ನಟಿ ತಮನ್ನಾ ಭಾಟಿಯಾರನ್ನು ಮದ್ವೆಯಾಗೋದು ನಿಜನಾ ಕೇಳಿದ್ರೆ ವಿಜಯ್ ವರ್ಮಾ ಹೀಗೆ ಹೇಳೋದಾ? ಉಫ್ ಅಂತಿದ್ದಾರೆ ಫ್ಯಾನ್ಸ್!
ನಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ವಿಜಯ್ ವರ್ಮಾ ಅವರು ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡೇಟಿಂಗ್ ಮಾಡಿದ ಮಾತ್ರಕ್ಕೆ ನಟ-ನಟಿಯರು ಅವರನ್ನೇ ಮದ್ವೆಯಾಗುತ್ತಾರೆಂದೇನೂ ಇಲ್ಲ. ಆದರೆ ಈ ಜೋಡಿ ಮಾತ್ರ ವಿವಾಹ ಬಂಧನಕ್ಕೆ ಶೀಘ್ರದಲ್ಲಿಯೇ ಒಳಗಾಗಲಿದೆ ಎನ್ನುವ ಸುದ್ದಿ ಹರಡಿದೆ. ಇದಕ್ಕೆ ತಮನ್ನಾ ಕಡೆಯಿಂದಾಗಲೀ, ವಿಜಯ್ ಕಡೆಯಿಂದಾಗಲೀ ಮಾಹಿತಿ ಸಿಕ್ಕಿಲ್ಲ. ಆದರೆ ಗುಸುಗುಸು ಸುದ್ದಿ ಜೋರಾಗಿದೆ. ವಿಜಯ್ ವರ್ಮಾ ಅವರಿಗೂ 37 ವರ್ಷ ವಯಸ್ಸಾಗಿದ್ದು, ಇಬ್ಬರಿಗೂ ಇದಾಗಲೇ ಮದುವೆಯ ವಯಸ್ಸು ಮೀರಿರುವ ಕಾರಣ, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 1989ರಲ್ಲಿ ಹುಟ್ಟಿರೋ ನಟಿಗೆ ಈಗ 33 ವರ್ಷ ವಯಸ್ಸು. ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದರೂ ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ನಟಿಯ ಮನೆಯಲ್ಲಿ ಸಕತ್ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ. ವಯಸ್ಸಾಗುತ್ತಿರುವ ಕಾರಣ ಹಾಗೂ ಇದಾಗಲೇ ಹಲವಾರು ಬಾಲಿವುಡ್ ನಟಿಯರು ಮದುವೆ, ಮಕ್ಕಳು ಎಂದೆಲ್ಲಾ ಬಿಜಿಯಾಗಿರುವ ತಮ್ಮ ಮಗಳಿನ್ನೂ ಮದುವೆಯಾಗಿಲ್ಲ ಎನ್ನುವ ಚಿಂತೆ ತಮನ್ನಾ ಪಾಲಕರಿಗೆ ಕಾಡುತ್ತಿದೆಯಂತೆ. ಇದಕ್ಕಾಗಿಯೇ ನಟಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿದೆ.
2023ರ ಹೊಸ ವರ್ಷಾಚರಣೆ ವೇಳೆ ಈ ಜೋಡಿ 'ಲಿಪ್ ಲಾಕ್' ಮಾಡಿಕೊಂಡು ಸುದ್ದಿಯಾಗಿತ್ತು. 'ಲಸ್ಟ್ ಸ್ಟೋರೀಸ್' ಚಿತ್ರದ ಬಳಿಕ ತಮನ್ನಾ-ವಿಜಯ್ ಇನ್ನಷ್ಟು ಹತ್ತಿರವಾಗಿದ್ದಾರೆ. ಅದಾದ ಮೇಲೆ ಇವರಿಗೆ ಹೋದಲ್ಲಿ ಬಂದಲ್ಲಿ ಮದ್ವೆ ಸುದ್ದಿಯನ್ನೇ ಕೇಳಲಾಗ್ತಿದೆ. ಇತ್ತೀಚೆಗೆ, 'ಜಾನೇ ಜಾನ್' ಚಿತ್ರದಲ್ಲಿ ಕರೀನಾ-ವಿಜಯ್ ಒಟ್ಟಿಗೇ ಕೆಲಸ ಮಾಡಿದ್ದಾರೆ. ಆ ವೇಳೆ ಕರೀನಾ ಕಪೂರ್ ತಮ್ಮ ಇಡೀ ಫ್ಯಾಮಿಲಿ ಜತೆ ಬಂದಿದ್ದರು. ಆಗ ವಿಜಯ್ ಅವರು, ತಮಗೂ ಮಕ್ಕಳು ಬೇಕು, ಫ್ಯಾಮಿಲಿ ಮಾಡಿಕೊಳ್ಳಬೇಕು ಎಂದು ಮಾತನಾಡಿದ್ದರು. ಆಗ ಕರೀನಾ 'ನೀವು ಸರಿಯಾದ ರೂಟ್‌ನಲ್ಲಿ ಇದ್ದೀರಿ ಎನಿಸುತ್ತಿದೆ. ನೀವು ನನ್ನಿಂದ ಪ್ರೇರಣೆ ಪಡೆದಿರುವುದು ಒಳ್ಳೆಯದು. ಆದಷ್ಟು ಬೇಗ ನಿಮ್ಮ ಆಸೆ ಕೈಗೂಡಲಿ' ಎಂದಿದ್ದರು. ಒಟ್ಟಿನಲ್ಲಿ ಈ ಜೋಡಿ ಯಾವಾಗ ಹಸೆ ಮಣೆ ಏರುವುದು ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಬಿಗ್ಬಾಸ್ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದ ನಟಿಯ ಪರೀಕ್ಷಾ ರಿಪೋರ್ಟ್ ಕೊನೆಗೂ ಬಂತು: ಫ್ಯಾನ್ಸ್ ಫುಲ್ ಖುಷ್!
