ಈ ಹಾಡು ಪ್ರಶಸ್ತಿ ಗೆಲ್ಲತ್ತೋ ಇಲ್ವೋ ಎಂದು ಕೋಟಿ ಕೋಟಿ ಬೆಟ್ಟಿಂಗ್​! ಸಿನಿ ಇಂಡಸ್ಟ್ರಿ ಇತಿಹಾಸ ಇದು

Published : Apr 27, 2025, 04:26 PM ISTUpdated : Apr 27, 2025, 05:56 PM IST
ಈ ಹಾಡು ಪ್ರಶಸ್ತಿ ಗೆಲ್ಲತ್ತೋ ಇಲ್ವೋ ಎಂದು ಕೋಟಿ ಕೋಟಿ ಬೆಟ್ಟಿಂಗ್​! ಸಿನಿ ಇಂಡಸ್ಟ್ರಿ ಇತಿಹಾಸ ಇದು

ಸಾರಾಂಶ

ಆರ್‌ಆರ್‌ಆರ್‌ ಚಿತ್ರದ "ನಾಟು ನಾಟು" ಹಾಡು ಆಸ್ಕರ್‌ ಪ್ರಶಸ್ತಿ ಗೆಲ್ಲುವ ಕುರಿತು ಕೋಟಿಗಟ್ಟಲೆ ಬೆಟ್ಟಿಂಗ್ ನಡೆದಿತ್ತು. ಹಾಡಿನ ಯಶಸ್ಸಿನ ನಿರೀಕ್ಷೆಯಲ್ಲಿ ಸಿನಿ ತಾರೆಯರು ಸೇರಿದಂತೆ ಹಲವರು ಆನ್‌ಲೈನ್‌ ವೇದಿಕೆಗಳಲ್ಲಿ ಬೆಟ್ಟಿಂಗ್‌ನಲ್ಲಿ ಭಾಗವಹಿಸಿದ್ದರು. "ನಾಟು ನಾಟು" ಉತ್ತಮ ಮೂಲ ಹಾಡಿಗಾಗಿ ಆಸ್ಕರ್‌ ಗೆದ್ದು ಭಾರತಕ್ಕೆ ಕೀರ್ತಿ ತಂದಿದೆ. ಈ ಐತಿಹಾಸಿಕ ಗೆಲುವು ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣ.

ಒಂದೇ ಒಂದು ಹಾಡಿಗಾಗಿ ಕೋಟಿ ಕೋಟಿ ರೂಪಾಯಿಗಳ ಬೆಟ್ಟಿಂಗ್​ ನಡೆದಿತ್ತು ಎನ್ನುವುದು ನಿಮಗೆ ಗೊತ್ತಾ? ಸಿನಿಮಾ ಕ್ಷೇತ್ರದಲ್ಲಿಯೇ ಇತಿಹಾಸ ಸೃಷ್ಟಿಸಿದ ಈ ಹಾಡಿನ ರೋಚಕ ಸ್ಟೋರಿ ಇಲ್ಲಿದೆ. ಈ ಹಾಡು ಪ್ರಶಸ್ತಿ ಗೆಲ್ಲುತ್ತದೆಯೋ ಇಲ್ಲವೋ ಎಂದು ಪರ-ವಿರೋಧ ನಿಲುವು ವ್ಯಕ್ತವಾಗಿದ್ದು, ಅದಕ್ಕಾಗಿ ಸಿನಿ ತಾರೆಯರೂ ಸೇರಿದಂತೆ ಹಲವು ಕ್ಷೇತ್ರಗಳವರು ಕೋಟಿಯಲ್ಲಿ ಬೆಟ್ಟಿಂಗ್​  ಕಟ್ಟಿದ್ದರು. ಅದೇ RRR ಸಿನಿಮಾದ ನಾಟು ನಾಟು ಹಾಡು! ಈ ಹಾಡು ಸೃಷ್ಟಿಸಿದ್ದ ಸಂಚಲನ ಬೇರೆ ಹೇಳಬೇಕಾಗಿಲ್ಲ. ತೆಲಗು ಮೂಲಕ ಆರ್​ಆರ್​ಆರ್​ 2022ರಲ್ಲಿ ರಿಲೀಸ್​ ಆಗಿತ್ತು. ಬಳಿಕ ಅದನ್ನು ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಡಬ್​ ಮಾಡಲಾಗಿದೆ. ಅಷ್ಟಕ್ಕೂ, RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಭಾರತವನ್ನು ಪ್ರತಿನಿಧಿಸಿದ್ದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ (Natu Natu) ಹಾಡಿಗೆ  ಆಸ್ಕರ್ ಪ್ರಶಸ್ತಿ ಸಂದಿದೆ. ಈ ಮೂಲಕ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರದ ನಂತರ  'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿ ಬಾಚಿಕೊಂಡಿದೆ. 

ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ ಲಭಿಸಿದೆ. ರಾಜಮೌಳಿ   ನಿರ್ದೇಶನದಲ್ಲಿ ಮೂಡಿ ಬಂದ RRR ಚಿತ್ರದ ಈ ಹಾಡು ಆಸ್ಕರ್ ತರುವ ಭರವಸೆಯನ್ನೂ ಮೂಡಿಸಿತ್ತು. ಆಸ್ಕರ್ ವೇದಿಕೆಯ ಮೇಲೆ ಈ ಹಾಡನ್ನು ಗಾಯಕರಾದ ಸಿಪ್ಲಿಗಂಜ ಹಾಗೂ ಕಾಲಭೈರವ ಹಾಡಿದರು. ಅಮೆರಿಕದ ನಟ, ಡಾನ್ಸರ್ ಲಾರೆನ್ ಗೋತ್ಲಿಬ್ ನೃತ್ಯ ಮಾಡಿದರು. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ನಾಟು, ನಾಟು ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದೆ.

