ನಟಿ ಪ್ರಿಯಾಂಕಾ ಚೋಪ್ರಾ ಬುದ್ದಿಮಾತಿಗೆ ತಲೆದೂಗಿದ ಹಾಲಿವುಡ್; ಅಂಥದ್ದೇನು ಹೇಳಿದ್ರು ನೋಡ್ರಿ!

By Shriram Bhat  |  First Published Mar 3, 2024, 9:42 PM IST

ನೀವು ಸೋತಾಗ ಜನರು ನಿಮ್ಮನ್ನು ತಮ್ಮ ಹತ್ತಿರ ಸೇರಿಸಿಕೊಳ್ಳುವುದಿಲ್ಲ, ತಮ್ನತ್ತ ಸುಳಿಯಲೂ ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಜಗತ್ತು ನಿಮ್ಮನ್ನು ದೂರ ಇಟ್ಟರೂ ಸೂಕ್ಷ್ಮವಾಗಿ ನಿಮ್ಮನ್ನೇ ಗಮನಿಸುತ್ತಾ ಇರುತ್ತದೆ. 


ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanaka Chopra)ಇತ್ತೀಚಿನ ಹಲವು ಸಂದರ್ಶನಗಳಲ್ಲಿ ಅದೆಂಥ ಮಾತುಗಳನ್ನು ಹೇಳುತ್ತಿದ್ದಾರೆ ಎಂದರೆ, ಅದು ಹಲವರಿಗೆ ಸ್ಪೂರ್ತಿಯಾಗುವಂತೆ ಇರುತ್ತದೆ. ಈ ಕಾರಣಕ್ಕೆ ಅವರ ಸಂದರ್ಶನಗಳ ಬಹಳಷ್ಟು ವೀಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಅಸಂಖ್ಯಾತ ಶೇರ್‌ಗಳ ಮೂಲಕ ಮತ್ತಷ್ಟು ವೈರಲ್ ಆಗುವ ಪ್ರಿಯಾಂಕಾರ ಕೆಲವು ವೀಡಿಯೋಗಳು ನಿಜವಾಗಿಯೂ ಗಮನಸೆಳೆಯುವಂತೆ ಇರುತ್ತವೆ. ಅವುಗಳಲ್ಲಿ ಒಂದರ ಬಗೆಗಿನ ವಿವರಣೆ ಇಲ್ಲಿದೆ, ನೋಡಿ...

ನಟಿ ಪ್ರಿಯಾಂಕಾ ಈಗ ಅಮೆರಿಕಾದಲ್ಲಿದ್ದಾರೆ (US)ಎಂಬುದು ಗೊತ್ತೇ ಇದೆ. ಅಲ್ಲಿನ ಹಾಲಿವುಡ್ ಸಿನಿಮಾ, ವೆಬ್‌ ಸಿರೀಸ್‌ಗಳಲ್ಲಿ ನಟಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಆಗಾಗ ಸಂದರ್ಶನಗಳಲ್ಲಿ ಸಹಜವಾಗಿಯೇ ಭಾಗಿಯಾಗುತ್ತಾರೆ. ಒಮ್ಮೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಪ್ರಿಯಾಂಕಾ 'ನಾವು ಸೋತಾಗ ಏನು ಮಾಡುತ್ತೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಗೆದ್ದಾಗ ಅವಕಾಶಗಳು ಮನೆಯ ಬಾಗಿಲಿಗೇ ಹುಡುಕಿಕೊಂಡು ಬರುತ್ತವೆ. ಆದರೆ ಸೋತಾಗ ನೀವೇ ಅವಕಾಶಗಳನ್ನು ಹುಡುಕಿ ಬಾಗಿಲು ತಟ್ಟಬೇಕು. 

Latest Videos

undefined

ಮಹೇಶ್ ಬಾಬು ಮಗಳು ಸಿತಾರಾ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಶಾಕ್ ಆಗಿ ಗಲಿಬಿಲಿಗೊಂಡ್ರಾ?

