ಈ ನಟಿ ತಮ್ಮ ಹರೆಯ ಮತ್ತು ಮಧ್ಯ ವಯಸ್ಸಿನ ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ್ದಾರೆ. ಬಳಿಕ ಕೂಡ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾವತ್ತು ಅವರಿಗೆ ಅವಕಾಶಗಳು ಕಮ್ಮಿ ಅಗಿಲ್ಲ.
ಬಾಲಿವುಡ್ ಎವರ್‌ಗ್ರೀನ್ ಹೀರೋಯಿನ್ ಖ್ಯಾತಿಯ ನಟಿ ರೇಖಾ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದವರು. ರೇಖಾ ಹುಟ್ಟಿದಾಗ ಅವರ ಅಪ್ಪನಿಗೆ ಮಗಳು ಹುಟ್ಟಿದ್ದು ಇಷ್ಟವಾಗಲಿಲ್ಲವಂತೆ. ಈ ಕಾರಣಕ್ಕೆ ಅವಳ ತಾಯಿ ಒಬ್ಬಂಟಿಯಾಗಿ ಅವಳನ್ನು ಸಾಕಬೇಕಾಯಿತು ಎನ್ನಲಾಗಿದೆ. ಬಳಿಕ, ತಾಯಿಗೆ ಇದ್ದ ಹಣದ ಸಮಸ್ಯೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಶಾಲೆಗೆ ಹೋಗುವುದನ್ನು ಬಿಡಬೇಕಾಯಿತು. ಹೀಗಾಗಿ ರೇಖಾಗೆ ಮೆಟ್ರಿಕ್ಯುಲೇಶನ್ ಮುಗಿಸುವುದು ಕೂಡ ಸಾಧ್ಯವಾಗಲಿಲ್ಲ.
1969ರಲ್ಲಿ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದ ರೇಖಾಗೆ ಕೆಲಸ ಸಿಗಲು ಸಾಕಷ್ಟು ಸಮಯ ಹಿಡಿಯಿತು. ಸಿನಿಮಾ ನಟಿಯಾಗಬೇಕೆಂದು ಕಸನು ಹೊತ್ತು ಅವಕಾಶಕ್ಕಾಗಿ ಅಲೆದ ಹುಡುಗಿ ರೇಖಾಗೆ ಎಲ್ಲ ಕಡೆ ಅವಮಾನಗಳೇ ಎದುರಾಗಿದ್ದವಂತೆ. ಸಿನಿಮಾ ಉದ್ಯಮದ ಹಿನ್ನೆಲೆಯಿಲ್ಲದೇ ಅಲ್ಲಿ ಕೆಲಸ ಹುಡುಕಿದ್ದು ಅವಳ ಪ್ರಾರಂಬಿಕ ಸೋಲಿಗೆ ಒಂದು ಕಾರಣವಾದರೆ, ಅವರ ಲುಕ್ ಹಾಗೂ ದಕ್ಷಿಣ ಭಾರತದ ಹಿನ್ನೆಲೆ ಅವರಿಗೆ ಮುಳುವಾಯ್ತಂತೆ. 'ನಿನ್ನ ಮುಖ ನೋಡಿಕೋ ಮೊದಲು, ಕಪ್ಪಗಿದ್ದೀಯಾ, ಸೌತ್ ಇಂಡಿಯನ್ ಗರ್ಲ್' ಎಂದು ಹೋದಲ್ಲೆಲ್ಲಾ ಹಿಯಾಳಿಸುತ್ತಿದ್ದರಂತೆ.
ಅಪರಾಧ ಎಸಗಿದವರಿಗೆ ತಕ್ಕ ಶಾಸ್ತಿ ಆಯ್ತು; ಖುಷಿಯಿಂದ 'ಧನ್ಯವಾದ' ತಿಳಿಸಿದ ರಶ್ಮಿಕಾ ಮಂದಣ್ಣ
1970ರಲ್ಲಿ ನಟಿ ರೇಖಾಗೆ 'ಸಾವನ್ ಬಾದೋನ್' ಚಿತ್ರದಲ್ಲಿ ಮೊದಲ ಅವಕಾಶ ಸಿಕ್ಕಿತು. ಆದರೆ, ಮೊದಲ ಚಿತ್ರದಲ್ಲಿ ಪ್ರೇಕ್ಷಕ ವರ್ಗ ರೇಖಾರ ನಟನೆ ಮತ್ತು ಸೌಂದರ್ಯದ ಬಗ್ಗೆ ಕೊಂಕು ಮಾತನ್ನಾಡಿದ್ದರಂತೆ. ಆದರೆ, ಕಠಿಣ ಪರಿಶ್ರಮದ ಬೆನ್ನುಹತ್ತಿದ ರೇಖಾ ನಟನೆಯಲ್ಲಿ ಪ್ರಬುದ್ಧತೆ ಪ್ರದರ್ಶಿಸಲು ಕಲಿತುಕೊಂಡರು. ಬಳಿಕ ಬಂದ ಸಿನಿಮಾ 'ಘರ್'ನಲ್ಲಿ ರೇಖಾರ ಪ್ರಬುದ್ಧ ಅಭಿನಯ ಕಂಡ ಬಾಲಿವುಡ್ ಪ್ರೇಕ್ಷಕರು ರೇಖಾ ನಟನೆಯನ್ನು ಮೆಚ್ಚಿಕೊಂಡರು. ಆ ಬಳಿಕ ರೇಖಾರನ್ನು ಬಾಲಿವುಡ್ ಚಿತ್ರರಂಗ ಸೀರಿಯಸ್ಸಾಗಿ ತೆಗೆದುಕೊಂಡು ಅವಕಾಶಗಳ ಬಾಗಿಲು ತೆರೆದುಕೊಂಡಿತು.
ಯಾರ ಕೈವಾಡಕ್ಕೆ ಸಿಲುಕಿದ್ರು ಪರಮ ಸುಂದರಿ; ಸ್ಟಾರ್ ನಟಿಗೆ ಬೇಕಿತ್ತಾ ಅಂಥ ಚಟ!?
ನಟಿ ರೇಖಾ ತಮ್ಮ ಹರೆಯ ಮತ್ತು ಮಧ್ಯ ವಯಸ್ಸಿನ ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ್ದಾರೆ. ಬಳಿಕ ಕೂಡ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾವತ್ತು ರೇಖಾಗೆ ಅವಕಾಶಗಳು ಕಮ್ಮಿ ಅಗಿಲ್ಲ. ಆದರೆ, ಇಂಥ ಲೆಜೆಂಡ್ ನಟಿಯೂ ಕೂಡ ವೃತ್ತಿಜೀವನದ ಆರಂಭಿಕ ಕಾಲದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದರು, ಅವಮಾನಗಳನ್ನು ಅನುಭಿಸಿದ್ದರು.