ನಾನು 30 ನೇ ವಯಸ್ಸಿನೊಳಗೆ ಮದ್ವೆಯಾಗಿ ಮಕ್ಕಳನ್ನು ಮಾಡಿಕೊಳ್ತೇನೆ. ನಾನು ಸಿನಿಮಾ ಎಂಟ್ರಿ ಕೊಟ್ಟ ವೇಳೆ ನನ್ನ ಸಿನಿ ಕರಿಯರ್ ಎಂಟ್ಹತ್ತು ವರ್ಷ ಅಷ್ಟೇ. 30 ವರ್ಷದೊಳಗೆ ಸಿನಿಮಾ ನಿಲ್ಲಿಸಿ ಮದ್ವೆ ಮಾಡಿಕೊಳ್ತೇನೆ. ಇದೇ ಸಮಯದಲ್ಲಿ ಇಬ್ಬರು ಮಕ್ಕಳನ್ನೂ ಮಾಡಿಕೊಳ್ತೇನೆ ಎಂದು ಕೆಲ ವರ್ಷಗಳ ಹಿಂದೆ ಕಾವಾಲಯಾ ಹಾಡಿನ ಮೂಲಕ ಹಲ್ಚಲ್ ಸೃಷ್ಟಿಸಿರೋ ನಟಿ ತಮನ್ನಾ ಭಾಟಿಯಾ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಮದುವೆ ಒಂದು ದೊಡ್ಡ ಜವಾಬ್ದಾರಿಯಾಗಿದೆ. ನಾವು ಸಿದ್ಧ ಎಂದು ತಿಳಿದಾಗ ಮಾತ್ರ ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎಂದಿದ್ದ ನಟಿ 30 ವರ್ಷ ವಯಸ್ಸಿನೊಳಗೆ ಇಬ್ಬರು ಮಕ್ಕಳನ್ನೂ ಮಾಡಿಕೊಳ್ಳೋ ಪ್ಲ್ಯಾನ್ ಮಾಡಿದ್ರು. ಕೊನೆಗೂ ಈಗ ಮದ್ವೆಯಾಗುತ್ತಾರೆ ಎಂದು ಸಕತ್ ಸುದ್ದಿಯಾಗುತ್ತಿರುವಾಗಲೇ ವಿಜಯ್ ವರ್ಮಾ ನೀಡಿರುವ ಉತ್ತರ ತಮನ್ನಾ ಅಭಿಮಾನಿಗಳನ್ನು ಉಫ್ ಎನ್ನುವಂತೆ ಮಾಡಿದೆ.
ವಿಜಯ್ ವರ್ಮಾ ಅವರಿಗೆ ನೀವು ತಮನ್ನಾರನ್ನು ಮದ್ವೆಯಾಗುವುದು ಹೌದಾ? ಯಾವಾಗ? ಎಂಬೆಲ್ಲಾ ಪ್ರಶ್ನೆ ಎದುರಾಗಿದೆ. ಆಗ ವಿಜಯ್ ವರ್ಮಾ ಅವರು, ಈ ಪ್ರಶ್ನೆಗೆ ಖುದ್ದು ನನ್ನ ತಾಯಿಗೇ ಉತ್ತರ ನೀಡಿಲ್ಲ, ಅವರೂ ಪ್ರಶ್ನೆಗೆ ಉತ್ತರ ಸಿಗುವುದಕ್ಕಾಗಿ ಕಾಯುತ್ತಿದ್ದಾರೆ ಎಂದು ತಮಾಷೆ ಮಾಡುವ ಮೂಲಕ ಕೊನೆಗೂ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ. ಇಷ್ಟೇ ಅಲ್ಲದೇ, ಅವರನ್ನು ಈ ಬಗ್ಗೆ ಪಾಪರಾಜಿಗಳು ಮತ್ತಷ್ಟು ಒತ್ತಾಯಿಸಿದಾಗ ನಟ, ನಾನು ಮದುವೆಯಾಗುವುದು ಯಾವ ಹುಡುಗಿಗೂ ಇಷ್ಟವಿಲ್ಲ ಏನು ಮಾಡುವುದು ಎಂದು ತಮಾಷೆಗೆ ಹಾರಿಕೆ ಉತ್ತರ ಕೊಟ್ಟರು. ಇದಕ್ಕೆ ಉತ್ತರ ನನ್ನ ಅಮ್ಮಂಗೂ ಗೊತ್ತಿಲ್ಲ, ಯಾರಿಗೂ ಗೊತ್ತಿಲ್ಲ ಎನ್ನುತ್ತಲೇ ಕೊನೆಗೂ ಉತ್ತರಿಸಿದೇ ತಪ್ಪಿಸಿಕೊಂಡರು!
ಇವಳು ಹೊಟ್ಟೆಯಲ್ಲಿದ್ದಾಗ ಸಾಯಿಸಲು ಹೊರಟಿದ್ವಿ: ಆ ದಿನಗಳ ನೆನೆದ ಶ್ರೀರಸ್ತು ಶುಭಮಸ್ತು ಪೂರ್ಣಿಯ ಅಪ್ಪ