ಹೀರೋಗಳ ಎದುರು ವಿಲನ್ ಆಗಿ ನಟ ರಘುವರನ್ ತೆರೆಯ ಮೇಲೆ ಬಂದರೆ ಥಿಯೇಟರ್‌ನಲ್ಲಿ ಇರುವ ಅದೆಷ್ಟೋ ಚಿಕ್ಕ ಮಕ್ಕಳ ಚಡ್ಡಿ ಒದ್ದೆಯಾಗುತ್ತಿತ್ತು ಎನ್ನುವ ಸಂಗತಿ ಗುಟ್ಟಾಗಿಯೇನೂ ಉಳಿದಿರಲಿಲ್ಲ, ಮಕ್ಕಳಷ್ಟೇ ಏಕೆ, ಅದೆಷ್ಟೋ ಪೋಷಕರು ತಮ್ಮ ಮಡಲಲ್ಲಿ ಕುಳಿತಿದ್ದ ಮಕ್ಕಳನ್ನು ಕೆಳಗೆ ಬೀಳಿಸಿದ ಉದಾಹರಣೆಗಳೂ ಇವೆಯಂತೆ.
ನಟ ರಘುವರನ್ ಯಾರೂ ಯಾವತ್ತೂ ಮರೆಯಲಾಗದ ನಟ. ರಘುವರನ್ ಖಡಕ್ ಧ್ವನಿಗೆ ಅದೆಷ್ಟೋ ಬಾರಿ ಹೀರೋ ಪಾತ್ರಧಾರಿಗಳು ಶೂಟಿಂಗ್ ಸ್ಪಾಟ್‌ನಲ್ಲಿ ಬೆಚ್ಚಿಬಿದ್ದುರುವುದೂ ಉಂಟಂತೆ. ನಟ ರಘುವರನ್ ಧ್ವನಿ ಕೇಳಿದ ಅದೆಷ್ಟೋ ನಟಿಯರು ಅವರ ಜತೆ ಕ್ಯಾಮರಾ ಮುಂದೆ ನಿಲ್ಲಲು, ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಭಯಬೀಳುತ್ತಿದ್ದರಂತೆ. ವಿಲನ್ ಎಂದರೆ ಅದು ರಘುವರನ್ ಎಂಬಷ್ಟರ ಮಟ್ಟಿಗೆ ಅವರು 80-90ರ ದಶಕದಲ್ಲಿ ಹೆಸರು ಮಾಡಿದ್ದರು. ಅವರು ನಟಿ ರೋಹಿಣಿ ಅವರನ್ನು ಮದುವೆ ಆಗಿದ್ದರು.
ತಮಿಳು, ತೆಲುಗು, ಕನ್ನಡ ಹಾಗು ಹಿಂದಿ ಚಿತ್ರರಂಗದಲ್ಲಿ ನಟಿಸಿರುವ ನಟ ರಘುವರನ್ ಅವರನ್ನು ಹೆಚ್ಚಾಗಿ ನೆಗೆಟಿವ್ ಪಾತ್ರಗಳೇ ಹುಡುಕಿಕೊಂಡು ಬಂದಿವೆ. ಹೀರೋಗಳ ಎದುರು ವಿಲನ್ ಆಗಿ ನಟ ರಘುವರನ್ ತೆರೆಯ ಮೇಲೆ ಬಂದರೆ ಥಿಯೇಟರ್‌ನಲ್ಲಿ ಇರುವ ಅದೆಷ್ಟೋ ಚಿಕ್ಕ ಮಕ್ಕಳ ಚಡ್ಡಿ ಒದ್ದೆಯಾಗುತ್ತಿತ್ತು ಎನ್ನುವ ಸಂಗತಿ ಗುಟ್ಟಾಗಿಯೇನೂ ಉಳಿದಿರಲಿಲ್ಲ, ಮಕ್ಕಳಷ್ಟೇ ಏಕೆ, ಅದೆಷ್ಟೋ ಪೋಷಕರು ತಮ್ಮ ಮಡಲಲ್ಲಿ ಕುಳಿತಿದ್ದ ಮಕ್ಕಳನ್ನು ಕೆಳಗೆ ಬೀಳಿಸಿದ ಉದಾಹರಣೆಗಳೂ ಇವೆಯಂತೆ.
ಮುಂಬೈನಲ್ಲಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ; ಬಾಲಿವುಡ್ ಸ್ಟಾರ್ ನಟಿಯಾಗಿ ಮೆರೆದ ಸೌತ್ ಕಪ್ಪು ಸುಂದರಿ!
ಅಂಥ ಖಡಕ್ ಧ್ವನಿಯ ರಘುವರನ್ ಕುಡಿತದ ಚಟಕ್ಕೆ ಬಿದ್ದು ಆರೋಗ್ಯವನ್ನು ತುಂಬಾ ಹಾಳು ಮಾಡಿಕೊಂಡಿದ್ದರಂತೆ, ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ರಘುವರನ್ ಹೊಟ್ಟೆ ತುಂಬಾ ಕುಡಿಯುತ್ತಿದ್ದರಂತೆ. ಎಷ್ಟೇ ಬುದ್ಧಿ ಹೇಳಿದರೂ ಕೇಳದೇ ತಮ್ಮ ಕುಡಿತದ ಚಟ ಮುಂದುವರಿಸಿದ್ದರು ಎನ್ನಲಾಗಿದೆ. ಕೊನೆಗೆ ಕುಡಿತದ ಕಾರಣದಿಂದ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ 49 ವಯಸ್ಸಿನಲ್ಲಿಯೇ ನಿಧನ ಹೊಂದಿದ್ದಾರೆ. 19 ಮಾರ್ಚ್ 2008ರಂದು ನಟ ರಘುವರನ್ ತೀರಿಕೊಂಡರು.
ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?
ನಟ ರಘುವರನ್ ಅವರನ್ನು ಸಿನಿಮಾ ಉದ್ಯಮ ಎಂದೂ ಮರೆಯಲಾಗದು. ಕನ್ನಡದಲ್ಲಿ ಮಾಲಾಶ್ರೀ ಅಭಿನಯದ 'ದುರ್ಗಿ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟ ರಘುವರನ್ ನಟಿಸಿದ್ದಾರೆ. ಮಾಲಾಶ್ರೀ, ದೇವರಾಜ್, ಸಾಯಿಕುಮಾರ್, ಅಂಬರೀಷ್ ಹೀಗೆ ಅಂದಿನ ಕಾಲದ ಹಲವು ಹೀರೋ-ಹಿರೋಯಿನ್‌ಗಳ ಜತೆ ನಟ ರಘುವರನ್ ತೆರೆಯ ಮೇಲೆ ಮಿಂಚಿದ್ದಾರೆ.
ಅಪರಾಧ ಎಸಗಿದವರಿಗೆ ತಕ್ಕ ಶಾಸ್ತಿ ಆಯ್ತು; ಖುಷಿಯಿಂದ 'ಧನ್ಯವಾದ' ತಿಳಿಸಿದ ರಶ್ಮಿಕಾ ಮಂದಣ್ಣ
ಆದರೆ, 49ರ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದೇ ಹೇಳಬೇಕು. ಎಕೆಂದರೆ, ಇಲ್ಲಿ ಯಾರೂ ಯಾರ ರೀಪ್ಲೇಸ್‌ಮೆಂಟ್ ಆಗಲು ಸಾಧ್ಯವಿಲ್ಲ, ರಘವರನ್ ಅವರಿಗೆ ರಘುವರನ್ ಅವರು ಮಾತ್ರ ಸಾಟಿ!