
ಆಫ್ರಿಕಾದ ತಾಂಜೇನಿಯ ಇನ್ಸ್ಟಾಗ್ರಾಮ್ ಸೆನ್ಸೇಷನ್ ಕಿಲಿ ಪೌಲ್(Kili Paul) ಮತ್ತು ಅವರ ಸಹೋದರಿ ನೀಮಾ ಪೌಲ್ ಇವರಿಬ್ಬರು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತರು. ಸಾಮಾಜಿಕ ಜಾಲತಾಣ ಹೆಚ್ಚು ಬಳಸುವವರಿಗೆ ಇವರು ಖಂಡಿತವಾಗಿ ಗೊತ್ತಿರುತ್ತಾರೆ. ಆಫ್ರಿಕಾದ ಕಂಟೆಂಟ್ ಕ್ರಿಯೇಟರ್, ಲಿಪ್ ಸಿಂಗ್ ಕಲಾವಿದರ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. 5 ಜನ ಏಕಾಏಕಿ ನಡೆಸಿದ ದಾಳಿಗೆ ಕಿಲಿ ಪೌಲ್ ಕೈಗೆ ಏಟಾಗಿದೆ. ಈ ಬಗ್ಗೆ ಕಿಲಿ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ, ದಯವಿಟ್ಟು ತನಗಾಗಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ.
ಕಿಲಿ ಪೌಲ್ ಮತ್ತು ಸಹೋದರಿ ನೀಮಾ ಪೌಲ್ ಇಬ್ಬರು ಭಾರತದ ಹಾಡುಗಳಿಗೆ ಲಿಪ್ ಸಿಂಗ್ ಮಾಡುವ ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದರು. ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಬಹುತೇಕ ಭಾಷೆಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ರೀಲ್ ಮಾಡುತ್ತಿದ್ದಾರೆ. ಕಿಲಿ ಪೌಲ್ ರೀಲ್ ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್ ಭಾರತೀಯರಿಗು ಅಚ್ಚುಮೆಚ್ಚಾಗಿದ್ದಾರೆ.
ಹಲ್ಲೆ ಬಗ್ಗೆ ಕಿಲ್ ಪೌಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಶೇರ್ ಮಾಡಿದ್ದಾರೆ. ಜೊತೆಗೆ ಹಲ್ಲೆ ಬಗ್ಗೆ ಬರೆದುಕೊಂಡಿದ್ದಾರೆ. '5 ಜನರು ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಆಗ ನಾನು ನನ್ನ ರಕ್ಷಣೆ ಮಾಡಿಕೊಳ್ಳಲು ಮುಂದಾದಾಗ ನನ್ನ ಬಲಗೈ ಹೆಬ್ಬೆರಳಿಗೆ ಏಟಾಗಿದೆ. ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ನನ್ನ ಕೈಗೆ 5 ಹೊಲಿಗೆ ಹಾಕಲಾಗಿದೆ. ನನ್ನ ಮೇಲೆ ದೊಣ್ಣೆಯಿಂದ ಸಹ ಹೊಡೆದಿದ್ದಾರೆ. ದೇವರು ದೊಡ್ಡವನು ನಾನು ನನ್ನನ್ನು ರಕ್ಷಸಿಕೊಂಡೆ. ಎಲ್ಲಿಂದ 2 ಓಡಿ ಹೋದರು. ನಾನು ಆಗಲೇ ಗಾಯಗೊಂಡಿದ್ದೆ. ದಯವಿಟ್ಟು ನನಗಾಗಿ ಪ್ರಾರ್ಥಿಸಿ' ಎಂದು ಹೇಳಿದ್ದಾರೆ. ಗಾಯವಾಗಿ ಬೆಡ್ ಮೇಲೆ ಮಲಗಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ತಾಂಜೇನಿಯಾದಲ್ಲೂ ಕೆಜಿಎಫ್ 2 ಹವಾ; ಕಿಲಿ ಪಾಲ್ ಬಾಯಲ್ಲಿ ಕೆಜಿಎಫ್ ಡೈಲಾಗ್.!
ಅಂದಹಾಗೆ ಕಿಲಿ ಪೌಲ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹೊಗಳಿದ್ದರು. ಬಳಿಕ ಕಿಲಿ ಪೌಲ್ ಧನ್ಯವಾದ ತಿಳಿಸಿದ್ದರು. ಪ್ರಧಾನಿ ಮೋದಿ ಬೇರೆ ಬೇರೆ ಭಾಷೆಯ ಭಾರತೀಯ ಹಾಡುಗಳಿಗೆ ವಿಡಿಯೋ ಮಾಡುವಂತೆ ಸಲಹೆ ನೀಡಿದ್ದರು. ಮೋದಿ ಮಾತಿಗೆ ಕಿಲಿ ಪೌಲ್ ಸಂತೋಷಗೊಂಡಿದ್ದರು. ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ್ದರು.
ಇತ್ತೀಚಿಗಷ್ಟೆ ಕಿಲಿ ಪೌಲ್ ಕನ್ನಡದ ಕೆಜಿಎಫ್ ಹಾಡಿಗೂ ಲಿಪ್ ಸಿಂಗ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆರ್ ಆರ್ ಆರ್ ಸಿನಿಮಾ, ಸಮಂತಾ ಅವರ ಪುಷ್ಪ ಸಿನಿಮಾದ ಹಾಡು ಸೇರಿದಂತೆ ಅನೇಕ ಪ್ರಸಿದ್ಧ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಸಿಕ್ಕಾಟ್ಟೆ ಫೇಮಸ್ ಆಗಿದ್ದರು.
Mann Ki baat ಮನ್ ಕಿ ಬಾತ್‌ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪೌಲ್ ಸೃಜನಶೀಲತೆಗೆ ಮೋದಿ ಶಹಬ್ಬಾಸ್!
ಸದ್ಯ ಕಿಲಿ ಪೌಲ್ ಬೇಗ ಗುಣಮುಕರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಂಡು ಮತ್ತಷ್ಟು ಹಾಡುಗಳಿಗೆ ರೀಲ್ ಮಾಡಲಿ ಎಂದು ಹಾರೈಸುತ್ತಿದ್ದಾರೆ. ಅಂದಹಾಗೆ ಕಿಲಿ ಪೌಲ್ ಮೇಲೆ ಹಲ್ಲೆ ನಡೆದಿದ್ದು ಯಾಕೆ ಎನ್ನುವ ಬಗ್ಗೆ ಬಹಿರಂಗ ಪಡಿಸಿಲ್ಲ."
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.