ಮೊದಲ ಬಾರಿ ಲಿಪ್​ಲಾಕ್​​ ಮಾಡಿ ಪಡಬಾರದ ಪಾಡು ಪಟ್ಟ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

 ಈ ಹಾಡು ಆಸ್ಕರ್ (Oscar) ಪ್ರಶಸ್ತಿಗಳ ಪಟ್ಟಿಯಲ್ಲಿ ನಾಮಿನೇಷನ್ ಆಗುತ್ತಿದ್ದಂತೆಯೇ  ಎಲ್ಲರ  ಗಮನ  ಈ ಪ್ರಶಸ್ತಿಯ ಮೇಲೆ ಬಿದ್ದಿತ್ತು. ಪ್ರಶಸ್ತಿ ಗೆಲುವ ವಿಚಾರ ಕೋಟಿಗಟ್ಟಲೆ ಬೆಟ್ಟಿಂಗ್ ವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ. ಈ ಹಾಡಿಗೆ ಗೋಲ್ಡನ್​ ಗ್ಲೋಬ್​ ಅವಾರ್ಡ್​ ಸಿಗುತ್ತಲೇ ಭಾರಿ ಸುದ್ದಿ ಮಾಡಿತ್ತು. ನಂತರ ಆಸ್ಕರ್​ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುತ್ತಲೇ ಕೋಟಿಗಟ್ಟಲೆ ಲೆಕ್ಕದಲ್ಲಿ ಬೆಟ್ಟಿಂಗ್​ ಶುರುವಾಗಿತ್ತು ಎನ್ನಲಾಗುತ್ತಿದೆ. ಈ ಹಾಡು  ಆಸ್ಕರ್ ಗೆದ್ದೇ ಗೆಲ್ಲುತ್ತದೆ ಎಂಬ ಗ್ಯಾರೆಂಟಿ ಜನರಲ್ಲಿ ಇತ್ತು. ಅದಕ್ಕಾಗಿಯೇ ಬೆಟ್ಟಿಂಗ್​ ಕೂಡ ನಡೆದಿತ್ತು. ಒಂದಿಷ್ಟು ಮಂದಿ ಈ ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಗುವುದಿಲ್ಲ ಎಂದಿದ್ದರೆ, ಮತ್ತೊಂದಿಷ್ಟು ಮಂದಿ ಇದು ಪ್ರಶಸ್ತಿಯನ್ನು ಬಾಚುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅಂತೂ ಪಾಸಿಟಿವ್​ ಆಗಿದ್ದ ಜನರ ಮಾತು ಗೆದ್ದಿದೆ.  ಉತ್ತಮ ಮೂಲ ಹಾಡು (Best Original Song) ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.  

 ಐಪಿಎಲ್ ಸೀಸನ್, ಮಹತ್ವದ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಬೆಟ್ಟಿಂಗ್ ಇದೀಗ ಅವಾರ್ಡ್ ವಿಚಾರದಲ್ಲೂ ಭಾರೀ ಸದ್ದು ಮಾಡಿದೆ. ಹಿಂದೆಂದೂ ಕಾಣದಷ್ಟು ಈ ಬಾರಿ ಆಸ್ಕರ್ ಸಮಾರಂಭದಲ್ಲಿ ಬೆಟ್ಟಿಂಗ್ ನಡೆದಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಬೆಟ್ಟಿಂಗ್​ ನಡೆದದ್ದು ಆನ್​ಲೈನ್​ನಲ್ಲಿ (Online Betting) ಎನ್ನಲಾಗುತ್ತಿದೆ. ಆನ್​ಲೈನ್​ ಫ್ಲ್ಯಾಟ್​ಫಾರ್ಮ್​ನಲ್ಲಿ  ಕೋಟಿಗಟ್ಟಲೆ ಹಣ ಕಟ್ಟಿರುವ ವರದಿ ಆಗಿದೆ. ಬೆಂಗಳೂರು ಕೂಡ ಸೇರಿದಂತೆ ಮುಂಬೈ, ಹೈದರಾಬಾದ್​ಗಳಲ್ಲಿ  ಆನ್​ಲೈನ್​ ಬುಕ್ಕಿಗಳು 1:4 ರ ರೇಂಜಿನಲ್ಲಿ ಕೋಟಿಗಳಲ್ಲಿ ಬೆಟ್ಟಿಂಗ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸಾಮಾನ್ಯ ಜನರಷ್ಟೇ ಅಲ್ಲದೇ, ನಾಟು ನಾಟುವಿನ ಬೆಟ್ಟಿಂಗ್​ನಲ್ಲಿ  ಹಲವು ಸೆಲೆಬ್ರಿಟಿಗಳು  ಕೂಡ ಭಾಗಿಯಾಗಿದ್ದರು ಎಂಬ ವರದಿ ಇದೆ.  

Saanvi Sudeep: ಸದ್ದಿಲ್ಲದೇ ಟಾಲಿವುಡ್​ಗೆ ಎಂಟ್ರಿಕೊಟ್ಟ ಸಾನ್ವಿ ಸುದೀಪ್​! ವಿಷ್ಯ ರಿವೀಲ್​ ಮಾಡಿದ ನಟ ನಾನಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!