ನೀವು ಸೋತಾಗ ಜನರು ನಿಮ್ಮನ್ನು ತಮ್ಮ ಹತ್ತಿರ ಸೇರಿಸಿಕೊಳ್ಳುವುದಿಲ್ಲ, ತಮ್ನತ್ತ ಸುಳಿಯಲೂ ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಜಗತ್ತು ನಿಮ್ಮನ್ನು ದೂರ ಇಟ್ಟರೂ ಸೂಕ್ಷ್ಮವಾಗಿ ನಿಮ್ಮನ್ನೇ ಗಮನಿಸುತ್ತಾ ಇರುತ್ತದೆ. ನೀವು ಸೋತಾಗ ನಿಮ್ಮ ಗೌರವ, ಘನತೆ ಬೇರೆಯವರ ದೃಷ್ಟಿಯಲ್ಲಿ ಮಣ್ಣುಪಾಲು ಆಗಿದ್ದರೂ ನಿಜವಾಗಿಯೂ ಅದು ಹಾಗೆ ಆಗಿರುವುದಿಲ್ಲ. ನೀವು ಮತ್ತೆ ಎದ್ದು ನಿಲ್ಲಲು ನಿಮ್ಮ ಎಲ್ಲಾ ಸಾಮರ್ಥ್ಯ, ಗಮನಗಳನ್ನು ಕೇಂದ್ರೀಕರಿಸಬೇಕು. ಹಲವು ಹಂತಗಳಾದರೂ ಸರಿ, ಮತ್ತೆದ್ದು ನಿಂತು ಮುನ್ನಡೆಯಬೇಕು. ಅದೇ ಜೀವನ, ಅಷ್ಟೇ ಸಾಕು. 

ಅಂಬಾನಿ ಫ್ಯಾಮಿಲಿ ಫಂಕ್ಷನ್‌ನಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಶಾರುಖ್ ಖಾನ್

'ನಾವು ಸೋತಾಗಲೇ ನಮಗೆ ನಿಜವಾಗಿಯೂ ನಮ್ಮ ಪ್ಲಸ್-ಮೈನಸ್‌ಗಳ ನಿಜವಾದ ಅರಿವು ಉಂಟಾಗುವುದು. ಅಲ್ಲಿಂದಲೇ ನಿಜವಾದ ಜೀವನ ಮತ್ತೆ ಶುರುವಾಗುವುದು' ಎಂದು ನನಗೆ ನನ್ನ ಪೋಷಕರು ನಾನು ಹದಿಹರೆಯದ ತರುಣಿ ಆಗಿದ್ದಾಗಲೇ ಕಲಿಸಿದ್ದಾರೆ.  ಆ ಕಾರಣಕ್ಕೇ ಜೀವನದಲ್ಲಿ ನಾನು ಹಲವಾರು  ಸೋತಾಗಲೂ ಮತ್ತೆ ಮತ್ತೆ ಗೆದ್ದು ಬಂದಿದ್ದೇನೆ, ಗೌರವ-ಸನ್ಮಾನಗಳನ್ನು ಸ್ವೀಕರಿಸಿದ್ದೇನೆ.

ಸೋಲು, ಗೆಲುವು ಯಾವುದೇ ಬಂದರೂ ಸ್ವೀಕರಿಸಿ ಅಷ್ಟೇ. ಸೋಲಿನಿಂದ ಕಲಿತ ಪಾಠ ನಿಮಗೆ ಗೆಲುವನ್ನು ಹುಡುಕಲು, ಅದನ್ನು ಮತ್ತೆ ಪಡೆಯಲು ಸಹಾಯವಾಗುವಂತೆ ನೋಡಿಕೊಳ್ಳಿ. ಗೆದ್ದಮೇಲೂ ಮತ್ತೆ ಬರಬಹುದಾದ ಸೋಲಿಗೆ ಯಾವತ್ತೂ ಸಿದ್ಧರಾಗಿರಿ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಮತ್ತೆರಡು ಸಿನಿರಂಗದ ಮೇಲೆ 'KRG' ಕಣ್ಣು; ತಮಿಳು-ಮಲಯಾಳಂಗೂ ಕಾಲಿಟ್ಟ ಕಾರ್ತಿಕ್ ಗೌಡ!

click me!