಡುತ್ತಾರೆ. ಅದ್ರೆ ಅದು ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲೇ ಹೋದರು ಜನರು ಅವರನ್ನು ಸುತ್ತುವರಿಯುತ್ತಾರೆ ಎಂದು ಹೇಳಿದ್ದಾರೆ. 

ಮಕ್ಕಳಿಗಾಗಿ ದೇಶ ತೊರೆಯುವ ನಿರ್ಧಾರ!
ಅನುಷ್ಕಾ ಮತ್ತು ವಿರಾಟ್ ತಮ್ಮ ಮಕ್ಕಳನ್ನು ತಮ್ಮನ್ನ ಸುತ್ತವರಿಯುವ ಲೋಕ ಮತ್ತು ಜನರಿಂದ ದೂರವಿಡಲು ಬಯಸುತ್ತಾರೆ. ಮಕ್ಕಳನ್ನು ಸಹ ಕ್ಯಾಮೆರಾಗಳಿಂದ ದೂರ ಬೆಳೆಸಲು ಬಯಸುತ್ತಾರೆ. ಇಬ್ಬರು ಮಕ್ಕಳು ಗ್ಲ್ಯಾಮರ್ ಮತ್ತು ವಿಐಪಿ ಸಂಸ್ಕೃತಿಯಿಂದ ದೂರ ಕರೆದುಕೊಂಡು ಹೋಗಲು ಇಷ್ಟಪಡುತ್ತಾರೆ. ಅನುಷ್ಕಾ ಮತ್ತು ವಿರಾಟ್ ಮಕ್ಕಳಿಗೂ ಒಳ್ಳೆಯ ಬದುಕು ಕೊಡಲು ಪ್ರಯತ್ನಿಸುತ್ತಿದ್ದಾರೆ. ಇದು ತುಂಬಾ ಕಷ್ಟ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಹಲವು ಬಾರಿ ನಾವು ಖಾಸಗಿಯಾಗಿ ಸಮಯ ಕಳೆಯಲು ಹೋದಾಗ ಅಭಿಮಾನಿಗಳು ಸೆಲ್ಫಿಗಾಗಿ ಬರುತ್ತಾರೆ. ಆಗ ನಾವು ಅನಿವಾರ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದರಿಂದ ದೂರ ಉಳಿಯಬೇಕಾಗುತ್ತದೆ. ಇದು ಮಕ್ಕಳ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಶ್ರೀರಾಮ್‌ ನೇನೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಅನುಷ್ಕಾ ಮತ್ತು ವಿರಾಟ್ ಇಬ್ಬರೂ ತಮ್ಮ ಮಕ್ಕಳಿಗೆ ತೊಂದರೆ ಕೊಡುವ ವಿಷಯಗಳಿಂದ ತೊಂದರೆಗೊಳಗಾಗಬಾರದು ಎಂದು ಅವರು ಭಾರತವನ್ನು ತೊರೆದು ವಿದೇಶಕ್ಕೆ ಹೋಗಲು ನಿರ್ಧರಿಸಿದ್ದಾರೆ ಎಂಬ ವಿಷಯವನ್ನು ಶ್ರೀರಾಮ್ ನೇನೆ ರಿವೀಲ್ ಮಾಡಿದ್ದಾರೆ. ನಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಅನುಷ್ಕಾ ವಿದೇಶದಲ್ಲಿ ಜೀವನದ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದರು ಎಂಬ ಮಾತನ್ನು ಶ್ರೀರಾಮ್‌ ನೇನೆ ಸೇರಿಸಿದರು.

ಮೂವರು ಖಾನ್ ಜೊತೆಯಲ್ಲಿಯೂ ಅನುಷ್ಕಾ ನಟನೆ
ರಬ್‌ ನೇ ಬನಾ ದಿ ಜೋಡಿ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಅನುಷ್ಕಾ ಶರ್ಮಾ, ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ಬಿಡುಗಡೆಯಾದ ಈ ಸಿನಿಮಾ ಅನುಷ್ಕಾ ಶರ್ಮಾಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತ್ತು. ಬ್ಯಾಂಡ್ ಬಾಜಾ ಭಾರತ್, ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್, ಜಬ್ ತಕ್ ಹೈ ಜಾನ್, ಪಿಕೆ, ಎನ್‌ಹೆಚ್ 10, ಏ ದಿಲ್ ಹೈ ಮುಷ್ಕಿಲ್, ಸುಲ್ತಾನ್, ಪರಿ, ಸಂಜು, ಜೀರೋ, ಸೂಯಿ ದಾಗಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಖಾನ್ ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಜೊತೆಯಲ್ಲಿಯೂ ಅನುಷ್ಕಾ ಶರ್ಮಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?